ಗಣರಾಜ್ಯೋತ್ಸವದಲ್ಲಿ ಐವರು ಸಾಧಕರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
ಮೈಸೂರು

ಗಣರಾಜ್ಯೋತ್ಸವದಲ್ಲಿ ಐವರು ಸಾಧಕರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

January 28, 2019

ಮೈಸೂರು: ಮೈಸೂ ರಿನ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ ಐವರು ಸರ್ಕಾರಿ ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸೂಪರಿಂಟೆಂಡಿಂಗ್ ಇಂಜಿನಿ ಯರ್ ಬಿಕೆ.ಸುರೇಶಬಾಬು, ಜಿಲ್ಲಾ ಸಂತಾ ನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿ ಕಾರಿ ಡಾ.ಎಲ್.ರವಿ, ಮೈಸೂರು, ಮಹಾ ನಗರಪಾಲಿಕೆಯ ಪರಿಸರ ಇಂಜಿನಿಯರ್ ಟಿ.ಎಂ.ಪೂರ್ಣಿಮಾ, ಜಿಲ್ಲಾ ಪಂಚಾಯ್ತಿ ಪ್ರಥಮ ದರ್ಜೆ ಸಹಾಯಕ ಬಿ.ಎಸ್. ಪದ್ಮಾಕ್ಷಿ ಮತ್ತು ಕೆ.ಆರ್.ನಗರ ತಾಲೂಕು ಕಛೇರಿ ಎಸ್.ತಹಸೀಲ್ದಾರ್ ವೈ.ಕೆ.ಗುರು ಪ್ರಸಾದ್, ಸರ್ಕಾರಿ ನೌಕರರ ಸರ್ವೋ ತ್ತಮ ಸೇವಾ ಪ್ರಶಸ್ತಿಗೆ ಭಾಜನರಾದವರಾ ಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಪ್ರಸಸ್ತಿ ಪ್ರದಾನ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೈಸೂರಿನ ಸಿಕೆಸಿ ಪ್ರೌಢಶಾಲೆ ವಿದ್ಯಾರ್ಥಿ ಗಳು ಯೋಗಾಸನ ಪ್ರಾತ್ಯಕ್ಷಿಕೆ ನಡೆಸಿ ನೆರೆ ದಿದ್ದವರಿಗೆ ಸುಸ್ಥಿರ ಆರೋಗ್ಯ ಕಾಪಾಡಿ ಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿದರು.

ಸದ್ವಿದ್ಯಾ ಪ್ರೌಢಶಾಲೆಯ 500 ವಿದ್ಯಾರ್ಥಿ ಗಳು ದೇಶ ಭಕ್ತಿಗೀತೆಗಳಿಗೆ ಸಮೂಹ ನೃತ್ಯ ಮಾಡಿದರೆ, ವಿವಿಧೆಡೆಯಲ್ಲಿ ಏಕತೆ ಸಾರುವ ನೃತ್ಯ ಪ್ರದರ್ಶಿಸಿ ತ್ರಿವರ್ಣ ಸಮ ವಸ್ತ್ರದೊಂದಿಗೆ ದೇಶ ಪ್ರೇಮ ಮೂಡಿ ಸುವಲ್ಲಿ ಯಶಸ್ವಿಯಾದರು.

ಬಹುಮಾನ ವಿತರಣೆ

ಇದೇ ವೇಳೆ ಪಥಸಂಚಲನದಲ್ಲಿ ಪಾಲ್ಗೊಂಡ ತಂಡಗಳಿಗೆ ಸಚಿವ ಜಿ.ಟಿ. ದೇವೇಗೌಡರು ಬಹುಮಾನಗಳನ್ನು ವಿತ ರಿಸಿದರು. ಸಶಸ್ತ್ರ ಪಡೆ ವಿಭಾಗದಲ್ಲಿ ಕೆಎಸ್‍ಆರ್‍ಪಿ ಆರ್‍ಎಸ್‍ಐ ಬಿ.ಶಿವರಾಜ್ (ಪ್ರಥಮ) ಕೆ.ಆರ್.ಉಪ ವಿಭಾಗದ ಎಸ್‍ಐ ಅನಿಲ್‍ಕುಮಾರ್(ದ್ವಿತೀಯ) ಎನ್.ಆರ್. ಉಪವಿಭಾಗದ ಎಸ್‍ಐ ವಿಶ್ವನಾಥ (ತೃತೀಯ) ಎನ್‍ಸಿಸಿ ಭೂ ಸೇನೆ (ಪ್ರಥಮ), ಅರಣ್ಯ ಇಲಾಖೆ ಮಹಿಳಾ ತಂಡ (ದ್ವಿತೀಯ) ಹಾಗೂ ಎನ್‍ಸಿಸಿ ವಾಯುದಳ (ತೃತೀಯ) ಶಾಲಾ ವಿಭಾಗದಲ್ಲಿ ಪೊಲೀಸ್ ಪಬ್ಲಿಕ್ ಶಾಲೆ(ಪ್ರಥಮ), ಭಾರತ್ ಸೇವಾದಳ ಬಾಲಕರ ತಂಡ (ದ್ವಿತೀಯ) ಹಾಗೂ ಕುಂಬಾರಕೊಪ್ಪಲು ಸರ್ಕಾರಿ ಶಾಲೆ (ತೃತೀಯ)ಗಳಿಗೆ ಬಹುಮಾನ ಲಭಿ ಸಿತು. ಅಲ್ಲದೆ ಡಿಎಆರ್, ಕೆಎಸ್‍ಆರ್‍ಪಿ ಮತ್ತು ಸಿಎಆರ್ ಪೊಲೀಸ್ ಬ್ಯಾಂಡ್ ತಂಡಗಳಿಗೂ ಇದೇ ಸಂದರ್ಭ ವಿಶೇಷ ಬಹುಮಾನ ನೀಡಲಾಯಿತು.

Translate »