ಮೈಸೂರು: ಮೈಸೂ ರಿನ ನಂಜರಾಜ ಬಹದ್ದೂರ್ ಛತ್ರದ ಆವ ರಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿ ಷತ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯ ಹಾಗೂ ವಿದ್ಯಾರ್ಥಿ ಪಥದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ವಿದ್ಯಾರ್ಥಿ ಸಂಸ್ಕøತಿ ಚಳವಳಿ’ ಎಂಬ 2 ದಿನಗಳ ಕಾರ್ಯಕ್ರಮದ ಅಂಗವಾಗಿ ನಡೆದ ಶೋಭಾ ಯಾತ್ರೆಯಲ್ಲಿ ರಾಜ್ಯದ 28 ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು ನಾಡಿನ ಕಲೆ, ಸಂಸ್ಕøತಿ ಯನ್ನು ಪುನರ್ ಸ್ಥಾಪಿಸುವಂತೆ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸಿದರು.
ನಗರದ ರಾಮಸ್ವಾಮಿ ವೃತ್ತದಿಂದ ಹೊರಟ ಶೋಭಾ ಯಾತ್ರೆಯಲ್ಲಿ ಬಣ್ಣ ಬಣ್ಣದ ಉಡುಗೆ-ತೊಡುಗೆಯನ್ನು ತೊಟ್ಟು ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು ದೇಶದ ಕಲೆ, ಸಂಸ್ಕøತಿಯನ್ನು ಉಳಿಸಿ ಎಂಬ ನಾಮ ಫಲಕಗಳನ್ನು ಹಿಡಿದು, ನೃತ್ಯ ಮಾಡುತ್ತಾ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚ ರಿಸಿ, ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ತಂಡ ಡೊಳ್ಳು ಕುಣಿತ, ಪೂಚಾ ಕುಣಿತ, ಕೋಲಾಟ, ಕಂಸಾಳೆ ಯಂತಹ ಸಾಂಸ್ಕøತಿಕ ನೃತ್ಯಗಳನ್ನು ರಸ್ತೆ ಯುದ್ದಕ್ಕೂ ಪ್ರದರ್ಶಿಸುತ್ತಾ ಸಾಗಿದರು.
ಇದೇ ವೇಳೆ ಎಬಿವಿಪಿ ರಾಜ್ಯ ಕಾರ್ಯ ದರ್ಶಿ ಹರ್ಷ ಮಾತನಾಡಿ, ನಮ್ಮ ದೇಶದ ಹಳ್ಳಿಗಳ ಸೊಗಡನ್ನು ಮತ್ತೆ ಬೆಳೆಸುವ ದೃಷ್ಟಿ ಯಿಂದ ವಿದ್ಯಾರ್ಥಿಗಳಿಂದ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಲೆ ಮನ ರಂಜನೆಗಾಗಿ ಅಲ್ಲ ಮನೋವಿಕಾಸಕ್ಕಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿ ಸಂಘಟನೆ ‘ವಿದ್ಯಾರ್ಥಿ ಸಂಸ್ಕøತಿ ಚಳವಳಿ’ ಕಾರ್ಯಕ್ರಮ ನಡೆಸುತ್ತಿದೆ. ಶೋಭಾ ಯಾತ್ರೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿ ಗಳ ತಂಡಕ್ಕೆ ಬಹುಮಾನವನ್ನು ನೀಡ ಲಾಗುತ್ತದೆ ಎಂದು ಹೇಳಿದರು.