`ಮೈಸೂರು,: ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಅಂಗಸಂಸ್ಥೆಯಾದ ವಿವೇಕಾನಂದ ಇನ್‍ಸ್ಟಿಟ್ಯೂಟ್ ಫಾರ್ ಲೀಡರ್‍ಶಿಪ್ ಡೆವಲಪ್ ಮೆಂಟ್‍ನ (ವಿ-ಲೀಡ್) ವ್ಯವಸ್ಥಾಪನಾ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯ ಸರ್ಕಾರದ ಅಭಿಯಂತರರಿಗಾಗಿ (ಇಂಜಿನಿಯರ್ಸ್) `ಸಮಗ್ರ ಜಲಸಂಪನ್ಮೂಲ ನಿರ್ವಹಣೆ’ ಕುರಿತು ಹಮ್ಮಿಕೊಂಡಿರುವ ಕಾರ್ಯಾಗಾರ ಸೋಮವಾರ ಚಾಲನೆ ಪಡೆಯಿತು.
ಮಾ.2ರವರೆಗೆ ಮೈಸೂರಿನ ವಿ-ಲೀಡ್ ಆವರಣದಲ್ಲಿ ಕಾರ್ಯಾಗಾರ ನಡೆಯಲಿದ್ದು, ಜಲ ಸಂಪನ್ಮೂಲ ನಿರ್ವಹಣೆಗಾಗಿ ಜ್ಞಾನ ಹೆಚ್ಚಿಸುವುದು ಮತ್ತು ಈ ಸಂಬಂಧ ರಾಜ್ಯ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಅಭಿಯಂತರರನ್ನು ಸಮರ್ಥಗೊಳಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ.
ಜಲ ಸಂಪನ್ಮೂಲ ಇಲಾಖೆ ರಿಜಿಸ್ಟ್ರಾರ್ ಬಿ.ಜಿ.ಗುರುಪಾದಸ್ವಾಮಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಎಸಿಐಡಬ್ಲ್ಯೂಆರ್‍ಎಂ ತಾಂತ್ರಿಕ ವಿಭಾಗದ ನಿರ್ದೇಶಕ ಪಿ.ಸೊಮಶೇಖರ್ ರಾವ್, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಅಧ್ಯಕ್ಷ ಡಾ.ಎಂ.ಆರ್.ಸೀತಾರಾಮ, ವಿ ಲೀಡ್ ನಿರ್ದೇಶಕ ಎಸ್.ಸುದರ್ಶನ್ ಮತ್ತಿತರರು ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.