ಶ್ರೀಗಂಧದೆಣ್ಣೆ ಕಾರ್ಖಾನೆ ಭದ್ರತಾ ಸಿಬ್ಬಂದಿ  ವಜಾ ಖಂಡಿಸಿ ಬಿಎಸ್‍ಪಿ ಪ್ರತಿಭಟನೆ
ಮೈಸೂರು

ಶ್ರೀಗಂಧದೆಣ್ಣೆ ಕಾರ್ಖಾನೆ ಭದ್ರತಾ ಸಿಬ್ಬಂದಿ ವಜಾ ಖಂಡಿಸಿ ಬಿಎಸ್‍ಪಿ ಪ್ರತಿಭಟನೆ

December 14, 2018

ಮೈಸೂರು:  ಮೈಸೂರಿನ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್‍ನ ಶ್ರೀಗಂಧದೆಣ್ಣೆ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ 13 ಮಂದಿಯನ್ನು ದಿಢೀರ್ ಕೆಲಸದಿಂದ ತೆಗೆಯ ಲಾಗಿದೆ ಎಂದು ಆರೋಪಿಸಿ ಬಿಎಸ್‍ಪಿ ಮೈಸೂರು ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ರುವ ಕಾರ್ಖಾನೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಹಲವು ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ವರನ್ನು ಉದ್ದೇಶಪೂರ್ವಕವಾಗಿ ಕೆಲಸ ದಿಂದ ತೆಗೆಯಲಾಗಿದೆ. ಭದ್ರತಾ ಸಿಬ್ಬಂದಿ ಸೇವೆಗೆ ಹೊಸದಾಗಿ ಗುತ್ತಿಗೆ ಪಡೆದಿರುವ ಬೆಂಗಳೂರಿನ ಪ್ರೊಫೆಷನಲ್ ಸೆಕ್ಯೂರಿಟಿ ಸರ್ವೀಸಸ್ ಅಧಿಕಾರಿಗಳು ಹಾಗೂ ಕಾರ್ಖಾ ನೆಯ ಸೆಕ್ಯೂರಿಟಿ ಅಧಿಕಾರಿ ಸಿದ್ದನಾಯಕ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ನೆಪವೊಡ್ಡಿ ಅಮಾಯಕರ ಕೆಲಸ ಕಿತ್ತುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದಿನ ಗುತ್ತಿಗೆದಾರರ ಮೂಲಕ ಹಲವು ವರ್ಷಗಳಿಂದ ಇವರು ಭದ್ರತಾ ಸಿಬ್ಬಂದಿ ಯಾಗಿ ಕಾರ್ಯನಿರ್ವಹಿಸಿದ್ದಾರೆ. ಕೆಲಸಕ್ಕೆ ತೆಗೆದುಕೊಳ್ಳುವಾಗ ಯಾವುದೇ ವಿದ್ಯಾರ್ಹತೆ ಕೇಳದೇ ಈಗ ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದರೆ ಅವರ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯ. ಇವರನ್ನು ಕೆಲಸದಿಂದ ತೆಗೆಯದೆ ಹಾಲಿ ಹುದ್ದೆಯಲ್ಲೇ ಮುಂದುವರೆಸುವಂತೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಕೂಡ ಸೂಚನೆ ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.

ಭದ್ರತಾ ಸಿಬ್ಬಂದಿ ಗುತ್ತಿಗೆದಾರ ಕಂಪನಿ ಯಾದ ಪ್ರೊಫೆಷನಲ್ ಸೆಕ್ಯೂರಿಟಿ ಸರ್ವೀ ಸಸ್ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದು, ಈ ಕೂಡಲೇ ಇವರ ಗುತ್ತಿಗೆಯನ್ನು ರದ್ದು ಮಾಡಬೇಕು. ಕೆಲಸದಿಂದ ತೆಗೆದಿರುವ ಭದ್ರತಾ ಸಿಬ್ಬಂದಿಯ ಪುನರ್ ನೇಮಕ ಮಾಡಿಕೊಂಡು ಈ ಹಿಂದಿನ ಗುತ್ತಿಗೆದಾರರು ನೀಡದೇ ಇರುವ ಭವಿಷ್ಯ ನಿಧಿ ಹಣದ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಸಮಸ್ಯೆ ಬಗೆಹರಿಸುವ ಅವರ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟರು. ಬಿಎಸ್‍ಪಿ ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು, ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭು ಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ಪ್ರತಾಪ್, ನಗರ ಉಸ್ತುವಾರಿ ದಿನಕರ್, ನಗರಾಧ್ಯಕ್ಷ ಡಾ. ಬಸವರಾಜು ಹಾಗೂ ಮತ್ತಿತರರ ಪಕ್ಷದ ಕಾರ್ಯಕರ್ತರು ಸೇರಿದಂತೆ ಕೆಲಸ ಕಳೆದು ಕೊಂಡ 13 ಮಂದಿ ಭದ್ರತಾ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »