ಜಮ್ಮು-ಕಾಶ್ಮೀರ: ಪಾಕಿಸ್ತಾನ ಹಾಗೂ ಐಎಸ್‍ಐ ಜೊತೆಗಿನ ನಂಟಿನ ಹಿನ್ನೆಲೆಯಲ್ಲಿ ಮಿರ್ವೈಜ್ ಉಮರ್ ಫಾರುಖ್ ಸೇರಿದಂತೆ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ಇಂದು ಹಿಂಪಡೆದಿದೆ. ಪುಲ್ವಾಮಾ ಉಗ್ರರ ದಾಳಿಯಲ್ಲಿ 40 ಸಿಆರ್‍ಪಿಎಫ್ ಯೋಧರು ಹುತಾತ್ಮರಾದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್‍ಐ ಪರವಾಗಿ ಕೆಲಸ ಮಾಡುತ್ತಿರುವ ಪ್ರತ್ಯೇಕತಾ ವಾದಿಗಳಿಗೆ ನೀಡಲಾಗಿರುವ ಭದ್ರತೆಯನ್ನು ಹಿಂಪಡೆಯಲು ಸರ್ಕಾರ ಯೋಚನೆ ಮಾಡುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ತಿಳಿಸಿದ್ದರು. ಪಾಕಿಸ್ತಾನ…
31 ವರ್ಷದಿಂದ ಕಾರು ತೊಳೆದೇ ಜೀವನ ರೂಪಿಸಿಕೊಂಡ ದೇವರಾಜು
February 18, 2019ಮೈಸೂರು: ಕಾಯಕವೇ ಕೈಲಾಸ ಎಂಬ ನೀತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಮೈಸೂರಿನ ಅಶೋಕಪುರಂ ನಿವಾಸಿಯೊಬ್ಬರು ಕಳೆದ 31 ವರ್ಷಗಳಿಂದ ಮೈಸೂರಿನ ದೇವರಾಜ ಅರಸ್ ರಸ್ತೆ ಬದಿಯಲ್ಲಿ ನಿಲ್ಲುವ ಕಾರುಗಳನ್ನು ತೊಳೆಯುವ ಕಾಯಕ ವನ್ನು ರೂಢಿಸಿಕೊಂಡು ಸಂತೃಪ್ತ ಜೀವನ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಅಶೋಕಪುರಂ ನಿವಾಸಿ ದೇವರಾಜು ಎಂಬುವರೇ ಕಾರು ತೊಳೆಯುವ ಕಾಯಕ ವನ್ನೇ ಅವಲಂಬಿಸಿ, ಗ್ರಾಹಕರ ನಂಬಿಕೆ ಗಳಿಸಿ ಸೇವೆ ನೀಡುತ್ತಿರುವವರು. ರಸ್ತೆ ಗಿಳಿಯುತ್ತಿರುವ ಹೊಸ ಹೊಸ ವಾಹನ ಗಳ ಸಂಖ್ಯೆಗೆ ಅನುಗುಣವಾಗಿ ಸರ್ವಿಸ್ ಸ್ಟೇಷನ್‍ಗಳ…
ಸಿದ್ಧಗಂಗಾ ಶ್ರೀಗಳ ನಾಮಫಲಕ ಅನಾವರಣ
February 18, 2019ಮೈಸೂರು: ಮೈಸೂರಿನ ಕುವೆಂಪುನಗರದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಮೈಸೂರು ಮಹಾನಗರ ಪಾಲಿಕೆ ಅನುದಾನದಲ್ಲಿ ನಿರ್ಮಿಸಿರುವ ಸಿದ್ಧಗಂಗಾ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಾಮಫಲಕವನ್ನು ಮೇಯರ್ ಪುಷ್ಪಲತಾ ಜಗನ್ನಾಥ್ ಭಾನುವಾರ ಅನಾವರಣಗೊಳಿಸಿದರು. ಇಲ್ಲಿನ ಜಗದಾಂಬ ಪೆಟ್ರೋಲ್ ಬಂಕ್ ಆವರಣದಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಭಕ್ತ ವೃಂದದ ಹಮ್ಮಿಕೊಂಡಿದ್ದ ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಾಮಫಲಕವನ್ನೂ ಅನಾವರಣಗೊಳಿಸಲಾಯಿತು. ಮಹಾನಗರ ಪಾಲಿಕೆಯ 98 ಸಾವಿರ ರೂ. ಅನುದಾನದಲ್ಲಿ ಶಿವಕುಮಾರ ಸ್ವಾಮೀಜಿಯವರ ನಾಮಫಲಕ ವನ್ನು ಇಲ್ಲಿ ನಿರ್ಮಿಸಲಾಗಿದೆ. ಕನಕಪುರ…
ಮೈಸೂರಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
February 18, 2019ಮೈಸೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ಬಾಂಬ್ ಸಿಡಿಸಿ ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಂಡ ಪಾಕಿಸ್ತಾನ ಉಗ್ರರ ಕೃತ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಂದು ಮೈಸೂರಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಧರಣಿ ನಡೆ ಸಿದ ಕಾರ್ಯಕರ್ತರು, ಭಯೋತ್ಪಾದಕರ ಕೃತ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದರಲ್ಲದೆ, ದೇಶದ್ರೋಹಿಗಳನ್ನು ಸದೆಬಡಿಯ ಬೇಕು, ಇಡೀ ದೇಶವೇ ಪಾಕ್ ಉಗ್ರರ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದ್ದಾರೆ ಎಂದರು. ದೇಶದೊಳಗೆ 350 ಕೆಜಿ ಬಾಂಬ್ ನೊಂದಿಗೆ ನುಸುಳಿ ಸೇನಾಪಡೆಯ ವಾಹನ…
ಮೈಸೂರಲ್ಲಿ ಎಡಿನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ
February 18, 2019ಮೈಸೂರು: ಶಾಲೆ ಯೊಂದರ ಸಹಾಯಾರ್ಥವಾಗಿ ಎಡಿನ್ ಬ್ರಿಡ್ಜ್ ಫೌಂಡೇಶನ್ ವತಿಯಿಂದ ಭಾನು ವಾರ ಹಮ್ಮಿಕೊಂಡಿದ್ದ ಎಡಿನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿದರು. ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಆವ ರಣದಲ್ಲಿ ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರ ತಂಡಗಳ ಕ್ರಿಕೆಟ್ ಪಂದ್ಯಾವಳಿಗೆ ಮೈದಾನದಲ್ಲಿ ಗಿಡವೊಂದನ್ನು ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಸದಾ ವೃತ್ತಿ ಜೀವನದ ಜಂಜಾಟದಲ್ಲಿ ಮುಳುಗಿ ರುವವರಿಗೆ ದೈಹಿಕ…
10 ರೂಪಾಯಿ ಸೀರೆಗೆ ಮುಗಿಬಿದ್ದ ಮಹಿಳೆಯರು, ಅಂಗಡಿಯಲ್ಲೇ ಬಡಿದಾಡಿಕೊಂಡ ಹೆಂಗಸರು!
February 18, 2019ಹೈದರಾಬಾದ್: ಸಾವಿರಾರು ರೂಪಾಯಿ ಸೀರೆಗಳನ್ನೇ ಖರೀದಿಸುವ ಹೆಂಗಸ ರಿಗೆ ಇನ್ನು 10 ರೂಪಾಯಿಗೆ ಒಂದು ಸೀರೆ ಎಂದು ಹೇಳಿದರೆ ಏನಾಗುತ್ತದೆ. ನನಗೂ ಇರಲಿ ನನ್ನ ಮಗಳಿಗೂ ಇರಲಿ ಅಂತ ಹತ್ತಾರು ಸೀರೆಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ. ಹೌದು, ಹೈದರಾಬಾದ್‍ನಲ್ಲಿ ಎಂಸಿಆರ್ ಮಾಲ್‍ನಲ್ಲಿ ಗ್ರಾಹಕರ ಊಹೆಗೂ ಮೀರಿದ ಆಫರ್ ನೀಡಲಾಗಿತ್ತು. ಅದೇನೆಂದರೆ 10 ರೂಪಾಯಿಗೆ ಒಂದು ಸೀರೆ. ಈ ವಿಚಾರ ಕಾಡ್ಗಿಚ್ಚಿಗಿಂತಲೂ ವೇಗವಾಗಿ ಹಬ್ಬಿತ್ತು. ಪರಿಣಾಮ ಮಹಿಳೆಯರ ದಂಡೇ ಮಾಲ್ ಕಡೆ ನುಗ್ಗಿತ್ತು. ಸಾಗರೋಪಾದಿಯಲ್ಲಿ ಹೆಂಗಸರು ನೆರೆದಿದ್ದರಿಂದ ಕಾಲ್ತುಳಿದಂತ…
ಮೈಸೂರಲ್ಲಿ ಹೃದಯ ಪಾಲನೆ ಜಾಗೃತಿ ಜಾಥಾ
February 18, 2019ಮೈಸೂರು: ಮೈಸೂ ರಲ್ಲಿ ಇಂದು ‘ವಿಶ್ವ ಮಹಿಳೆಯರ ಹೃದಯ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸ ಲಾಯಿತು. ಕಾರ್ಡಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ, ಮೈಸೂರು ಚಾಪ್ಟರ್ ವತಿಯಿಂದ ವಿಶ್ವ ಮಹಿಳೆಯರ ಹೃದಯ ದಿನಾಚರಣೆ ಅಂಗವಾಗಿ ‘Go Red For Women’ ಘೋಷಣೆಯೊಂದಿಗೆ ಮೈಸೂ ರಿನ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ವಾಕಥಾನ್ ಮೂಲಕ ವೈದ್ಯರು ಹಾಗೂ ಆಸ್ಪತ್ರೆಗಳ ಸಿಬ್ಬಂದಿಗಳು ಹೃದಯದ ಆರೋಗ್ಯ ರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಕೆಂಪು ಉಡುಪು ಧರಿಸಿದ ಹೃದ್ರೋಗ…
ವಿದ್ಯಾರ್ಥಿ ಸಂಸ್ಕøತಿ ಚಳವಳಿ ಜಾಥಾ
February 18, 2019ಮೈಸೂರು: ಮೈಸೂ ರಿನ ನಂಜರಾಜ ಬಹದ್ದೂರ್ ಛತ್ರದ ಆವ ರಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿ ಷತ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯ ಹಾಗೂ ವಿದ್ಯಾರ್ಥಿ ಪಥದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ವಿದ್ಯಾರ್ಥಿ ಸಂಸ್ಕøತಿ ಚಳವಳಿ’ ಎಂಬ 2 ದಿನಗಳ ಕಾರ್ಯಕ್ರಮದ ಅಂಗವಾಗಿ ನಡೆದ ಶೋಭಾ ಯಾತ್ರೆಯಲ್ಲಿ ರಾಜ್ಯದ 28 ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು ನಾಡಿನ ಕಲೆ, ಸಂಸ್ಕøತಿ ಯನ್ನು ಪುನರ್ ಸ್ಥಾಪಿಸುವಂತೆ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸಿದರು. ನಗರದ ರಾಮಸ್ವಾಮಿ ವೃತ್ತದಿಂದ ಹೊರಟ ಶೋಭಾ…
ಅಬಕಾರಿ ಎಸ್‍ಐ ಹುದ್ದೆಗೆ ಲಿಖಿತ ಪರೀಕ್ಷೆ
February 18, 2019ಮೈಸೂರು: ರಾಜ್ಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 59 ಉಪ ನಿರೀಕ್ಷಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮೈಸೂರಿನ 10 ಕೇಂದ್ರದಲ್ಲಿ ಒಟ್ಟು 3,338 ಅಭ್ಯರ್ಥಿಗಳು (ಪುರುಷ ಮತ್ತು ಮಹಿಳೆ) ಭಾನುವಾರ ಪರೀಕ್ಷೆ ಬರೆದಿದ್ದಾರೆ. ಇಡೀ ರಾಜ್ಯಾದ್ಯಂತ ಅಬಕಾರಿ ಇಲಾಖೆಯಲ್ಲಿ ಖಾಲಿ ಇದ್ದ ಒಟ್ಟು 59 ಉಪ ನಿರೀಕ್ಷಕರ (ಸಬ್ ಇನ್ಸ್‍ಪೆಕ್ಟರ್) ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‍ಸಿ) ವತಿಯಿಂದ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು….
ನಾಳೆ ಮೈಸೂರಲ್ಲಿ ಶಿವಾಜಿ ಮಹಾರಾಜ್ ಜಯಂತಿ
February 18, 2019ಮೈಸೂರು: ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ವತಿಯಿಂದ `ಶಿವಾಜಿ ಮಹಾರಾಜರ 392ನೇ ಜಯಂ ತ್ಯೋತ್ಸವ’ವನ್ನು ಫೆ.19ರಂದು ಕಲಾಮಂದಿರದಲ್ಲಿ ಆಯೋಜಿಸ ಲಾಗಿದೆ ಎಂದು ಸಮಿತಿ ಅಧ್ಯಕ್ಷ ಎನ್.ಗೋಪಾಲರಾವ್ ಜಾಧವ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಲಾಮಂದಿರದವರೆಗೆ ಶಿವಾಜಿ ಮಹಾರಾಜರ ಪ್ರತಿಮೆ ಮೆರವಣಿಗೆ ನಡೆಯಲಿದೆ. ಬಳಿಕ ಶ್ರೀಮಂಜುನಾಥ್ ಮಹಾರಾಜ್ ಸಾನಿಧ್ಯದಲ್ಲಿ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ನಂತರ ದಿವ್ಯಶ್ರೀ ಕನ್ನಡ…










