ಮೈಸೂರು: ಮುಗ್ಧತೆ ಮತ್ತು ಮನುಷ್ಯತ್ವದಿಂದ ನೋಡಿದರೆ ರಾಮ ಇಷ್ಟ ಆಗುವುದಿಲ್ಲ. ರಾಮನ ಬಗ್ಗೆ ಮಾತನಾಡಿ ದರೆ ಪ್ರಶ್ನೆ ಮಾಡುವವರು, ದೂರು ದಾಖ ಲಿಸುವವರು ಮೂಲ ರಾಮಾಯಣ ಓದಿಲ್ಲ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ಅಭಿಪ್ರಾಯಪಟ್ಟರು.
ಮೈಸೂರಿನ ಕಲಾಮಂದಿರದ ಆವರಣ ದಲ್ಲಿ ಚಾಮರಾಜನಗರದ ರಂಗವಾಹಿನಿ, ಗಾನಾಸುಮಾ ಮ್ಯೂಸಿಕಲ್ ಗ್ರೂಪ್ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾರಂಭ ದಲ್ಲಿ ಗಾನಾಸುಮಾ ಪಟ ್ಟಸೋಮನಹಳ್ಳಿ ಅವರ `ಮಹಿಷ ಮಂಡಲ ಮಧ್ಯದೊಳಗೆ-ಸಂಶೋಧಿತ ಕವನ ಸಂಕಲನ’ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ನಾವು ನಿಜವಾದ ರಾಮನ ಬಗ್ಗೆ ಮಾತ ನಾಡಿದರೆ ಪ್ರಶ್ನೆ ಮಾಡುವವರು ನಿಜಕ್ಕೂ ಮೂಲ ರಾಮಾಯಣ ಓದಿಲ್ಲ. ಒಂದು ವೇಳೆ ಓದಿದ್ದರೆ ಅವರು ಪ್ರಶ್ನೆ ಮಾಡಲು ಸಾಧ್ಯ ವಿಲ್ಲ. ರಾಮ ಸೀತೆಯನ್ನು ನಡೆಸಿಕೊಂಡ ರೀತಿ ಹಾಗೂ ವಾಲಿಯನ್ನು ಕೊಂದ ರೀತಿ ಇತ್ಯಾದಿಯಾಗಿ ನೋಡಿದರೆ ಮಾನವೀಯ ನೆಲಗಟ್ಟಿನಲ್ಲಿ ರಾಮ ಆದರ್ಶನಾಗಲ್ಲ. ಡಾ. ಬಿ.ಆರ್.ಅಂಬೇಡ್ಕರ್ ಅವರು `ಪುರಾಣ ಗಳೆಂದರೆ ಮನುಷ್ಯನ ಶೋಷಿಸುವ ಸಂವಿ ಧಾನ’ ಎಂದಿದ್ದಾರೆ. ಅದೇ ರೀತಿ ಲೋಹಿಯಾ ಅವರು `ಪುರಾಣಗಳೆಂದರೆ ಮನುಷ್ಯನ ಕನಸು ಮತ್ತು ಕೋಟಲೆಗಳ ದಾಖಲೆ’ ಎಂದು ಕರೆದಿದ್ದಾರೆ. ಪುರಾಣಗಳನ್ನು ಮಹಾ ಕಾವ್ಯ ಗಳಾಗಿ ನೋಡಬಹುದು. ಆದರೆ ಕೆಲವರು ಇತಿಹಾಸ ಮಾಡಿಟ್ಟಿದ್ದಾರೆ. ಪುರಾಣವಷ್ಟೇ ನೋಡಿದಾಗ ಭಕ್ತಿಯಿಂದ ಕಣ್ಣು ಮುಚ್ಚಿ ಕೊಂಡು ಎಲ್ಲವನ್ನೂ ಒಪ್ಪಿಕೊಳ್ಳಬೇಕಾಗು ತ್ತದೆ ಎಂದು ವಿಶ್ಲೇಷಿಸಿದರು.
ರಾಮನ ಕುರಿತಂತೆ ಪ್ರೊ.ಕೆ.ಎಸ್.ಭಗ ವಾನ್ ಅವರಾಗಲೀ, ನಾವಾಗಲೀ ಹೊಸ ದೇನೂ ಹೇಳುತ್ತಿಲ್ಲ. ನಾವಿಂದು ಹೇಳುವು ದನ್ನು ಈ ಹಿಂದೆಯೇ ಡಾ.ಅಂಬೇಡ್ಕರ್ ಬರೆದಿಟ್ಟಿದ್ದಾರೆ. ಅವರೆಷ್ಟೇ ಅಲ್ಲದೇ ಅನೇಕ ವಿದ್ವಾಂಸರು ವಿಶ್ಲೇಷಿಸಿ ಅಭಿಪ್ರಾಯ ಮಂಡಿ ಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸುವು ದಾದರೆ ಮೊದಲಿಗೆ ಡಾ.ಅಂಬೇಡ್ಕರ್ ಅವರ ವಿರುದ್ಧ ದಾಖಲಿಸಬೇಕಾಗುತ್ತದೆ ಎಂದು ವಿರೋಧಿಸುವವರಿಗೆ ತಿರುಗೇಟು ನೀಡಿದರು.
ರಾಮನನ್ನು ದೇವರನ್ನೇ ಮಾಡಬೇಕೆಂಬ ಉದ್ದೇಶ ಕರ್ತೃಗಳಲ್ಲಿದ್ದರೆ ಆ ಪಾತ್ರಗಳಲ್ಲಿ ಕೊರತೆಗಳನ್ನು ಇಡುವ ಅಗತ್ಯವಾದರೂ ಏನಿತ್ತು? ಕಾವ್ಯದಲ್ಲಿ ರಾಮನನ್ನು ಸಮ ರ್ಥನೆ ಮಾಡುವ ಯಾವುದೇ ಅಂಶಗಳೂ ಇಲ್ಲ. ಏಕಪತ್ನಿ ವತ್ರಸ್ಥ, ಸಸ್ಯಾಹಾರಿ ಹಾಗೂ ರಾಮರಾಜ್ಯ ಸೇರಿದಂತೆ ಇತ್ಯಾದಿಯಾಗಿ ಹೇಳುವುದಕ್ಕೆ ವಿರುದ್ಧವಾದ ಅಂಶಗಳು ಮೂಲ ರಾಮಾಯಣದಲ್ಲಿ ರಾಮನ ಬಗ್ಗೆ ಕಾಣಸಿಗುತ್ತವೆ. ಪುರಾಣದ ಪಾತ್ರಗಳಿಗೆ ರಾಜಕೀಯದ ವೇಷ ತೊಡಿಸಿ ಸಮಾಜ ದಲ್ಲಿ ಶಾಂತಿ ಕದಡಲಾಗುತ್ತಿದೆ. ಆ ಮೂಲಕ ರಾಮಾಯಣ ರಚಿಸಿದ ವಾಲ್ಮೀಕಿ ಹಾಗೂ ಮಹಾಭಾರತ ರಚಿಸಿದ ವ್ಯಾಸರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ವಿದ್ವಾಂಸರೊಬ್ಬರು ಅಭಿಪ್ರಾಯಪಡು ವಂತೆ ರಾಮಾಯಣವನ್ನು ಪೂರ್ತಿಯಾಗಿ ವಾಲ್ಮೀಕಿ ಬರೆದಿಲ್ಲ. ಹೀಗಾಗಿ ವಾಲ್ಮೀಕಿ ಬಳಿಕ ಮೂಲ ರಾಮಾಯಣವನ್ನು ವಿಸ್ತರಿಸಲಾ ಗಿದೆ ಎಂಬುದು ನನ್ನ ಭಾವನೆ. ಬ್ರಿಟಿಷ್ ಭಾರತ ದಲ್ಲಿ ದೇಶದ ಉದ್ದಗಲಕ್ಕೂ ಶೋಧಿಸಿ 160 ಬಗೆಯ `ಮಹಾಭಾರತ’ದ ಕಥೆಗಳನ್ನು ಸಂಗ್ರ ಹಿಸಿ ಕ್ರೋಢೀಕರಿಸಲಾಯಿತು. ಇಡೀ ದೇಶದಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಕಥೆಗಳನ್ನು ರಾಮಾಯಣ ಹಾಗೂ ಮಹಾಭಾರತದಲ್ಲಿ ಕಾಣಬಹುದಾಗಿದೆ. ಹಲವು ರೀತಿಯ ಪ್ರತೀತಿಗಳು ಹಾಗೂ ಕುರುಹುಗಳ ಬಗ್ಗೆಯೂ ಸ್ಥಳೀಯರು ಭಿನ್ನಭಿನ್ನ ವಾಗಿ ವಿವರಿಸುತ್ತಾರೆ ಎಂದು ತಿಳಿಸಿದರು.
ಭೈರಪ್ಪರಿಗೆ ತಿರುಗೇಟು: ಸಾಹಿತಿ ಡಾ.ಎಸ್. ಎಲ್.ಭೈರಪ್ಪ ಶುದ್ಧ ಸಾಹಿತ್ಯ ಎಂದು ಮಾತ ನಾಡುತ್ತಾರೆ. ನನ್ನ ಪ್ರಕಾರ ಹಾಲು ಬಹಳ ಶುದ್ಧ. ಆದರೆ ಹಾಲು ಆರೋಗ್ಯಕ್ಕೆ ಒಳ್ಳೆಯ ದಲ್ಲ ಎಂದು ವೈದ್ಯರು ಹೇಳುತ್ತಾರೆ. ಅದೇ ಹಾಲಿಗೆ ಹುಳಿ ಹಾಕಿದಾಗ ಆಗುವ ಮೊಸರು ಒಳ್ಳೆಯದು ಎನ್ನುತ್ತಾರೆ ವೈದ್ಯರು. ಹೀಗಾಗಿ ನಮಗೆ ಮೊಸರಿನ ಸಾಹಿತ್ಯವೇ ಸಾಕು ಎಂದು ದಿನೇಶ್ ಅಮಿನ್‍ಮಟ್ಟು ತಿರುಗೇಟು ನೀಡಿ ದರು. ಕೃತಿ ಕುರಿತು ಇತಿಹಾಸ ಸಂಶೋಧಕ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ ದರು. ಇತಿಹಾಸ ಸಂಶೋಧಕಿ ವಿಜಯಾ ಮಹೇಶ್, ಪತ್ರಕರ್ತ ಡಾ.ಕೃಷ್ಣಮೂರ್ತಿ ಚಮರಂ, ಜನಪದ ಗಾಯಕ ಸಿ.ಎಂ.ನರಸಿಂಹ ಮೂರ್ತಿ, ಕೃತಿ ಕರ್ತೃ ಗಾನಸುಮಾ ಪಟ್ಟ ಸೋಮನಹಳ್ಳಿ ಮತ್ತಿತರರು ಹಾಜರಿದ್ದರು.