ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ ಕೆಆರ್‍ಎಸ್ ರಸ್ತೆಯಲ್ಲಿರುವ ರೈಲ್ವೇ ಕ್ರೀಡಾ ಮೈದಾನ ದಲ್ಲಿ ಶನಿವಾರ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಪರ್ಣ ಗರ್ಗ್ ಅವರು ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ರೈಲ್ವೆ ಭದ್ರತಾ ಸಿಬ್ಬಂದಿಗಳಿಂದ ಪಥ ಸಂಚಲನ ಪರಿವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ಹಣಕಾಸು ವರ್ಷದ 9 ತಿಂಗಳಲ್ಲಿ ಮೈಸೂರು ರೈಲ್ವೆ ವಿಭಾಗವು ಗಣನೀಯ ಸಾಧನೆಗೈದಿದೆ ಎಂದರು.
71 ಕಿಮೀ ಉದ್ದದ ದ್ವಿಪಥ ಯೋಜನೆ, 87 ಲೆವಲ್ ಕ್ರಾಸಿಂಗ್ ತೆಗೆದು ಮಾನವ ರಹಿತ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ, ಪಾರ್ಸಲ್ ಸೌಲಭ್ಯ ಅಭಿವೃದ್ಧಿಯಂತಹ ಕೆಲಸವನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ನುಡಿದರು.
ರೈಲ್ವೆ ಮಂಡಳಿ ನಿಗದಿಪಡಿಸಿದ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದು, ಪ್ರಯಾಣಿಕ ರಿಗೆ ಹೆಚ್ಚುವರಿ ಸೌಲಭ್ಯ ಒದಗಿಸಲು ವಿಭಾ ಗವು ಹಲವು ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದೂ ಅಪರ್ಣ ಗರ್ಗ್ ಅವರು ತಿಳಿಸಿದರು. ರೈಲ್ವೇ ಪೊಲೀಸ್, ಅರ್‍ಪಿಎಫ್ ತುಕಡಿ ಹಾಗೂ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.