ಚಾಮುಂಡೇಶ್ವರಿ ಕ್ಷೇತ್ರದ ಸ್ಮಶಾನ ಭೂಮಿಗಳ ಅಭಿವೃದ್ಧಿಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದ ಸ್ಮಶಾನ ಭೂಮಿಗಳ ಅಭಿವೃದ್ಧಿಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ

December 12, 2019

ಮೈಸೂರು, ಡಿ.11(ಆರ್‍ಕೆಬಿ)- ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಗ್ರಾಮ ಗಳಲ್ಲಿ ಸ್ಮಶಾನಕ್ಕೆ ಮಂಜೂರಾಗಿರುವ ಜಮೀನುಗಳನ್ನು ಅಭಿವೃದ್ಧಿಪಡಿಸುವ ಸಲು ವಾಗಿ ಕ್ಷೇತ್ರದ 16 ಗ್ರಾಮಗಳಲ್ಲಿ ಸ್ಮಶಾನಗಳ ಗಡಿ ಅಳತೆ ಮಾಡಿ ಒತ್ತುವರಿ ಗುರುತಿಸಿ, ಸ್ಮಶಾನಗಳ ಹದ್ದುಬಸ್ತು ಕಾರ್ಯಕ್ಕೆ ಶಾಸಕ ಜಿ.ಟಿ.ದೇವೇಗೌಡರು ಬುಧವಾರ ಜಯ ಪುರ ಗ್ರಾಮದಲ್ಲಿ ಚಾಲನೆ ನೀಡಿದರು.

ಸ್ಮಶಾನಗಳ ಹದ್ದುಬಸ್ತು ಮಾಡಲು ತಹಸೀಲ್ದಾರ್, ತಾಲೂಕು ಪಂಚಾಯಿತಿ ಇಓ ನೇತೃತ್ವದಲ್ಲಿ ರಾಜಸ್ವ ನಿರೀಕ್ಷಕರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾಗೂ ಭೂಮಾಪಕರು ಸೇರಿದಂತೆ ತಂಡ ರಚಿಸಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದ ಕಳಸ್ತವಾಡಿ, ಶ್ಯಾದನಹಳ್ಳಿ, ಲಿಂಗದೇವರಕೊಪ್ಪಲು, ಉದ್ಬೂರು, ಕಲ್ಲಹಳ್ಳಿ, ಕೆಲ್ಲಹಳ್ಳಿ, ಕಡಕೊಳ, ಜಯಪುರ, ಲಕ್ಷ್ಮೀಪುರ, ರಮ್ಮನಹಳ್ಳಿ, ಕೂರ್ಗಳ್ಳಿ, ಮೇಗಳಾಪುರ, ಮದ್ದೂರು, ಮಾರ್ಬಳ್ಳಿ ಹುಂಡಿ ಗ್ರಾಮಗಳ ಸರ್ವೆ ಗಳಲ್ಲಿ ಜಮೀನುಗಳನ್ನು ಹದ್ದುಬಸ್ತು ಮಾಡಲು ಚಾಲನೆ ನೀಡಿದರು.

11 ಗ್ರಾಪಂಗಳಲ್ಲಿ ಘನ ತ್ಯಾಜ್ಯ ಘಟಕ: ಬಳಿಕ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕ್ಷೇತ್ರದ 11 ಗ್ರಾಮಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಪ್ರಾರಂಭಿಸಲು ಪ್ರತಿ ಗ್ರಾಪಂಗೆ 20 ಲಕ್ಷದಂತೆ 220 ಲಕ್ಷ ಅನು ದಾನ ಮಂಜೂರಾಗಿದೆ. ಮೊದಲ ಹಂತ ದಲ್ಲಿ ಹಾರೋಹಳ್ಳಿ, ರಮ್ಮನಹಳ್ಳಿ, ಗುಂಗ್ರಾಲ್ ಛತ್ರ, ಹೊಸಹುಂಡಿ, ಧನಗಳ್ಳಿ, ಜಯ ಪುರ, ಕಡಕೊಳ, ಮಾರ್ಬಳ್ಳಿ, ಕೂರ್ಗಳ್ಳಿ, ಇಲವಾಲ, ದೊಡ್ಡಮಾರಗೌಡನಹಳ್ಳಿ ಗ್ರಾಪಂ ಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಗಳು ಮಂಜೂರಾಗಿದೆ ಎಂದರು.

ಶಾಲಾ-ಕಾಲೇಜುಗಳಲ್ಲಿ ಉದ್ಯಾನ: ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳ ಆವರಣ ಸರ್ಕಾರಿ ಆಸ್ಪತ್ರೆ ಆವರಣ, ಕಚೇರಿ ಆವರಣಗಳಲ್ಲಿ 10 ಉದ್ಯಾನಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ನಾಗನಹಳ್ಳಿ, ಹಾರೋಹಳ್ಳಿ, ಇಲವಾಲ,. ಹಂಚ್ಯಾ ಗ್ರಾಪಂ ಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಶಾಲಾ ಕಾಲೇಜುಗಳಿಗೆ ಕಾಂಪೌಂಡ್: ಪ್ರಸಕ್ತ ಆರ್ಥಿಕ ವರ್ಷದಲ್ಲಿ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಲ್ಲಿ 7800 ಮೀಟರ್ ಗಳಷ್ಟು ಕಾಂಪೌಂಡ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಪ್ರಸ್ತುತ 2200 ಮೀಟರ್ ಕಾಂಪೌಂಡ್ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಹೇಳಿದರು.

ಮಾದರಿ ವಿದ್ಯುತ್ ಗ್ರಾಮಗಳು: ಚಾಮುಂ ಡೇಶ್ವರಿ ಕ್ಷೇತ್ರದ ಟಿ.ಕಾಟೂರು, ಗುಂಗ್ರಾಲ್ ಛತ್ರ, ಇಲವಾಲ ಗ್ರಾಮಗಳಲ್ಲಿ ಮಾದರಿ ವಿದ್ಯುತ್ ಗ್ರಾಮಗಳನ್ನು ಪ್ರತಿ ಗ್ರಾಮಗಳಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಹಳೇ ಕಂಬಗಳನ್ನು ಬದಲಿಸಿ ಹೊಸ ಕಂಬಗಳನ್ನು ಹಾಕುವುದು, ಹೊಸ ಟಿಸಿ ಅಳವಡಿಸಿ, ವಿದ್ಯುತ್ ತಂತಿ ಬದಲಿಸಿ, ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಶ್ಯವಿರುವ ಕಂಬಗಳನ್ನು ಅಳವಡಿಸಿ ಸಂಪರ್ಕ ಕಲ್ಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಪಂ ಸದಸ್ಯೆ ರಜನಿ, ಗ್ರಾಪಂ ಅಧ್ಯಕ್ಷ ಬಸವಣ್ಣ, ಡೈರಿ ಅಧ್ಯಕ್ಷ ಸಿದ್ದೇಗೌಡ, ತಾಪಂ ಇಓ ಕೃಷ್ಣಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಹರಿ, ಡಿಡಿಎಲ್‍ಆರ್ ರಮ್ಯಾ, ಎಡಿ ಎಲ್‍ಆರ್ ಚಿಕ್ಕಣ್ಣ ಇನ್ನಿತರರು ಉಪಸ್ಥಿತರಿದ್ದರು.

ರಿಂಗ್ ರಸ್ತೆ ಒಳಗಿನ ಎಲ್ಲಾ ಬಡಾವಣೆಗಳು ಶೀಘ್ರ ಪಾಲಿಕೆ ವ್ಯಾಪ್ತಿಗೆ: ಜಿಟಿಡಿ
ಮೈಸೂರು,ಡಿ.11(ಆರ್‍ಕೆಬಿ)- ರಿಂಗ್ ರಸ್ತೆಯ ಒಳಗಿರುವ ಎಲ್ಲಾ ಬಡಾವಣೆಗಳು ಅದು ಖಾಸಗಿಯಿರಲಿ, ನಗರಾಭಿವೃದ್ಧಿ ಪ್ರಾಧಿಕಾರದ್ದಿರಲಿ, ಸೊಸೈಟಿಗಳಿರಲಿ ಇವೆಲ್ಲ ವನ್ನೂ ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರಿಸಬೇಕೆಂಬ ನಿರ್ಣಯ ಮಾಡಲಾಗು ತ್ತಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಮಂತ್ರಿಗಳು, ಶಾಸಕರು, ಸಂಸದರು ಒಟ್ಟಾಗಿ ಮತ್ತೊಂದು ಸಭೆ ಸೇರಿ ನಿರ್ಣಯ ಕೈಗೊಳ್ಳು ತ್ತಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರದ ಸುತ್ತ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ಪಂಚಾಯಿತಿಗಳಲ್ಲಿ 69, 50 ಹೀಗೆ ಸದಸ್ಯರಿದ್ದಾರೆ. ಒಂದೊಂದು ಗ್ರಾಮದಲ್ಲಿಯೇ 10ರಿಂದ 15 ಸಾವಿರ ಜನಸಂಖ್ಯೆ ಇದೆ. ಅವುಗಳನ್ನು ನಗರಪಾಲಿಕೆ ಅಥವಾ ಪಟ್ಟಣ ಪಂಚಾಯಿತಿ ಮಾಡಬೇಕೇ ಎಂದು ನಿರ್ಧರಿಸಲಾಗುವುದು ಎಂದು ಹೇಳಿದರು.

ಶಾಲೆಗಳಿಗೆ ನೆರವಾಗಲು ಉದ್ಯಮಿಗಳಿಗೆ ಮನವಿ: ಜಿಲ್ಲೆಯಲ್ಲಿ ಅತೀ ಹೆಚ್ಚು ಕೈಗಾರಿಕೆಗಳು ಮೈಸೂರು ತಾಲೂಕಿನಲ್ಲಿದ್ದು, ಅದರಲ್ಲೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಹೆಚ್ಚಾಗಿದೆ. ಈ ಕೈಗಾರಿಕೆಗಳಲ್ಲಿ ನಮ್ಮ ಕ್ಷೇತ್ರದ ಜನರು ಅಧಿಕ ಕಾರ್ಮಿಕರಿದ್ದು, ಅವರ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಸಿಎಸ್‍ಆರ್ ನಿಧಿಯಲ್ಲಿ ನೆರವಾಗುವಂತೆ ತಾವು ಉದ್ಯಮಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

Translate »