ಬೆಂಗಳೂರು: ವಾತಾವರಣ ದಲ್ಲಿ ಉಂಟಾಗಿರುವ ಬದಲಾವಣೆ ಯಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ನಾಳೆ (ಜ.28) ಕೆಲವೆಡೆ ಹಗುರ ಮಳೆ ಯಾಗುವ ಸಾಧ್ಯತೆಗಳಿವೆ. ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾ ಗುವ ಮುನ್ಸೂಚನೆಗಳಿವೆ ಎಂದು ಕರ್ನಾ ಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿ ವಾಸ್ ರೆಡ್ಡಿ ತಿಳಿಸಿದ್ದಾರೆ. ವಾತಾ ವರಣದ ಗಾಳಿಯಲ್ಲಿ ಒತ್ತಡ (ಟ್ರಪ್) ಕಡಿಮೆಯಾಗಿರುವುದರಿಂದ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ನಾಳೆವರೆಗೂ ಇದೇ ಪರಿಸ್ಥಿತಿ ಮುಂದು ವರೆಯಲಿದೆ. ರಾಜ್ಯದ ಒಳನಾಡಿನ ಕೆಲವು ಭಾಗಗಳಲ್ಲಿ ಹಗುರ ಮಳೆ ಯಾಗುವ ಸಾಧ್ಯತೆಗಳಿವೆ. ಆದರೆ, ಭಾರೀ ಮಳೆಯಾಗುವ ಲಕ್ಷಣಗಳು ಕಂಡು ಬಂದಿಲ್ಲ. ಹಗಲಿನಲ್ಲಿ ಉಷ್ಣಾಂಶ ಗಣ ನೀಯವಾಗಿ ಏರಿಕೆಯಾಗುತ್ತಿದ್ದು, ಚಳಿ ಪ್ರಮಾಣ ಇಳಿಕೆಯಾಗಲಿದೆ. ಕನಿಷ್ಠ ತಾಪ ಮಾನದಲ್ಲೂ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲೂ ಚಳಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗ ಲಿದೆ ಎಂದು ಅವರು ತಿಳಿಸಿದರು.