ಮೈಸೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ಬಾಂಬ್ ಸಿಡಿಸಿ ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಂಡ ಪಾಕಿಸ್ತಾನ ಉಗ್ರರ ಕೃತ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಂದು ಮೈಸೂರಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಧರಣಿ ನಡೆ ಸಿದ ಕಾರ್ಯಕರ್ತರು, ಭಯೋತ್ಪಾದಕರ ಕೃತ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದರಲ್ಲದೆ, ದೇಶದ್ರೋಹಿಗಳನ್ನು ಸದೆಬಡಿಯ ಬೇಕು, ಇಡೀ ದೇಶವೇ ಪಾಕ್ ಉಗ್ರರ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದ್ದಾರೆ ಎಂದರು.
ದೇಶದೊಳಗೆ 350 ಕೆಜಿ ಬಾಂಬ್ ನೊಂದಿಗೆ ನುಸುಳಿ ಸೇನಾಪಡೆಯ ವಾಹನ ಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಕ್ಕಿ ಹೊಡೆದು ಆತ್ಮಾಹುತಿ ದಾಳಿ ನಡೆಸಲು ಮಾಹಿತಿ ಸೋರಿಕೆಯೇ ಕಾರಣವಾಗಿದೆ ಎಂದ ಪ್ರತಿಭಟನಾಕಾರರು, ಇಂತಹ ಕೃತ್ಯ ಗಳಿಗೆ ಇನ್ನೆಷ್ಟು ಭಾರತೀಯ ಯೋಧರ ಜೀವ ತೆತ್ತಬೇಕು ಎಂದು ಪ್ರಶ್ನಿಸಿದರು.
ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಹೆಚ್.ಗುರು ಹಾಗೂ ಎಲ್ಲಾ ಯೋಧರಿಗೆ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಂ.ಶಿವಣ್ಣರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಮೈಸೂರು ನಗರ ಬಿಜೆಪಿ ಸಹ ಪ್ರಭಾರಿ ಫಣೀಶ್, ಮಾಜಿ ವಿಧಾನ ಪರಿ ಷತ್ ಸದಸ್ಯ ತೋಂಟದಾರ್ಯ, ಮುಖಂ ಡರುಗಳಾದ ಆರ್.ರಘು, ಅರುಣ್‍ಕುಮಾರ್ ಗೌಡ, ರಾಜೇಶ್, ಸತೀಶ್, ಪ್ರಭಾಕರ ಸಿಂಧ್ಯಾ, ಬಾಲಚಂದ್ರ, ಬಿ.ಪಿ.ಮಂಜುನಾಥ್, ಗಿರಿ ಧರ್, ಗೋಕುಲ್ ಗೋವರ್ಧನ್, ಎಂ.ಜೆ. ಮಹೇಶ, ತೋಟದಪ್ಪ ಬಸವರಾಜು, ಕೆ. ಪ್ರೇಂಕುಮಾರ್, ನೇಹಾ, ಸವಿತಾ, ಆಶಾ ಸಿಂಗ್, ಗೌರಿ ವಿ. ಭಟ್ ಸೇರಿದಂತೆ ಹಲ ವರು ಭಾಗವಹಿಸಿದ್ದರು. ಪಾಕ್ ಉಗ್ರರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿ ಭಟನಾಕಾರರು, ಘಟನೆಗೆ ಕಾರಣರಾದವ ರನ್ನು ಬಂಧಿಸಿ ಸದೆಬಡಿಯುವಂತೆಯೂ ಒತ್ತಾಯಿಸಿದರು.