10 ರೂಪಾಯಿ ಸೀರೆಗೆ ಮುಗಿಬಿದ್ದ ಮಹಿಳೆಯರು,  ಅಂಗಡಿಯಲ್ಲೇ ಬಡಿದಾಡಿಕೊಂಡ ಹೆಂಗಸರು!
ಮೈಸೂರು

10 ರೂಪಾಯಿ ಸೀರೆಗೆ ಮುಗಿಬಿದ್ದ ಮಹಿಳೆಯರು, ಅಂಗಡಿಯಲ್ಲೇ ಬಡಿದಾಡಿಕೊಂಡ ಹೆಂಗಸರು!

February 18, 2019

ಹೈದರಾಬಾದ್: ಸಾವಿರಾರು ರೂಪಾಯಿ ಸೀರೆಗಳನ್ನೇ ಖರೀದಿಸುವ ಹೆಂಗಸ ರಿಗೆ ಇನ್ನು 10 ರೂಪಾಯಿಗೆ ಒಂದು ಸೀರೆ ಎಂದು ಹೇಳಿದರೆ ಏನಾಗುತ್ತದೆ. ನನಗೂ ಇರಲಿ ನನ್ನ ಮಗಳಿಗೂ ಇರಲಿ ಅಂತ ಹತ್ತಾರು ಸೀರೆಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ. ಹೌದು, ಹೈದರಾಬಾದ್‍ನಲ್ಲಿ ಎಂಸಿಆರ್ ಮಾಲ್‍ನಲ್ಲಿ ಗ್ರಾಹಕರ ಊಹೆಗೂ ಮೀರಿದ ಆಫರ್ ನೀಡಲಾಗಿತ್ತು. ಅದೇನೆಂದರೆ 10 ರೂಪಾಯಿಗೆ ಒಂದು ಸೀರೆ. ಈ ವಿಚಾರ ಕಾಡ್ಗಿಚ್ಚಿಗಿಂತಲೂ ವೇಗವಾಗಿ ಹಬ್ಬಿತ್ತು. ಪರಿಣಾಮ ಮಹಿಳೆಯರ ದಂಡೇ ಮಾಲ್ ಕಡೆ ನುಗ್ಗಿತ್ತು. ಸಾಗರೋಪಾದಿಯಲ್ಲಿ ಹೆಂಗಸರು ನೆರೆದಿದ್ದರಿಂದ ಕಾಲ್ತುಳಿದಂತ ಪರಿಸ್ಥಿತಿ ಕೂಡ ನಿರ್ಮಾಣವಾಯಿತು. ಒಂದೇ ಬಾರಿ ಇಷ್ಟೊಂದು ಜನರು ಬಂದಿದ್ದರಿಂದ ಕಾಲ್ತುಳಿತ ಉಂಟಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. 10 ರೂ. ಸೀರೆ ಕೊಂಡು ಕೊಳ್ಳಲು ಬಂದು ಆಸ್ಪತ್ರೆ ಪಾಲಾಗಿದ್ದಾರೆ. ಸದ್ಯ ಮಾಲ್ ಅನ್ನು ಸೀಜ್ ಮಾಡಲಾಗಿದೆ.

Translate »