ಮೈಸೂರು,: ಆತ್ಮಹತ್ಯೆಗೆ ಶರಣಾಗಿ ನಿಮ್ಮನ್ನು ನಂಬಿದ ಕುಟುಂಬ ದವರನ್ನು ಬೀದಿಪಾಲು ಮಾಡಬೇಡಿ. ಸರ್ಕಾರ ಸದಾ ನಿಮ್ಮೊಂದಿಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ರೈತರಿಗೆ ಆಭಯ ನೀಡಿದ್ದಾರೆ.
ಜಿಲ್ಲಾ ಆಡಳಿತ, ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಮೈಸೂ ರಿನ ಬನ್ನಿಮಂಟಪದ ಪಂಜಿನ ಕವಾ ಯತು ಮೈದಾನದಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಧ್ವಜಾರೋಹಣ ಮಾಡಿದ ಬಳಿಕ ಆಕರ್ಷಕ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿ ಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ರೈತರ ವಿವಿಧ ಬ್ಯಾಂಕಿನಲ್ಲಿ ರುವ 46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ದೃಢ ನಿರ್ಧಾರ ಮಾಡಿ ದ್ದಾರೆ. ಯಾವುದೇ ಸಂದರ್ಭ ಬಂದರೂ ರೈತರು ಸೇರಿದಂತೆ ರಾಜ್ಯದ ಬಡಜನ ರನ್ನು ರಕ್ಷಿಸಲು ಸರ್ಕಾರ ಸದಾ ಸಿದ್ಧವಿದೆ. ಆದ್ದರಿಂದ ಸಾಲದ ಭೀತಿಗೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಬಡ ವ್ಯಾಪಾರಿಗಳಿಗೆ ತಮ್ಮ ನಿತ್ಯ ಕಸಬು ಅವಲಂಬಿಸಲು ಸರ್ಕಾರ 10 ಸಾವಿರ ರೂ. ಗಳ ಸಾಲದ ನೆರವು ನೀಡುತ್ತಿದೆ. ಅಲ್ಲದೆ, ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ನೀರಾ ವರಿ ಯೋಜನೆಗಳನ್ನು ಸದೃಢಗೊಳಿಸುವ ಮೂಲಕ ಮುಖ್ಯಮಂತ್ರಿಗಳು ಈ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿ ಸಲು ಪ್ರÀಯತ್ನಿಸುತ್ತಿದ್ದಾರೆ ಎಂದು ಸಚಿವರು ಇಂದು ನಾಡಿನ ಜನತೆಗೆ ಗಣರಾಜ್ಯೋ ತ್ಸವದ ಶುಭಾಶಯ ಹೇಳಿದರು.
ಅಸ್ಪøಶ್ಯರು ಮತ್ತು ಶೋಷಿತ ಸಮು ದಾಯಗಳವರು ತಮ್ಮ ಹಕ್ಕುಗಳನ್ನು ಪಡೆಯ ಲಾಗದೇ ಹಲವು ವರ್ಷಗಳಿಂದ ವಂಚಿತ ರಾಗಿದ್ದಾರೆ. ಸಂವಿಧಾನಬದ್ಧವಾಗಿ ಇವರಿಗೆ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶ ಭಾರತ ಸಂವಿಧಾನದ್ದಾಗಿದೆ. ಇದರಲ್ಲಿನ ಮೂಲ ಭೂತ ಹಕ್ಕುಗಳಿಂದ ಪ್ರಭಾವಿತವಾದ ವಿಶ್ವಸಂಸ್ಥೆಯು 1948ರ ಡಿ.10ರಂದು ವಿಶ್ವ ಮಾನವ ಹಕ್ಕುಗಳನ್ನು ಘೋಷಿಸಿತು. ಇದು ಅಂಬೇಡ್ಕರ್ ಅವರಿಗಷ್ಟೇ ಅಲ್ಲ ಇಡೀ ಭಾರ ತಕ್ಕೇ ಸಿಕ್ಕ ಗೌರವವಾಗಿದೆ ಎಂದ ಸಚಿವರು, ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನದ ನಿಜವಾದ ಪಿತಾಮಹ ಡಾ.ಅಂಬೇಡ್ಕರ್ ಅವರು ಎಂಬ ಕೆ.ಎಂ.ಮುನ್ಷಿ ಅವರ ಮಾತು ನಿಜಕ್ಕೂ ಅರ್ಥಪೂರ್ಣ ಎಂದರು.
ಆರ್ಥಿಕ ಸಾಮಾಜಿಕ ಅಸಮಾನತೆಗಳು ಇನ್ನೂ ಮುಂದುವರೆದಿವೆÉ. ಭಾರತದ ಸಂವಿ ಧಾನ ಕೇವಲ ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಹಿತವನ್ನು ಕಾಪಾಡದೇ ಇಡೀ ದೇಶದ ಜನತೆಯ ಆಶೋತ್ತರಗಳನ್ನು ಈಡೇರಿಸುತ್ತದೆ. ಜಾತ್ಯತೀತ ರಾಷ್ಟ್ರದ ವಿಶಾಲ ಚಿಂತನೆಯ ತಳಹದಿಯ ಮೇಲೆ, ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದ ಸ್ಥಾಪನೆಗೆ ರೂಪುಗೊಂಡ ಶ್ರೇಷ್ಟ ಸಂವಿಧಾನವಾಗಿದೆ ಎಂದು ಸಚಿವ ಜಿ.ಟಿ.ದೇವೇಗೌಡ ಇದೇ ಸಂದರ್ಭದಲ್ಲಿ ನುಡಿದರು.
ಆರಂಭದಲ್ಲಿ ಕೆಎಸ್‍ಆರ್‍ಪಿ, ಅಶ್ವಾರೋಹಿ ದಳ, ಸಿ.ಎ.ಆರ್, ಡಿ.ವಿ.ಆರ್, ತುಕಡಿ ಗಳು, ಸಿವಿಲ್ ಪೊಲೀಸ್ ತಂಡ, ಮಹಿಳಾ ಪೊಲೀಸ್, ಗೃಹರಕ್ಷಕದಳ, ಅಬಕಾರಿ, ಅರಣ್ಯ, ಎನ್‍ಸಿಸಿಯ ಭೂಸೇನೆ, ವಾಯು ಸೇನೆ, ನೌಕಾದಳ, ಕಮಾಂಡೊ ಪಡೆ ಪೊಲೀಸರು, ಅತ್ಯಾಕರ್ಷಕ ಪಥಸಂಚ ಲನ ಕವಾಯತು ನಡೆಸುವ ಮೂಲಕ ಸಚಿ ವರಿಗೆ ಗೌರವ ವಂದನೆ ಸಲ್ಲಿಸಿದರು.
ಈ ಸಂದರ್ಭ ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆ, ಭಾರತ ಸೇವಾದಳ, ದೀಪಾ ಶಾಲೆ, ಅನಂತ ಗೀತಾ ವಿದ್ಯಾಲಯ, ಕುಂಬಾರ ಕೊಪ್ಪಲು ಪ್ರೌಢಶಾಲೆ ಸೇರಿ ದಂತೆ ವಿವಿಧ ಶಾಲಾ ಮಕ್ಕಳು ಆಕರ್ಷಕ ಪಥಸಂಚಲನ ನಡೆಸಿದರು. ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫಿ ಅಹಮ್ಮದ್, ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿ.ಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ ಸಿಇಓ ಕೆ.ಜ್ಯೋತಿ, ಮುಡಾ ಕಮಿಷನರ್ ವಿ.ಎಸ್.ಶಾಂತರಾಜು, ಮಹಾನಗರ ಪಾಲಿಕೆ ಕಮಿಷನರ್ ಕೆ.ಹೆಚ್.ಜಗದೀಶ್, ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‍ಚಂದ್ರ, ನಗರ ಪೊಲೀಸ್ ಕಮೀಷನರ್ ಕೆ.ಟಿ.ಬಾಲಕೃಷ್ಣ ಸೇರಿದಂತೆ ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಮೈಸೂರಿನ ಶ್ರೀ ಸುಮತಿನಾಥ ಜೈನ್ ನವಯುವಕ ಮಂಡಲ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳು ಹಾಗೂ ಸಿಬ್ಬಂದಿಗೆ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.