ಶ್ರೀ ಸುಬ್ರಹ್ಮಣ್ಯ ಷಷ್ಠಿ: ಸಾವಿರಾರು ಭಕ್ತರಿಂದ ವಿಶೇಷ ಪೂಜೆ
ಮೈಸೂರು

ಶ್ರೀ ಸುಬ್ರಹ್ಮಣ್ಯ ಷಷ್ಠಿ: ಸಾವಿರಾರು ಭಕ್ತರಿಂದ ವಿಶೇಷ ಪೂಜೆ

December 14, 2018

ಮೈಸೂರು:  ಶ್ರೀಸುಬ್ರಹ್ಮಣ್ಯೇಶ್ವರ ಷಷ್ಠಿ ಅಂಗವಾಗಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಕ್ತರು ಹುತ್ತಕ್ಕೆ ಹಾಲೆರೆಯುವ ಮೂಲಕ ವಿಶೇಷ ಪೂಜೆ ನೆರವೇರಿಸಿದರು.

ಮೈಸೂರು-ಬೆಂಗಳೂರು ಹೆದ್ಧಾರಿಯ ಸಿದ್ದಲಿಂಗಪುರ ಬಳಿ ಇರುವ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯ ದಲ್ಲಿ ಭಕ್ತಿ ಭಾವದಿಂದ ಷಷ್ಠಿಯನ್ನು ಆಚರಿಸಲಾ ಯಿತು. ಮುಂಜಾನೆ 3ರಿಂದ ರಾತ್ರಿ 12 ಗಂಟೆವರೆಗೂ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.

ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಎಂ.ವಿ.ಸುಬ್ರಹ್ಮಣ್ಯ ನೇತೃತ್ವದಲ್ಲಿ ಕಳೆದ ಮಧ್ಯ ರಾತ್ರಿಯಿಂದಲೇ ದೇವರಿಗೆ ಸಂಕಲ್ಪ, ರುದ್ರಾಭಿಷೇಕ, ಕ್ಷೀರಾಭಿಷೇಕ, ಅಭಿಷೇಕ, ನೈವೇದ್ಯದಂತಹ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಮಹಾಮಂಗಳಾರತಿ ಮಾಡಿದ ನಂತರ, ಇಂದು ಮುಂಜಾನೆ 3-15 ಗಂಟೆ ಯಿಂದ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದೇವಸ್ಥಾನದ ಬಳಿ ಇರುವ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಧರ್ಮ ದರ್ಶನ ಹಾಗೂ 25 ರೂ.ನ ವಿಶೇಷ ದರ್ಶನ (ಶೀಘ್ರ ದರ್ಶನ)ಕ್ಕೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಿ ದ್ದರಿಂದ ಸಾವಿರಾರು ಮಂದಿ ಭಕ್ತಾದಿಗಳು ಸರತಿ ಸಾಲಿನಲ್ಲಿ ಸಾಗಿ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ದರ್ಶನ ಪಡೆದರು.

ಷಷ್ಠಿ ಜಾತ್ರೆ ಅಂಗವಾಗಿ ದೇವಸ್ಥಾನ ಹಾಗೂ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಮಾಡಿ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಅರ್ಚಕರಾದ ಅನಿಲ್‍ಕುಮಾರ್, ರವೀಂದ್ರ, ಹೇಮಂತ್ ಕುಮಾರ್, ವಿಶ್ವನಾಥ ಭಟ್ ಸೇರಿದಂತೆ ಹಲವರು ಹಾಜರಿದ್ದು ಪೂಜಾ ಕೈಂಕರ್ಯ ನಡೆಸಿ ಕೊಟ್ಟರು. ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿದ ಪ್ರತಿಯೊಬ್ಬರಿಗೂ ಪ್ರಸಾದ ವಿನಿಯೋಗ ಮಾಡಿದರು. ದೇವಸ್ಥಾನದ ಪಕ್ಕದಲ್ಲಿರುವ ಹುತ್ತಗಳಿಗೆ ಹಾಲು-ತುಪ್ಪ ಎರೆದು ಪೂಜೆ ಸಲ್ಲಿಸಲು ಭಕ್ತರು ಮುಗಿ ಬೀಳು ತ್ತಿದ್ದುದು ಸಾಮಾನ್ಯವಾಗಿತ್ತು. ಷಷ್ಠಿ ಜಾತ್ರೆ ನಿಮಿತ್ತ ದೇವಸ್ಥಾನದ ಬಲ ಬದಿಯ ಹೆದ್ದಾರಿಯಲ್ಲಿ ಪೂಜಾ ಸಾಮಗ್ರಿ ತಿಂಡಿ-ತಿನಿಸು, ಅಡಿಕೆ- ಅಲಂಕಾರಿಕ ವಸ್ತು ಗಳು, ಪಾನೀಯ, ಐಸ್‍ಕ್ರೀಂ ಅಂಗಡಿಗಳು ತಲೆ ಎತ್ತಿ ರಾತ್ರಿವರೆಗೂ ಭರ್ಜರಿ ವ್ಯಾಪಾರ ನಡೆಯಿತು.

ಮೈಸೂರು ತಹಸೀಲ್ದಾರ್ ಟಿ.ರಮೇಶಬಾಬು ನೇತೃತ್ವ ದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದು ದೇವರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಿ ಕೊಟ್ಟರು. ನೂಕು-ನುಗ್ಗಲು ನಿಯಂತ್ರಿಸಲು ಧ್ವನಿವರ್ಧ ಕದ ಮೂಲಕ ಪ್ರಕಟಣೆ ನೀಡುತ್ತಾ ಭಕ್ತಾದಿಗಳಿಗೆ ಸಲಹೆ-ಮಾರ್ಗದರ್ಶನ ನೀಡುತ್ತಿದ್ದದೂ ಕಂಡುಬಂದಿತು.

ಎನ್‍ಆರ್ ಉಪವಿಭಾಗದ ಎಸಿಪಿ ಸಿ.ಗೋಪಾಲ್ ಅವರು ಖುದ್ದು ಹಾಜರಿದ್ದು, ಷಷ್ಠಿ ಜಾತ್ರೆಯ ಬಂದೋ ಬಸ್ತ್ ಮೇಲ್ವಿಚಾರಣೆ ನಡೆಸಿದರು. ಮೇಟಗಳ್ಳಿ ಠಾಣೆ ಇನ್‍ಸ್ಪೆಕ್ಟರ್ ರಾಘವೇಂದ್ರಗೌಡ, ಎನ್.ಆರ್. ಠಾಣೆಯ ಇನ್ಸ್‍ಪೆಕ್ಟರ್ ಬಸವರಾಜು, ವಿಜಯನಗರ ಠಾಣೆಯ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಸೇರಿದಂತೆ 50ಕ್ಕು ಹೆಚ್ಚು ಪೊಲೀಸ್ ಸಿಬ್ಬಂದಿ ಸಿಎಆರ್ ತುಕಡಿ ಹಾಗೂ ಇದೇ ಪ್ರಥಮ ಬಾರಿ ಅಶ್ವಾರೋಹಿ ದಳದ ಸಿಬ್ಬಂದಿಯನ್ನು ದೇವ ಸ್ಥಾನದ ಬಳಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸ ಲಾಗಿತ್ತು. ಎನ್‍ಆರ್ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಡಿ.ಯೋಗೇಶ್ ಅವರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳನ್ನು ಕೊಲಂ ಬಿಯಾ ಏಷಿಯಾ ಆಸ್ಪತ್ರೆ ಬಳಿ ಮಾರ್ಗ ಬದಲಿಸಿ ಎಡಕ್ಕೆ ರಿಂಗ್ ರಸ್ತೆಯಲ್ಲಿ ಸಾಗುವಂತೆ ಸಂಚಾರ ಪೊಲೀಸರು ಸೂಚನೆ ನೀಡಿ ಕಳುಹಿಸಿದರು.

Translate »