ಮೈಸೂರು: ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಖ್ಯಾತಿಯಾಗಿರುವ ಕೃಷ್ಣರಾಜೇಂದ್ರ (ಕೆಆರ್) ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುವ ಕಾಲ ಸಮೀಪಿಸುತ್ತಿದೆ. ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರೆನ್ನದೆ ಸಮಾಜದ ಸರ್ವರಿಗೂ ಉಚಿತ ಆರೋಗ್ಯ ಸೇವೆ ಒದಗಿಸಬೇಕೆಂಬ ಮಹದುದ್ದೇಶದಿಂದ ಕೃಷ್ಣರಾಜೇಂದ್ರ ಒಡೆಯರ್ ಅವರು 1050 ಹಾಸಿಗೆ ಸಾಮಥ್ರ್ಯದ ಕೆ.ಆರ್. ಆಸ್ಪತ್ರೆಯನ್ನು ಆರಂಭಿಸಿದ್ದರಾದರೂ, ಬರಬರುತ್ತಾ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಜನಸಂಖ್ಯೆ ಹೆಚ್ಚುತ್ತಿ ದ್ದಂತೆಯೇ ದೊಡ್ಡಾಸ್ಪತ್ರೆ ಮೇಲೆ ಒತ್ತಡ ಜಾಸ್ತಿಯಾಯಿತು. ಮೈಸೂರು ಮಾತ್ರ ವಲ್ಲದೆ, ಸುತ್ತಲಿನ ಚಾಮರಾಜನಗರ, ಕೊಡಗು,…
ಡಿ.15ರಂದು ಹಬ್ಬಗಳ ಮಹತ್ವ ದೃಶ್ಯ-ಕಾವ್ಯದಲ್ಲಿ ಅನಾವರಣ
December 14, 2018ಮೈಸೂರು: ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಡಿ.15ರಂದು `ನಮ್ಮ ಹಬ್ಬಗಳು (ದೃಶ್ಯ-ಕಾವ್ಯ)’ ಗಾಯನ ಮತ್ತು ನಾಟಕದ ಸಮ್ಮಿ ಲನದ ವಿನೂತನ ಸಾಂಸ್ಕøತಿಕ ಕಾರ್ಯ ಕ್ರಮ ಆಯೋಜಿಸಲಾಗಿದೆ ಎಂದು ಅಕಾ ಡೆಮಿ ಟ್ರಸ್ಟ್‍ನ ಸಂಸ್ಥಾಪಕಿ ಹೆಚ್.ಆರ್. ಲೀಲಾವತಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗಮ ಸಂಗೀ ತಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶ ದೊಂದಿಗೆ ಸ್ಥಾಪನೆಯಾದ ನಮ್ಮ ಸಂಸ್ಥೆಗೆ ಇದೀಗ 34 ವರ್ಷಗಳು. ಅಂದಿನಿಂದ ಇಲ್ಲಿಯ ವರೆಗೆ ಸುಗಮ…
ಇಂದಿನಿಂದ ಚಾಮುಂಡಿಬೆಟ್ಟ ಸೇರಿದಂತೆ ಅರಮನೆ ದೇವಾಲಯಗಳ ಸಿಬ್ಬಂದಿ ಮುಷ್ಕರ
December 14, 2018ಮೈಸೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾ ಯಿಸಿ ನಾಳೆ(ಡಿ.14)ಯಿಂದ ಚಾಮುಂಡಿಬೆಟ್ಟ ಸೇರಿ ದಂತೆ ಅರಮನೆಯ ದೇವಾಲಯಗಳ ಪುರೋಹಿ ತರು ಹಾಗೂ ನೌಕರರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಕಳೆದ 10 ದಿನದ ಹಿಂದೆಯೇ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯಗಳ ನೌಕರರ ಸಂಘ ಎಚ್ಚರಿಕೆ ನೀಡಿತ್ತು. ಸರ್ಕಾರ ದೇವಾಲಯದ ನೌಕರರ ಬೇಡಿಕೆ ಈಡೇರಿ ಸಲು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸತ್ಯಾಗ್ರಹ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ….
ಪ್ರತಿಯೊಬ್ಬರು ಭಾರತದ ಸಂವಿಧಾನ ಓದುವುದು ಅವಶ್ಯ
December 14, 2018ಮೈಸೂರು: ಭಾರ ತದ ಸಂವಿಧಾನವನ್ನು ಪ್ರತಿಯೊಬ್ಬರೂ ಓದುವುದು ಹಿಂದೆಂದಿಗಿಂತಲೂ ಇಂದು ಅತ್ಯಗತ್ಯವಾಗಿದೆ ಎಂದು ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಹೇಳಿದರು. ಆಡಳಿತ ತರಬೇತಿ ಸಂಸ್ಥೆಯಲ್ಲಿ ಗುರು ವಾರ ಆಯೋಜಿಸಿದ್ದ ಸಂವಿಧಾನ ಓದು ಮತ್ತು ಸಾಮಾಜಿಕ ನ್ಯಾಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಅರ್ಥಮಾಡಿಕೊಳ್ಳ ಬೇಕಾದರೆ ಮೊದಲು ನಾವು ಭಾರತ ವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಭಾರತವನ್ನು ಸರಿಯಾಗಿ ಓದದಿದ್ದರೆ ಸಂವಿಧಾನದ ಆಶಯ ಮತ್ತು ಪಾವಿತ್ರ್ಯತೆ ಅರ್ಥವಾಗುವುದಿಲ್ಲ ಎಂದು ಹೇಳಿದರು. ಹಿಂದೂಗಳಿಗೆ ಪವಿತ್ರ ಗ್ರಂಥವಾಗಿ ಭಗವದ್ಗೀತೆ, ಮುಸ್ಲಿಮರಿಗೆ…
ಜೆಎಸ್‍ಎಸ್ ನರ್ಸಿಂಗ್ ವಿದ್ಯಾರ್ಥಿಗಳ ಸಂಭ್ರಮ
December 14, 2018ಮೈಸೂರು: ಸುಂದರ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾ ರ್ಥಿನಿಯರು… ಬಣ್ಣದ ಚಿತ್ತಾರದಲ್ಲಿ ಕೇರಳ -ಆಂಧ್ರಮಯವಾಗಿ ಕಂಗೊಳಿಸಿದ ವೇದಿಕೆ… ಶಿಳ್ಳೆ, ಚಪ್ಪಾಳೆಗಳ ಝೇಂಕಾರ… ನಗರದ ಜೆಎಸ್‍ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಜೆಎಸ್‍ಎಸ್ ನರ್ಸಿಂಗ್ ವತಿಯಿಂದ ನಡೆಯುತ್ತಿರುವ ಅಂತರ ಕಾಲೇಜು ಸಂಭ್ರಮ-2018ದ ಎರಡನೇ ದಿನವಾದ ಇಂದು ಮೊದಲಿಗೆ ವೇದಿಕೆಗೆ ಆಗಮಿಸಿದ ವಿದ್ಯಾರ್ಥಿನಿಯರ 10 ತಂಡಗಳು ತಾಯಿ ಚಾಮುಂಡೇಶ್ವರಿಯ ಭಕ್ತಿ ಪ್ರಧಾನ ಗೀತೆ ಹಾಗೂ ಆಂಧ್ರ್ರಪ್ರದೇಶ, ಕೇರಳದ ಕೂಚು ಪುಡಿ, ಕಥಕ್ಕಳಿ ನೃತ್ಯಗಳನ್ನು ಮಾಡಿ ಕಲಾರಸಿಕರ ಮನರಂಜಿಸಿದರು. ತೃತೀಯ ವರ್ಷದ…
ಜನನ-ಮರಣ ಪ್ರಮಾಣ ಪತ್ರ ಮೊದಲ ಪ್ರತಿ ಉಚಿತವಾಗಿ ನೀಡಲು ಡಿಸಿ ಸೂಚನೆ
December 14, 2018ಮೈಸೂರು: ಸಾರ್ವಜನಿಕರಿಗೆ ಜನನ-ಮರಣ ನೋಂದಣಿದಾರರು ನೋಂದಾಯಿಸಿದ ಘಟನೆಯ ಮೊದಲ ಪ್ರತಿಯನ್ನು ಕಡ್ಡಾಯವಾಗಿ ಮುದ್ರಿಸಿ ಉಚಿತವಾಗಿ ನೀಡುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಬುಧವಾರ ನಡೆದ ಜನನ-ಮರಣ ನೋಂದಣಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ನಡೆಯುತ್ತಿರುವ ಜನನ-ಮರಣ ನೋಂದಣಿ ಪ್ರಕ್ರಿಯೆ ಶೇ.100ರಷ್ಟು ಪ್ರಗತಿ ಸಾಧಿಸಿರು ವುದಿಲ್ಲ. ತಡವಾಗಿ ನೋಂದಣಿ ಪ್ರಕರಣ ಗಳನ್ನು ತಪ್ಪಿಸಲು ಹೆಚ್ಚು ಹೆಚ್ಚು ಪ್ರಚಾರ ಪಡಿಸಿ ಅರಿವು ಮೂಡಿಸುವುದು ಸೂಕ್ತ ವೆಂದು…
ಆರ್‍ಟಿ ನಗರದಲ್ಲಿ ತಲೆ ಎತ್ತಲಿದೆ ಪವರ್ ಫ್ರೆಂಡ್ಸ್ ಕ್ಲಬ್ ಕಟ್ಟಡ
December 14, 2018ಮೈಸೂರು: ಮುಡಾ ಅಭಿವೃದ್ಧಿಪಡಿಸಿ ರುವ ಮೈಸೂರಿನ ರವೀಂದ್ರನಾಥ ಠಾಕೂರ್ ನಗರ (ಆರ್‍ಟಿ ನಗರ) ಬಡಾವಣೆಯಲ್ಲಿ ಚೆಸ್ಕಾಂ ಇಂಜಿ ನಿಯರ್‍ಗಳ ‘ಪವರ್ ಫ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್’ ಕಟ್ಟಡ ತಲೆ ಎತ್ತಲಿದೆ. ಮುಡಾ ಮಂಜೂರು ಮಾಡಿ ರುವ 28 ಸಾವಿರ ಚದರಡಿ ವಿಸ್ತಾರದ ಸಿಎ ನಿವೇ ಶನದಲ್ಲಿ ಸುಮಾರು 6 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಲಾಯಿತು. ಪವರ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀರಾಮೇಗೌಡ, ಕಾರ್ಯದರ್ಶಿ ಮುನಿ ಗೋಪಾಲ್ ರಾಜ್, ನಿವೃತ್ತ ರಾಜ್ಯ ಮಾಹಿತಿ…
ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ನವೀನ ತಂತ್ರಜ್ಞಾನ ಆಧರಿತ ಆಹಾರ ಪದಾರ್ಥಗಳ ಪ್ರದರ್ಶನ
December 14, 2018ಮೈಸೂರು: – ಮೈಸೂರಿನ ಸಿಎಫ್ ಟಿಆರ್‍ಐ ಸಂಸ್ಥೆಯ ಆವರಣದಲ್ಲಿ 8ನೇ ಅಂತರ ರಾಷ್ಟ್ರೀಯ ಆಹಾರ ಸಮ್ಮೇಳನ `ಇಫ್ಕಾನ್-2018’ ಅಂಗವಾಗಿ ಗುರುವಾರ ಆರಂಭವಾದ ಆಹಾರ ಮೇಳದಲ್ಲಿ 88ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಹೊಸ ಹೊಸ ತಂತ್ರಜ್ಞಾನ ಆಧರಿತ ಆಹಾರ ಉತ್ಪನ್ನ ಗಳ ಪ್ರದರ್ಶನ ಗ್ರಾಹಕರ ಮನ ಸೆಳೆಯುತ್ತಿದೆ. ಕೇಂದ್ರೀಯ ಆಹಾರ ಮತ್ತು ಸಂಶೋಧನಾಲಯ (ಸಿಎಫ್‍ಟಿಆರ್‍ಐ)ದ ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಆಹಾರ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧಿತ ಆಹಾರ ಪದಾರ್ಥ ಗಳನ್ನು ಪ್ರದರ್ಶನದಲ್ಲಿಟ್ಟು ಗ್ರಾಹಕರಿಗೆ ಮಾಹಿತಿ ನೀಡ…
ಶ್ರೀಗಂಧದೆಣ್ಣೆ ಕಾರ್ಖಾನೆ ಭದ್ರತಾ ಸಿಬ್ಬಂದಿ ವಜಾ ಖಂಡಿಸಿ ಬಿಎಸ್‍ಪಿ ಪ್ರತಿಭಟನೆ
December 14, 2018ಮೈಸೂರು: ಮೈಸೂರಿನ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್‍ನ ಶ್ರೀಗಂಧದೆಣ್ಣೆ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ 13 ಮಂದಿಯನ್ನು ದಿಢೀರ್ ಕೆಲಸದಿಂದ ತೆಗೆಯ ಲಾಗಿದೆ ಎಂದು ಆರೋಪಿಸಿ ಬಿಎಸ್‍ಪಿ ಮೈಸೂರು ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ರುವ ಕಾರ್ಖಾನೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಹಲವು ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ವರನ್ನು ಉದ್ದೇಶಪೂರ್ವಕವಾಗಿ ಕೆಲಸ ದಿಂದ ತೆಗೆಯಲಾಗಿದೆ. ಭದ್ರತಾ ಸಿಬ್ಬಂದಿ ಸೇವೆಗೆ ಹೊಸದಾಗಿ ಗುತ್ತಿಗೆ ಪಡೆದಿರುವ ಬೆಂಗಳೂರಿನ ಪ್ರೊಫೆಷನಲ್…
ಮೂವರು ವಿದ್ಯಾರ್ಥಿನಿಯರು ನಾಪತ್ತೆ
December 14, 2018ಮೈಸೂರು: ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಆಲನಹಳ್ಳಿ ಮತ್ತು ಇಲವಾಲ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದೆ. ವಿದ್ಯಾವಿಕಾಸ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಇಡಿ ವ್ಯಾಸಂಗ ಮಾಡುತ್ತಿರುವ ಟಿ.ವಿ.ರಾಣಿ (24) ಡಿ.3ರಂದು ಬೆಳಿಗ್ಗೆ 8.30 ಗಂಟೆಗೆ ಕಾಲೇಜಿನಲ್ಲಿ ಕಾರ್ಯಕ್ರಮ ಇದೆ ಎಂದು ಮನೆಯಿಂದ ಹೋಗಿದ್ದು, ಸಂಜೆ 6.30ರ ವೇಳೆಗೆ ತಂದೆಗೆ ಮೊಬೈಲ್‍ನಿಂದ ಕರೆ ಮಾಡಿ ತಾನು ಒಬ್ಬ ಹುಡುಗನನ್ನು ಮದುವೆಯಾಗುತ್ತಿರು ವುದಾಗಿಯೂ, ತಮಗೆ ಕಾಲೇಜಿನ ಉಪನ್ಯಾಸಕರೇ ಮದುವೆ ಮಾಡಿಸುತ್ತಿದ್ದಾರೆ ಎಂದು ತಿಳಿಸಿದ್ದಾಳೆ ಎಂದು ಆಕೆಯ ತಂದೆ ವೆಂಕಟರಮಣ ನಾಯ್ಕ್…