ಇಂದಿನಿಂದ ಚಾಮುಂಡಿಬೆಟ್ಟ ಸೇರಿದಂತೆ  ಅರಮನೆ ದೇವಾಲಯಗಳ ಸಿಬ್ಬಂದಿ ಮುಷ್ಕರ
ಮೈಸೂರು

ಇಂದಿನಿಂದ ಚಾಮುಂಡಿಬೆಟ್ಟ ಸೇರಿದಂತೆ ಅರಮನೆ ದೇವಾಲಯಗಳ ಸಿಬ್ಬಂದಿ ಮುಷ್ಕರ

December 14, 2018

ಮೈಸೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾ ಯಿಸಿ ನಾಳೆ(ಡಿ.14)ಯಿಂದ ಚಾಮುಂಡಿಬೆಟ್ಟ ಸೇರಿ ದಂತೆ ಅರಮನೆಯ ದೇವಾಲಯಗಳ ಪುರೋಹಿ ತರು ಹಾಗೂ ನೌಕರರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಕಳೆದ 10 ದಿನದ ಹಿಂದೆಯೇ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯಗಳ ನೌಕರರ ಸಂಘ ಎಚ್ಚರಿಕೆ ನೀಡಿತ್ತು. ಸರ್ಕಾರ ದೇವಾಲಯದ ನೌಕರರ ಬೇಡಿಕೆ ಈಡೇರಿ ಸಲು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸತ್ಯಾಗ್ರಹ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಚಾಮುಂ ಡೇಶ್ವರಿ ಹಾಗೂ ಸಮೂಹ ದೇವಾಲಯಗಳ ನೌಕರರ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ, ಚಾಮುಂಡಿಬೆಟ್ಟದಲ್ಲಿರುವ ದೇವಾಲಯಗಳು, ಉತ್ತನ ಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾ ಲಯ, ಅರಮನೆ ದೇವಾಲಯಗಳ ಪುರೋಹಿತರು ಹಾಗೂ ನೌಕರರು ಕಳೆದ ಹಲವು ವರ್ಷಗಳಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬರುತ್ತಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ನಾನಾ ಸೌಲಭ್ಯಗಳಿಂದ ವಂಚಿತ ವಾಗಿದ್ದೇವೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಕ್ಕೆ ಆಸಕ್ತಿ ಇಲ್ಲ. ಕೇವಲ ಸುಳ್ಳು ಭರವಸೆಗಳನ್ನು ನಂಬಿಕೊಂಡೇ ಇದುವರೆಗೂ ಜೀವನ ಸಾಗಿಸುತ್ತಾ ಬಂದಿದ್ದೇವೆ. ಆದರೆ ಈ ಬಾರಿ ಶಾಶ್ವತ ಪರಿಹಾರ ದೊರಕುವವರೆಗೂ ಹೋರಾಟದಿಂದ ಹಿಂದೆ ಸರಿ ಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನಾವು ಭಕ್ತರಿಗೆ ತೊಂದರೆ ನೀಡುವುದಿಲ್ಲ. ಅಲ್ಲದೆ ನಾವು ಇದುವರೆಗೂ ಆರಾಧಿಸುತ್ತಾ ಬಂದಿರುವ ದೇವರಿಗೂ ಅಪಚಾರ ಮಾಡುವುದಿಲ್ಲ. ಎಂದಿನಂತೆ ಬೆಳಿಗ್ಗೆ ದೇವಾ ಲಯಗಳಲ್ಲಿ ನಡೆಯುವ ಪೂಜಾ ಕೈಂಕರ್ಯವನ್ನು ನಡೆಸುತ್ತೇವೆ. ನಂತರ ಚಾಮುಂಡಿಬೆಟ್ಟದ ಚಾಮುಂ ಡೇಶ್ವರಿ ದೇವಾಲಯದ ಮುಂದೆ ಶಾಂತಿಯುತ ಸತ್ಯಾಗ್ರಹ ನಡೆಸುತ್ತೇವೆ. ಭಕ್ತರು ಎಂದಿನಂತೆ ದೇವಾಲಯಕ್ಕೆ ಬಂದು ದರ್ಶನ ಪಡೆಯಬಹುದಾಗಿದೆ. ಆದರೆ ಮಂಗ ಳಾರತಿ, ಅರ್ಚನೆ ಸೇರಿದಂತೆ ಇನ್ನಿತರ ವಿಶೇಷ ಸೇವೆ ಭಕ್ತರಿಗೆ ಲಭ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Translate »