ತಲಕಾಡು ಪುರಾತನ ದೇವಾಲಯಗಳಲ್ಲಿ ಭೂ ಉತ್ಖನನ ಕಾರ್ಯ ಆರಂಭ
ಮೈಸೂರು

ತಲಕಾಡು ಪುರಾತನ ದೇವಾಲಯಗಳಲ್ಲಿ ಭೂ ಉತ್ಖನನ ಕಾರ್ಯ ಆರಂಭ

December 13, 2018

ಮೈಸೂರು: ರಾಜ್ಯ ಪುರಾತತ್ವ ಇಲಾಖೆಯು ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ಐತಿಹಾಸಿಕ ಹಾಗೂ ಪುರಾತನ ದೇವಾ ಲಯಗಳ ಸುತ್ತಮುತ್ತಲಿನ ಸ್ಥಳದಲ್ಲಿ ಭೂ ಉತ್ಖನನ ಕಾರ್ಯವನ್ನು ಆರಂಭಿಸಿದೆ.

ಕೇಂದ್ರ ಸರ್ಕಾರದ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್‍ಐ) ಭೂ ಉತ್ಖನನ ಕಾರ್ಯ ನಡೆಸಿ ಅವಶೇಷಗಳ ಪತ್ತೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿನ ನಿವೃತ್ತ ಪ್ರಾಧ್ಯಾಪಕರಾದ ಪುರಾ ತತ್ವ ಹಾಗೂ ಇತಿಹಾಸ ತಜ್ಞ ಪ್ರೊ.ಎಂ. ಎಸ್.ಕೃಷ್ಣಮೂರ್ತಿ ಅವರನ್ನು ಪ್ರಧಾನ ಇನ್‍ವೆಸ್ಟಿಗೇಟರ್ ಆಗಿ ನೇಮಿಸಿ ಶೋಧನಾ ಕಾರ್ಯವನ್ನು ಆರಂಭಿಸಲಾಗಿದೆ. ಈ ಕಾರ್ಯ ವನ್ನು 2010ರಲ್ಲೇ ತಲಕಾಡಿನಲ್ಲಿ ಆರಂಭಿಸ ಲಾಗಿತ್ತಾದರೂ, ಕಾರಣಾಂತರದಿಂದ ಅರ್ಧಕ್ಕೆ ನಿಂತಿತ್ತು. ಈಗ ಮತ್ತೆ ಅನುಮತಿ ನೀಡಿದ್ದು, ಗಂಗರ ರಾಜಧಾನಿಯಾಗಿದ್ದ ತಲಕಾಡು ಪ್ರದೇಶದಲ್ಲಿ ಭೂ ಉತ್ಖನನ ಕಾರ್ಯಕ್ಕೆ ಕಳೆದ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದೆ.

ಗಂಗರು ಆಳ್ವಿಕೆ ನಡೆಸಿದ ತಲಕಾಡಿನ ಸ್ಥಳದಲ್ಲಿ ಅವರು ಬಳಸುತ್ತಿದ್ದ ಆಯುಧ ಗಳು, ಸಲಕರಣೆಗಳು, ನಾಣ್ಯ, ಇನ್ನಿತರ ಪಳೆಯುಳಿಕೆಗಳು ಭೂಮಿಯಲ್ಲಿ ಹುದುಗಿರ ಬಹುದು. ಅವುಗಳನ್ನು ಪತ್ತೆ ಮಾಡಿ ಹೊರ ತೆಗೆಯುವುದೇ ಭೂ ಉತ್ಖನನದ ಮುಖ್ಯ ಉದ್ದೇಶವಾಗಿದೆ ಎಂದೂ ಅವರು ತಿಳಿಸಿದರು.

ಈ ಕಾರ್ಯಕ್ಕೆ 5 ಲಕ್ಷ ರೂ. ವೆಚ್ಚವನ್ನು ಅಂದಾಜಿಸಲಾಗಿದ್ದು, 2019ರ ಮಾರ್ಚ್‍ಗೆ ಮುನ್ನಾ ಪೂರ್ಣಗೊಳಿಸಲು ಉದ್ದೇಶಿಸ ಲಾಗಿದೆ. ಈ ಯೋಜನೆಯನ್ನು ಹೆಮ್ಮಿಗೆ, ಹಂಪಿ ಹಾಗೂ ತಲಕಾಡಿನಲ್ಲಿ ಏಕಕಾಲ ದಲ್ಲಿ ನಡೆಸಲಾಗುತ್ತಿದೆ. ಕಾರ್ಮಿಕ ಇಲಾಖೆ ನಿಗದಿಗೊಳಿಸುವ ಕೂಲಿ ಕೊಟ್ಟು ಕಾರ್ಮಿಕ ರಿಂದ ಕಾಮಗಾರಿ ನಡೆಸಲಾಗುತ್ತಿದೆ ಎಂದೂ ವೆಂಕಟೇಶ್ ವಿವರಿಸಿದರು.
ಈ ಕಾರ್ಯವು ರಾಜ್ಯ ಪುರಾತತ್ವ ಇಲಾಖೆ ಯಲ್ಲಿನ ಚಟುವಟಿಕೆಗಳ ಒಂದು ಭಾಗ ವಾಗಿದ್ದು, ಪ್ರೊ.ಎಂ.ಎಸ್.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಭೂ ಉತ್ಖನನ ನಡೆಸಿ ಪುರಾತನ ಅವಶೇಷಗಳನ್ನು ಪತ್ತೆ ಮಾಡಲಾಗು ವುದು ಎಂದರು. ಉಪ ನಿರ್ದೇಶಕ ಗವಿ ಸಿದ್ದಯ್ಯ, ಸಹಾಯಕ ನಿರ್ದೇಶಕಿ ಮಂಜುಳಾ ಸೇರಿದಂತೆ ಇಲಾಖೆ ಸಿಬ್ಬಂದಿಗಳೂ ಸ್ಥಳ ದಲ್ಲಿದ್ದು, ಕೆಲಸದ ಮೇಲ್ವಿಚಾರಣೆ ನಡೆಸ ಲಾಗುವುದು ಎಂದೂ ವೆಂಕಟೇಶ್ ತಿಳಿಸಿದರು.

Translate »