ಹೊಸ ವರ್ಷಕ್ಕೆ ಮೈಸೂರಿನ ನೂತನ  ಜಿಲ್ಲಾಸ್ಪತ್ರೆಯಿಂದ ಆರೋಗ್ಯ ಸೇವೆ ಲಭ್ಯ
ಮೈಸೂರು

ಹೊಸ ವರ್ಷಕ್ಕೆ ಮೈಸೂರಿನ ನೂತನ ಜಿಲ್ಲಾಸ್ಪತ್ರೆಯಿಂದ ಆರೋಗ್ಯ ಸೇವೆ ಲಭ್ಯ

December 14, 2018

ಮೈಸೂರು: ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಖ್ಯಾತಿಯಾಗಿರುವ ಕೃಷ್ಣರಾಜೇಂದ್ರ (ಕೆಆರ್) ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುವ ಕಾಲ ಸಮೀಪಿಸುತ್ತಿದೆ.

ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರೆನ್ನದೆ ಸಮಾಜದ ಸರ್ವರಿಗೂ ಉಚಿತ ಆರೋಗ್ಯ ಸೇವೆ ಒದಗಿಸಬೇಕೆಂಬ ಮಹದುದ್ದೇಶದಿಂದ ಕೃಷ್ಣರಾಜೇಂದ್ರ ಒಡೆಯರ್ ಅವರು 1050 ಹಾಸಿಗೆ ಸಾಮಥ್ರ್ಯದ ಕೆ.ಆರ್. ಆಸ್ಪತ್ರೆಯನ್ನು ಆರಂಭಿಸಿದ್ದರಾದರೂ, ಬರಬರುತ್ತಾ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಜನಸಂಖ್ಯೆ ಹೆಚ್ಚುತ್ತಿ ದ್ದಂತೆಯೇ ದೊಡ್ಡಾಸ್ಪತ್ರೆ ಮೇಲೆ ಒತ್ತಡ ಜಾಸ್ತಿಯಾಯಿತು. ಮೈಸೂರು ಮಾತ್ರ ವಲ್ಲದೆ, ಸುತ್ತಲಿನ ಚಾಮರಾಜನಗರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಂದಲೂ ಕೆಆರ್ ಆಸ್ಪತ್ರೆಗೆ ರೋಗಿ ಗಳು ಬರುತ್ತಿರುವುದರಿಂದ ಇರುವ ಸಿಬ್ಬಂದಿ, ವೈದ್ಯರು, ಸಲಕರಣೆ ಹಾಗೂ ಸೌಲಭ್ಯಗಳಿಂದ ರೋಗಿಗಳ ಬೇಡಿಕೆ ಈಡೇರಿಸಿ ಗುಣಮಟ್ಟದ ಚಿಕಿತ್ಸೆ ಹಾಗೂ ಆರೋಗ್ಯ ಸೇವೆ ಪೂರೈಸಲು ಸಾಧ್ಯ ವಾಗುತ್ತಿಲ್ಲ ಎಂಬುದು ಹಲವು ವರ್ಷ ಗಳಿಂದ ಕೇಳಿ ಬರುತ್ತಿರುವ ದೂರಾಗಿದೆ.

ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಆಸ್ಪತ್ರೆಗಳಿವೆ. ಕೆ.ಆರ್. ಆಸ್ಪತ್ರೆ ಕಾರ್ಯ ನಿರ್ವಹಿಸು ತ್ತಿರುವುದರಿಂದ ಮೈಸೂರಲ್ಲಿ ಜಿಲ್ಲಾಸ್ಪತ್ರೆ ಪೂರೈಸಿರಲಿಲ್ಲ. ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಇಲ್ಲಿಗೆ ಪ್ರತ್ಯೇಕ ಜಿಲ್ಲಾಸ್ಪತ್ರೆ ಅಗತ್ಯವಿದೆ ಎಂಬುದನ್ನು ಮನವರಿಕೆ ಮಾಡಿ ಕೊಟ್ಟು, ಈ ಹಿಂದಿನ ಚಾಮರಾಜ ಕ್ಷೇತ್ರದ ಶಾಸಕರಾಗಿದ್ದ ವಾಸು ಅವರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ಗಮನ ಸೆಳೆದು ಮಂಜೂರು ಮಾಡಿಸಿದ್ದರು.

ಇಡಿ ಆಸ್ಪತ್ರೆ ಆವರಣದಲ್ಲಿ ನೂತನ ಕಟ್ಟಡ: ಸರ್ಕಾರ ಮಂಜೂರು ಮಾಡು ತ್ತಿದ್ದಂತೆಯೇ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಇಡಿ ಆಸ್ಪತ್ರೆ (ಸಾಂಕ್ರಾಮಿಕ ರೋಗಗಳ ಆಸ್ಪತ್ರೆ) ಆವರಣದಲ್ಲಿ 70 ಕೋಟಿ ರೂ. ವೆಚ್ಚದ ಜಿಲ್ಲಾಸ್ಪತ್ರೆ ಬೇಸ್ ಮೆಂಟ್ ಫ್ಲೋರ್ ಸೇರಿ 5 ಮಹಡಿಗಳ ಸುಸ ಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ. ಇದೀಗ ಕಟ್ಟಡದ ಸಿವಿಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉಳಿದ ಸಣ್ಣ ಪುಟ್ಟ ಕೆಲಸವನ್ನು 2019ರ ಜನವರಿಯೊಳಗಾಗಿ ಪೂರ್ಣಗೊಳಿಸಿ ಸುಣ್ಣ ಬಣ್ಣ ಬಳಿದು ಆರೋಗ್ಯ ಸೇವೆಗೆ ಮುಕ್ತಗೊಳಿಸಲಾಗುವುದು.

300 ಹಾಸಿಗೆ ಸಾಮಥ್ರ್ಯ: 300 ಹಾಸಿಗೆ ಗಳ ಸಾಮಥ್ರ್ಯದ ಜಿಲ್ಲಾಸ್ಪತ್ರೆ ಕಟ್ಟಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಇರುವ ಕರ್ನಾಟಕ ರಾಜ್ಯ ಆರೋಗ್ಯ ಪದ್ಧತಿ ಅಭಿವೃದ್ಧಿ ನಿಗಮದಿಂದ ಬೆಂಗಳೂರು ಮೂಲದ ಸ್ಟಾರ್ ಬಿಲ್ಡರ್ಸ್ ಸಂಸ್ಥೆ ಮೂಲಕ ಕಟ್ಟಡ ನಿರ್ಮಿಸಲಾಗಿದೆ.

ಸೌಲಭ್ಯಗಳೇನು: ನೂತನ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ರಕ್ತನಿಧಿ, ಹೊರರೋಗಿ ವಿಭಾಗ, ಶಸ್ತ್ರ ಚಿಕಿತ್ಸಾ ಕೊಠಡಿಗಳು, ಪೋಸ್ಟ್ ಆಪರೇಟಿವ್ ವಾರ್ಡ್, ಒಳರೋಗಿಗಳ ವಾರ್ಡ್‍ಗಳು, ವಿಶೇಷ ವಾರ್ಡ್‍ಗಳು, ಫಿಸಿಯೋ ಥೆರಪಿ, ಮೂಳೆ, ದಂತ, ಇಎನ್‍ಟಿ, ಚರ್ಮ ರೋಗ ವಿಭಾಗ, ಹೆರಿಗೆ ವಾರ್ಡ್, ಲೇಬರ್ ವಾರ್ಡ್‍ಗಳು ಸೇರಿದಂತೆ ಕೆಆರ್ ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆ ಗಳಲ್ಲಿರುವಂತೆ ಚಿಕಿತ್ಸಾ ಸೌಲಭ್ಯವನ್ನು ಜಿಲ್ಲಾಸ್ಪತ್ರೆಯ ಹೊಸ ಕಟ್ಟಡದಲ್ಲಿ ಒದ ಗಿಸಲಾಗುವುದು.

ಕಟ್ಟಡದ ಬೇಸ್‍ಮೆಂಟ್‍ನಲ್ಲಿ ಓಪಿಡಿ, ಗೈನಿಕ್ ಕೊಠಡಿ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಲೇಬರ್ ಕ್ಲೀನ್, ಪೋಸ್ಟ್ ಲೇಬರ್ ಲ್ಯಾಬ್, ಆಕ್ಸಿಜನ್ ಸಿಲಿಂಡರ್ ರೂಂ, ಪಿಡಿಯಾಟ್ರಿಕ್ಸ್ ವಿಭಾಗ ಇನ್ನಿತರ ಸೌಲಭ್ಯಗಳು ಬರುತ್ತವೆ.

ನೆಲಮಹಡಿಯಲ್ಲಿ ಫಾರ್ಮಸಿ, ಚುಚ್ಚು ಮದ್ದು ನೀಡುವ ಕೊಠಡಿ, ಇಸಿಜಿ, ಟ್ರೆಡ್‍ಮಿಲ್, ಎಕೋ, ರೇಡಿಯಾಲಜಿ, ಮೈನರ್ ಓಟಿ, ಸ್ಪೆಷಲ್ ವಾರ್ಡ್‍ಗಳು, ತುರ್ತು ಅಪಘಾತ ಚಿಕಿತ್ಸಾ ವಿಭಾಗ, ಆರ್ಥೋಪೆಡಿಕ್‍ಗಳು ಇರುತ್ತವೆ. ಮೊದಲನೆಯ ಹಾಗೂ ನಂತರದ ಮಹಡಿ ಗಳಲ್ಲಿ ಡರ್ಮಟಾಲಜಿ, ಯೂರಾ ಲಜಿ, ಇಎನ್‍ಟಿ, ಇಸಿಜಿ, ನ್ಯೂರಾಲಜಿ, ಆಡಳಿತ ವಿಭಾಗ, ಐಸಿಯು, ಆರ್‍ಎಂಓ ಕೊಠಡಿಗಳಂತಹ ಹಲವು ಸೌಲಭ್ಯಗಳನ್ನು ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಸ್ಪತ್ರೆ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರಾ ದರೂ, ಕಾಮಗಾರಿ ಪೂರ್ಣಗೊಳ್ಳದ ಕಾರಣ ಆರೋಗ್ಯ ಸೇವೆ ಆರಂಭವಾಗಿ ರಲಿಲ್ಲ. ಒಂದು ವೇಳೆ ಹೊಸ ಕಟ್ಟಡ ದಲ್ಲಿ ಸೇವೆಗಳು ಆರಂಭವಾದಲ್ಲಿ ಸಹಜ ವಾಗಿ ಕೆಆರ್ ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Translate »