ಮೈಸೂರು: ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ವತಿಯಿಂದ `ಶಿವಾಜಿ ಮಹಾರಾಜರ 392ನೇ ಜಯಂ ತ್ಯೋತ್ಸವ’ವನ್ನು ಫೆ.19ರಂದು ಕಲಾಮಂದಿರದಲ್ಲಿ ಆಯೋಜಿಸ ಲಾಗಿದೆ ಎಂದು ಸಮಿತಿ ಅಧ್ಯಕ್ಷ ಎನ್.ಗೋಪಾಲರಾವ್ ಜಾಧವ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಲಾಮಂದಿರದವರೆಗೆ ಶಿವಾಜಿ ಮಹಾರಾಜರ ಪ್ರತಿಮೆ ಮೆರವಣಿಗೆ ನಡೆಯಲಿದೆ. ಬಳಿಕ ಶ್ರೀಮಂಜುನಾಥ್ ಮಹಾರಾಜ್ ಸಾನಿಧ್ಯದಲ್ಲಿ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ನಂತರ ದಿವ್ಯಶ್ರೀ ಕನ್ನಡ ಕಲಾಸಂಘದ ಕಲಾವಿದರಿಂದ `ಛತ್ರಪತಿ ಶಿವಾಜಿ’ ಐತಿಹಾಸಿಕ ನಾಟಕ ಪ್ರದರ್ಶನವಿದೆ ಎಂದು ತಿಳಿಸಿದರು. ಸಮಿತಿ ಸದಸ್ಯರಾದ ಕೇಶವನಾಥ್ ರಾವ್ ಜಾಧವ್, ಜ್ಞಾನ ಪ್ರಕಾಶ್ ರಾವ್ ಮತ್ತಿತರರು ಹಾಜರಿದ್ದರು.