ಮೈಸೂರು, ಜ.23 (ಎಂಟಿವೈ)-ಸಾರಿಗೆ ಸಂಸ್ಥೆಯ ನೌಕರರ ವೇತನ ಪರಿಷ್ಕರಣೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧಿಸಿದಂತೆ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ಮಧ್ಯಂತರ ವರದಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಲು ನಿರ್ಧರಿಸಿದ್ದು, ಸಾರಿಗೆ ನೌಕರರು ನಡೆಸಲು ಉದ್ದೇಶಿಸಿರುವ ಮುಷ್ಕರದಿಂದ ಹಿಂದೆ ಸರಿಯಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಮನವಿ ಮಾಡಿದ್ದಾರೆ. ಮೈಸೂರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯ ನೌಕರರ ಮೇಲೆ ಅಪಾರವಾದ…
ಶ್ವಾನದಳದೊಂದಿಗೆ ಮುಂಜಾನೆ ಕ್ಷಿಪ್ರ ಕಾರ್ಯಾಚರಣೆ
January 24, 2023ಮೈಸೂರು, ಜ.23(ಆರ್‍ಕೆ)- ಮೈಸೂರು ನಗರವನ್ನು ಗಾಂಜಾ ಮುಕ್ತಗೊಳಿಸಲು ಪಣ ತೊಟ್ಟಿರುವ ಪೊಲೀಸರು, ಪೆಡ್ಲರ್ ಗಳ ವಿರುದ್ಧ ಸಮರ ಸಾರಿದ್ದಾರೆ. ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ನಿರ್ದೇಶನದಂತೆ ಇಂದು ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯಲ್ಲಿ 30 ಅಧಿಕಾರಿಗಳ ನೇತೃತ್ವದ ತಂಡ ಶ್ವಾನದಳ ಸಿಬ್ಬಂದಿ ಯೊಂದಿಗೆ ಮೈಸೂರು ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಪೆಡ್ಲರ್ ಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿತು. ಈ ವೇಳೆ 500 ಗ್ರಾಂನಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, 12 ಮಂದಿ ಪೆಡ್ಲರ್‍ಗಳನ್ನು ವಶಕ್ಕೆ ಪಡೆದ…
ಚಿರತೆ ಸೆರೆಗೆ ಅರಣ್ಯ ಇಲಾಖೆ ಹರಸಾಹಸ
January 24, 2023ಮೈಸೂರು,ಜ.23(ಎಂಟಿವೈ)- ತಿ.ನರಸೀಪುರ ತಾಲೂ ಕಿನ ವಿವಿಧ ಗ್ರಾಮಗಳಲ್ಲಿ ನಾಲ್ವರನ್ನು ಬಲಿ ಪಡೆದ ಚಿರತೆ ಸೆರೆಗೆ ಅರಣ್ಯ ಇಲಾಖೆ, ಗೂಗಲ್ ಮ್ಯಾಪ್ ನೆರವಿ ನೊಂದಿಗೆ ವಿವಿಧೆಡೆ ಕ್ಯಾಮರಾ ಟ್ರಾಪ್ ಅಳವಡಿಸಿ, ಚಿರತೆಯ ಜಾಡು ಪತ್ತೆಹಚ್ಚಲು ಕಾರ್ಯಾ ಚರಣೆ ಆರಂಭಿಸಿದೆ. ಕಳೆದ ಮೂರು ತಿಂಗಳಲ್ಲಿ ನಾಲ್ವರು ಚಿರತೆ ದಾಳಿಗೆ ಬಲಿ ಯಾಗಿದ್ದು, ತಾಲೂಕಿನ ಜನ ಭಯಭೀತರಾಗಿದ್ದಾರೆ. ಪದೇ ಪದೆ ದಾಳಿ ನಡೆಸಿ ಕಣ್ಮರೆಯಾಗುತ್ತಿರುವ ಚಿರತೆ ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದ್ದು, ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರು ಚಿರತೆ…
ಹೆಚ್.ಡಿ.ಕೋಟೆ ಬಳಿ ಹುಲಿ ದಾಳಿಗೆ ಯುವಕ ಬಲಿ
January 23, 2023• ಡಿ.ಬಿ.ಕುಪ್ಪೆ, ಜ.22(ಎಂಟಿವೈ, ಮಂಜು) – ತಿ.ನರಸೀಪುರದಲ್ಲಿ ಚಿರತೆಗೆ ಬಾಲಕ ಬಲಿಯಾದ ಮರು ದಿನವೇ ಹೆಚ್.ಡಿ. ಕೋಟೆಯ ಬಳ್ಳೆ ಹಾಡಿ ಸಮೀಪವೇ ಆದಿ ವಾಸಿ ಯುವಕನೊಬ್ಬ ಹುಲಿ ದಾಳಿಗೆ ಬಲಿ ಯಾಗಿದ್ದು, ಹಾಡಿಯ ನಿವಾಸಿಗಳು ಮೈಸೂರು -ಮಾನಂದವಾಡಿ ರಸ್ತೆಯಲ್ಲಿ ರಸ್ತೆತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಹಾಡಿ ನಿವಾಸಿ ಕಾಳ ಅಲಿಯಾಸ್ ಬೆಟ್ಟದ ಹುಲಿ ಹಾಗೂ ಪುಷ್ಪ ದಂಪತಿ ಮಗ ಮಂಜು (18) ಎಂಬಾತನೆ ಹುಲಿ ದಾಳಿಗೆ ಬಲಿ ಯಾದವನಾಗಿದ್ದಾನೆ. ನಾಗರಹೊಳೆ ಹುಲಿ ಸಂರಕ್ಷಿತ…
ಚಿರತೆ ದಾಳಿ: ಬಾಲಕನ ರುಂಡವಿಲ್ಲದ ಶವ ಪತ್ತೆ
January 23, 2023ತಿ.ನರಸೀಪುರ, ಜ.22(ಎಂಟಿವೈ)-ಚಿರತೆ ದಾಳಿ ನಡೆಸಿ ಹೊತ್ತೊಯ್ದಿದ್ದ 11 ವರ್ಷದ ಬಾಲಕನ ರುಂಡವಿಲ್ಲದ ಮೃತದೇಹ ಪತ್ತೆಯಾಗಿದ್ದು, ಪೋಷಕರ ಆಕ್ರಂ ದನ ಮುಗಿಲು ಮುಟ್ಟಿತ್ತು. ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದ ನಿವಾಸಿ ದಶಕಂಠ ಎಂಬುವರ ಪುತ್ರ ಜಯಂತ್ ಶನಿವಾರ ರಾತ್ರಿ 8.30ರಲ್ಲಿ ಅಂಗಡಿಗೆ ತೆರಳಿದ್ದಾಗ ನಿಗೂಢವಾಗಿ ಕಾಣೆಯಾಗಿದ್ದ. ಗ್ರಾಮದ ಮುಖ್ಯ ರಸ್ತೆಯಲ್ಲಿ ರಕ್ತದ ಕಲೆ ಚೆಲ್ಲಿದ್ದರಿಂದ 11 ವರ್ಷದ ಬಾಲಕ ಜಯಂತ್‍ನನ್ನು ಚಿರತೆ ಹೊತ್ತೊಯ್ದಿರಬಹುದು ಎಂದು ಶಂಕಿಸಲಾಗಿತ್ತು. ಇಂದು ಬೆಳಗ್ಗೆ ಶೋಧನಾ ಕಾರ್ಯ ಕೈಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ…
ತಿ.ನರಸೀಪುರದಲ್ಲಿ ರಸ್ತೆ ತಡೆ, ಅಧಿಕಾರಿಗಳ ವಿರುದ್ಧ ಆಕ್ರೋಶ
January 23, 2023ತಿ.ನರಸೀಪುರ, ಜ.22- ತಾಲೂಕಿನಲ್ಲಿ ಮನುಷ್ಯರ ಮೇಲೆ ದಾಳಿ ನಡೆಸಿ ಬಲಿ ಪಡೆಯುತ್ತಿರುವ ನರಭಕ್ಷಕ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲ ರಾಗಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಭಾನುವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಕಪಿಲಾ ನದಿ ಸೇತುವೆ ಮೇಲೆ ಜಮಾ ಯಿಸಿದ ನೂರಾರು ಪ್ರತಿಭಟನಾಕಾರರು ರಸ್ತೆಗೆ ಅಡ್ಡ ಲಾಗಿ ಟ್ರಾಕ್ಟರ್ ನಿಲ್ಲಿಸಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. ಪರಿಣಾಮ ನೂರಾರು ವಾಹನಗಳು ಕಿಮೀಗಟ್ಟಲೆ ನಿಂತಲ್ಲೇ ನಿಂತಿದ್ದರಿಂದ ಸಾರ್ವಜನಿಕ ಓಡಾಟಕ್ಕೆ…
ಪ್ರಸ್ತುತ ಸಾಹಿತ್ಯ ಕೋಮುವಾದ, ಜಾತೀಯತೆ ಸೋಂಕಿಗೆ ಸಿಲುಕಿದೆ
January 23, 2023ಮೈಸೂರು, ಜ.22(ಪಿಎಂ)- ಹಿಂದಿನ ನಮ್ಮ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಅಡಕ ವಾಗಿದ್ದರೆ, ಪ್ರಸ್ತುತದಲ್ಲಿ ಕೋಮುವಾದ, ಜಾತೀ ಯತೆ ಎಂಬ ಸೋಂಕಿಗೆ ಸಿಲುಕಿ ಬಳಲುವಂತಾ ಗಿದೆ ಎಂದು ಉದ್ಯಮಿಗಳು, ರೈತರು, ಅಂಕಣ ಕಾರರೂ ಆದ ಭಾರತೀಯ ಸೇನಾ ನಿವೃತ್ತ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಮಹಾರಾಜ ಕಾಲೇಜಿನ ಶತಮಾ ನೋತ್ಸವ ಭವನದಲ್ಲಿ ಮೈಸೂರು ಲಿಟರರಿ ಅಸೋಸಿಯೇಷನ್ (ಎಂಎಲ್‍ಎ) ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಆಂಗ್ಲ ಸಾಹಿತ್ಯದ ಗೋಷ್ಠಿ-ಸಂವಾದದ `4ನೇ ಮೈಸೂರು ಲಿಟರರಿ ಫೆಸ್ಟ್-2023’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು,…
ಸುತ್ತೂರು ಜಾತ್ರಾ ಮಹೋತ್ಸವಕ್ಕೆವರ್ಣರಂಜಿತ ಚಾಲನೆ
January 19, 2023ನಂಜನಗೂಡು, ಜ.18-ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ವರ ಜಾತ್ರಾ ಮಹೋತ್ಸವಕ್ಕೆ ಬುಧವಾರ ವರ್ಣ ರಂಜಿತ ಚಾಲನೆ ದೊರೆಯಿತು. ಹೊಸಮಠದ ಚಿದಾನಂದ ಸ್ವಾಮೀಜಿ, ಸಚ್ಚಿದಾನಂದ ಭಾರತೀ ಶ್ರೀಪಾದಂಗಳು, ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ವಸ್ತು ಪ್ರದರ್ಶನವನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಾಂಸ್ಕøತಿಕ ಮೇಳ ಮತ್ತು ಭಜನಾಂಜಲಿ ಕೃತಿಯನ್ನು ಬಿಡುಗಡೆಗೊಳಿಸಿದರು. ಕೃಷಿ ಮೇಳ…
ಕೆ.ಆರ್.ಕ್ಷೇತ್ರದ 7 ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಶಾಸಕ ರಾಮದಾಸ್ ಚಾಲನೆ
January 18, 2023ಮೈಸೂರು,ಜ.17(ಆರ್‍ಕೆಬಿ)- ಕೆ.ಆರ್. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಉದ್ಯಾನವನಗಳ ಸಮಗ್ರ ಅಭಿವೃದ್ಧಿಗೆ ಶಾಸಕ ಎಸ್.ಎ.ರಾಮದಾಸ್ ಮಂಗಳವಾರ ಚಾಲನೆ ನೀಡಿದರು. 55ನೇ ವಾರ್ಡ್‍ನ ಚಾಮುಂಡಿಪುರಂ ತಗಡೂರು ರಾಮಚಂದ್ರರಾವ್ ಉದ್ಯಾ ನವನ, ಶಂಕರನಾರಾಯಣ ಸ್ವಾಮಿ ದೇವ ಸ್ಥಾನದ ಎದುರಿನ ಉದ್ಯಾನ, 51ನೇ ವಾರ್ಡ್‍ನ ರಾಮಾನುಜ ರಸ್ತೆ 19ನೇ ಕ್ರಾಸ್ ಉದ್ಯಾನ, ಗನ್‍ಹೌಸ್ ವೃತ್ತದ ಬಳಿಯ ಬಸವೇಶ್ವರ ಉದ್ಯಾನ, ವಿಶ್ವಮಾನವ ಕುವೆಂಪು ಉದ್ಯಾನ, 52ನೇ ವಾರ್ಡ್ ಇಟ್ಟಿಗೆಗೂಡಿನ ಕರಗ ದೇವಸ್ಥಾನದ ಎದುರಿನ ಉದ್ಯಾನ, ಕೆಸಿ ನಗರ ಭಾಗದ ಜೋಡಿ ಉದ್ಯಾನವನಗಳ…
ಜ.22, ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆ
January 18, 2023ಮೈಸೂರು,ಜ.17(ಪಿಎಂ)-ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಮೈಸೂರಿನಲ್ಲಿ ಜ.22ರಂದು ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕ್ಲಬ್‍ನ ಅಧ್ಯಕ್ಷ ಬಿ.ಪಿ.ಮಂಜುನಾಥ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿಯ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಅಂದು ಬೆಳಗ್ಗೆ 9ಕ್ಕೆ ಪ್ರದರ್ಶನ ಸ್ಪರ್ಧೆಗೆ ಚಾಲನೆ ದೊರೆಯಲಿದೆ. ಕೆನೆಲ್ ಕ್ಲಬ್ ಆಫ್ ಇಂಡಿಯಾದ ಮಾನದಂಡಗಳಡಿ ಸ್ಪರ್ಧೆ ನಡೆಯಲಿದ್ದು, ಅದರಂತೆ ಶ್ವಾನಗಳಿಗೆ ಮೈಕ್ರೋಚಿಪ್ ಅಳವಡಿಸಬೇಕು ಹಾಗೂ ಮೂರು…