ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ ಕೆಆರ್‍ಎಸ್ ರಸ್ತೆಯಲ್ಲಿರುವ ರೈಲ್ವೇ ಕ್ರೀಡಾ ಮೈದಾನ ದಲ್ಲಿ ಶನಿವಾರ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಪರ್ಣ ಗರ್ಗ್ ಅವರು ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ರೈಲ್ವೆ ಭದ್ರತಾ ಸಿಬ್ಬಂದಿಗಳಿಂದ ಪಥ ಸಂಚಲನ ಪರಿವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ಹಣಕಾಸು ವರ್ಷದ 9 ತಿಂಗಳಲ್ಲಿ ಮೈಸೂರು ರೈಲ್ವೆ ವಿಭಾಗವು ಗಣನೀಯ ಸಾಧನೆಗೈದಿದೆ ಎಂದರು. 71 ಕಿಮೀ ಉದ್ದದ ದ್ವಿಪಥ ಯೋಜನೆ, 87…
1473 ಮಂದಿಗೆ ಉಚಿತ ಆರೋಗ್ಯ ತಪಾಸಣೆ
January 28, 2019ಮೈಸೂರು: `ಆರೋಗ್ಯ ಮೈಸೂರು’ ಯೋಜನೆಯಡಿ ಕ್ಯಾನ್ಸರ್ ಜಾಗೃತಿ -ಚಿಕಿತ್ಸಾ ಅಭಿಯಾನ ಹಮ್ಮಿಕೊಂಡಿರುವ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಮೈಸೂರಿನ ನಟರಾಜ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 3ನೇ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕ್ಷೇತ್ರ ವ್ಯಾಪ್ತಿಯ 49, 50 ಮತ್ತು 51ನೇ ವಾರ್ಡ್‍ನ 1473 ಮಂದಿ ಆರೋಗ್ಯ ಸಂಬಂಧಿತ ತಪಾಸಣೆಗೆ ಒಳಗಾದರು. ಪ್ರತಿ ಭಾನುವಾರ ಒಂದೊಂದು ಕಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸ ಲಾಗುತ್ತಿದ್ದು, ಇಂದು ಬೆಳಿಗ್ಗೆ 7 ಗಂಟೆ ಯಿಂದ ಮಧ್ಯಾಹ್ನ 2 ಗಂಟೆವರೆಗೆ…
ಪ್ಯಾಂಥರ್ಸ್ ಕಮಾಂಡೋ ಪಡೆಯ ಆಕರ್ಷಕ ಅಣಕು ಪ್ರದರ್ಶನ
January 28, 2019ಮೈಸೂರು: ಗಣ್ಯ ಹಾಗೂ ಅತೀ ಗಣ್ಯ ವ್ಯಕ್ತಿಗಳ ಭದ್ರತೆ ಹಾಗೂ ಮನೆಯೊಳಗೆ ಅಡಗಿದ ಭಯೋತ್ಪಾದಕರ ವಿರುದ್ಧ ಹೋರಾಡುವ ಕಾರ್ಯಚರಣೆ ಬಗ್ಗೆ ಮೈಸೂರು ನಗರ ಪ್ಯಾಂಥರ್ಸ್ ಕಮಾಂಡೋ ಪಡೆಯ ಸಿಬ್ಬಂದಿಗಳು ಅತ್ಯಾಕರ್ಷಕ ಅಣಕು ಪ್ರದರ್ಶನ ನೀಡಿ ಗಣರಾಜ್ಯೋತ್ಸವದಲ್ಲಿ ಎಲ್ಲರ ಮನ ಸೆಳೆದರು. ಮೈಸೂರಿನ ಬನ್ನಿಮಂಟಪದ ಕವಾಯಿತು ಮೈದಾನದಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಥಸಂಚಲನ ಮಾಡಿದ ಸಿಟಿ ಪ್ಯಾಂಥರಸ್ ಕಮಾಂಡೋ ತಂಡದ ಸಿಬ್ಬಂದಿಗಳು, ನಂತರ ಗಣ್ಯರನ್ನು ಭಯೋತ್ಪಾದಕರಿಂದ ರಕ್ಷಿಸಿ ಸುರಕ್ಷಿತವಾಗಿ ಕರೆದೊಯ್ಯುವ ಕಾರ್ಯಾಚರಣೆಯನ್ನು ಅಣಕು ಪ್ರದರ್ಶನ…
ಸಂದೇಶ ಸಾರಿದ ಸೈಕ್ಲೊಥಾನ್ ರ್ಯಾಲಿ
January 28, 2019ಮೈಸೂರು: ಪ್ರತಿ ನಿತ್ಯ ಸೈಕಲ್ ಬಳಸಿ, ಹೃದಯದ ಆರೋಗ್ಯ ಕಾಪಾಡಿಕೊಂಡರೆ ದೈಹಿಕ ಸದೃಢತೆ, ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮ ವಾಗಿ ಇಟ್ಟುಕೊಳ್ಳಬಹುದು ಎಂಬ ಸಂದೇಶ ಸಾರುವ ಎಲಿಗ್ಸೈರ್ ಸೈಕ್ಲೊಥಾನ್ (ಸೈಕಲ್ ರ್ಯಾಲಿ) ಇಂದಿಲ್ಲಿ ನಡೆಯಿತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೈಕಲ್ ರ್ಯಾಲಿಗೆ ಹಸಿರು ನಿಶಾನೆ ತೋರಿ ಸುವ ಮೂಲಕ ಚಾಲನೆ ನೀಡಿದರು. 7ರಿಂದ 60 ವರ್ಷ ವಯೋಮಾನದ ಸುಮಾರು 600ಕ್ಕೂ ಹೆಚ್ಚು…
ರೈಲ್ವೇ ಕ್ವಾರ್ಟರ್ಸ್‍ನಲ್ಲಿ 3 ಮಕ್ಕಳನ್ನು ಮಲಗಿಸಿ ನಾಪತ್ತೆಯಾದ ಮಹಿಳೆ!
January 28, 2019ಮೈಸೂರು: ಮಹಾರಾಷ್ಟ್ರದ ವಳೆನ್ನಲಾದ ಮಹಿಳೆಯೋರ್ವಳು ತನ್ನ ಮಕ್ಕಳನ್ನು ರೈಲ್ವೇ ಕ್ವಾರ್ಟರ್ಸ್‍ನ ಮನೆಯೊಂದರ ಮುಂದೆ ಮಲಗಿಸಿ ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಯಾದವಗಿರಿಯಲ್ಲಿರುವ ಲೋಕೋ ಕಾಲೋನಿ ರೈಲ್ವೇ ಕ್ವಾರ್ಟರ್ಸ್‍ಗೆ ಮೂವರು ಗಂಡು ಮಕ್ಕಳೊಂದಿಗೆ ಜನವರಿ 16ರಂದು ರಾತ್ರಿ 9 ಗಂಟೆ ಸುಮಾರಿನಲ್ಲಿ ಬಂದ ಅಪರಿಚಿತ ಮಹಿಳೆ ತನ್ನನ್ನು ಮಹಾ ರಾಷ್ಟ್ರದ ಪುಣೆ ನಿವಾಸಿ ಎಂದು ಪರಿಚಯಿಸಿ ಕೊಂಡು ತಾನು ಜೈಪುರ ರೈಲಿನಲ್ಲಿ ಮೈಸೂರಿಗೆ ಬಂದಿರುವುದಾಗಿಯೂ ಹೇಳಿಕೊಂಡು ರಾತ್ರಿ ಮನೆಯ ಮುಂದೆ ಮಲಗಿ, ಬೆಳಿಗ್ಗೆ ಹೋಗುವುದಾಗಿ ತಿಳಿಸಿ, ಮನೆಯೊಂದರ ವರಾಂಡದಲ್ಲಿ ಮಲಗಿದ್ದಾಳೆ….
ಮೈಸೂರಲ್ಲಿ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್‍ಗಳ ಹುದ್ದೆಗೆ ಲಿಖಿತ ಪರೀಕ್ಷೆ
January 28, 2019ಮೈಸೂರು: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ಮತ್ತು ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳಿಗಾಗಿ ಇಂದು ಮೈಸೂರಲ್ಲಿ ಅಭ್ಯರ್ಥಿಗಳ ಲಿಖಿತ ಪರೀಕ್ಷೆ ನಡೆಯಿತು. ಮೈಸೂರಿನ ಮಹಾರಾಜ, ಮಹಾಜನ, ವಿದ್ಯಾವರ್ಧಕ, ಮಹಾರಾಣಿ ಸೇರಿದಂತೆ ಒಟ್ಟು 20 ಕೇಂದ್ರಗಳಲ್ಲಿ ಕೊಠಡಿಗೆ 20 ಮಂದಿಯಂತೆ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಮೈಸೂರಲ್ಲಿ 58 ಕಾನ್‍ಸ್ಟೇಬಲ್ ಮತ್ತು 14 ಮಹಿಳಾ ಕಾನ್‍ಸ್ಟೇಬಲ್‍ಗಳ ಹುದ್ದೆ ಗಾಗಿ ಒಟ್ಟು 9998 ಮಂದಿಗೆ ಪ್ರವೇಶ ಪತ್ರ ನೀಡಲಾಗಿತ್ತು. ಪ್ರತೀ ಪರೀಕ್ಷಾ ಕೊಠಡಿ ಯಲ್ಲಿ…
ಕರ್ನಾಟಕ ವಲಯ ಮಟ್ಟದಲ್ಲಿ ನೇಮಕಾತಿಗೆ ಅಂಚೆ ನೌಕರರ ಆಗ್ರಹ
January 28, 2019ಮೈಸೂರಲ್ಲಿ ವಿಭಾಗೀಯ ಮಟ್ಟದ ಆರ್‍ಎಂಎಸ್, ಎಸ್ಸಿ, ಎಸ್ಟಿ ನೌಕರರ ಸಮ್ಮೇಳನದಲ್ಲಿ ನಿರ್ಣಯ ಮೈಸೂರು: ಮೊದಲಿದ್ದಂತೆ ಅಂಚೆ ಇಲಾಖೆಗೆ ಕರ್ನಾಟಕ ವಲಯ ಮಟ್ಟದಲ್ಲೇ ಸ್ಥಳೀಯ ನಿರುದ್ಯೋಗಿ ಯುವಕರನ್ನು ನೇಮಕ ಮಾಡಬೇಕೆಂದು ಅಖಿಲ ಭಾರತ ಅಂಚೆ ಇಲಾಖೆ ನೌಕರರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಂಘ ಆಗ್ರಹಿಸಿದೆ. ಮೈಸೂರಿನ ಜೆ.ಕೆ.ಗ್ರೌಂಡ್‍ನಲ್ಲಿರುವ ಮೈಸೂರು ಮೆಡಿಕಲ್ ಕಾಲೇಜಿನ ಪ್ಲಾಟಿನಂ ಜುಬಿಲಿ ಮಿನಿ ಸಭಾಂಗಣದಲ್ಲಿ ಏರ್ಪಡಿಸಿದ್ದ 2ನೇ ವಿಭಾಗೀಯ ಮಟ್ಟದ ಆರ್‍ಎಂಎಸ್, ಎಸ್ಸಿ, ಎಸ್ಟಿ ನೌಕರರ ಸಮ್ಮೇಳನ ಹಾಗೂ ವಲಯ ಕಾರ್ಯಕಾರಿಣಿ ಸಭೆಯಲ್ಲಿ…
ಪ್ರೊ ಕಬಡ್ಡಿ ಗೆದ್ದ ಚಾಮುಂಡೇಶ್ವರಿ ಬುಲ್ಸ್
January 28, 2019ಮೈಸೂರು: ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಪ್ರೊ ಕಬಡ್ಡಿ ಪಂದ್ಯಾವಳಿ ಯಲ್ಲಿ `ಚಾಮುಂಡೇಶ್ವರಿ ಬುಲ್ಸ್’ ಗೆಲುವು ಸಾಧಿಸಿದೆ. ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ಮೈಸೂರು ನಗರ ಮಟ್ಟದ ಪುರುಷರ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಚಾಮುಂಡೇಶ್ವರಿ ಬುಲ್ಸ್ ತಂಡವು ಅಂಜನಿ ಪ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದರೆ, ಅಂಜನಿ ಪ್ಯಾಂಥರ್ಸ್ ತಂಡ ದ್ವಿತೀಯ ಬಹುಮಾನಕ್ಕೆ ತೃಪ್ತಿಪಡಬೇಕಾಯಿತು. ಎಸ್‍ಎಲ್‍ಡಿ ಬುಲ್ಸ್ ತೃತೀಯ ಮತ್ತು…
ಕಾರ್ಮಿಕರ ಭದ್ರತೆಗೆ ಉದ್ಯೋಗ ಖಾತರಿ ಯೋಜನೆ ಹೆಚ್.ಡಿ.ಕೋಟೆಯಲ್ಲಿ ಸ್ಮಾಟ್ ಕಾರ್ಡ್ ವಿತರಿಸಿದ ಸಂಸದ ಧ್ರುವನಾರಾಯಣ್
January 28, 2019ಹೆಚ್.ಡಿ.ಕೋಟೆ: ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಒದಗಿಸುವ ಉದ್ದೇಶದಿಂದ, ಹಿಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿದ್ದರು ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ, ಕಾರ್ಮಿಕ ವಿಭಾಗ, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಸರ್ಕಾರಿ ಸವಲತ್ತುಗಳ ಬಗ್ಗೆ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದಿನಿಂದಲೂ ಎಂದಿಗೂ ಕಾಂಗ್ರೆಸ್ ಪಕ್ಷ ಕಾರ್ಮಿಕರ ಪರವಾಗಿಯೇ ಇದೆ….
ಕೆ.ಆರ್.ನಗರದಲ್ಲಿ ಉಪ ವಿಶ್ವವಿದ್ಯಾನಿಲಯ ಸ್ಥಾಪನೆ
January 28, 2019ಕೆ.ಆರ್.ನಗರ: ನನ್ನ ವಿದ್ಯಾಭ್ಯಾಸದ ದಿನದಲ್ಲಿ ಅನುಭವಿಸಿದ ಕಷ್ಟವನ್ನು ನೀವು ಅನುಭವಿಸಬಾರದೆಂಬ ಅಶಯದಿಂದ ಕೆ.ಆರ್. ನಗರ ತಾಲೂಕಿನಲ್ಲಿ ವೃತ್ತಿಪರ ಶಿಕ್ಷಣ ಸೇರಿದಂತೆ ಉಪ ವಿಶ್ವವಿದ್ಯಾ ನಿಲಯ ಪ್ರಾರಂಭಿಸಬೇಕೆಂಬ ನಿರ್ಧಾರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅನುಮತಿ ನೀಡಿದ್ದಾರೆ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2018-19ನೇ ಶೈಕ್ಷಣಿಕ ಸಾಲಿನ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಸಮಾರೋಪ ಸಮಾ ರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ…










