ಸಂದೇಶ ಸಾರಿದ ಸೈಕ್ಲೊಥಾನ್ ರ್ಯಾಲಿ
ಮೈಸೂರು

ಸಂದೇಶ ಸಾರಿದ ಸೈಕ್ಲೊಥಾನ್ ರ್ಯಾಲಿ

January 28, 2019

ಮೈಸೂರು: ಪ್ರತಿ ನಿತ್ಯ ಸೈಕಲ್ ಬಳಸಿ, ಹೃದಯದ ಆರೋಗ್ಯ ಕಾಪಾಡಿಕೊಂಡರೆ ದೈಹಿಕ ಸದೃಢತೆ, ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮ ವಾಗಿ ಇಟ್ಟುಕೊಳ್ಳಬಹುದು ಎಂಬ ಸಂದೇಶ ಸಾರುವ ಎಲಿಗ್ಸೈರ್ ಸೈಕ್ಲೊಥಾನ್ (ಸೈಕಲ್ ರ್ಯಾಲಿ) ಇಂದಿಲ್ಲಿ ನಡೆಯಿತು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೈಕಲ್ ರ್ಯಾಲಿಗೆ ಹಸಿರು ನಿಶಾನೆ ತೋರಿ ಸುವ ಮೂಲಕ ಚಾಲನೆ ನೀಡಿದರು. 7ರಿಂದ 60 ವರ್ಷ ವಯೋಮಾನದ ಸುಮಾರು 600ಕ್ಕೂ ಹೆಚ್ಚು ಸೈಕಲ್ ಸವಾ ರರು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಉತ್ತಮ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಲು ಉತ್ತೇಜನ ನೀಡಿದರು.

ಎಕ್ಸೈಡ್ ಲೈಫ್ ಇನ್ಷೂರೆನ್ಸ್, ನಾರಾ ಯಣ ಹೃದಯಾಲಯದ ನೆರವಿನಲ್ಲಿ ಎಲಿಗ್ಸೈರ್‍ನ ಅಧ್ಯಕ್ಷ ಸಾಖಿಬ್ ಅಹ ಮದ್, ಮಹಮ್ಮದ್ ಸeóÉೈಬ್, ಅಲಿನಾ, ಫುರ್‍ಖಾನ್ ನೇತೃತ್ವದ ಯುವಕರ ತಂಡ ರ್ಯಾಲಿಯನ್ನು ಆಯೋಜಿಸಿತ್ತು.

ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಬಳಿಯಿಂದ ಹೊರಟ ಸೈಕಲ್ ರ್ಯಾಲಿ, ದೇವರಾಜ ಅರಸು ರಸ್ತೆ, ಜಿಲ್ಲಾಧಿ ಕಾರಿ ಕಚೇರಿ, ಕೃಷ್ಣರಾಜ ಬುಲೆವಾರ್ಡ್ ರಸ್ತೆ, ಮೆಟ್ರೊಪೋಲ್ ವೃತ್ತ, ಜೆಎಲ್‍ಬಿ ರಸ್ತೆ, ರೈಲ್ವೆ ನಿಲ್ದಾಣ ವೃತ್ತ, ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಓಲ್ಡ್ ಬ್ಯಾಂಕ್ ರಸ್ತೆ, ಗಾಂಧಿ ಚೌಕ ಮೂಲಕ ಪುರಭವನ ದ್ವಾರದ ಬಳಿ ಅಂತ್ಯಗೊಂಡಿತು.

ರ್ಯಾಲಿಯಲ್ಲಿ 200ಕ್ಕೂ ಹೆಚ್ಚು ಟ್ರಿಣ್ ಟ್ರಿಣ್ ಸೈಕಲ್‍ಗಳಲ್ಲದೇ ಸವಾರರು ತಮ್ಮ ಸ್ವಂತ ಸೈಕಲ್‍ಗಳೊಂದಿಗೆ ಪಾಲ್ಗೊಂಡಿದ್ದರು. ಎಲ್ಲರಿಗೂ ಕ್ಯಾಪ್, ಪ್ರಶಸ್ತಿಪತ್ರ, ಆರೋಗ್ಯ ತಪಾಸಣೆಯ ರಿಯಾಯಿತಿ ಕಾರ್ಡ್ ವಿತರಿಸಲಾಯಿತು. ನೆಹರು ಯುವ ಕೇಂದ್ರದ ಮೈಸೂರು ಜಿಲ್ಲಾ ಸಮನ್ವಯಾ ಧಿಕಾರಿ ಎಂ.ಎನ್.ನಟರಾಜ್, ಎಕ್ಸೈಡ್ ಲೈಫ್ ಇನ್ಷೂರೆನ್ಸ್ ವ್ಯವಸ್ಥಾಪಕ ನಿರ್ದೇಶಕ ಆರ್.ನಾಗೇಂದ್ರಕುಮಾರ್, ಕಾವೇರಿ ನಿಗ ಮದ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಕುಮಾರ್ ಉಪಸ್ಥಿತರಿದ್ದರು.

Translate »