ಮೈಸೂರು

ಡಿ. 16ಕ್ಕೆ ಹಿನಕಲ್ ಫ್ಲೈ ಓವರ್ ಉದ್ಘಾಟನೆ
ಮೈಸೂರು

ಡಿ. 16ಕ್ಕೆ ಹಿನಕಲ್ ಫ್ಲೈ ಓವರ್ ಉದ್ಘಾಟನೆ

December 11, 2018

ಮೈಸೂರು: ಮೈಸೂರಿನ ಹಿನಕಲ್ ಬಳಿ ನಿರ್ಮಿಸಿರುವ ಸಾಂಸ್ಕೃತಿಕ ನಗರಿಯ ಮೊದಲ ಫ್ಲೈಓವರ್ ಡಿಸೆಂಬರ್ 16 ರಿಂದ ಸಾರ್ವಜನಿಕರ ಸೇವೆಗೆ ಮುಕ್ತಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಫ್ಲೈಓವರ್ ಅನ್ನು ಭಾನುವಾರ ಬೆಳಿಗ್ಗೆ ಉದ್ಘಾಟನೆ ಮಾಡುವರು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಕೇಂದ್ರದ ನರ್ಮ್ ಯೋಜನೆಯಡಿ ಶೇ.60ರಷ್ಟು ಅನುದಾನ, ರಾಜ್ಯ ಸರ್ಕಾರದ ಶೇ.20 ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಶೇ.20ರಷ್ಟು ಹಣದಿಂದ ನಿರ್ಮಿಸಿರುವ ಫ್ಲೈಓವರ್ ಕಾಮಗಾರಿ ಸಂಪೂರ್ಣ ಗೊಂಡಿದ್ದು, ಬೀದಿ ದೀಪ,…

ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ
ಮೈಸೂರು

ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ

December 11, 2018

ಲಂಡನ್:  ದೇಶ ಭ್ರಷ್ಟ, ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ ನೀಡಿದೆ. ವಿಜಯ್ ಮಲ್ಯ ಗಡಿಪಾರು ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಲಂಡನ್‍ನ ವೆಸ್ಟ್‍ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್, ಹಣ ಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪ ಗಳಿಗೆ ಸಾಕ್ಷ್ಯಗಳಿದ್ದು ಗಡಿಪಾರು ಮಾಡಲು ಆದೇಶ ನೀಡಿದೆ. ವಿಜಯ್ ಮಲ್ಯ ಗಡಿಪಾರು ಮಾಡಲು ಬ್ರಿಟನ್ ಕೋರ್ಟ್ ಆದೇಶ ನೀಡಿರುವುದರ ಬಗ್ಗೆ ಸಿಬಿಐ ವಕ್ತಾರರು ಪ್ರತಿಕ್ರಿಯೆ ನೀಡಿದ್ದು “ಮಲ್ಯ ಅವರನ್ನು ಭಾರತಕ್ಕೆ ಕರೆತಂದು…

30 ಮಂದಿ ಸಾವಿಗೆ ಕಾರಣನಾಗಿದ್ದ ಬಸ್ ಚಾಲಕನ ಬಂಧನ
ಮೈಸೂರು

30 ಮಂದಿ ಸಾವಿಗೆ ಕಾರಣನಾಗಿದ್ದ ಬಸ್ ಚಾಲಕನ ಬಂಧನ

December 11, 2018

ಮಂಡ್ಯ: ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ನಾಲೆಗೆ ಬಸ್ ಉರುಳಿ 30 ಜನರನ್ನು ಬಲಿ ಪಡೆದಿದ್ದ ಬಸ್ ಚಾಲಕನನ್ನು ಭಾನುವಾರ ಬಂಧಿಸಲಾಗಿದೆ. ಬಂಧಿತ ಬಸ್ ಚಾಲಕ ಶಿವಣ್ಣ ಪೊಲೀಸರ ತನಿಖೆ ವೇಳೆ ಅಪಘಾತಕ್ಕೆ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ಚಾಲಕ ಹೇಳಿದ್ದೇನು?: ನ.24 ರಂದು ಬೆಳಿಗ್ಗೆ ಕನಗನಮರಡಿ ನಾಲೆಯ ಬಳಿ ಬರುತ್ತಿದ್ದಾಗ ಬಸ್ ನನ್ನ ನಿಯಂತ್ರಣ ತಪ್ಪಿತು. ಅದು ನಾಲೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿತ್ತು. ನಾನು ಅದನ್ನು ತಪ್ಪಿಸಲು ಪ್ರಯತ್ನಿಸಿದೆ. ಆದರೆ ದುರದೃಷ್ಟವ ಶಾತ್ ಬಸ್ ನಾಲೆಗೆ…

ಭಾರತದ ಅಲೆಮಾರಿ ಸಮುದಾಯಗಳ ಜೀವನ ಕ್ರಮ  ಅನಾವರಣಗೊಳಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

ಭಾರತದ ಅಲೆಮಾರಿ ಸಮುದಾಯಗಳ ಜೀವನ ಕ್ರಮ ಅನಾವರಣಗೊಳಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ

December 11, 2018

ಮೈಸೂರು: ಭಾರತದ ಅಲೆಮಾರಿ ಸಮುದಾಯಗಳ ಜೀವನ ಕ್ರಮ ಮತ್ತು ವೈವಿಧ್ಯಮಯ ಬದುಕನ್ನು ಸಾರುವ ವಸ್ತು ಪ್ರದರ್ಶನಕ್ಕೆ ಮಾನವ ಶಾಸ್ತ್ರ ಸಂಸ್ಥೆ ಅಧ್ಯಕ್ಷ ಪ್ರೊ. ಪ್ರಮೋದೆ ಕುಮಾರ್ ಮಿಶ್ರಾ ಸೋಮವಾರ ಚಾಲನೆ ನೀಡಿದರು. ಮೈಸೂರಿನ ಇರ್ವಿನ್ ರಸ್ತೆ ವೆಲ್ಲಿಂಗ್‍ಟನ್ ಹೌಸ್‍ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ದಕ್ಷಿಣ ಪ್ರಾದೇ ಶಿಕ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ `ಭಾರತದ ಅಲೆಮಾರಿಗಳು’ ಈ ವರ್ಷದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯ ಗಳ ಬುಡಕಟ್ಟು ಮತ್ತು…

ಕುಕ್ಕರಹಳ್ಳಿ ಕೆರೆ, ಅಲ್ಲಿರುವ ಜೀವ ವೈವಿಧ್ಯತೆ ರಕ್ಷಣೆಗೆ ಮೈಗ್ರಾಪದ  ಹತ್ತು ಹಲವು ಉಪಯುಕ್ತ ಸಲಹೆ
ಮೈಸೂರು

ಕುಕ್ಕರಹಳ್ಳಿ ಕೆರೆ, ಅಲ್ಲಿರುವ ಜೀವ ವೈವಿಧ್ಯತೆ ರಕ್ಷಣೆಗೆ ಮೈಗ್ರಾಪದ ಹತ್ತು ಹಲವು ಉಪಯುಕ್ತ ಸಲಹೆ

December 11, 2018

ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆ ಸಂರ ಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ. ಈ ಹಿನ್ನೆಲೆ ಯಲ್ಲಿ ಮೈಸೂರು ಗ್ರಾಹಕರ ಪರಿಷತ್ ಪರವಾಗಿ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಶೋಭನ ಅವರು, ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ಕಂಡ ಸಮಸ್ಯೆಗಳ ಜೊತೆಗೆ ಕೈಗೊಳ್ಳಬಹು ದಾದ ಒಂದಷ್ಟು ಪರಿಹಾರ ಕ್ರಮಗಳನ್ನು ಸೂಚಿಸಿದ್ದಾರೆ. ಕೆರೆ ಸೇರಿದಂತೆ ಸುತ್ತಲಿನ ಮಾನಸಗಂಗೋತ್ರಿ, ಸಿಎಫ್‍ಟಿಆರ್‍ಐ, ಜಿಲ್ಲಾಧಿಕಾರಿಗಳ ನಿವಾಸ ಹೀಗೆ ಸಂರಕ್ಷಿತ ವನ್ಯ ಪ್ರದೇಶಗಳಲ್ಲಿರುವ ಗುಳ್ಳೇನರಿ, ಪುನುಗು ಬೆಕ್ಕು, ಮೊಲ ಇನ್ನಿತರ ಪ್ರಾಣಿಗಳು ಆಹಾರಕ್ಕಾಗಿ ರಾತ್ರಿ ವೇಳೆ ಹೆಚ್ಚಾಗಿ ಸಂಚರಿಸುತ್ತವೆ….

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್  5ನೇ ಪುಣ್ಯಸ್ಮರಣೆ: ಸಮಾಧಿಗೆ ವಿಶೇಷ ಪೂಜೆ
ಮೈಸೂರು

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 5ನೇ ಪುಣ್ಯಸ್ಮರಣೆ: ಸಮಾಧಿಗೆ ವಿಶೇಷ ಪೂಜೆ

December 11, 2018

ಮೈಸೂರು:  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ ಮನುವನದಲ್ಲಿರುವ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮೈಸೂರು ಅರಮನೆ ಮಂಡಳಿ, ಕರ್ನಾ ಟಕ ರಾಜ್ಯ ಅರಸು ಮಹಾಸಭಾ, ಶ್ರೀರಾಮ ಸೇವಾ ಅರಸು ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಾಗೂ ನೂರಾರು ಮಂದಿ ಸಾರ್ವಜನಿಕರು ಶ್ರೀಕಂಠದತ್ತ ಒಡೆಯರ್ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದರು. ಹೂವಿನಿಂದ ಅಲಂಕೃತಗೊಂಡಿದ್ದ ಸಮಾಧಿ ಮೇಲೆ, ಒಡೆ ಯರ್ ಭಾವಚಿತ್ರವನ್ನಿಟ್ಟು, ಪೂಜೆ ಸಲ್ಲಿಸಲಾಯಿತು. ಎಲ್ಲರೂ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಮಂಗಳಾರತಿಯೊಂದಿಗೆ ನಮಿಸಿ, ಒಡೆಯರ್…

ಪಾಲಿಕೆ ಕಚೇರಿಯಿಂದ ಬಾಡಿಗೆ ಬಾಕಿಗಾಗಿ ವಾಹನ ಚಾಲಕರ ಪ್ರತಿಭಟನೆ
ಮೈಸೂರು

ಪಾಲಿಕೆ ಕಚೇರಿಯಿಂದ ಬಾಡಿಗೆ ಬಾಕಿಗಾಗಿ ವಾಹನ ಚಾಲಕರ ಪ್ರತಿಭಟನೆ

December 11, 2018

ಮೈಸೂರು:  ಮೂರು ತಿಂಗಳಿಂದ ಬಾಕಿ ಇರುವ ಬಾಡಿಗೆ ಮೊತ್ತ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ಕಚೇರಿ ಮುಂದೆ ಬಾಡಿಗೆ ವಾಹನ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು. ನಗರಪಾಲಿಕೆಯ ಟೆಂಡರ್ ಆಧಾರದ ಮೇಲೆ ಹಲವು ವಾಹನಗಳನ್ನು ಪಾಲಿಕೆ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದೆ. ಆದರೆ ಬಾಡಿಗೆ ಮೊತ್ತವನ್ನು ಸರಿಯಾಗಿ ಪಾವತಿಸುವುದಕ್ಕೆ ನಿರ್ಲಕ್ಷಿಸುತ್ತಿದೆ. ಟೆಂಡರ್‍ದಾರರು ವಾಹನ ಚಾಲಕರಿಗೆ ಕಳೆದ ಮೂರು ತಿಂಗಳಿಂದ ಹಣ ನೀಡಿಲ್ಲ. ಬಾಡಿಗೆ ಹಣ ಹೆಚ್ಚು ಮಾಡಬೇಕು ಮತ್ತು ನಿಗದಿತ ಸಮಯಕ್ಕೆ ವಾಹನದ ಬಾಡಿಗೆ ಹಣ ನೀಡುವಂತೆ…

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಅರಸು,  ರಾಜೀವ್ ಗಾಂಧಿ ಜನ್ಮ ದಿನಾಚರಣೆ
ಮೈಸೂರು

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಅರಸು, ರಾಜೀವ್ ಗಾಂಧಿ ಜನ್ಮ ದಿನಾಚರಣೆ

December 11, 2018

ಮೈಸೂರು:  ಮೈಸೂ ರಿನ ಜೆಎಲ್‍ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿಣಿ ಸಭೆಯನ್ನು ಸಂಸದ ಆರ್.ಧ್ರುವನಾರಾಯಣ್ ಉದ್ಘಾಟಿಸಿದರು. ಮೈಸೂರು ಜಿಲ್ಲಾ ಮತ್ತು ನಗರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಜನ್ಮ ದಿನಾ ಚರಣೆ ಹಾಗೂ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಸಂಸದ ಆರ್.ಧ್ರುವ ನಾರಾಯಣ್, ಡಿ.ದೇವರಾಜ ಅರಸು ಅವರು ನಮ್ಮ ಮೈಸೂರು ಜಿಲ್ಲೆಯವರಾಗಿ…

ಸಿದ್ದಗಂಗಾ ಶ್ರೀಗಳ ಚಿಕಿತ್ಸಾ ವಿಚಾರದಲ್ಲಿ ಡಿಕೆಶಿ ಹೇಳಿಕೆಗೆ ಖಂಡನೆ
ಮೈಸೂರು

ಸಿದ್ದಗಂಗಾ ಶ್ರೀಗಳ ಚಿಕಿತ್ಸಾ ವಿಚಾರದಲ್ಲಿ ಡಿಕೆಶಿ ಹೇಳಿಕೆಗೆ ಖಂಡನೆ

December 11, 2018

ಬೆಳಗಾವಿ(ಸುವರ್ಣಸೌಧ):  ಸಿದ್ದಗಂಗಾ ಶ್ರೀಗಳು ಆರೋಗ್ಯ ವಾಗಿದ್ದಾರೆ. ಚಿಕಿತ್ಸೆಗೆ ತುಂಬಾ ಚೆನ್ನಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾರೂ ಕೂಡ ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿಲ್ಲ. ಅಲ್ಲಿನ ಅಲ್ಪಸಂಖ್ಯಾತರ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವ ಕುಮಾರ್ ನೀಡಿದ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿ ರುವ ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ, ವೈದ್ಯರಿಗೆ ಯಾವುದೇ ಧರ್ಮವಿಲ್ಲ. ಅದರಲ್ಲೂ ಸಿದ್ದಗಂಗಾ ಶ್ರೀಗಳಂತಹ ಮಹಾ ಗುರುಗಳ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಅವರು ಸಂಕುಚಿತ ಮನೋಭಾವ…

`ಬೆಳಕು’ ವಿಷಯದ ಸಂಚಾರಿ  ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ
ಮೈಸೂರು

`ಬೆಳಕು’ ವಿಷಯದ ಸಂಚಾರಿ  ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ

December 11, 2018

ಮೈಸೂರು: ವಿಜ್ಞಾನ ಕಲಿಕೆ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಆಸಕ್ತಿ ಉಂಟು ಮಾಡುವ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ (ಸಿಡಿ ಎಸ್‍ಎಸ್) ಮತ್ತು ಎಕ್ಸೆಲ್ ಟ್ರಸ್ಟ್ ಜಂಟಿ ಯಾಗಿ 2018-19ನೆ ಸಾಲಿನ ವಿಜ್ಞಾನ ಕಾರ್ಯಕ್ರಮಗಳು ಮತ್ತು `ಬೆಳಕು’ ವಿಷ ಯದ ಸಂಚಾರಿ ವಿಜ್ಞಾನ ಪ್ರಯೋಗಾ ಲಯಕ್ಕೆ ಮೈಸೂರಿನ ಹೊರವಲಯದ ಹೂಟಗಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಗಣಿತ, ಪ್ರಾಣಿಶಾಸ್ತ್ರಗಳಲ್ಲಿ ಬೆಳಕಿನ ಮಹತ್ವ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾತ್ಯ…

1 1,237 1,238 1,239 1,240 1,241 1,611
Translate »