ಆರೋಗ್ಯಕ್ಕಾಗಿ ಓಟದಲ್ಲಿ 700ಕ್ಕೂ ಹೆಚ್ಚು ಮಂದಿ ಭಾಗಿ
ಮೈಸೂರು

ಆರೋಗ್ಯಕ್ಕಾಗಿ ಓಟದಲ್ಲಿ 700ಕ್ಕೂ ಹೆಚ್ಚು ಮಂದಿ ಭಾಗಿ

May 3, 2019

ಮೈಸೂರು: ಮೈಸೂರು ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್‍ನಿಂದ `ಆರೋಗ್ಯಕ್ಕಾಗಿ ಓಟ’ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ 9ನೇ ಆರ್‍ಎನ್‍ಎಂ ಸ್ಮಾರಕ ರೋಡ್‍ರೇಸ್‍ನಲ್ಲಿ ಬುಧವಾರ ಮುಂಜಾನೆ ನೂರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಿಂದ ಆರಂಭಗೊಂಡ ಓಟ ನ್ಯಾಯಾಲಯ ಆವರಣದ ಮುಂದಿ ರುವ ಗಾಂಧಿ ಪ್ರತಿಮೆ ಮಾರ್ಗ ತೆರಳಿ ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆಯಲ್ಲಿ ಮುಕ್ತಾಯಗೊಂಡಿತು. ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಎಲ್ಲ ವಯೋಮಾನದ 700ಕ್ಕೂ ಹೆಚ್ಚು ಮಂದಿ ಓಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. 10ರಿಂದ 15ವರ್ಷದವರೆಗಿನ ವಿಭಾಗ, 15-39 ವರ್ಷದೊಳ ಗಿನವರು ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಭಾಗ ವಹಿಸಿದ್ದವರು 2 ಕಿ.ಮೀ ಓಡಿದರು. ವಿಜೇತÀರಿಗೆ ನಗದು ಬಹುಮಾನ, ಪಾರಿತೋಷಕ, ಪದಕ ವಿತರಿಸಲಾಯಿತು.

ಇದಕ್ಕೂ ಮುನ್ನ ಮೇಯರ್ ಪುಷ್ಪಲತಾ ಜಗನ್ನಾಥ್ ಮ್ಯಾರಾಥಾನ್‍ಗೆ ಚಾಲನೆ ನೀಡಿದರು. ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಪಿ.ಕೃಷ್ಣಯ್ಯ, ಸೋಮಶೇಖರ್, ಸಂಘದ ಪದಾಧಿಕಾರಿ ಗಳಾದ ಪಿ.ಜಿ.ಸತ್ಯನಾರಾಯಣ, ಎಸ್.ಮಹದೇವ್, ಫುಟ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಎಸ್.ಮಂಜು ನಾಥ್, ಎಂ.ಪಿ.ಚಂದ್ರಶೇಖರ್, ಬಿ.ಬಸವರಾಜು. ಇದ್ದರು.

ಸನ್ಮಾನ: ಪ್ಯಾರಾ ಒಲಂಪಿಕ್‍ನಲ್ಲಿ ಬೆಳ್ಳಿ ವಿಜೇತ ಕೆ.ಎಸ್. ರಮ್ಯ, ಹಿರಿಯ ಕ್ರೀಡಾಪಟುಗಳಾದ ಡಾ.ಎನ್. ಆರ್. ಶಂಕರ್‍ರಾವ್, ಕ್ರೀಡಾಪಟು ಎಂ.ವಿ.ಸ್ವಾಮಿ ಅವರಿಗೆ ಜೀವಮಾನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ವೇಳೆ ಮಾಜಿ ಶಾಸಕ ವಾಸು, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಸಿ.ಕೃಷ್ಣ ಇದ್ದರು.

Translate »