ಮೈಸೂರು

ಶಾಂತಿ ಇಲ್ಲದ ಮೇಲೆ ‘ಪೀಸ್ ಬಸ್ ಸೇವೆ’ಗೂ ಅರ್ಥವಿಲ್ಲ:  ಭಾರತ-ಪಾಕ್ ನಡುವಿನ ಬಸ್ ಸಂಚಾರ ಸ್ಥಗಿತ!
ಮೈಸೂರು

ಶಾಂತಿ ಇಲ್ಲದ ಮೇಲೆ ‘ಪೀಸ್ ಬಸ್ ಸೇವೆ’ಗೂ ಅರ್ಥವಿಲ್ಲ: ಭಾರತ-ಪಾಕ್ ನಡುವಿನ ಬಸ್ ಸಂಚಾರ ಸ್ಥಗಿತ!

February 19, 2019

ಶ್ರೀನಗರ: ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಭಾರತ ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲೆಲ್ಲಾ ಪಾಕಿಸ್ತಾನದ ಉಸಿರುಕಟ್ಟಿಸುವ ಕೆಲಸ ಮಾಡುತ್ತಿದೆ. ಒಂದೆಡೆ ವ್ಯಾಪಾರ ವಹಿವಾಟುಗಳ ವಿಷಯದಲ್ಲಿ ಪಾಕಿಸ್ತಾನಕ್ಕೆ ಹೊಡೆತ ನೀಡುತ್ತಿದ್ದರೆ. ಮತ್ತೊಂದೆಡೆ ಭಾರತ-ಪಾಕ್ ನಡುವೆ ಸೌಹಾರ್ದತೆಗಾಗಿ ಪ್ರಾರಂಭಿಸಲಾಗಿದ್ದ ಪೀಸ್ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ವಾರಕ್ಕೆ ಒಮ್ಮೆ ಸಂಚರಿಸುತ್ತಿದ್ದ ಶ್ರೀನಗರ-ಮುಜಾಫರಾಬಾದ್ ನಡುವಿನ ಬಸ್ ಸಂಪರ್ಕವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ನೀಡಲಾಗಿದೆ. ಇದರ ಜೊತೆಗೆ ಪೂಂಚ್ ಜಿಲ್ಲೆಯಿಂದ ಪಾಕಿಸ್ತಾನದೊಂದಿಗೆ ನಡೆಯುತ್ತಿದ್ದ ವ್ಯಾಪಾರವನ್ನೂ ಸಹ ಸ್ಥಗಿತಗೊಳಿಸಲಾಗಿದೆ.

ಆನ್‍ಲೈನ್ ಮೂಲಕ ನಕ್ಷೆ  ಅನುಮೋದನೆ ವ್ಯವಸ್ಥೆ ಮಾಡಿ
ಮೈಸೂರು

ಆನ್‍ಲೈನ್ ಮೂಲಕ ನಕ್ಷೆ ಅನುಮೋದನೆ ವ್ಯವಸ್ಥೆ ಮಾಡಿ

February 19, 2019

ಮೈಸೂರು: ಕಟ್ಟಡಗಳ ನಕ್ಷೆ ಅನು ಮೋದನೆ [Building Plan Approval] ಪ್ರಕ್ರಿಯೆಗೆ ಆನ್‍ಲೈನ್ ಪದ್ಧತಿ ಜಾರಿಗೆ ತನ್ನಿ ಎಂದು ಮೈಸೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾದ ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭಾನುವಾರ ಮಧ್ಯಾಹ್ನವಷ್ಟೇ ಅಧಿಕಾರ ವಹಿಸಿಕೊಂಡಿದ್ದ ಅವರು, ಇಂದು ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಅಧಿಕಾರಿಗಳೊಂ ದಿಗೆ ಪ್ರಥಮ ಸಭೆ ನಡೆಸಿದರು. ಮೊದಲು ಎಲ್ಲಾ ಅಧಿಕಾರಿ ಗಳನ್ನು ಪರಿಚಯ ಮಾಡಿಕೊಂಡ ಅವರು, ಮೈಸೂರು ಮಹಾನಗರ ಪಾಲಿಕೆ ಕಾರ್ಯ ವ್ಯಾಪ್ತಿ, ಯಾವ ಯಾವ ವಿಭಾಗಗಳಿವೆ, ಎಷ್ಟು…

ವರುಣಾ ಕ್ಷೇತ್ರದ ನಿರುದ್ಯೋಗಿಗಳಿಗಾಗಿ ಫೆ.23ರಂದು ಬೃಹತ್ ಉದ್ಯೋಗ ಮೇಳ
ಮೈಸೂರು

ವರುಣಾ ಕ್ಷೇತ್ರದ ನಿರುದ್ಯೋಗಿಗಳಿಗಾಗಿ ಫೆ.23ರಂದು ಬೃಹತ್ ಉದ್ಯೋಗ ಮೇಳ

February 19, 2019

ಮೈಸೂರು: ವರುಣಾ ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗಾ ವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಂಜನಗೂಡು ತಾಲೂಕಿನ ತಾಂಡವಪುರದ ಅಗ್ನಿ ನೇತ್ರಾಂ ಬಿಕ ದೇವಾಲಯ ಆವರಣದಲ್ಲಿ ಫೆ.23 ರಂದು ಬೆಳಿಗ್ಗೆ 9ಕ್ಕೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷರ ಫೌಂಡೇಶನ್ ಗ್ರಾಮೀ ಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಉದ್ಯೋಗ ಮೇಳ ನಡೆಸ ಲಾಗುತ್ತಿದೆ. ಫೆ.23ರಂದು ಬೆಳಿಗ್ಗೆ…

ಸಮಗ್ರ ಜಲಸಂಪನ್ಮೂಲ ನಿರ್ವಹಣೆ’ ಕುರಿತು ಅಭಿಯಂತರರಿಗೆ ಕಾರ್ಯಾಗಾರ
ಮೈಸೂರು

ಸಮಗ್ರ ಜಲಸಂಪನ್ಮೂಲ ನಿರ್ವಹಣೆ’ ಕುರಿತು ಅಭಿಯಂತರರಿಗೆ ಕಾರ್ಯಾಗಾರ

February 19, 2019

`ಮೈಸೂರು,: ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಅಂಗಸಂಸ್ಥೆಯಾದ ವಿವೇಕಾನಂದ ಇನ್‍ಸ್ಟಿಟ್ಯೂಟ್ ಫಾರ್ ಲೀಡರ್‍ಶಿಪ್ ಡೆವಲಪ್ ಮೆಂಟ್‍ನ (ವಿ-ಲೀಡ್) ವ್ಯವಸ್ಥಾಪನಾ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯ ಸರ್ಕಾರದ ಅಭಿಯಂತರರಿಗಾಗಿ (ಇಂಜಿನಿಯರ್ಸ್) `ಸಮಗ್ರ ಜಲಸಂಪನ್ಮೂಲ ನಿರ್ವಹಣೆ’ ಕುರಿತು ಹಮ್ಮಿಕೊಂಡಿರುವ ಕಾರ್ಯಾಗಾರ ಸೋಮವಾರ ಚಾಲನೆ ಪಡೆಯಿತು. ಮಾ.2ರವರೆಗೆ ಮೈಸೂರಿನ ವಿ-ಲೀಡ್ ಆವರಣದಲ್ಲಿ ಕಾರ್ಯಾಗಾರ ನಡೆಯಲಿದ್ದು, ಜಲ ಸಂಪನ್ಮೂಲ ನಿರ್ವಹಣೆಗಾಗಿ ಜ್ಞಾನ ಹೆಚ್ಚಿಸುವುದು ಮತ್ತು ಈ ಸಂಬಂಧ ರಾಜ್ಯ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಅಭಿಯಂತರರನ್ನು ಸಮರ್ಥಗೊಳಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ. ಜಲ ಸಂಪನ್ಮೂಲ…

ವೇಶ್ಯಾವಾಟಿಕೆ: ಮೂವರ ಬಂಧನ ನಾಲ್ವರು ಮಹಿಳೆಯರ ರಕ್ಷಣೆ
ಮೈಸೂರು

ವೇಶ್ಯಾವಾಟಿಕೆ: ಮೂವರ ಬಂಧನ ನಾಲ್ವರು ಮಹಿಳೆಯರ ರಕ್ಷಣೆ

February 19, 2019

ಮೈಸೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮೂವರನ್ನು ಬಂಧಿಸಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಎಡತಾಳು ಗ್ರಾಮದ ಧರ್ಮಪ್ಪ ಅವರ ಮಗ ರಘುನಂದ (35), ನಿಲುವಾಗಿಲು ಗ್ರಾಮದ ಸದಾಶಿವ ಅವರ ಮಗ ಪ್ರಶಾಂತ್ (30) ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದ ವಾಸು ಅವರ ಮಗ ಪ್ರದೀಪ್ (29) ಬಂಧಿತರು. ಅವರಿಂದ 8 ಮೊಬೈಲ್ ಫೋನುಗಳು ಹಾಗೂ 10,500 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಘುನಂದನ…

ತಿ.ನರಸೀಪುರದಲ್ಲಿ ಕುಂಭಮೇಳಕ್ಕೆ ಚಾಲನೆ
ಮೈಸೂರು

ತಿ.ನರಸೀಪುರದಲ್ಲಿ ಕುಂಭಮೇಳಕ್ಕೆ ಚಾಲನೆ

February 18, 2019

ತಿ.ನರಸೀಪುರ: ತಿರುಮ ಕೂಡಲು ತ್ರಿವೇಣಿ ಸಂಗಮ ಶ್ರೀಕ್ಷೇತ್ರದಲ್ಲಿ ಜರುಗುತ್ತಿರುವ 11ನೇ ಮಹಾ ಕುಂಭ ಮೇಳಕ್ಕೆ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭಾನುವಾರ ವಿಧ್ಯುಕ್ತ ಚಾಲನೆ ನೀಡಿದರು. ನದಿ ಮಧ್ಯದ ನಡುಗಡ್ಡೆಯಲ್ಲಿ ನಿರ್ಮಿ ಸಲಾಗಿರುವ `ತ್ರಿವೇಣಿ ಸಂಗಮ ವೇದಿಕೆ’ ಯಲ್ಲಿ ವಿವಿಧ ಮಠಾಧೀಶರು ಹಾಗೂ ಗಣ್ಯರೊಡಗೂಡಿ ದೀಪ ಬೆಳಗಿಸುವ ಮೂಲಕ ಕುಂಭಮೇಳಕ್ಕೆ ಚಾಲನೆ ನೀಡಿದ ಅವರು, ಡೋಲು ಭಾರಿಸುವ ಮೂಲಕ ಮೂರು ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ವಿಧ್ಯುಕ್ತ ವಾಗಿ ಉದ್ಘಾಟಿಸಿದರು….

ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಮೈಸೂರು

ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

February 18, 2019

ಮೈಸೂರು: ಜಮ್ಮುವಿನ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದ ಪಾಕ್ ಪ್ರಾಯೋಜಿತ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕೆಎಸ್ ಆರ್‍ಪಿ ಸಿಬ್ಬಂದಿ, ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ, ಯೋಗ ಫೆಡರೇಷನ್ ಆಫ್ ಮೈಸೂರು, ಮಿಲಿಟರಿ ವೆಟರನ್ಸ್ ವೆಲ್‍ಫೆರ್ ಅಸೋಸಿಯೇಷನ್ ಮತ್ತಿತರ ಸಂಸ್ಥೆ ಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೈಸೂರಿನ ಕೋಟೆ ಆಂಜನೇಯ ದೇವ ಸ್ಥಾನದ ಬಳಿ ಮೇಣದ ಬತ್ತಿ ಹೊತ್ತಿಸಿ, ಹುತಾತ್ಮ ರಾದ ಯೋಧರಿಗೆ ನಮನ ಸಲ್ಲಿಸಿದರು. ಭಯೋತ್ಪಾದಕರ ದಾಳಿಗೆ ಕುಮ್ಮಕ್ಕು ನೀಡು ತ್ತಿರುವ…

ಉಗ್ರರಿಗೆ ತಕ್ಕ ಉತ್ತರ ನೀಡುವುದು ನಿಶ್ಚಿತ
ಮೈಸೂರು

ಉಗ್ರರಿಗೆ ತಕ್ಕ ಉತ್ತರ ನೀಡುವುದು ನಿಶ್ಚಿತ

February 18, 2019

ಬೆಂಗಳೂರು: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಕಾರಣರಾದವ ರಿಗೆ ತಕ್ಕ ಉತ್ತರ ನೀಡುವುದು ನಿಶ್ಚಿತ. ನಾವು ತಾಳ್ಮೆಯಿಂದ ಕಾಯೋಣ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸೇವೆಯನ್ನು ಸ್ಮರಿಸಿ ಯೋಧ ರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಂದು ಬೆಂಗಳೂರಿನಲ್ಲಿ ಬೃಹತ್ ಸಭೆ ಆಯೋ ಜನೆಗೊಂಡಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷರೂ ಆದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಉಗ್ರವಾದ ಖಂಡಿಸಿ ನಡೆದ ಧರಣಿಯ ನೇತೃತ್ವ ವಹಿಸಿದ್ದರು. ಸಭೆಯಲ್ಲಿ…

ಮೈಸೂರು ಪಾಲಿಕೆ ಕಮಿಷ್ನರ್ ಶಿಲ್ಪಾನಾಗ್ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ಪಾಲಿಕೆ ಕಮಿಷ್ನರ್ ಶಿಲ್ಪಾನಾಗ್ ಅಧಿಕಾರ ಸ್ವೀಕಾರ

February 18, 2019

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಶಿಲ್ಪಾ ನಾಗ್ ಅವರು ಇಂದು (ಭಾನುವಾರ) ಅಧಿಕಾರ ವಹಿಸಿಕೊಂಡರು. ‘ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿಯಾಗಿ ವರ್ಗಾವಣೆ ಗೊಂಡಿರುವ ಕೆ.ಹೆಚ್. ಜಗದೀಶ್ ಅವರು ಭಾನುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನೂತನ ಆಯುಕ್ತರಿಗೆ ಅಧಿಕಾರ ವಹಿಸಿ ಕೊಟ್ಟು ಶುಭ ಕೋರಿದರು. ಅಧಿಕಾರ ಸ್ವೀಕರಿಸಿದ ನಂತರ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಶಿಲ್ಪಾ ನಾಗ್ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ತಾವು ಇಂದು ಅಧಿಕಾರ…

ಇನ್ಫೋಸಿಸ್ ಪ್ರತಿಷ್ಠಾನದಿಂದ ಪ್ರತಿ ಹುತಾತ್ಮ ಯೋಧರ ಕುಟುಂಬಕ್ಕೆ 10 ಲಕ್ಷ ನೆರವು
ಮೈಸೂರು

ಇನ್ಫೋಸಿಸ್ ಪ್ರತಿಷ್ಠಾನದಿಂದ ಪ್ರತಿ ಹುತಾತ್ಮ ಯೋಧರ ಕುಟುಂಬಕ್ಕೆ 10 ಲಕ್ಷ ನೆರವು

February 18, 2019

ಬೆಂಗಳೂರು: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರತಿ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಇನ್ಫೋಸಿಸ್ ಫೌಂಡೇಶನ್ ಘೋಷಿಸಿದೆ. ತಮ್ಮ ಸಂಸ್ಥೆಯ ವತಿಯಿಂದ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡು ವುದಾಗಿ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ. “ನಮಗಾಗಿ, ದೇಶಕ್ಕಾಗಿ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಈ ಕುರಿತು ಪತ್ರಿಕೆಯಲ್ಲಿ ಓದಿದ ಕೂಡಲೇ ಹಣ ನೀಡಬೇಕೆಂದುಕೊಂಡೆ. ಆದರೆ ಹಣಕ್ಕಿಂತ ಯೋಧರ ಜೀವ ಮುಖ್ಯ. ಅದಕ್ಕಾಗಿ ನೋವಿದೆ. ಯೋಧರ ಕುಟುಂಬಕ್ಕೆ ನಮ್ಮ ಸಂಸ್ಥೆಯಿಂದ ಆರ್ಥಿಕ ನೆರವು…

1 1,118 1,119 1,120 1,121 1,122 1,611
Translate »