ಮೈಸೂರು

ಅವಘಡ ಬಳಿಕ ಬಿಕೋ ಎನ್ನುತ್ತಿರುವ  ಒಂಟಿಕೊಪ್ಪಲು ಬಾಲಕಿಯರ ವಿದ್ಯಾರ್ಥಿನಿಲಯ
ಮೈಸೂರು

ಅವಘಡ ಬಳಿಕ ಬಿಕೋ ಎನ್ನುತ್ತಿರುವ ಒಂಟಿಕೊಪ್ಪಲು ಬಾಲಕಿಯರ ವಿದ್ಯಾರ್ಥಿನಿಲಯ

December 19, 2018

ಮೈಸೂರು: ಸದಾ ವಿದ್ಯಾರ್ಥಿನಿಯರಿಂದ ಕಿಕ್ಕಿರಿದಿರುತ್ತಿದ್ದ ಮೈಸೂರಿನ ಒಂಟಿಕೊಪ್ಪಲಿನ ಮೆಟ್ರಿಕ್ ನಂತರದ ಬಾಲಕಿಯರ ಸಾರ್ವಜನಿಕ ವಿದ್ಯಾರ್ಥಿನಿಲಯ ಇದೀಗ ವಿದ್ಯಾರ್ಥಿ ಗಳಿಲ್ಲದೆ ಭಣಗುಡುವಂತಾಗಿದೆ. ಹಾಸ್ಟೆಲ್‍ನ ಮೆಟ್ಟಿಲು ಕೆಳಗಿದ್ದ ಯುಪಿ ಎಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಾಬರಿ ಗೊಂಡ ವಿದ್ಯಾರ್ಥಿನಿಯರು ಹೊರಬರುವ ವೇಳೆ ಉಂಟಾದ ನೂಕು ನುಗ್ಗಲಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಶನಿ ವಾರ ರಾತ್ರಿಯ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದವರು ಹಾಗೂ ಗಾಯಗೊಂ ಡಿದ್ದ ವಿದ್ಯಾರ್ಥಿನಿಯರು ಭಾನುವಾರ ಮಧ್ಯಾಹ್ನದ ವೇಳೆಗೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಒಟ್ಟು 372…

ಪ್ಲಾಸ್ಟಿಕ್ ಕಸ ನಿರ್ವಹಣಾ ಕಾರ್ಯಕ್ಕೆ ಮೇಯರ್ ಚಾಲನೆ
ಮೈಸೂರು

ಪ್ಲಾಸ್ಟಿಕ್ ಕಸ ನಿರ್ವಹಣಾ ಕಾರ್ಯಕ್ಕೆ ಮೇಯರ್ ಚಾಲನೆ

December 19, 2018

ಮೈಸೂರು:  ಮೈಸೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಪ್ಲಾಸ್ಟಿಕ್ ಕಸ ನಿರ್ವಹಣಾ ಕಾರ್ಯಕ್ರಮಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಮಂಗಳವಾರ ಚಾಲನೆ ನೀಡಿ ದರು. ಮೈಸೂರಿನ ಕುಂಬಾರಕೊಪ್ಪಲಿನ ಶೂನ್ಯ ಕಸ ನಿರ್ವಹಣಾ ಕೇಂದ್ರದ ಆವ ರಣದಲ್ಲಿ ಮೈಸೂರು ಮಹಾನಗರಪಾಲಿಕೆ ಮತ್ತು ಐಪಿಸಿಎ, ರೆಕಿಟ್ ಬೆನ್‍ಕೈಸರ್ ಇಪಿಆರ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೆಕಿಟ್ ಬೆನ್‍ಕೈಸರ್ ಇಪಿಆರ್ ಮೈಸೂ ರಿನ ಪ್ಲಾಸ್ಟಿಕ್ ಕಸವನ್ನು ಪ್ರತಿ ಕೆಜಿಗೆ 3.5 ರೂ.ನಂತೆ ಖರೀದಿಸಿ, ಅದನ್ನು ವಿದ್ಯುತ್ ಉತ್ಪಾದನೆ ಮತ್ತು ಇತರೆ…

ಭಾವಸಾರ್ ವಿಷನ್ ಇಂಡಿಯಾ ಮೈಸೂರು ಘಟಕದ ಪದಗ್ರಹಣ
ಮೈಸೂರು

ಭಾವಸಾರ್ ವಿಷನ್ ಇಂಡಿಯಾ ಮೈಸೂರು ಘಟಕದ ಪದಗ್ರಹಣ

December 19, 2018

ಮೈಸೂರು: ಭಾವಸಾರ್ ವಿಷನ್ ಇಂಡಿಯಾ (ಬಿವಿಐ)ದ ಮೈಸೂರು ಘಟಕದ ಪದಾಧಿಕಾರಿಗಳ ಪದಗ್ರಹಣ ಮೈಸೂರಿನ ಪಾಂಡುರಂಗ ವಿಠಲ ದೇವಸ್ಥಾನದ ರಾಮಮಂದಿರ ಸಭಾಂಗಣದಲ್ಲಿ ನಡೆಯಿತು. ಬಿವಿಐ ರಾಷ್ಟ್ರೀಯ ಅಧ್ಯಕ್ಷ ಗಜೇಂದ್ರನಾಥ್ ಮಾಲೋದೆ ಸಮ್ಮುಖದಲ್ಲಿ ಬಿವಿಐ 108ರ ಗವರ್ನರ್ ಮಲ್ಲಾರಿರಾವ್ ಕಾಂಗೋಕರ್ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಬಿವಿಐ ರಾಷ್ಟ್ರೀಯ ಅಧ್ಯಕ್ಷ ಗಜೇಂದ್ರನಾಥ್ ಮಾಲೋದೆ ಮಾತನಾಡಿ, 18 ವರ್ಷಗಳ ಹಿಂದೆ ಸ್ಥಾಪಿತವಾದ ಬಿವಿಐ ಹಿಂದುಳಿದ ಭಾವಸಾರ…

ಪ್ರಸಾದ ಸೇವನೆ ಪ್ರಕರಣ: ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಪರಿಹಾರ ವಿತರಣೆ
ಮೈಸೂರು

ಪ್ರಸಾದ ಸೇವನೆ ಪ್ರಕರಣ: ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಪರಿಹಾರ ವಿತರಣೆ

December 19, 2018

ಚಾಮರಾಜನಗರ: ಹನೂರು ತಾಲೂಕಿನ ಸುಳವಾಡಿಯ ಕಿಚ್‍ಗುತ್ ಮಾರ ಮ್ಮನ ದೇವಾಲಯದ ಪ್ರಸಾದ ಸೇವನೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದ ಪರಿಹಾರ ಹಣವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ಶಾಸಕ ಆರ್.ನರೇಂದ್ರ ಅವರು ಮಂಗಳವಾರ ವಿತರಿಸಿದರು. ಸುಳವಾಡಿ, ಕೋಟೆಪೊದೆ, ಬಿದರಹಳ್ಳಿ, ವಡ್ಡರದೊಡ್ಡಿ, ಎಂ.ಜಿ.ದೊಡ್ಡಿ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಮೃತರ ಕುಟುಂಬ ಸ್ಥರಿಗೆ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದರು. ಈ ವೇಳೆ ಅಕ್ಕಿ, ಬೆಳೆ, ಸಕ್ಕರೆ, ಎಣ್ಣೆ, ಇನ್ನಿತರ ಪಡಿತರ…

ದೇವಾಲಯ ಟ್ರಸ್ಟ್ ನ ಪ್ರಭಾವಿ  ನಾಲ್ವರು ಪ್ರಮುಖರ ಕೈವಾಡ
ಮೈಸೂರು

ದೇವಾಲಯ ಟ್ರಸ್ಟ್ ನ ಪ್ರಭಾವಿ ನಾಲ್ವರು ಪ್ರಮುಖರ ಕೈವಾಡ

December 18, 2018

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳವಾಡಿ ದೇವಾಲಯದಲ್ಲಿ ಪ್ರಸಾದದಲ್ಲಿ ವಿಷ ಪ್ರಾಶನ ದುರಂತಕ್ಕೆ ಇಬ್ಬರು ಅರ್ಚಕರು, ಟ್ರಸ್ಟ್ ನ ಪ್ರಭಾವಿ ಸೇರಿದಂತೆ ನಾಲ್ಕು ಮಂದಿ ಕಾರಣರಾಗಿದ್ದಾರೆ. ಸರ್ಕಾರದ ಕೈಸೇರಿರುವ ವರದಿಯಲ್ಲಿ ಈ ನಾಲ್ಕು ಮಂದಿಯ ಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಆದರೆ ಇದನ್ನು ಇದುವರೆಗೂ ಬಹಿರಂಗಗೊಳಿಸಿಲ್ಲ. ಸುಳವಾಡಿ ದೇವಾಲಯದ ಆಡಳಿತ ಮಂಡಳಿ ಮತ್ತು ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ವಿಚಾರದಲ್ಲಿನ ವಿವಾದದ ಹಿನ್ನೆಲೆ ಯಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಯತ್ನ ಇಂತಹ ಹೀನ ಕೃತ್ಯಕ್ಕೆ ಕಾರಣವಾಯಿತು…

ವಿಷ ಪ್ರಸಾದ ಪ್ರಕರಣ: ಸಾವಿನ ಸಂಖ್ಯೆ 14ಕ್ಕೆ ಪತಿ ಸಾವಿನ 3 ದಿನದ ನಂತರ ಪತ್ನಿ ಸಾವು
ಮೈಸೂರು

ವಿಷ ಪ್ರಸಾದ ಪ್ರಕರಣ: ಸಾವಿನ ಸಂಖ್ಯೆ 14ಕ್ಕೆ ಪತಿ ಸಾವಿನ 3 ದಿನದ ನಂತರ ಪತ್ನಿ ಸಾವು

December 18, 2018

ಮೈಸೂರು:  ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೇರಿದೆ. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಮಹಿಳೆ ಇಂದು ಅಸುನೀಗಿದ್ದಾರೆ. ವಿಷ ಪ್ರಸಾದ ಸೇವಿಸಿ ಅಸ್ವಸ್ಥ ರಾಗಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟೆಪೋದೆ (ಮಾರ್ಟಳ್ಳಿ) ಗ್ರಾಮದ ಮೈಲಿಬಾಯಿ (35) ಬಹು ಅಂಗಾಂಗ ವೈಫಲ್ಯ ದಿಂದ ಮೃತಪಟ್ಟರು. ಶುಕ್ರವಾರ ಮೈಸೂರಿಗೆ ಕರೆತಂದಿದ್ದಾಗ ಗಂಭೀರ ಸ್ಥಿತಿಯಲ್ಲಿದ್ದ ಮೈಲಿಬಾಯಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ…

ಕೆಆರ್‍ಎಸ್‍ನಲ್ಲಿ ಜನಾಂದೋಲನಕ್ಕೆ ಚಾಲನೆ
ಮೈಸೂರು

ಕೆಆರ್‍ಎಸ್‍ನಲ್ಲಿ ಜನಾಂದೋಲನಕ್ಕೆ ಚಾಲನೆ

December 18, 2018

ಮಂಡ್ಯ: ಡಿಸ್ನಿಲ್ಯಾಂಡ್, ಬೃಹತ್ ಕಾವೇರಿ ಪ್ರತಿಮೆ ನಿರ್ಮಾಣದಿಂದ ಕೆಆರ್‍ಎಸ್‍ಗೆ ಅಪಾಯವಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ತಿಳಿಸಿದರು. ಕಾವೇರಿ-ಕೆಆರ್‍ಎಸ್ ಉಳಿವಿಗಾಗಿ ಜನಾಂದೋಲನ ಸಮಿತಿ, ರೈತಸಂಘ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳ ಲಾಗಿದ್ದ ‘ಅಕ್ರಮ ಗಣಿಗಾರಿಕೆ ನಿಲ್ಲಿಸಿ ಕೆಆರ್‍ಎಸ್ ಉಳಿಸಿ’ ಜನಾಂ ದೋಲನಕ್ಕೆ ಸೋಮವಾರ ಕೆಆರ್‍ಎಸ್‍ನ ನಾರ್ಥ್‍ಬ್ಯಾಂಕ್ ಬಳಿ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ ರೈತರು ಸಾಲದ ಸುಳಿಗೆ ಸಿಲುಕಿ ನಲುಗಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳ ಬರದಿಂದ ತತ್ತರಿಸಿದ್ದಾರೆ. ಮತ್ತೊಂದೆಡೆ ರಸ್ತೆಗಳು ಸರಿ ಇಲ್ಲದೇ ನಾಲೆ,…

ಕಾಂಗ್ರೆಸ್ ಹಿರಿಯ ಮುಖಂಡ ಸಜ್ಜನ್‍ಕುಮಾರ್‍ಗೆ ಜೀವಾವಧಿ ಶಿಕ್ಷೆ
ಮೈಸೂರು

ಕಾಂಗ್ರೆಸ್ ಹಿರಿಯ ಮುಖಂಡ ಸಜ್ಜನ್‍ಕುಮಾರ್‍ಗೆ ಜೀವಾವಧಿ ಶಿಕ್ಷೆ

December 18, 2018

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 34 ವರ್ಷಗಳ ನಂತರ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಪ್ರಮುಖ ಆರೋಪಿ ಮತ್ತು ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ದೋಷಿ ಎಂದು ತೀರ್ಪು ನೀಡಿದೆ. ಅಂತೆಯೇ ಪ್ರಕರಣದ ಶಿಕ್ಷೆ ಪ್ರಮಾಣ ವನ್ನೂ ಕೂಡ ದೆಹಲಿ ಕೋರ್ಟ್ ಇಂದೇ ನೀಡಿದ್ದು, ದೋಷಿ ಸಜ್ಜನ್‍ಕುಮಾರ್‍ಗೆ ಜೀವಾ ವಧಿ ಶಿಕ್ಷೆ ನೀಡಿ ಕೋರ್ಟ್ ತೀರ್ಪು ಪ್ರಕಟಿ ಸಿದೆ. 1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ…

ಮಹಿಳೆ ಸೇರಿ ಇಬ್ಬರ ದುರ್ಮರಣ
ಮೈಸೂರು

ಮಹಿಳೆ ಸೇರಿ ಇಬ್ಬರ ದುರ್ಮರಣ

December 18, 2018

ಮೈಸೂರು: ಕೆಎಸ್‌ಆರ್‌ಟಿಸಿ ಬಸ್ಸೊಂದು ಆಟೋಗೆ ಹಿಂದಿ ನಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿದ್ದು, ಇತರ 9 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿದೆ. ಹೆಚ್.ಡಿ. ಕೋಟೆ ತಾಲೂಕು ಹೆಬ್ಬಲ ಗುಪ್ಪೆ ಗ್ರಾಮದ ವೆಂಕಟರಮಣಶೆಟ್ಟಿ ಅವರ ಪತ್ನಿ ಶ್ರೀಮತಿ ವಾಣಿ(40) ಹಾಗೂ ಅದೇ ಗ್ರಾಮದ ನಾಗಾನಾಯ್ಕ(42) ಸಾವನ್ನಪ್ಪಿದವರು. ವಾಣಿ ಅವರು ದುರಂತ ನಡೆದ ಸ್ಥಳದಲ್ಲೇ ಸಾವನ್ನಪ್ಪಿದರೆ, ನಾಗಾನಾಯ್ಕ ಅವರು ಮೈಸೂರಿಗೆ ಕರೆತರುವಾಗ ಮಾರ್ಗ ಮಧ್ಯೆ ಅಸುನೀಗಿದರು ಎಂದು…

ನೂತನ ಸಿಎಂಗಳಾಗಿ ಕಮಲ್‍ನಾಥ್, ಗೆಹ್ಲೋಟ್, ಬೋಪೇಶ್ ಬಘೇಲ್ ಪ್ರಮಾಣ
ಮೈಸೂರು

ನೂತನ ಸಿಎಂಗಳಾಗಿ ಕಮಲ್‍ನಾಥ್, ಗೆಹ್ಲೋಟ್, ಬೋಪೇಶ್ ಬಘೇಲ್ ಪ್ರಮಾಣ

December 18, 2018

ಭೋಪಾಲ್(ಜೈಪುರ):  ಮಧ್ಯ ಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಹಾಗೂ ರಾಜಸ್ಥಾನ ಮುಖ್ಯ ಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಹಾಗೂ ಛತ್ತೀಸ್‍ಗಢ್ ಮುಖ್ಯ ಮಂತ್ರಿಯಾಗಿ ಬೋಪೇಶ್ ಬಘೇಲ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಭೋಪಾಲ್‍ನಲ್ಲಿ ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾ ರಂಭದಲ್ಲಿ ರಾಜ್ಯ ಪಾಲೆ ಆನಂದಿ ಬೆನ್ ಪಟೇಲ್ ಅವರು ಕಮಲ್ ನಾಥ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಗಳಾದ ಡಾ.ಮನಮೋಹನ್ ಸಿಂಗ್, ಎಚ್.ಡಿ….

1 1,225 1,226 1,227 1,228 1,229 1,611
Translate »