60 ಮಂದಿ ವಿದೇಶಿಯರ ನಿಯೋಗದ  ಮೈಸೂರು ಕೈಗಾರಿಕಾ ಪ್ರವಾಸ
ಮೈಸೂರು

60 ಮಂದಿ ವಿದೇಶಿಯರ ನಿಯೋಗದ ಮೈಸೂರು ಕೈಗಾರಿಕಾ ಪ್ರವಾಸ

December 13, 2018

ಮೈಸೂರು:  ಮಂಗಳವಾರ ಮೈಸೂ ರಿಗೆ ಭೇಟಿ ನೀಡಿರುವ 60 ಮಂದಿ ವಿದೇಶಿ ನಿಯೋಗದ ಸದಸ್ಯರು ಇಂದು ಉದ್ಬೂರು ಬಳಿ ಉದ್ಯಮಗಳಿಗೆ ತೆರಳಿ, ಅಲ್ಲಿನ ಕಾರ್ಯ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದರು.

ನಿಯೋಗದಲ್ಲಿ ಈಜಿಪ್ಟ್, ಅಫ್ಘಾನಿಸ್ತಾನ್, ಜೋರ್ದಾನ್, ತಜುಕಿಸ್ತಾನ್, ಸಿರಿಯಾ, ಸೂಡನ್, ತಾಂಜೇನಿಯಾ, ಗಾನ, ಮಾಳವಿ, ಹೊಂದುರಾಸ, ಜಿಂಬಾಬ್ವೆ ಸೇರಿದಂತೆ 18 ರಾಷ್ಟ್ರಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದು, ಇಂದು ಬೆಳಿಗ್ಗೆ ಹೆಚ್.ಡಿ.ಕೋಟೆ ರಸ್ತೆ ಸಮೀಪದ ಉದ್ಬೂರು ಕೈಗಾರಿಕಾ ಪ್ರದೇಶದಲ್ಲಿರುವ ಮೇ.ಎನ್.ಜೆ.ಸ್ಟೇಷನರೀಸ್ ಮತ್ತು ಸೂರ್ಯ ಬ್ಯಾಟರೀಸ್ ಕಂಪನಿಗೆ ಭೇಟಿ ನೀಡಿ ಪರಿಶೀಲಿಸಿದರು.

ಉತ್ಪಾದನಾ ಕಾರ್ಯ, ಗುಣಮಟ್ಟ ನಿರ್ವಹಣೆ, ಸರ್ಕಾರ ದಿಂದ ಕೈಗಾರಿಕೆಗಳಿಗೆ ನೀಡುತ್ತಿರುವ ಬೆಂಬಲ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಣಕಾಸಿನ ನೆರವು, ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಮೈಸೂರು ಕೈಗಾರಿಕಾ ಸಂಘದ ಪಾತ್ರದ ಕುರಿತಂತೆ ಮೈಸೂರು ಕೈಗಾರಿಕೆಗಳಿಗೆ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಅವರು ವಿದೇಶಿ ಪ್ರತಿನಿಧಿಗಳಿಗೆ ವಿವರಿಸಿದರು.
ಕಡತಗಳು ಮತ್ತು ನೋಟ್ ಬುಕ್ಸ್ ತಯಾರಿಸುವ ಮೆ.ಎನ್.ಜೆ.ಸ್ಟೇಷನರೀಸ್‍ನಲ್ಲಿ ಬಳಸುತ್ತಿರುವ ಕಚ್ಛಾ ವಸ್ತು ಗಳು, ತಗಲುವ ವೆಚ್ಚ, ಮಾರುಕಟ್ಟೆ ಮುಂತಾದ ವಿಷಯ ಗಳ ಬಗ್ಗೆ ಘಟಕದ ಮಾಲೀಕ ಜಯಚಂದ್ರ ಅರಸ್ ಅವರು ಅಲ್ಲಿಗೆ ಭೇಟಿ ನೀಡಿದ ವಿದೇಶಿಗರಿಗೆ ಮಾಹಿತಿ ನೀಡಿದರು.

ನಂತರ ಸಮೀಪದ ಶಿವಕುಮಾರ್ ಮಾಲೀಕತ್ವದ ಸೂರ್ಯ ಬ್ಯಾಟರೀಸ್‍ಗೆ ತೆರಳಿದ ನಿಯೋಗವು ವಿವಿಧ ಮಾದರಿಯ ಬ್ಯಾಟರಿ ತಯಾರಿಕೆಯ ವಿಧಾನ, ಬಳಸುವ ರಾಸಾಯನಿಕ, ಶೇಖರಣೆ, ಸುರಕ್ಷತಾ ಕ್ರಮಗಳ ಬಗ್ಗೆ ವೀಕ್ಷಿಸಿದರು. ಈ ವೇಳೆ ಎಂಎಸ್‍ಎಂಇ ಕೌನ್ಸಿಲ್ ಅಧ್ಯಕ್ಷ ರವಿ ಕೋಟಿ, ಕೈಗಾರಿಕೋದ್ಯಮಿಗಳಾದ ಎನ್.ಎಸ್. ನಾಗರಾಜ್, ದಾಸರಾಜ್ ಅರಸ್, ಕೆ.ಪಿ.ನಾಗರಾಜ್, ಖಾಸಿಯಾ ಕೌನ್ಸಿಲ್ ಸದಸ್ಯ ಬಿ.ಸಿ.ಮೀರಾ, ಶ್ಯಾಂರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ವಿದೇಶಿ ನಿಯೋ ಗದ ಪ್ರತಿನಿಧಿಗಳಿಗೆ ಕೈಗಾರಿಕೆ ಕಾರ್ಯನಿರ್ವಹಣೆ ಕುರಿತಂತೆ ಮಾಹಿತಿ ನೀಡಿದರು. ಉದ್ಬೂರು ಕೈಗಾರಿಕಾ ಪ್ರದೇಶಕ್ಕೆ ಆಗಮಿಸಿದ ಪ್ರತಿನಿಧಿಗಳನ್ನು ಮೈಸೂರು ಕೈಗಾರಿಕೆಗಳ ಸಂಘ ಹಾಗೂ ಖಾಸಿಯಾ ಪದಾಧಿಕಾರಿ ಗಳು ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡು ಕೈಗಾರಿಕೆಗಳ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟರು.

Translate »