ಮೈಸೂರು ಜಿಲ್ಲೆಯಲ್ಲಿ 12 ಭತ್ತ ಖರೀದಿ ಕೇಂದ್ರ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 12 ಭತ್ತ ಖರೀದಿ ಕೇಂದ್ರ

December 13, 2018

ಮೈಸೂರು:  ರಾಜ್ಯ ಸರ್ಕಾರದ ಆದೇಶದಂತೆ ಮೈಸೂರು ಜಿಲ್ಲೆಯ ಸಣ್ಣ ಮತ್ತು ಅತಿ ಸಣ್ಣ ರೈತರ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಯಡಿ ಖರೀದಿಸಲು ಜಿಲ್ಲೆಯಲ್ಲಿ 12 ಖರೀದಿ ಕೇಂದ್ರ ತೆರೆಯಲಾಗಿದ್ದು, ಡಿ.16 ರಿಂದ 2019ರ ಮಾ.31ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ.

ಈ ಪೈಕಿ ಸಣ್ಣ ಮತ್ತು ಅತಿ ಸಣ್ಣ ರೈತ ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲಾಗುವುದು. ಒಬ್ಬ ರಿಂದ 40 ಕ್ವಿಂಟಾಲ್ ಮೀರದಂತೆ ಭತ್ತ ಖರೀದಿ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ. ಭತ್ತ ಖರೀದಿ ಕೇಂದ್ರ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವ ಹಾರಗಳ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ, ಜಿಲ್ಲೆಯಲ್ಲಿ 12 ಖರೀದಿ ಕೇಂದ್ರ ಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಮಾರಾಟ ಮಾಡಲಿಚ್ಛಿಸುವ ರೈತರು ನೋಂದಣಿ ಮಾಡಿಕೊಳ್ಳಲು ಡಿ.5ರಿಂದಲೇ ಅವಕಾಶ ನೀಡಲಾಗಿದೆ. ಡಿ.15 ನೋಂದಣಿಗೆ ಕಡೆ ದಿನವಾದರೂ ಆ ಬಳಿಕವೂ ನೋಂದಣಿಗೆ ಅನುವು ಮಾಡಿಕೊಡಲಾ ಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಭತ್ತ ಖರೀದಿಯ ಏಜೆನ್ಸಿಯಾಗಿದ್ದು, ಸಾಮಾನ್ಯ ಭತ್ತಕ್ಕೆ 1,750 ರೂ. ಹಾಗೂ ಗ್ರೇಡ್ `ಎ’ ಭತ್ತಕ್ಕೆ 1,770 ರೂ. (ಪ್ರತಿ ಕ್ವಿಂಟಾಲ್‍ಗೆ) ಖರೀದಿ ದರ ನಿಗದಿ ಮಾಡ ಲಾಗಿದೆ. ನೋಂದಾಯಿಸಿದ ರೈತರಿಗೆ ಭತ್ತದ ಮಾದರಿಯನ್ನು ಖರೀದಿ ಕೇಂದ್ರಕ್ಕೆ ತರಲು ದಿನಾಂಕ ನಿಗದಿ ಮಾಡಲಾಗುವುದು. ಅಂದು ಅವರು ತರುವ ಭತ್ತದ ಮಾದರಿ ಯನ್ನು ಕೃಷಿ ಇಲಾಖೆ ತಾಂತ್ರಿಕ ಸಿಬ್ಬಂದಿ ಗುಣಮಟ್ಟ ಪರಿಶೀಲಿಸಲಿದ್ದಾರೆ ಎಂದರು. ಈ ಹಿಂದೆ ಭತ್ತ ಖರೀದಿ ಬಳಿಕ ಗೋದಾಮು ಗಳಲ್ಲಿ ಶೇಖರಣೆ ಮಾಡಿಕೊಂಡು ನಂತರ 250 ಕ್ವಿಂಟಾಲ್‍ನಂತೆ ಅಕ್ಕಿ ಮಿಲ್‍ಗೆ ಸರಬ ರಾಜು ಮಾಡುವ ವ್ಯವಸ್ಥೆ ಇತ್ತು. ಆದರೆ ಈ ಬಾರಿ ನಿಯೋಜಿಸಿದ ಹತ್ತಿರದ ರೈಸ್ ಮಿಲ್‍ಗೆ ರೈತರೇ ಸಾಗಾಣೆ ಮಾಡಬೇಕು. ಸಾಗಾಣೆ ವೆಚ್ಚವನ್ನು ರೈತರೇ ಭರಿಸಬೇಕಿ ರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪಿ.ಶಿವಣ್ಣ ಉತ್ತರಿಸಿದರು. ನೋಂದಣಿ ಮಾಡಿದ್ದರೂ ಕಡ್ಡಾಯವಾಗಿ
ನಮ್ಮ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಬೇಕೆಂಬ ನಿಯಮವೇನಿಲ್ಲ. ಅವರಿಗೆ ಲಾಭಾಂಶ ದೊರೆಯುವುದಾದರೆ ಮುಕ್ತ ಮಾರುಕಟ್ಟೆಯಲ್ಲೂ ಮಾರಾಟ ಮಾಡಿಕೊಳ್ಳಬಹುದು. ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ನೀಡಿ ಖರೀದಿಸಿದರೆ, ನಮ್ಮ ಖರೀದಿ ಕೇಂದ್ರದಲ್ಲಿ ಈಗ ನಿಗದಿಗೊಳಿಸಿರುವ ದರಕ್ಕಿಂತ ಹೆಚ್ಚಳ ಮಾಡ ಲಾಗದು. ಇದು ಸ್ಥಿರ ದರವಾಗಿರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಖರೀದಿಗೆ ನೋಂದಣಿ ಮಾಡಿಕೊಂಡ ರೈತರು ತಹಸೀಲ್ದಾರ್ ಅಥವಾ ಅವರಿಂದ ಅಧಿಕೃತರಾದ ಅಧಿಕಾರಿಗಳಿಂದ ನಮೂನೆ-1ರಲ್ಲಿ ಬೆಳೆ ದೃಢೀಕರಣ ಪತ್ರ ಮತ್ತು 2018-19ನೇ ಸಾಲಿನ ಕಂಪ್ಯೂಟರ್ ಪಹಣಿಯನ್ನು ನೋಂದಣಿ ಸಮಯದಲ್ಲಿ ಹಾಜರುಪಡಿಸಬೇಕು. ನೋಂದಣಿ ಬಳಿಕ ಭತ್ತ ಸರಬರಾಜು ಮಾಡುವ ದಿನಾಂಕದ ಬಗ್ಗೆ ನೋಂದಣಿ ಕೇಂದ್ರದಿಂದ ಸರಬರಾಜು ಚೀಟಿಯನ್ನು ನಮೂನೆ-3ರಲ್ಲಿ ಪಡೆದು ನಿಗದಿಪಡಿಸಿದ ದಿನಾಂಕದಂದು ಭತ್ತ ಸರಬರಾಜು ಮಾಡಬೇಕು ಎಂದರು. ರಾಜ್ಯ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಸಿದ್ದಮಾದೇಗೌಡ ಗೋಷ್ಠಿಯಲ್ಲಿದ್ದರು.

Translate »