ಕೆ.ಆರ್.ಕ್ಷೇತ್ರದ 7 ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಕೆ.ಆರ್.ಕ್ಷೇತ್ರದ 7 ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಶಾಸಕ ರಾಮದಾಸ್ ಚಾಲನೆ

January 18, 2023

ಮೈಸೂರು,ಜ.17(ಆರ್‍ಕೆಬಿ)- ಕೆ.ಆರ್. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಉದ್ಯಾನವನಗಳ ಸಮಗ್ರ ಅಭಿವೃದ್ಧಿಗೆ ಶಾಸಕ ಎಸ್.ಎ.ರಾಮದಾಸ್ ಮಂಗಳವಾರ ಚಾಲನೆ ನೀಡಿದರು.

55ನೇ ವಾರ್ಡ್‍ನ ಚಾಮುಂಡಿಪುರಂ ತಗಡೂರು ರಾಮಚಂದ್ರರಾವ್ ಉದ್ಯಾ ನವನ, ಶಂಕರನಾರಾಯಣ ಸ್ವಾಮಿ ದೇವ ಸ್ಥಾನದ ಎದುರಿನ ಉದ್ಯಾನ, 51ನೇ ವಾರ್ಡ್‍ನ ರಾಮಾನುಜ ರಸ್ತೆ 19ನೇ ಕ್ರಾಸ್ ಉದ್ಯಾನ, ಗನ್‍ಹೌಸ್ ವೃತ್ತದ ಬಳಿಯ ಬಸವೇಶ್ವರ ಉದ್ಯಾನ, ವಿಶ್ವಮಾನವ ಕುವೆಂಪು ಉದ್ಯಾನ, 52ನೇ ವಾರ್ಡ್ ಇಟ್ಟಿಗೆಗೂಡಿನ ಕರಗ ದೇವಸ್ಥಾನದ ಎದುರಿನ ಉದ್ಯಾನ, ಕೆಸಿ ನಗರ ಭಾಗದ ಜೋಡಿ ಉದ್ಯಾನವನಗಳ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮ ದಾಸ್, ಕ್ಷೇತ್ರದ 16 ಉದ್ಯಾನವನಗಳನ್ನು ವಿಷಯಾಧಾರಿತ ಉದ್ಯಾನಗಳಾಗಿ ಪರಿ ವರ್ತಿಸಲಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ದೃಷ್ಟಿಯಿಂದ ಯೋಗ, ಆರೋಗ್ಯ, ಕನಕದಾಸ, ವಿಜ್ಞಾನ, ಬಸವೇ ಶ್ವರ ಇನ್ನಿತರೆ ವಿಚಾರಗಳನ್ನು ಈ ಉದ್ಯಾನ ಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.

ಏಳು ಉದ್ಯಾನಗಳಿಗೆ ಇಂದು ಚಾಲನೆ ನೀಡಲಾಗಿದ್ದು, ಮುಂದಿನ ಎರಡು ತಿಂಗ ಳಲ್ಲಿ ಎಲ್ಲಾ ಉದ್ಯಾನಗಳ ಅಭಿವೃದ್ಧಿ ಮಾಡ ಲಾಗುವುದು. ಇವುಗಳ ಅಭಿವೃದ್ಧಿ ಮಾಡು ವುದಷ್ಟೇ ಅಲ್ಲ, ಅವುಗಳ ಹಸಿರೀಕರಣದ ಜೊತೆಗೆ ವಾಯುವಿಹಾರಿಗಳಿಗೆ ಅನು ಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ವಹಣೆ ಕೂಡ ಮಾಡಲಾಗುವುದು ಎಂದರು.

ಪಾಲಿಕೆ ಸದಸ್ಯರಾದ ಮಾ.ವಿ.ರಾಮ್ ಪ್ರಸಾದ್, ಬಿ.ವಿ.ಮಂಜುನಾಥ್, ಛಾಯಾ ದೇವಿ, ಮುಖಂಡರಾದ ಪುರುಷೋತ್ತಮ್, ಶಿವಪ್ಪ, ಬಾಲಕೃಷ್ಣ, ವಿದ್ಯಾ ಅರಸ್, ಉಮಾ ಶಂಕರ್, ಸಂದೀಪ್, ಕಿರಣ್, ವಿಜಯಾ, ಬೇಬಿ, ಪವನ್, ವಿನಯ್, ಮಲ್ಲಿ ಕಾರ್ಜುನ, ಮುರುಳಿ, ಧರ್ಮೇಂದ್ರ, ಶಾಂತ, ಮಂಜುನಾಥ್, ರಾಜಕುಮಾರ್, ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »