ಮೈಸೂರು: ಮಹಾರಾಷ್ಟ್ರದ ವಳೆನ್ನಲಾದ ಮಹಿಳೆಯೋರ್ವಳು ತನ್ನ ಮಕ್ಕಳನ್ನು ರೈಲ್ವೇ ಕ್ವಾರ್ಟರ್ಸ್‍ನ ಮನೆಯೊಂದರ ಮುಂದೆ ಮಲಗಿಸಿ ನಾಪತ್ತೆಯಾದ ಬಗ್ಗೆ ವರದಿಯಾಗಿದೆ.
ಯಾದವಗಿರಿಯಲ್ಲಿರುವ ಲೋಕೋ ಕಾಲೋನಿ ರೈಲ್ವೇ ಕ್ವಾರ್ಟರ್ಸ್‍ಗೆ ಮೂವರು ಗಂಡು ಮಕ್ಕಳೊಂದಿಗೆ ಜನವರಿ 16ರಂದು ರಾತ್ರಿ 9 ಗಂಟೆ ಸುಮಾರಿನಲ್ಲಿ ಬಂದ ಅಪರಿಚಿತ ಮಹಿಳೆ ತನ್ನನ್ನು ಮಹಾ ರಾಷ್ಟ್ರದ ಪುಣೆ ನಿವಾಸಿ ಎಂದು ಪರಿಚಯಿಸಿ ಕೊಂಡು ತಾನು ಜೈಪುರ ರೈಲಿನಲ್ಲಿ ಮೈಸೂರಿಗೆ ಬಂದಿರುವುದಾಗಿಯೂ ಹೇಳಿಕೊಂಡು ರಾತ್ರಿ ಮನೆಯ ಮುಂದೆ ಮಲಗಿ, ಬೆಳಿಗ್ಗೆ ಹೋಗುವುದಾಗಿ ತಿಳಿಸಿ, ಮನೆಯೊಂದರ ವರಾಂಡದಲ್ಲಿ ಮಲಗಿದ್ದಾಳೆ.
ಮರುದಿನ ಬೆಳಿಗ್ಗೆ ನೋಡಿದಾಗ ಆಕೆ ತನ್ನ ಮೂರು ಗಂಡು ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿರುವುದು ಕಂಡು ಬಂದಿದೆ. ಆಕೆ ಹೇಳಿಕೊಂಡಂತೆ ಮಕ್ಕಳ ವಿವರ ಲುಕ್ಸ್(3), ಗಣೇಶ್(2) ಮತ್ತು ಆದಿ(1) ಎಂದು ಹೇಳಿಕೊಂಡಿದ್ದಾಳೆ. ತನ್ನ ಹೆಸರನ್ನು ಮಾಲತಿ ಸಾಹು ಎಂದು ಪರಿಚಯಿಸಿಕೊಂಡಿ ದ್ದಾಳೆ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಕೆಯ ಬಗ್ಗೆ ಮಾಹಿತಿ ಇರುವವರು ವಿವಿ ಪುರಂ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0821-2418314 ಅಥವಾ ಪೊಲೀಸ್ ಇನ್ಸ್‍ಪೆಕ್ಟರ್ ಮೊ. ಸಂಖ್ಯೆ: 9480802238 ಅನ್ನು ಸಂಪರ್ಕಿಸುವಂತೆ ಕೋರಿದ್ದಾರೆ.