ಕೆಆರ್‍ಎಸ್‍ನಲ್ಲಿ ಜನಾಂದೋಲನಕ್ಕೆ ಚಾಲನೆ
ಮೈಸೂರು

ಕೆಆರ್‍ಎಸ್‍ನಲ್ಲಿ ಜನಾಂದೋಲನಕ್ಕೆ ಚಾಲನೆ

December 18, 2018

ಮಂಡ್ಯ: ಡಿಸ್ನಿಲ್ಯಾಂಡ್, ಬೃಹತ್ ಕಾವೇರಿ ಪ್ರತಿಮೆ ನಿರ್ಮಾಣದಿಂದ ಕೆಆರ್‍ಎಸ್‍ಗೆ ಅಪಾಯವಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ತಿಳಿಸಿದರು.

ಕಾವೇರಿ-ಕೆಆರ್‍ಎಸ್ ಉಳಿವಿಗಾಗಿ ಜನಾಂದೋಲನ ಸಮಿತಿ, ರೈತಸಂಘ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳ ಲಾಗಿದ್ದ ‘ಅಕ್ರಮ ಗಣಿಗಾರಿಕೆ ನಿಲ್ಲಿಸಿ ಕೆಆರ್‍ಎಸ್ ಉಳಿಸಿ’ ಜನಾಂ ದೋಲನಕ್ಕೆ ಸೋಮವಾರ ಕೆಆರ್‍ಎಸ್‍ನ ನಾರ್ಥ್‍ಬ್ಯಾಂಕ್ ಬಳಿ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ರೈತರು ಸಾಲದ ಸುಳಿಗೆ ಸಿಲುಕಿ ನಲುಗಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳ ಬರದಿಂದ ತತ್ತರಿಸಿದ್ದಾರೆ. ಮತ್ತೊಂದೆಡೆ ರಸ್ತೆಗಳು ಸರಿ ಇಲ್ಲದೇ ನಾಲೆ, ಕೆರೆ ಏರಿಗಳಿಗೆ ತಡೆಗೋಡೆಗಳಿ ಲ್ಲದೆ 30-40 ಜನ ಸಾಯುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ನೂರಾರು ಸಮಸ್ಯೆಗಳಿಂದ ರಾಜ್ಯದ ಜನತೆ ಪರಿತಪಿಸುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಸರ್ಕಾರ ಕೆಆರ್‍ಎಸ್‍ನಲ್ಲಿ ಮೋಜಿಗಾಗಿ ಡಿಸ್ನಿಲ್ಯಾಂಡ್ ನಿರ್ಮಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಾ ಪ್ರಹಾರ ನಡೆಸಿದರು.
ಗಣಿಗಾರಿಕೆ ನಿಷೇಧಿಸಿ: ಗಣಿಗಾರಿಕೆಯಿಂದ ಶ್ರೀರಂಗಪಟ್ಟಣ, ಪಾಂಡವಪುರ ಸುತ್ತಮುತ್ತ ಅಪಾರ ಅರಣ್ಯ ಸಂಪತ್ತು ನಾಶವಾಗಿದೆ. ಬೇಬಿ ಬೆಟ್ಟದಂತಹ ಐತಿಹಾಸಿಕ ತಾಣ ಈಗ ನಾಪತ್ತೆಯಾಗಿದೆ. ಮೈಸೂರು ರಾಜ ಮಹಾರಾಜರು, ನಮ್ಮ ಹಿರಿಯರ ಶ್ರಮದಿಂದ ಕಟ್ಟ ಲಾಗಿರುವ ಕೆಆರ್‍ಎಸ್ ಅಣೆಕಟ್ಟೆಗೂ ಗಂಡಾಂತರ ಎದುರಾ ಗಿದೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ನಮ್ಮ ರಾಜಕಾರಣಿಗಳ ತಿಳಿ ಗೇಡಿತನವೇ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಸಹಸ್ರಾರು ಜೀವ ಸಂಕುಲಗಳಿಗೆ, ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳ ಜೀವಜಲಕ್ಕೂ ಆಧಾರವಾಗಿ ರುವ ಕೆಆರ್‍ಎಸ್ ಅಣೆಕಟ್ಟೆಯನ್ನು ರಕ್ಷಿಸುವ ಬದಲು ನಿರ್ಲಕ್ಷ್ಯ ಧೋರಣೆ ತಳೆದಿದೆ. ಕೆಆರ್‍ಎಸ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯಿಂದ ಕೆಆರ್‍ಎಸ್ ಅಣೆಕಟ್ಟೆಯ ತಳೆಪಾಯಕ್ಕೆ ಅಪಾಯ ತಂದೊಡ್ಡಿದೆ. ಆದರೂ ನಮ್ಮನ್ನಾಳುವ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ತಕ್ಷಣದಿಂದಲೇ ಕೆಆರ್‍ಎಸ್ ವ್ಯಾಪ್ತಿಯಲ್ಲಿ 20 ಕಿಲೋ ಮೀಟರ್ ಸುತ್ತಳತೆವರೆಗೂ ಕಲ್ಲು ಗಣಿಗಾರಿಕೆ ನಿಷೇಧಿಸಬೇಕು, ರೈತರು, ಸಹಸ್ರಾರು ಜೀವ ಸಂಕುಲಕ್ಕೆ ಆಶ್ರಯತಾಣವಾಗಿರುವ ಕೆಆರ್‍ಎಸ್ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಿಎಂ ಮ್ಯಾಜಿಕ್ ಮನುಷ್ಯನಾ: ರೈತರ ಸಾಲ ಮನ್ನಾಕ್ಕೆ, ಡಿಸ್ನಿ ಲ್ಯಾಂಡ್ ನಿರ್ಮಾಣಕ್ಕೆ, ರಾಜ್ಯ, ರಾಷ್ಟ್ರೀಯ ರಸ್ತೆಗಳ ನಿರ್ಮಾಣಕ್ಕೆ, ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಲಕ್ಷ ಕೋಟಿ ನೀಡುವುದಾಗಿ ಘೋಷಣೆ ಮಾಡುತ್ತಲೇ ಇದ್ದಾರೆ. ಇಂದಿಗೂ ನಮ್ಮ ಹಳ್ಳಿಗಳಲ್ಲಿ ಸರಿಯಾದ ರಸ್ತೆಗಳಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ. ಅಂತಹದ ರಲ್ಲಿ ಮುಖ್ಯಮಂತ್ರಿಗಳು ಹೊಸದಾಗಿ ಘೋಷಣೆ ಮಾಡುತ್ತಲೇ ಇರುವ ಯೋಜನೆಗಳಿಗೆ ಅಷ್ಟೊಂದು ಹಣವನ್ನು ಎಲ್ಲಿಂದ ತರುತ್ತಾರೆ. ಕುಮಾರಸ್ವಾಮಿಯೇನು ಜಾದುಗಾರರೇ? ಎಂದು ಪ್ರಶ್ನಿಸಿದ ದೊರೆ ಸ್ವಾಮಿ ಅವರು, ಮೊದಲು ರೈತರಿಗೆ ನೀಡಿರುವ ಭರವಸೆಯಂ ತೆಯೇ ಸಂಪೂರ್ಣ ಸಾಲ ಮನ್ನಾ ಮಾಡಿ, ಮೋಜು ಮಸ್ತಿಯ ಡಿಸ್ನಿಲ್ಯಾಂಡ್ ಬಗ್ಗೆ ಆ ಮೇಲೆ ಯೋಚನೆ ಮಾಡಿ ಎಂದು ಕಿವಿ ಮಾತು ಹೇಳಿದರು.

ಬೃಂದಾವನದಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ದಿಂದ ಹತ್ತಾರು ಹಳ್ಳಿಗಳ ಜನರ ಬದುಕು ಅತಂತ್ರವಾಗಲಿದೆ. ರೈತರ ಭೂಮಿ ಮಾತ್ರವಲ್ಲದೆ ನೀರಿಗೂ ಸಮಸ್ಯೆ ತಲೆದೋರಲಿದೆ. ಬರಗಾಲ ದಲ್ಲಿ ರಾಜ್ಯದ ಜನರಿಗೆ ಮಾತ್ರವಲ್ಲದೇ ನೆರೆಯ ರಾಜ್ಯದವರಿಗೂ ನೀರಿನ ಸಮಸ್ಯೆ ಎದುರಾಗಲಿದೆ. ಬಹುಮುಖ್ಯವಾಗಿ ಕೆಆರ್‍ಎಸ್ ಸುರಕ್ಷತೆಗೂ ಧಕ್ಕೆ ಆಗಲಿದೆ. ಎತ್ತರದ ಕಾವೇರಿ ಮಾತೆ ಪುತ್ಥಳಿ ನಿರ್ಮಾಣದಿಂದ ಕಟ್ಟೆಯ ತಳಪಾಯಕ್ಕೆ ಅಪಾಯವಿದೆ ಎಂದು ಕಳವಳÀ ವ್ಯಕ್ತಪಡಿಸಿದರು. ರಾಜಕಾರಣಿಗಳ ಇಂತಹ ಅವಿವೇಕದ ಯೋಜನೆಗಳ ಬಗ್ಗೆ ಜಿಲ್ಲೆಯ ಜನತೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಮುಂದೊಂದು ದಿನ ಎದುರಾಗ ಬಹುದಾದ ಸಮಸ್ಯೆಗೆ ಈಗ ಜಾಗೃತರಾಗದಿದ್ದರೆ ಮುಂದೆ ಭಾರೀ ಬೆಲೆ ತೆರಬೇಕಾಗು ತ್ತದೆ. ನಮ್ಮ ಹಿರಿಯರು ಕಟ್ಟಿ ಉಳಿಸಿಕೊಂಡು ಬಂದಿರುವ ಶಾಶ್ವತ ಯೋಜನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಪ್ರಗತಿಪರ ಚಿಂತಕ ಪ.ಮಲ್ಲೇಶ್ ಮಾತನಾಡಿ, ಡಿಸ್ನಿಲ್ಯಾಂಡ್, ಬೃಹತ್ ರಸ್ತೆ, ಕೈಗಾರಿಕೆಗಳಂತಹ ಪ್ರಾಜೆಕ್ಟ್‍ಗಳ ಹಿಂದೆ ರಾಜಕಾರಣಿಗಳ ಕೈವಾಡವಿದೆ. ಅವರಿಗೆ ಹಣ ಲೂಟಿ ಮಾಡುವುದನ್ನು ಬಿಟ್ಟರೆ ಬೇರೇನೂ ಉದ್ದೇಶವಿಲ್ಲ. ನಮ್ಮ ಹಿರಿಯರು ದೂರದೃಷ್ಟಿಯನ್ನಿಟ್ಟುಕೊಂಡು ನಿರ್ಮಿಸಿರುವ ಅಣೆಕಟ್ಟೆಗಳು, ಕೈಗಾರಿಕೆಗಳನ್ನು, ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಲು ಈಗಲೂ ನಾವು ಒದ್ದಾಡುತ್ತಿದ್ದೇವೆ. ಆದರೆ ಈಗಿನ ರಾಜಕಾರಣಿಗಳು ಅಂತಹ ಒಂದೇ ಒಂದು ದೀರ್ಘ ಜೀವಿತಾವಧಿಯ ಯೋಜನೆ ಜಾರಿಗೊಳಿಸಿರುವುದನ್ನು ತೋರಿಸಲಿ. ಆದರೆ ನಮ್ಮೊಳಗಿರುವುದನ್ನು ಹಾಳು ಮಾಡಿರುವುದನ್ನು ನಾವು ನೀವೆಲ್ಲಾ ನೋಡುತ್ತಿದ್ದೇವೆ ಎಂದು ಕಿಡಿಕಾರಿದರು.

ವೇದಿಕೆಯಲ್ಲಿ ರೈತ ಸಂಘದ ಸುನೀತಾ ಪುಟ್ಟಣ್ಣಯ್ಯ, ಬಡಗಲಪುರ ನಾಗೇಂದ್ರ, ಶಂಭೂನಹಳ್ಳಿ ಸುರೇಶ್, ಕೆಂಪೂಗೌಡ, ಬೊಮ್ಮೇಗೌಡ, ದಸಂಸ ಮುಖಂಡ ಕೆರಗೋಡು ಗುರುಪ್ರಸಾದ್, ವೀರಸಂಗಯ್ಯ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಆಗಮಿಸಿದ್ದ ನೂರಾರು ರೈತರು, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಶಾಲಾ ಮಕ್ಕಳು ಜನಾಂದೋಲನಕ್ಕೆ ಸಾಕ್ಷಿಯಾದರು. ಅರುಣೋದಯ ಕಲಾತಂಡದ ನಾಯಕಿ, ರಂಗ ಕಲಾವಿದೆ ಮಂಜುಳ ನೇತೃತ್ವದ ಕಲಾವಿದರು ರೈತಗೀತೆ, ಜನಜಾಗೃತಿ ಗೀತೆಗಳನ್ನು ಹಾಡಿದರು.

Translate »