ಡಿ.15ರಂದು ಹಬ್ಬಗಳ ಮಹತ್ವ ದೃಶ್ಯ-ಕಾವ್ಯದಲ್ಲಿ ಅನಾವರಣ
ಮೈಸೂರು

ಡಿ.15ರಂದು ಹಬ್ಬಗಳ ಮಹತ್ವ ದೃಶ್ಯ-ಕಾವ್ಯದಲ್ಲಿ ಅನಾವರಣ

December 14, 2018

ಮೈಸೂರು: ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಡಿ.15ರಂದು `ನಮ್ಮ ಹಬ್ಬಗಳು (ದೃಶ್ಯ-ಕಾವ್ಯ)’ ಗಾಯನ ಮತ್ತು ನಾಟಕದ ಸಮ್ಮಿ ಲನದ ವಿನೂತನ ಸಾಂಸ್ಕøತಿಕ ಕಾರ್ಯ ಕ್ರಮ ಆಯೋಜಿಸಲಾಗಿದೆ ಎಂದು ಅಕಾ ಡೆಮಿ ಟ್ರಸ್ಟ್‍ನ ಸಂಸ್ಥಾಪಕಿ ಹೆಚ್.ಆರ್. ಲೀಲಾವತಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗಮ ಸಂಗೀ ತಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶ ದೊಂದಿಗೆ ಸ್ಥಾಪನೆಯಾದ ನಮ್ಮ ಸಂಸ್ಥೆಗೆ ಇದೀಗ 34 ವರ್ಷಗಳು. ಅಂದಿನಿಂದ ಇಲ್ಲಿಯ ವರೆಗೆ ಸುಗಮ ಸಂಗೀತಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು, ಹೆಸರಾಂತ ಸುಗಮ ಸಂಗೀತ ಗಾಯಕರು ಸಂಸ್ಥೆ ಕಾರ್ಯಕ್ರಮದಲ್ಲಿ ಗಾಯನ ಸಾದರಪಡಿಸಿದ್ದಾರೆ ಎಂದರು.

ಜೊತೆಗೆ ಬೇರೆ ಬೇರೆ ಕಲಾ ಪ್ರಕಾರ ಗಳಾದ ಹಿಂದೂಸ್ತಾನಿ ಸಂಗೀತ, ನೃತ್ಯ, ನಾಟಕ ಸೇರಿದಂತೆ ಹಲವು ಕಲಾ ಪ್ರಕಾರ ಗಳ ಕಾರ್ಯಕ್ರಮಗಳನ್ನು ಸಂಸ್ಥೆ ಆಯೋ ಜಿಸಿಕೊಂಡು ಬರುತ್ತಿದೆ. ಇದೀಗ ಆಯೋ ಜಿಸಿರುವ `ನಮ್ಮ ಹಬ್ಬಗಳು’ ಒಂದು ವಿಶಿಷ್ಟ ಪರಿಕಲ್ಪನೆ ಹೊಂದಿದೆ. ಹಿಂದೂ ಸಂಸ್ಕøತಿಯ ಹಬ್ಬಗಳ ಮಹತ್ವ ಹಾಗೂ ಹಿನ್ನೆಲೆಯನ್ನು ಹಾಡುಗಾರಿಕೆ, ನಾಟಕ ಮತ್ತು ಸಂಭಾ ಷಣೆ ಶೈಲಿಯಲ್ಲಿ ಪ್ರಸ್ತುತಪಡಿಸಲಾಗು ವುದು. ಕವಿ-ಕಾವ್ಯ ಗೀತೆ, ಜನಪದ ಗೀತೆ, ದೇವರ ನಾಮ ಸೇರಿದಂತೆ ವಿವಿಧ ಗಾಯನದೊಂದಿಗೆ ನಾಟಕ ಶೈಲಿಯಲ್ಲಿ ಹಬ್ಬಗಳ ಮಹತ್ವ ಅನಾವರಣಗೊಳ್ಳಲಿದೆ ಎಂದು ವಿವರಿಸಿದರು.

14 ಹಬ್ಬಗಳ ಮಹತ್ವ: ಒಂದೊಂದು ಹಬ್ಬದ ಹಿನ್ನೆಲೆಯನ್ನು ಈ ವಿಶಿಷ್ಟ ಪರಿ ಕಲ್ಪನೆಯಲ್ಲಿ ಸಾದರಪಡಿಸಲು ಕನಿಷ್ಠ 10 ನಿಮಿಷ ಅವಧಿ ನಿಗದಿ ಮಾಡಲಾಗಿದೆ. ದಸರಾ, ದೀಪಾವಳಿ, ಶಿವರಾತ್ರಿ ಹಾಗೂ ರಕ್ಷಾ ಬಂಧನ ಸೇರಿದಂತೆ 14 ಹಬ್ಬಗಳ ವೈಶಿಷ್ಟ್ಯ ಮೂಡಿಬರಲಿದೆ. 100ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 35 ಮಹಿಳೆಯರು ಈ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳಲಿದ್ದಾರೆ. ಈ ಪೈಕಿ ಯುವತಿಯರು ಹಾಗೂ ಹಿರಿಯ ಮಹಿಳೆಯರೂ ಇದ್ದಾರೆ. ಈಗಾ ಗಲೇ ಹಲವು ಬಾರಿ ಅಭ್ಯಾಸ ಮಾಡಿದ್ದು, ಎರಡೂವರೆ ಗಂಟೆಗೂ ಹೆಚ್ಚು ಕಾಲ ನಡೆಯುವ ಈ ಸಾಂಸ್ಕøತಿಕ ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಪ್ರವೇಶ ವಿರುತ್ತದೆ ಎಂದು ಹೆಚ್.ಆರ್.ಲೀಲಾ ವತಿ ತಿಳಿಸಿದರು. ಸಂಸ್ಥೆಯ ಟ್ರಸ್ಟಿ ಲೀಲಾ ವತಿ ಶಂಕರ್, ಕಾರ್ಯದರ್ಶಿ ಪ್ರತಿಭಾ ಗುರುರಾಜ್, ಸಹ ಕಾರ್ಯದರ್ಶಿ ಶ್ರೀಕಾಂತ್ ಗೋಷ್ಠಿಯಲ್ಲಿದ್ದರು.

Translate »