ಮೇಯರ್ ಆಯ್ಕೆ ಸಂಬಂಧ ಯಾರೂ ನನ್ನೊಂದಿಗೆ ಚರ್ಚಿಸಿಲ್ಲ: ಜಿಟಿಡಿ
ಮೈಸೂರು

ಮೇಯರ್ ಆಯ್ಕೆ ಸಂಬಂಧ ಯಾರೂ ನನ್ನೊಂದಿಗೆ ಚರ್ಚಿಸಿಲ್ಲ: ಜಿಟಿಡಿ

January 11, 2020

ಮೈಸೂರು,ಜ.10(ಆರ್‍ಕೆ)-ಮೇಯರ್ -ಉಪ ಮೇಯರ್ ಆಯ್ಕೆ ಸಂಬಂಧ ಇದುವರೆಗೂ ಯಾರೂ ನನ್ನೊಂದಿಗೆ ಚರ್ಚಿಸಿಲ್ಲ ಎಂದು ಶಾಸಕ ಜಿ.ಟಿ.ದೇವೇ ಗೌಡರು ತಿಳಿಸಿದ್ದಾರೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಮೇಯರ್ ಚುನಾವಣೆ ಕುರಿತು ಯಾರೂ ನನ್ನನ್ನು ಕರೆದಿಲ್ಲ. ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆಯೂ ಮಾತ ನಾಡದಿರುವುದರಿಂದ ನಾನು ತಟಸ್ಥನಾ ಗಿದ್ದೇನೆ ಎಂದರಲ್ಲದೆ, ಈ ವಿಚಾರದಲ್ಲಿ ನನ್ನದೇನೂ ನಡೆಯುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ನಾನೂ ಸಹ ಮೇಯರ್ ಚುನಾವಣೆಯಲ್ಲಿ ಭಾಗವಹಿ ಸುತ್ತೇನೆ. ಪಕ್ಷ ಸೂಚಿಸಿದ ಅಭ್ಯರ್ಥಿಗೆ ಮತ ನೀಡುತ್ತೇನೆ. ಇದರಲ್ಲಿ ಯಾವುದೇ ಗೇಮ್ ಪ್ಲಾನ್‍ಗಳಿಲ್ಲ. ಹಿಂದೆ-ಮುಂದೆ ಗೇಮ್ ಪ್ಲಾನ್ ಮಾಡುವ ಮೈಂಡ್ ನನ್ನದಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಪರೋಕ್ಷ ಬೇಸರ ವ್ಯಕ್ತಪಡಿಸಿದ ಜಿಟಿಡಿ, ಈ ಹಿಂದೆಯೂ ನಾನು ಸೂಚಿಸಿದವ ರನ್ನು ಮೇಯರ್ ಮಾಡಲಿಲ್ಲ ಎಂದರು.

ಸಾ.ರಾ.ಮಹೇಶ ನೇತೃತ್ವದಲ್ಲಿ ಎಲ್ಲರೂ ಮೇಯರ್ ಚುನಾವಣೆಗೆ ಸಿದ್ಧರಾಗುತ್ತಿ ದ್ದಾರೆ. ಅದರಲ್ಲಿ ನನ್ನದೇನೂ ಪಾತ್ರವಿಲ್ಲ. ನಾನು ತಟಸ್ಥವಾಗಿದ್ದೇನೆ ಎಂದು ತಿಳಿಸಿದರು.

Translate »