ಬಂಡೀಪುರ, ನಾಗರಹೊಳೆ, ಮಲೆಮಹದೇಶ್ವರ ಬೆಟ್ಟ ಅಭಯಾರಣ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ವನ್ಯಜೀವಿಗಳ ಸಾವು
ಮೈಸೂರು

ಬಂಡೀಪುರ, ನಾಗರಹೊಳೆ, ಮಲೆಮಹದೇಶ್ವರ ಬೆಟ್ಟ ಅಭಯಾರಣ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ವನ್ಯಜೀವಿಗಳ ಸಾವು

December 13, 2018

ಬೆಳಗಾವಿ: ಬಂಡೀಪುರ, ನಾಗರಹೊಳೆ ಮತ್ತು ಮಲೆಮಹದೇಶ್ವರ ಅಭಯಾರಣ್ಯ ಗಳಲ್ಲಿ 2017-18ನೇ ಸಾಲಿನಲ್ಲಿ 65 ಆನೆ, 8 ಹುಲಿ, 14 ಚಿರತೆ, 3 ಕರಡಿ, 19 ಕಾಡು ಕೋಣ, 30 ಜಿಂಕೆ-ಕಡವೆಗಳು ಸ್ವಾಭಾವಿಕವಾಗಿ ಮರಣವನ್ನಪ್ಪಿದ್ದರೆ, 11 ಆನೆ, 4 ಚಿರತೆ, 2 ಕರಡಿ, 3 ಕಾಡುಕೋಣ, 3 ಜಿಂಕೆ ಕಡವೆಗಳು ಅಸ್ವಾಭಾ ವಿಕವಾಗಿ ಮರಣ ಹೊಂದಿವೆ ಎಂದು ಅರಣ್ಯ ಸಚಿವ ಆರ್.ಶಂಕರ್ ತಿಳಿಸಿದ್ದಾರೆ. ಅದೇ ರೀತಿ 2018-19ನೇ ಸಾಲಿನಲ್ಲಿ ಇದುವರೆಗೆ 39 ಆನೆ, 4 ಹುಲಿ, 2 ಚಿರತೆ, 10 ಕಾಡುಕೋಣ, 18 ಕಡವೆ ಜಿಂಕೆ ಸ್ವಾಭಾ ವಿಕ, 8 ಆನೆ, 1 ಹುಲಿ, 1 ಚಿರತೆ, 5 ಜಿಂಕೆ-ಕಡವೆ ಅಸ್ವಾಭಾವಿಕವಾಗಿ ಮೃತಪಟ್ಟಿವೆ ಎಂದು ವಿಧಾನ ಪರಿಷತ್ತಿಗೆ ತಿಳಿಸಿದರು.

ಬಂಡೀಪುರ, ನಾಗರಹೊಳೆ, ಮಲೆ ಮಹದೇಶ್ವರ ಅಭಯಾರಣ್ಯಗಳಲ್ಲಿ ಭಾರೀ ಸಂಖ್ಯೆಯಲ್ಲಿ ವನ್ಯ ಜೀವಿಗಳು ಮರಣ ಹೊಂದುತ್ತಿರುವ ಬಗ್ಗೆ ಸಂದೇಶ್ ನಾಗರಾಜ್ ಅವರು ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ವಯೋಮಾನ, ಅಂತರಿಕ ಕಾದಾಟ, ಸೋಂಕುರೋಗಗಳಿಂದ ಕೆಲವು ಸ್ವಾಭಾವಿಕ ಮರಣ ಹೊಂದಿದ್ದರೆ, ರಕ್ಷಿತ ಅರಣ್ಯಗಳಲ್ಲಿ ಹಾದು ಹೋಗಿರುವ ಹೆದ್ದಾರಿ ಯಲ್ಲಿ ವಾಹನಗಳಿಂದ ಉಂಟಾದ ಅಪಘಾತ, ಅಕ್ರಮ ಬೇಟೆಯಿಂದ ಅಸ್ವಾಭಾವಿಕವಾಗಿ ಮರಣ ಹೊಂದಿವೆ ಎಂದು ವಿವರಿಸಿದರು.

ಸಂದೇಶ್ ನಾಗರಾಜ್ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿ ವರು, ನೀರಿನ ಅಭಾವ ಉಂಟಾಗದಂತೆ ಅರಣ್ಯ ಪ್ರದೇಶದಲ್ಲಿರುವ ದೊಡ್ಡ ದೊಡ್ಡ ಕೆರೆಗಳ ಹೂಳನ್ನು ತೆಗೆಯಲಾಗುತ್ತಿದೆ, ಬೋರ್‍ವೆಲ್‍ಗಳನ್ನು ಕೊರೆದು, ಪಂಪ್ ಅಳವಡಿಸಿ, ಅದರಿಂದ ನೀರನ್ನು ಕೆರೆಗಳಿಗೆ ಹರಿಸಲಾಗು ತ್ತಿದೆ, ಚೆಕ್ ಡ್ಯಾಮ್, ನೀರಿನ ಹೊಂಡಗಳ ನಿರ್ಮಾಣ ಮಾಡಲಾಗಿದೆ. ಮೇವಿಗೆ ಸಂಬಂಧಿಸಿದಂತೆ ಬಿದಿರಿನ ಬೀಜಗಳನ್ನು ಬಿತ್ತಲಾಗಿದೆ ಎಂದರು.

90ರಷ್ಟು ಕಾಮಗಾರಿ ಪೂರ್ಣ: ಬಿಳಿಗಿರಿರಂಗನ ಬೆಟ್ಟದ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿ ಗಳು ಶೇ.90ರಷ್ಟು ಮುಗಿದಿದ್ದು, ಸದ್ಯದಲ್ಲೇ ಮಹಾ ಸಂಪ್ರೋಕ್ಷಣೆ ನಂತರ ದೇವಾಲಯವನ್ನು ಭಕ್ತಾದಿಗಳ ದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ಮುಜರಾಯಿ ಸಚಿವ ರಾಜಶೇಖರ ಬಿ.ಪಾಟೀಲ್ ತಿಳಿಸಿದರು.

ಬಿಳಿಗಿರಿರಂಗನ ಬೆಟ್ಟ ದೇವಾಲಯದ ಪುನರ್ ನಿರ್ಮಾಣ ಕಾರ್ಯ ವರ್ಷಾನುಗಟ್ಟಲೆಯಿಂದ ವಿಳಂಬವಾಗಿ ನಡೆಯುತ್ತಿರುವ ಬಗ್ಗೆ ಸಂದೇಶ್ ನಾಗರಾಜ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಾಮ ರಾಜನಗರ ತಾಲೂಕು ಚನ್ನಪ್ಪನ ಪುರ ವೀರಭದ್ರೇಶ್ವರ ದೇವಾಲಯದ ಬಳಿ ಯಾತ್ರಾರ್ಥಿಗಳು ಹಾಗೂ ಭಕ್ತಾದಿಗಳ ತಂಗುವಿಕೆಗೆ ಪ್ರವಾಸೋ ದ್ಯಮ ಇಲಾಖೆಯಿಂದ ಡಾರ್ಮೆಟ್ರಿ ನಿರ್ಮಾಣ ಕಾರ್ಯ ಹಾಗೂ ದೇವಾಲಯಕ್ಕೆ ಕೂಡು ರಸ್ತೆ ನಿರ್ಮಾಣಕ್ಕಾಗಿ 100 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಿದ್ದು, ಮೊದಲ ಕಂತಾಗಿ 4 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

Translate »