ಮೈಸೂರಲ್ಲಿ ಎಡಿನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ
ಮೈಸೂರು

ಮೈಸೂರಲ್ಲಿ ಎಡಿನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ

February 18, 2019

ಮೈಸೂರು: ಶಾಲೆ ಯೊಂದರ ಸಹಾಯಾರ್ಥವಾಗಿ ಎಡಿನ್ ಬ್ರಿಡ್ಜ್ ಫೌಂಡೇಶನ್ ವತಿಯಿಂದ ಭಾನು ವಾರ ಹಮ್ಮಿಕೊಂಡಿದ್ದ ಎಡಿನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿದರು.

ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಆವ ರಣದಲ್ಲಿ ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರ ತಂಡಗಳ ಕ್ರಿಕೆಟ್ ಪಂದ್ಯಾವಳಿಗೆ ಮೈದಾನದಲ್ಲಿ ಗಿಡವೊಂದನ್ನು ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಸದಾ ವೃತ್ತಿ ಜೀವನದ ಜಂಜಾಟದಲ್ಲಿ ಮುಳುಗಿ ರುವವರಿಗೆ ದೈಹಿಕ ಚಟುವಟಿಕೆಗೆ ಇಂತಹ ಕ್ರೀಡಾಸಕ್ತಿ ಮೂಡಿರುವುದು ಉತ್ತಮ ಬೆಳ ವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅತಿಥಿಯಾಗಿದ್ದ ಮಾಜಿ ಕ್ರಿಕೆಟಿಗ ಎಂ. ಎಸ್.ರವೀಂದ್ರ ಮಾತನಾಡಿ, ನಿಮ್ಮ ಸಂಘ ಟನೆ ವತಿಯಿಂದ ಹಮ್ಮಿಕೊಂಡಿರುವ ಈ ಕ್ರಿಕೆಟ್ ಪಂದ್ಯಾವಳಿ ಇದೇ ಮೊಟ್ಟ ಮೊದಲ ಕ್ರೀಡಾ ಚಟುವಟಿಕೆ. ಮುಂದಿನ ದಿನಗಳಲ್ಲೂ ಕ್ರಿಕೆಟ್ ಪಂದ್ಯಾವಳಿ ನಡೆಸುವ ಮೂಲಕ ನಿರಂತರವಾಗಿ ಕ್ರೀಡಾ ಸ್ಫೂರ್ತಿ ಹೊಂದು ವಂತೆ ಸಲಹೆ ನೀಡಿದರು. ವಕೀಲ ಜೆ.ಪುರು ಷೋತ್ತಮ್, ಮೈಸೂರು ವಿವಿ ಬೀಮ್ಸ್ ಮುಖ್ಯಸ್ಥ ಡಾ.ಆರ್. ಮಹೇಶ್, ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇ ಜ್‍ಮೆಂಟ್ ಮೈಸೂರು ಕೇಂದ್ರದ ಉಪಾ ಧ್ಯಕ್ಷ ಸಿ.ವಿ.ಶ್ರೀನಿವಾಸನ್ ಹಾಜರಿದ್ದರು.

ಮಹಿಳೆಯರು ಹಾಗೂ ಪುರುಷರೂ ಒಳಗೊಂಡಂತೆ ಮಾನವ ಸಂಪನ್ಮೂಲ ಅಧಿ ಕಾರಿಗಳು ಹಾಗೂ ಶಿಕ್ಷಣ ತಜ್ಞರ 6 ತಂಡ ಗಳನ್ನು ರಚಿಸಿ ಪಂದ್ಯಾವಳಿ ನಡೆಸಲಾ ಯಿತು. ಪ್ರತಿ ಪಂದ್ಯವೂ 8 ಓವರ್‍ಗಳ ಪಂದ್ಯಾವಳಿಯಲ್ಲಿ ಮೈಸೂರು ರೈಸಿಂಗ್ ಸ್ಟಾರ್, ಮೈಸೂರು ಗೇಮ್ ಚೇಂಜರ್ಸ್, ರಾಯಲ್ ಚಾಲೆಂಜರ್ಸ್ ಮೈಸೂರು, ದಿ ರಾಯಲ್ ಪಿರಾಟ್ಸ್, ರಾಯಲ್ ಮೈಸೂರು ವಾರಿಯರ್ಸ್ ಹಾಗೂ ಮೈಸೂರು ಸೂಪರ್ ರಾಯಲ್ಸ್ ತಂಡಗಳು ಗೆಲುವಿಗಾಗಿ ಸೆಣ ಸಾಡಿದವು. `ಕಲಿಯುವ ಮನೆ’ ಶಾಲೆಗೆ ಸಹಾಯಧನ ನೀಡಲು ಏರ್ಪಡಿಸಿದ್ದ ಪಂದ್ಯಾವಳಿಗೆ ಪ್ರತಿ ಆಟಗಾರರು 400 ರೂ. ನೋಂದಣಿ ಶುಲ್ಕ ಪಾವತಿಸಿದ್ದರು.

ರೈಸಿಂಗ್ ಸ್ಟಾರ್‍ಗೆ ಗೆಲುವು: ಚಾಂಪಿ ಯನ್ ಆಗಿ ಹೊರಹೊಮ್ಮಿದ `ಮೈಸೂರು ರೈಸಿಂಗ್ ಸ್ಟಾರ್’ ತಂಡಕ್ಕೆ ಸಂಜೆ ಏರ್ಪ ಡಿಸಿದ್ದ ಬಹುಮಾನ ವಿತರಣಾ ಸಮಾ ರಂಭದಲ್ಲಿ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಯಿತು. ಫೈನಲ್ ಪಂದ್ಯದಲ್ಲಿ `ರಾಯಲ್ ಚಾಲೆಂಜರ್ಸ್ ಮೈಸೂರು’ ತಂಡದ ವಿರುದ್ಧ ಹಣಾಹಣಿ ನಡೆಸಿ ಮೈಸೂರು ರೈಸಿಂಗ್ ಸ್ಟಾರ್ ತಂಡ ಗೆದ್ದು ಬೀಗಿತು. ಮೊದಲು ಬ್ಯಾಟ್ ಮಾಡಿದ ರೈಸಿಂಗ್ ಸ್ಟಾರ್ ದಾಖಲಿಸಿದ 128 ರನ್‍ಗಳನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಮೈಸೂರು, 115 ರನ್‍ಗಳನ್ನಷ್ಟೇ ಪಡೆದು ಸೋಲು ಅನು ಭವಿಸಿತು. ನಂಜನಗೂಡಿನ ಜ್ಯೂಬ್ಲಿಯಂಟ್ ಜನರಿಕ್ಸ್ ಕಂಪನಿಯ ಹೆಚ್‍ಆರ್ ವಿಭಾ ಗದ ಪ್ರಧಾನ ವ್ಯವಸ್ಥಾಪಕ ಕೆ.ಅನಂತ ಗೌಡ, ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‍ಮೆಂಟ್ ಮೈಸೂರು ಕೇಂದ್ರದ ಅಧ್ಯಕ್ಷ ಎಂ.ಕೆ.ಹರೀಶ್, ಆರ್‍ಜೆ ಅವಿನಾಶ್ ಅತಿಥಿಗಳಾಗಿ ಪಾಲ್ಗೊಂಡಿ ದ್ದರು. ಪಂದ್ಯಾವಳಿ ಸಂಘಟಕರಾದ ಬಿ.ಎಂ. ಗೌತಮ್, ಹೆಚ್.ಆರ್.ಪ್ರತಾಪ್, ಎಂ. ಚಂದನಾ ಮತ್ತಿತರರು ಹಾಜರಿದ್ದರು.

Translate »