ಮೈಸೂರಲ್ಲಿ ಸಿವಿಲ್ ಪೊಲೀಸ್  ಕಾನ್‍ಸ್ಟೇಬಲ್‍ಗಳ ಹುದ್ದೆಗೆ ಲಿಖಿತ ಪರೀಕ್ಷೆ
ಮೈಸೂರು

ಮೈಸೂರಲ್ಲಿ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್‍ಗಳ ಹುದ್ದೆಗೆ ಲಿಖಿತ ಪರೀಕ್ಷೆ

January 28, 2019

ಮೈಸೂರು: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ಮತ್ತು ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳಿಗಾಗಿ ಇಂದು ಮೈಸೂರಲ್ಲಿ ಅಭ್ಯರ್ಥಿಗಳ ಲಿಖಿತ ಪರೀಕ್ಷೆ ನಡೆಯಿತು.

ಮೈಸೂರಿನ ಮಹಾರಾಜ, ಮಹಾಜನ, ವಿದ್ಯಾವರ್ಧಕ, ಮಹಾರಾಣಿ ಸೇರಿದಂತೆ ಒಟ್ಟು 20 ಕೇಂದ್ರಗಳಲ್ಲಿ ಕೊಠಡಿಗೆ 20 ಮಂದಿಯಂತೆ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಮೈಸೂರಲ್ಲಿ 58 ಕಾನ್‍ಸ್ಟೇಬಲ್ ಮತ್ತು 14 ಮಹಿಳಾ ಕಾನ್‍ಸ್ಟೇಬಲ್‍ಗಳ ಹುದ್ದೆ ಗಾಗಿ ಒಟ್ಟು 9998 ಮಂದಿಗೆ ಪ್ರವೇಶ ಪತ್ರ ನೀಡಲಾಗಿತ್ತು. ಪ್ರತೀ ಪರೀಕ್ಷಾ ಕೊಠಡಿ ಯಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿ ಕಟ್ಟೆಚ್ಚರ ವಹಿಸಲಾಗಿತ್ತು. ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆದ ಪರೀಕ್ಷೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟು 3009 ಮಂದಿ ಪರೀಕ್ಷೆಗೆ ಗೈರು ಹಾಜ ರಾಗಿದ್ದರು ಎಂದು ನಗರ ಪೊಲೀಸ್ ಕಮೀಷ್ನರ್ ಕೆ.ಟಿ.ಬಾಲಕೃಷ್ಣ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಡಿಸಿಪಿಗಳಾದ ಎನ್.ವಿಷ್ಣುವರ್ಧನ್, ಡಾ.ವಿಕ್ರಂ ವಿ.ಅಮಟೆ ಅವರೊಂದಿಗೆ ಎಲ್ಲಾ ಕೇಂದ್ರ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಮೀಷ್ನರ್, ಸುಗಮವಾಗಿ ಪರೀಕ್ಷೆ ಮುಗಿ ಯಲು ಅಧಿಕಾರಿಗಳಿಗೆ ಸಲಹೆ ನೀಡಿದರು.

Translate »