ಕೊಡವ ಭಾಷೆ ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರ್ಪಡೆ, ಭಾಷಾ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಹೋರಾಟ
ಮೈಸೂರು

ಕೊಡವ ಭಾಷೆ ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರ್ಪಡೆ, ಭಾಷಾ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಹೋರಾಟ

May 3, 2019

ಮೈಸೂರು: ಸಂವಿಧಾನದ 8ನೇ ಪರಿಚ್ಛೇದಕ್ಕೆ ಕೊಡವ ಭಾಷೆ ಸೇರ್ಪಡೆ ಹಾಗೂ ಕೊಡವ ಸಮುದಾಯಕ್ಕೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸುವ ಸಲುವಾಗಿ ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ನಿರಂತರ ಪ್ರಯತ್ನದಲ್ಲಿದೆ ಎಂದು ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ತಿಳಿಸಿದರು.

ಮೈಸೂರು ಕೊಡವ ಸಮಾಜ, ಮಡಿಕೇರಿಯ ಕೊಡವ ತಕ್ಕ್ ಎಳ್ತ್‍ಕಾರಡ ಕೂಟ, ಲೋಪಮುದ್ರೆ ಕೊಡವ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ವಿಜಯನಗರದಲ್ಲಿರುವ ಮೈಸೂರು ಕೊಡವ ಸಮಾಜದ ಸಭಾಂಗಣದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿಗೆ ಸಂಬಂಧಿಸಿದಂತೆ ಕೂಟವು 1994ರಿಂದ ಕೊಡಗಿನ ಎಲ್ಲಾ ಗ್ರಾಮಗಳಲ್ಲಿ ಮಾತ್ರವಲ್ಲದೆ, ದೇಶದ ವಿವಿಧ ಭಾಗ ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ನಾಟಕ, ವಿಚಾರಗೋಷ್ಠಿ, ಸಾಹಿತ್ಯ ಗೋಷ್ಠಿ, ಸಂಗೀತ ಗೋಷ್ಠಿ, ಸಾಹಿತ್ಯ ಶಿಬಿರ, ಕೊಡವ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಕೊಡಗಿನ ಮಹತ್ವವನ್ನು ಸಾರಲಾಗುತ್ತಿದೆ. ಸಾಧ್ಯವಾದಷ್ಟು ಕೊಡವ ಭಾಷಾ ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶದೊಂದಿಗೆ ಕೊಡವ ಭಾಷಾ ಲೇಖಕರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.

ಕೊಡವ ಭಾಷಾ ಸಾಹಿತ್ಯ ಕೃಷಿ ಪ್ರೋತ್ಸಾಹಿಸಲು 2000ನೇ ಸಾಲಿನಲ್ಲಿ `ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆ ರೂಪಿಸಲಾಯಿತು. ಬಳಿಕ ಯೋಜನೆಯಡಿ ಪ್ರತಿ ತಿಂಗಳಿಗೆ ಒಂದು ಪುಸ್ತಕದಂತೆ ಇದುವರೆಗೆ 157 ಪುಸ್ತಕಗಳನ್ನು ಕೂಟದಿಂದ ಹೊರತರಲಾಗಿದೆ. ಅದೇ ರೀತಿ ಇಂದು 158 ಹಾಗೂ 159ನೇ ಪುಸ್ತಕ ಲೋಕಾರ್ಪಣೆಗೊಳ್ಳಲಿವೆ. ಸಾಹಿತ್ಯಾಭಿಮಾನಿಗಳ ಸಹಕಾರದಿಂದ ಮತ್ತಷ್ಟು ಪುಸ್ತಕ ಗಳನ್ನು ಹೊರತರುವ ಉದ್ದೇಶವಿದೆ ಎಂದರು.
ಲೇಖಕಿ ಪೆಮ್ಮಂಡ ಮೀರಾ ಬಿದ್ದಪ್ಪ ಬರೆದು ದಾನಿಗಳಾದ ಅಜ್ಜಮಾಡ ಶಂಕರು ನಾಚಪ್ಪ ಪ್ರಾಯೋಜಿಸಿದ ಕೂಟದ 158ನೇ `ಬೊಳ್ಳಿರ ಕಪ್ಪ್’ ಪುಸ್ತಕ ಬಿಡುಗಡೆ ಮಾಡಿದ ವಿಶ್ರಾಂತ ಕುಲಪತಿ ಪ್ರೊ.ಕಂಬೆಯಂಡ ಶರಿ ಬೆಳ್ಯಪ್ಪ, ಸರ್ಕಾರದ ಹಣ ಸುಲಭದಲ್ಲಿ ಸಿಕ್ಕಿದರೂ ಸಂಸ್ಥೆಗಳು ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಕೊಡದೆ ಇರುವ ಈ ಕಾಲಘಟ್ಟದಲ್ಲಿ ಕೇವಲ ದಾನಿ ಗಳ ಸಹಕಾರದಿಂದ ದೇಶವಿಡೀ ಕಾರ್ಯಕ್ರಮ ನಡೆಸುತ್ತಿರು ವುದು ಪ್ರಶಂಸನೀಯ. 159 ಪುಸ್ತಕಗಳ ಪ್ರಕಟಿಸಿರುವ ಕೂಟದಿಂದ ಇನ್ನಷ್ಟು ಪುಸ್ತಕಗಳು ಹೊರತರಲು ಅಗತ್ಯ ನೆರವು ದೊರೆಯುವಂತಾಗಲಿ ಎಂದರಲ್ಲದೆ, ತಾವು ಕೂಡ 10 ಸಾವಿರ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದರು.

ಮತ್ತೊಬ್ಬ ಲೇಖಕಿ ಜಮ್ಮಡ ಬಬಿತಾ ಪೂವಣ್ಣ ಬರೆದ ಕೂಟದ 159ನೇ ಪುಸ್ತಕ `ಪೂಕೊಳ’ ಕೃತಿ ಪ್ರಾಯೋಜಕ ವಲ್ಲಂಡ ಪ್ರಶಾಂತ ಪೊನ್ನಣ್ಣ ಈ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತ್ಯ ಕೃಷಿ ಮಾಡುವುದು ಸುಲಭದ ಕೆಲಸವಲ್ಲ. ಎಲ್ಲಾರಿಗೂ ಸಾಹಿತ್ಯ ಸೃಷ್ಟಿಸಲು ಸಾಧ್ಯವಾಗ ದಿದ್ದರೂ ಪ್ರಕಟಣೆಗಾಗಿ ಆರ್ಥಿಕ ನೆರವು ನೀಡಿ ಕೊಡವ ಸಾಹಿತ್ಯ ಬೆಳವಣಿಗೆಗೆ ಸಹಕರಿಸಬೇಕು ಎಂದರು.

ಲೋಪಮುದ್ರೆ ಕೊಡವ ಸಂಘದ ಅಧ್ಯಕ್ಷ ಮಚ್ಚಮಾಡ ಕೆ.ದೇವಯ್ಯ ಮಾತನಾಡಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ. ಸಮು ದಾಯದ ಪೆÇೀಷಕರು ತಮ್ಮ ಮಕ್ಕಳಿಗೆ ಕೊಡವ ಭಾಷೆ-ಸಂಸ್ಕøತಿ ಕಲಿಸಲು ಆದ್ಯತೆ ನೀಡುತ್ತಿಲ್ಲ. ಇದರ ಪರಿಣಾಮ ನಮ್ಮ ಯುವ ಸಮುದಾಯ ಆಂಗ್ಲ ಭಾಷೆ ಹಾಗೂ ಪಾಶ್ವಿಮಾತ್ಯ ಸಂಸ್ಕøತಿಯತ್ತ ಆಕರ್ಷಿತರಾಗುತ್ತಿದೆ ಎಂದು ವಿಷಾದಿಸಿದರು.

ಲಾಂಛನ ಬಿಡುಗಡೆ: ಡಿಸೆಂಬರ್ ಮಾಸದಲ್ಲಿ ಆಯೋಜಿ ಸಲು ಉದ್ದೇಶಿಸಿರುವ ಕೂಟದ ಬೆಳ್ಳಿಹಬ್ಬದ ಲಾಂಛನ ವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಮೈಸೂರು ಕೊಡವ ಸಮಾಜದ ಅಧ್ಯಕ್ಷ ಬಿ.ಎಂ.ನಾಣಯ್ಯ, ಕಾರ್ಯ ದರ್ಶಿ ಮಲ್ಚೀರ ಪೆÇನ್ನಪ್ಪ, ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ನಿರ್ದೇಶಕರಾದ ಕಾಳಿಮಾಡ ಮೋಟಯ್ಯ, ಬೊಜ್ಜಂಗಡ ನಿತಿನ್ ನಂಜಪ್ಪ, ಕಾರ್ಯದರ್ಶಿ ಅಮ್ಮಣಿ ಚಂಡ ಪ್ರವೀಣ್ ಚಂಗಪ್ಪ, ಸದಸ್ಯರಾದ ಕೋಟೇರ ಉದಯ ಪೂಣಚ್ಚ, ಮೂರೀರ ಪ್ರಶಾಂತ್, ಬಿಡುಗಡೆಗೊಂಡ ಕೃತಿ ಕರ್ತೃಗಳಾದ ಪೆಮ್ಮಂಡ ಮೀರಾ ಬಿದ್ದಪ್ಪ, ಜಮ್ಮಡ ಬಬಿತಾ ಪೂವಣ್ಣ ಮತ್ತಿತರರು ಹಾಜರಿದ್ದರು.

Translate »