ಫೆ.23ರಂದು ಸಿಂಗಾಪುರದಲ್ಲಿ ‘ಕನ್ನಡೋತ್ಸವ’
ಮೈಸೂರು

ಫೆ.23ರಂದು ಸಿಂಗಾಪುರದಲ್ಲಿ ‘ಕನ್ನಡೋತ್ಸವ’

February 18, 2019

ಮೈಸೂರು: ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ದಶಮಾನೋ ತ್ಸವದ ಪ್ರಯುಕ್ತ `ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ’ ಹಾಗೂ `ಕನ್ನಡೋತ್ಸವ’ವನ್ನು ಫೆ.23 ರಂದು ಸಿಂಗಾಪುರದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ವೈ.ಡಿ.ರವಿಶಂಕರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದೇ ಕಾರ್ಯಕ್ರಮದ ಮುಖ್ಯ ಉz್ದÉೀಶವಾಗಿದೆ. ಇದೇ ವೇಳೆ ಖ್ಯಾತ ನಟ ಅಂಬರೀಷ್ ಅವರಿಗೆ ನುಡಿ ನಮನ ಸಲ್ಲಿಸಲಾಗುತ್ತದೆ. ಕಾರ್ಯ ಕ್ರಮದ ಪ್ರಯುಕ್ತ ಸಾವಿರಾರು ಕನ್ನಡಿಗರು, ನೃತ್ಯ, ನಾಟಕ, ಜನಪದ ನೃತ್ಯಗಳ ಮೂಲಕ ಸಿಂಗಪೂರದಲ್ಲಿ ಕನ್ನಡ ಕಂಪು ಚೆಲ್ಲಲಿದ್ದಾರೆ ಎಂದು ತಿಳಿಸಿದರು.

ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉತ್ಸವದ ಸಾನಿಧ್ಯ ವಹಿಸಲಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ವೇದಿಕೆಯ ಜಿಲ್ಲಾಧ್ಯಕ್ಷ ದೊರೆಸ್ವಾಮಿ, ಪಾಲಿಕೆ ಸದಸ್ಯ ಶಿವಕುಮಾರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »