ಮೈಸೂರು: ರಾಜ್ಯ ಸರ್ಕಾರದ ಆದೇಶದಂತೆ ಮೈಸೂರು ಜಿಲ್ಲೆಯ ಸಣ್ಣ ಮತ್ತು ಅತಿ ಸಣ್ಣ ರೈತರ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಯಡಿ ಖರೀದಿಸಲು ಜಿಲ್ಲೆಯಲ್ಲಿ 12 ಖರೀದಿ ಕೇಂದ್ರ ತೆರೆಯಲಾಗಿದ್ದು, ಡಿ.16 ರಿಂದ 2019ರ ಮಾ.31ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ಈ ಪೈಕಿ ಸಣ್ಣ ಮತ್ತು ಅತಿ ಸಣ್ಣ ರೈತ ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲಾಗುವುದು. ಒಬ್ಬ ರಿಂದ 40 ಕ್ವಿಂಟಾಲ್ ಮೀರದಂತೆ ಭತ್ತ ಖರೀದಿ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ….
ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿದ್ದಂಡ ಸಿ.ನಂದ ನಿಧನ
December 13, 2018ಮಡಿಕೇರಿ: ಭಾರತೀಯ ಸೇನೆಯ ಹೆಮ್ಮೆಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೊಡಗಿನ ಬಿದ್ದಂಡ ಸಿ.ನಂದ (87) ಅವರು ಇಂದು ನಿಧನ ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನದಲ್ಲಿದ್ದಾಗಲೇ ಬುಧವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಸೇನಾ ಕ್ಷೇತ್ರದ ಹೆಜ್ಜೆ ಗುರುತು: ನಾಲ್ಕು ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ‘ಲೆಫ್ಟಿನೆಂಟ್ ಜನರಲ್’ ಉನ್ನತ ಹುದ್ದೆ ಯನ್ನು ಅಲಂಕರಿಸಿದ ಬಿದ್ದಂಡ ಸಿ.ನಂದ ಭಾರತೀಯ ಭೂಸೇನೆಯ ಉತ್ತರ ವಲ ಯದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದವರು….
ಮೈಸೂರಲ್ಲಿ ಅಂತರರಾಷ್ಟ್ರೀಯ ಆಹಾರ ಸಮ್ಮೇಳನ ಆರಂಭ
December 13, 2018ಮೈಸೂರು: ವಿಶ್ವದ ಸಾರ್ವಜನಿಕ ಆರೋಗ್ಯ ಮಟ್ಟವನ್ನು ಗಮನಿಸಿದರೆ ಭಾರತ 80-90ನೇ ಸ್ಥಾನ ದಲ್ಲಿದ್ದು, ಭಾರತದ ಶೇ.58ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಸೋನೆಪಟ್‍ನ ಎನ್‍ಐಎಫ್‍ಟಿ ಇಎಂನ ಕುಲಪತಿ ಚಿಂಡಿ ವಾಸುದೇವಪ್ಪ ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಘಟಿಕೋತ್ಸವ ಸಭಾಂಗಣ ದಲ್ಲಿ ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘ, ಸಿಎಫ್‍ಟಿ ಆರ್‍ಐ-ಸಿಎಸ್‍ಐಆರ್ ಮತ್ತು ಎಫ್ ಆರ್‍ಎಲ್-ಡಿಆರ್‍ಡಿಒ ಸಹಯೋಗದಲ್ಲಿ ಇಂದಿನಿಂದ 4 ದಿನಗಳ ಕಾಲ ಆಯೋಜಿ ಸಿರುವ 8ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನ `ಇಫ್ಕಾನ್-…
ಸಿಎಂ ಇರೋದು ಹೆಬ್ಬೆಟ್ಟು ಒತ್ತುವುದಕ್ಕಲ್ಲ: ಬಸವರಾಜ್ ಹೊರಟ್ಟಿ
December 13, 2018ಬೆಳಗಾವಿ: ವಿಧಾನ ಪರಿಷತ್ ಸಭಾಪತಿ ಹುದ್ದೆ ಕಾಂಗ್ರೆಸ್ ಪಾಲಾಗಿದ್ದು, ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿದ್ದ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರ ರಚನೆಯಾದ ನಂತರ ಪರಿಷತ್ ಹಂಗಾಮಿ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ತಾವೇ ಸಭಾಪತಿಯಾಗುತ್ತೇವೆ ಎಂಬ ನಂಬಿಕೆಯಲ್ಲಿದ್ದರು. ಆದರೆ, ಆ ಸ್ಥಾನ ಸಿಗದಿದ್ದರಿಂದ ತೀವ್ರ ನಿರಾಸೆಗೊಂಡ ಹೊರಟ್ಟಿ, ಹೆಬ್ಬೆಟ್ಟು ಒತ್ತುವುದಕ್ಕೆ ಮುಖ್ಯಮಂತ್ರಿಯಾಗಿರಬಾರದು ಎಂದು ಸಿಎಂ ಎಚ್‍ಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ…
60 ಮಂದಿ ವಿದೇಶಿಯರ ನಿಯೋಗದ ಮೈಸೂರು ಕೈಗಾರಿಕಾ ಪ್ರವಾಸ
December 13, 2018ಮೈಸೂರು: ಮಂಗಳವಾರ ಮೈಸೂ ರಿಗೆ ಭೇಟಿ ನೀಡಿರುವ 60 ಮಂದಿ ವಿದೇಶಿ ನಿಯೋಗದ ಸದಸ್ಯರು ಇಂದು ಉದ್ಬೂರು ಬಳಿ ಉದ್ಯಮಗಳಿಗೆ ತೆರಳಿ, ಅಲ್ಲಿನ ಕಾರ್ಯ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದರು. ನಿಯೋಗದಲ್ಲಿ ಈಜಿಪ್ಟ್, ಅಫ್ಘಾನಿಸ್ತಾನ್, ಜೋರ್ದಾನ್, ತಜುಕಿಸ್ತಾನ್, ಸಿರಿಯಾ, ಸೂಡನ್, ತಾಂಜೇನಿಯಾ, ಗಾನ, ಮಾಳವಿ, ಹೊಂದುರಾಸ, ಜಿಂಬಾಬ್ವೆ ಸೇರಿದಂತೆ 18 ರಾಷ್ಟ್ರಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದು, ಇಂದು ಬೆಳಿಗ್ಗೆ ಹೆಚ್.ಡಿ.ಕೋಟೆ ರಸ್ತೆ ಸಮೀಪದ ಉದ್ಬೂರು ಕೈಗಾರಿಕಾ ಪ್ರದೇಶದಲ್ಲಿರುವ ಮೇ.ಎನ್.ಜೆ.ಸ್ಟೇಷನರೀಸ್ ಮತ್ತು ಸೂರ್ಯ ಬ್ಯಾಟರೀಸ್ ಕಂಪನಿಗೆ ಭೇಟಿ ನೀಡಿ ಪರಿಶೀಲಿಸಿದರು….
ತಲಕಾಡು ಪುರಾತನ ದೇವಾಲಯಗಳಲ್ಲಿ ಭೂ ಉತ್ಖನನ ಕಾರ್ಯ ಆರಂಭ
December 13, 2018ಮೈಸೂರು: ರಾಜ್ಯ ಪುರಾತತ್ವ ಇಲಾಖೆಯು ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ಐತಿಹಾಸಿಕ ಹಾಗೂ ಪುರಾತನ ದೇವಾ ಲಯಗಳ ಸುತ್ತಮುತ್ತಲಿನ ಸ್ಥಳದಲ್ಲಿ ಭೂ ಉತ್ಖನನ ಕಾರ್ಯವನ್ನು ಆರಂಭಿಸಿದೆ. ಕೇಂದ್ರ ಸರ್ಕಾರದ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್‍ಐ) ಭೂ ಉತ್ಖನನ ಕಾರ್ಯ ನಡೆಸಿ ಅವಶೇಷಗಳ ಪತ್ತೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿನ ನಿವೃತ್ತ ಪ್ರಾಧ್ಯಾಪಕರಾದ ಪುರಾ ತತ್ವ ಹಾಗೂ ಇತಿಹಾಸ ತಜ್ಞ ಪ್ರೊ.ಎಂ. ಎಸ್.ಕೃಷ್ಣಮೂರ್ತಿ ಅವರನ್ನು ಪ್ರಧಾನ ಇನ್‍ವೆಸ್ಟಿಗೇಟರ್ ಆಗಿ ನೇಮಿಸಿ ಶೋಧನಾ ಕಾರ್ಯವನ್ನು ಆರಂಭಿಸಲಾಗಿದೆ. ಈ…
ಕ್ರೀಡೆ, ಹವ್ಯಾಸಗಳಿಂದ ಒತ್ತಡ ನಿವಾರಣೆ: ಡಿಸಿ ಕಿವಿಮಾತು
December 13, 2018ಮೈಸೂರು: ವಿಶ್ವದ ಇತರೆ ರಾಷ್ಟ್ರ ಗಳಿಗೆ ಹೋಲಿಸಿದರೆ ಭಾರತ ದೇಶದ ಪೊಲೀಸರು ಸದಾ ಹೆಚ್ಚು ಒತ್ತಡದಲ್ಲಿ ಸೇವೆ ಸಲ್ಲಿಸುತ್ತಾರೆಂದು ವರದಿ ಯೊಂದರಲ್ಲಿ ಉಲ್ಲೇಖವಾಗಿದ್ದು, ಕ್ರೀಡೆ ಸೇರಿದಂತೆ ವಿವಿಧ ಹವ್ಯಾಸಗಳನ್ನು ರೂಢಿಸಿಕೊಂಡು ಒತ್ತಡ ನಿವಾರಣೆ ಮಾಡಿ ಕೊಳ್ಳುವತ್ತ ಮುಂದಾಗಬೇಕೆಂದು ಮೈಸೂರು ಜಿಲ್ಲಾ ಧಿಕಾರಿ ಅಭಿರಾಮ್ ಜಿ.ಶಂಕರ್ ಸಲಹೆ ನೀಡಿದ್ದಾರೆ. ಮೈಸೂರಿನ ಜ್ಯೋತಿನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಇಂದು ಬೆಳಿಗ್ಗೆ ನಡೆದ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟವನ್ನು ಬೆಲೂನು ಹಾರಿ ಬಿಡುವ ಮೂಲಕ ಉದ್ಘಾಟಿಸಿ, ಕ್ರೀಡಾಕೂಟದಲ್ಲಿ…
ಮೈಸೂರಲ್ಲಿ ಬೀಟ್ ಪೊಲೀಸರಿಂದ ನಾಗರಿಕರಿಗೆ ವಿಸಿಟಿಂಗ್ ಕಾರ್ಡ್ ವಿತರಣೆ
December 13, 2018ಮೈಸೂರು: ಜಾರಿಯಲ್ಲಿರುವ ನ್ಯೂ ಬೀಟ್ ಸಿಸ್ಟಂ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಇದೇ ಮೊದಲ ಬಾರಿ ಪೊಲೀಸರಿಗೆ ಒದಗಿಸಿರುವ ವಿಸಿಟಿಂಗ್ ಕಾರ್ಡ್ ಗಳನ್ನು ನಾಗರಿಕರಿಗೆ ವಿತರಿಸಲಾಗು ತ್ತಿದೆ. ಈ ವಿಸಿಟಿಂಗ್ ಕಾರ್ಡಿನಲ್ಲಿ ಬೀಟ್ ಪೊಲೀಸರ ಹೆಸರು, ಹುದ್ದೆ, ಮೊಬೈಲ್ ನಂಬರ್, ಭಾವಚಿತ್ರ, ಬೀಟ್ ಸಂಖ್ಯೆ, ಪೊಲೀಸ್ ಠಾಣೆ ಹೆಸರು ಹಾಗೂ ಇತರ ಮಾಹಿತಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮುದ್ರಿಸಲಾಗಿದೆ. ಬೀಟ್ ಪೊಲೀಸರು ಈ ಕಾರ್ಡ್ ಅನ್ನು ತಮ್ಮ ವ್ಯಾಪ್ತಿಯ ನಾಗರಿಕರಿಗೆ ವಿತರಿಸುತ್ತಿದ್ದು, ಇದರಿಂದ ಸಾರ್ವಜನಿಕರು ತಮ್ಮ…
ಬಂಡೀಪುರ, ನಾಗರಹೊಳೆ, ಮಲೆಮಹದೇಶ್ವರ ಬೆಟ್ಟ ಅಭಯಾರಣ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ವನ್ಯಜೀವಿಗಳ ಸಾವು
December 13, 2018ಬೆಳಗಾವಿ: ಬಂಡೀಪುರ, ನಾಗರಹೊಳೆ ಮತ್ತು ಮಲೆಮಹದೇಶ್ವರ ಅಭಯಾರಣ್ಯ ಗಳಲ್ಲಿ 2017-18ನೇ ಸಾಲಿನಲ್ಲಿ 65 ಆನೆ, 8 ಹುಲಿ, 14 ಚಿರತೆ, 3 ಕರಡಿ, 19 ಕಾಡು ಕೋಣ, 30 ಜಿಂಕೆ-ಕಡವೆಗಳು ಸ್ವಾಭಾವಿಕವಾಗಿ ಮರಣವನ್ನಪ್ಪಿದ್ದರೆ, 11 ಆನೆ, 4 ಚಿರತೆ, 2 ಕರಡಿ, 3 ಕಾಡುಕೋಣ, 3 ಜಿಂಕೆ ಕಡವೆಗಳು ಅಸ್ವಾಭಾ ವಿಕವಾಗಿ ಮರಣ ಹೊಂದಿವೆ ಎಂದು ಅರಣ್ಯ ಸಚಿವ ಆರ್.ಶಂಕರ್ ತಿಳಿಸಿದ್ದಾರೆ. ಅದೇ ರೀತಿ 2018-19ನೇ ಸಾಲಿನಲ್ಲಿ ಇದುವರೆಗೆ 39 ಆನೆ, 4 ಹುಲಿ, 2 ಚಿರತೆ,…
ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕರಣಕ್ಕೆ `ಬಿ’ ರಿಪೋರ್ಟ್ ಸಲ್ಲಿಸಿದ ಪೊಲೀಸರು
December 13, 2018ಮೈಸೂರು: ಭೂ ಪರಿವರ್ತನೆಯಾಗದ ಕೃಷಿ ಭೂಮಿಯಲ್ಲಿ ನಿಯಮಬಾಹಿರವಾಗಿ ಮನೆ ನಿರ್ಮಾಣ ಮಾಡಿರುವ ಆರೋಪ ದಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ `ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಸಿದ್ದರಾಮಯ್ಯ ಅವರ ವಿರುದ್ಧದ ಪ್ರಕರಣದಲ್ಲಿ ಯಾವುದೇ ಸತ್ಯಾಂಶವಿಲ್ಲ, ತಪ್ಪು ಗ್ರಹಿಕೆಯಿಂದ ದೂರು ನೀಡಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಈ ಸಂಬಂಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ದೂರುದಾರ ಗಂಗರಾಜು, ಪೊಲೀಸರು…










