ಮೈಸೂರು

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
ಮೈಸೂರು

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

December 10, 2018

ಮಡಿಕೇರಿ: ಕೊಡಗಿಗೆ ಅತ್ಯಂತ ಸನಿಹದ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಟ್ಟನೂರಿ ನಲ್ಲಿರುವ ಕಣ್ಣೂರು ಇಂಟರ್ ನ್ಯಾಷನಲ್ ಏರ್‍ಪೋರ್ಟ್ ವಿಧ್ಯುಕ್ತವಾಗಿ ಲೋಕಾರ್ಪಣೆಗೊಂಡಿದೆ. ಬಹಳ ವರ್ಷಗಳ ಕನಸಾಗಿದ್ದ 3 ಸಾವಿರ ಕೋಟಿ ರೂಪಾಯಿ ವೆಚ್ಚದ ಕಣ್ಣೂರು ಅಂತಾರಾಷ್ಟ್ರೀಯ ಏರ್‍ಪೋರ್ಟ್‍ನಿಂದ ಮೊದಲ ವಿಮಾನ ದಲ್ಲಿ ಕೊಡಗಿನ ಕೆಲ ಪ್ರಯಾಣಿಕರೂ ಸೇರಿದಂತೆ 136 ಪ್ರಯಾ ಣಿಕರು ಇಂದು ಬೆಳಿಗ್ಗೆ 10.10ಕ್ಕೆ ಅಬುದಾಬಿಗೆ ಹಾರಿದ್ದಾರೆ. ಮಟ್ಟನೂರಿನಲ್ಲಿ ಆಯೋಜಿತ ವಿಜೃಂಭಣೆಯ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ…

ಕುಶಾಲನಗರ ಬಳಿ ವೈದ್ಯರ ಹತ್ಯೆ
ಮೈಸೂರು

ಕುಶಾಲನಗರ ಬಳಿ ವೈದ್ಯರ ಹತ್ಯೆ

December 10, 2018

ಬೈಲಕುಪ್ಪೆ: ಕುಶಾಲನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಖಾಸಗಿ ವೈದ್ಯ ರೊಬ್ಬರನ್ನು ಬೈಲು ಕುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಪ್ಪದಲ್ಲಿ ಉಸಿರು ಗಟ್ಟಿಸಿ ಹತ್ಯೆ ಮಾಡಲಾಗಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆ ಬಾಸನ್‍ಖಾನ್ ಗ್ರಾಮದವರಾಗಿದ್ದು, ಕುಶಾಲನಗರದಲ್ಲಿ ಕ್ಲಿನಿಕ್ ನಡೆಸುತ್ತಾ ಕೊಪ್ಪ ಗ್ರಾಮದ ಬಿ.ಎಂ. ರಸ್ತೆಯ ಮನೆ ಯೊಂದರಲ್ಲಿ ವಾಸವಾಗಿದ್ದ ಡಾ. ದಿಲೀಪ್ (56) ಹತ್ಯೆಗೊಳಗಾದವರು. ಇವರು ಶನಿವಾರ ಸಂಜೆ ಕುಶಾಲನಗರದಲ್ಲಿ ಕ್ಲಿನಿಕ್ ಕೆಲಸ ಮುಗಿಸಿಕೊಂಡು ಕೊಪ್ಪದ ಮನೆಗೆ ಆಗಮಿಸಿದ್ದರು. ಇಂದು ಬೆಳಿಗ್ಗೆ ಅಕ್ಕಪಕ್ಕದ ನಿವಾಸಿಗಳು ಗಮನಿಸಿ ದಾಗ ಇವರ ಹತ್ಯೆ ಆಗಿರುವುದು…

ಸಿಎಂ ಭತ್ತ ಕಟಾವು ಮಾಡಿದ್ದು ಶೋಕಿಗಾಗಿ
ಮೈಸೂರು

ಸಿಎಂ ಭತ್ತ ಕಟಾವು ಮಾಡಿದ್ದು ಶೋಕಿಗಾಗಿ

December 10, 2018

ಬೆಳಗಾವಿ: ರೈತರ ಬಗ್ಗೆ ಕಾಳಜಿ ಇಲ್ಲದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಮಂಡ್ಯದಲ್ಲಿ ಭತ್ತ ಕಟಾವು ಮಾಡಿದ್ದು ಕೇವಲ ಶೋಕಿಗೋಸ್ಕರ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. ಭಾನುವಾರ ಬೆಳಗಾವಿಯಲ್ಲಿ ಪತ್ರ ಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸಂಪೂರ್ಣ ರೈತರ ಮೇಲಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರ ಸ್ವಾಮಿ, `ಉತ್ತರ ಕರ್ನಾಟಕದ ರೈತರು ಮತದಾನ ಮಾಡುವಾಗ ಕುಮಾರಸ್ವಾಮಿ ನೆನಪಿಗೆ ಬರಲಿಲ್ವಾ’ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಸಿಎಂ…

ಕಾರಂಜಿಕೆರೆ, ಕುಕ್ಕರಹಳ್ಳಿ, ಲಿಂಗಾಂಬುಧಿ ಕೆರೆ ಅಭಿವೃದ್ಧಿಗೆ ಸರ್ಕಾರ ಬದ್ಧ
ಮೈಸೂರು

ಕಾರಂಜಿಕೆರೆ, ಕುಕ್ಕರಹಳ್ಳಿ, ಲಿಂಗಾಂಬುಧಿ ಕೆರೆ ಅಭಿವೃದ್ಧಿಗೆ ಸರ್ಕಾರ ಬದ್ಧ

December 10, 2018

ಮೈಸೂರು: ಮೈಸೂರು ನಗರದ ಮೂರು ಪ್ರಮುಖ ಕೆರೆಗಳಾದ ಕಾರಂಜಿಕೆರೆ, ಕುಕ್ಕರಹಳ್ಳಿ ಹಾಗೂ ಲಿಂಗಾಂಬುಧಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡಿದೆ ಎಂದು ಪ್ರವಾಸೋಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಕಾರಂಜಿಕೆರೆಗೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಮೈಸೂರಿಗೆ ಬರುವ ಪ್ರವಾಸಿಗರು ಹಾಗೂ ಮೈಸೂರಿನ ನಿವಾಸಿಗಳಿಗೆ ಈ ಮೂರು ಕೆರೆಗಳಲ್ಲಿ ಉತ್ತಮವಾದ ವಾತಾವರಣ ಸೃಷ್ಟಿಸಿ ಕೊಡುಗೆ ನೀಡುವುದರೊಂದಿಗೆ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳುವುದಕ್ಕಾಗಿ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾ ಗಿದೆ. ಕುಕ್ಕರಹಳ್ಳಿ,…

ರೇಸ್‍ಕೋರ್ಸ್ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ
ಮೈಸೂರು

ರೇಸ್‍ಕೋರ್ಸ್ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ

December 10, 2018

ಮೈಸೂರು: ಮೈಸೂರಿನ ಹೃದಯ ಭಾಗದಲ್ಲಿ ರುವ ಲೋಕೋಪಯೋಗಿ ಇಲಾಖೆಗೆ ಸೇರಿದ 139 ಎಕರೆ ಭೂಮಿಯಲ್ಲಿ ನಡೆಯುತ್ತಿರುವ ರೇಸ್‍ಕೋರ್ಸ್ ಅನ್ನು ಸ್ಥಳಾಂತರಗೊಳಿಸುವ ನನ್ನ ನಿರ್ಧಾರಕ್ಕೆ ಬದ್ದವಾಗಿದ್ದು, ಅಧಿವೇಶನದ ನಂತರ ಅಂತಿಮ ಸುತ್ತಿನ ಮಾತುಕತೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೇಸ್‍ಕೋರ್ಸ್‍ನಲ್ಲಿ ಅಕ್ರಮವಾಗಿ 600ಕ್ಕೂ ಹೆಚ್ಚು ಶೆಡ್‍ಗಳನ್ನು ನಿರ್ಮಿಸಿ ಉತ್ತರ ಭಾರತದ ವಿವಿಧ ರಾಜ್ಯಗಳ ನೂರಾರು ಮಂದಿ ನೆಲೆಸಿದ್ದರು. ಸರ್ಕಾರ ಕುದುರೆ ಓಡಿಸುವುದಕ್ಕೆ ಮಾತ್ರ ಅನುಮತಿ ನೀಡಿತ್ತು….

ಪೊಲೀಸರೇ ನಿಯಮ ಉಲ್ಲಂಘಿಸಿದಾಗ…! ಸಾಮಾಜಿಕ ಜಾಲತಾಣದಲ್ಲಿ ಯುವಕ ತರಾಟೆ
ಮೈಸೂರು

ಪೊಲೀಸರೇ ನಿಯಮ ಉಲ್ಲಂಘಿಸಿದಾಗ…! ಸಾಮಾಜಿಕ ಜಾಲತಾಣದಲ್ಲಿ ಯುವಕ ತರಾಟೆ

December 10, 2018

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸಿರುವ ಬಗ್ಗೆ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ತರಾಟೆ ತೆಗೆದುಕೊಂಡಿದ್ದಾನೆ. ಮೈಸೂರಿನ ದೇವರಾಜ ಸಂಚಾರ ಠಾಣೆಯ ಮುಂಭಾಗ ನೋ ಪಾರ್ಕಿಂಗ್ ಫಲಕ ಅಳವಡಿಸಿರುವ ಸ್ಥಳದಲ್ಲೇ ಟೋಯಿಂಗ್ ವಾಹನ(ಟೈಗರ್)ವನ್ನು ಪಾರ್ಕಿಂಗ್ ಮಾಡಿರುವುದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿ ರುವ ಯುವಕ, `ಸಾರ್ವಜನಿಕರಿಗೊಂದು ನ್ಯಾಯ, ಪೊಲೀಸ ರಿಗೆ ಮತ್ತೊಂದು ನ್ಯಾಯವೇ?’ ಎಂದು ಪ್ರಶ್ನಿಸಿದ್ದಾನೆ. ಸ್ನೇಹಿತನೊಂದಿಗೆ ಡಿ.8ರ ಸಂಜೆ 4.15ರ ವೇಳೆಯಲ್ಲಿ ದೇವರಾಜ ಸಂಚಾರ ಪೊಲೀಸ್ ಠಾಣೆ ಬಳಿ…

ಅರಣ್ಯ ಇಲಾಖೆಯಿಂದ ಮೈಸೂರಿನ ಎರಡು ಉದ್ಯಾನಗಳ ಅಭಿವೃದ್ಧಿ
ಮೈಸೂರು

ಅರಣ್ಯ ಇಲಾಖೆಯಿಂದ ಮೈಸೂರಿನ ಎರಡು ಉದ್ಯಾನಗಳ ಅಭಿವೃದ್ಧಿ

December 10, 2018

ಮೈಸೂರು: ಮೈಸೂರಿನ ರಾಮಕೃಷ್ಣನಗರದ ಲಿಂಗಾಂ ಬುಧಿ ನಗರ ಉದ್ಯಾನವನ ಹಾಗೂ ಜಯನಗರ ಮಳಲವಾಡಿ ಕೆರೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿದ್ದು, ಈ ಎರಡೂ ಉದ್ಯಾನವನಗಳನ್ನು ಭಾನುವಾರ ಸಾರ್ವ ಜನಿಕರಿಗೆ ಸಮರ್ಪಿಸಲಾಯಿತು. ಕೇಂದ್ರ ಸರ್ಕಾರದ 139 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದ 35 ಲಕ್ಷ ಸೇರಿ ದಂತೆ ಒಟ್ಟು 174 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಲಿಂಗಾಂಬುದಿ ನಗರ ಉದ್ಯಾನವನವನ್ನು ಸಂಸದ ಪ್ರತಾಪಸಿಂಹ ಉದ್ಘಾಟಿಸಿದರೆ, ರಾಜ್ಯ ಸರ್ಕಾರದ 61 ಲಕ್ಷ ರೂ….

ಆಯುರ್ವೇದ ಕಾಲೇಜು ಅಂಗಳದಲ್ಲಿ `ಹಳೆ’ ವಿದ್ಯಾರ್ಥಿಗಳ ಸಂಭ್ರಮ
ಮೈಸೂರು

ಆಯುರ್ವೇದ ಕಾಲೇಜು ಅಂಗಳದಲ್ಲಿ `ಹಳೆ’ ವಿದ್ಯಾರ್ಥಿಗಳ ಸಂಭ್ರಮ

December 10, 2018

ಮೈಸೂರು: ಆ ದಿನ ಗಳು ಅಲ್ಲಿದ್ದ ಪ್ರತಿಯೊಬ್ಬರ ಮನದಾಳ ದಲ್ಲಿ ಅನಾವರಣಗೊಳ್ಳುತ್ತಿದ್ದವು. ಅಂದಿನ ಕಾಲೇಜು ದಿನಗಳ ಸಂತಸದ ಕ್ಷಣಗಳು ನೆರೆದವರಲ್ಲಿ ತೆರೆದುಕೊಳ್ಳುತ್ತಿದ್ದವು. ಪರಸ್ಪರ ಕುಶಲೋಪರಿ ವಿಚಾರಿಸುತ್ತ ಸಂಭ್ರಮಿಸುತ್ತಿದ್ದರು. ಒಂದು ಕಾಲು ಶತಮಾನಕ್ಕೂ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿರುವ ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭಾನುವಾರ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಮ್ಮಿ ಕೊಂಡಿದ್ದ ‘ಹಳೇ ವಿದ್ಯಾರ್ಥಿಗಳ ಮಿಲನ ಕೂಟ’ದಲ್ಲಿ ಸಡಗರ ಮನೆ ಮಾಡಿತ್ತು. ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಸಂಸ್ಥೆಯ ನಾಲ್ವಡಿ ಕೃಷ್ಣರಾಜ…

ಮೈಸೂರಿನ ವಿಮಾನ ನಿಲ್ದಾಣ, ರೈಲ್ವೆ ಅಭಿವೃದ್ಧಿಗೆ ಹೆಚ್ಚು ಸ್ಪಂದಿಸಿದ ಜಿಟಿಡಿ
ಮೈಸೂರು

ಮೈಸೂರಿನ ವಿಮಾನ ನಿಲ್ದಾಣ, ರೈಲ್ವೆ ಅಭಿವೃದ್ಧಿಗೆ ಹೆಚ್ಚು ಸ್ಪಂದಿಸಿದ ಜಿಟಿಡಿ

December 10, 2018

ಸಂಸದ ಪ್ರತಾಪಸಿಂಹರಿಂದ ಜಿ.ಟಿ. ದೇವೇಗೌಡರ ಗುಣಗಾನ ಮೈಸೂರು: ವಾರ್ಷಿಕ 33 ಲಕ್ಷ ಪ್ರವಾಸಿಗರು ಭೇಟಿ ನೀಡುವ ಮೈಸೂರಿನ ವಿಮಾನ ನಿಲ್ದಾಣ ಮತ್ತು ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂ ಸ್ವಾಧೀನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಉತ್ತಮವಾಗಿ ಸ್ಪಂದಿಸಿದ್ದರ ಪರಿಣಾಮವಾಗಿ ವಿಮಾನ ನಿಲ್ದಾಣ ಮತ್ತು ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ನಡೆಯಲು ನೆರವಾಗಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಇಂದಿಲ್ಲಿ ಸಚಿವ ಜಿ.ಟಿ.ದೇವೇಗೌಡರ ಬಗ್ಗೆ ಅಪಾರ ಗುಣಗಾನ ಮಾಡಿದರು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಎ-3, ಎ-4 ವಿಮಾನಗ ಳನ್ನು…

ಮೈಸೂರು ಸಂಚಾರ ಪೊಲೀಸರಿಗೆ `ಮೈಗ್ರಾಪ’ ಪ್ರಶ್ನೆಗಳ ಸುರಿಮಳೆ
ಮೈಸೂರು

ಮೈಸೂರು ಸಂಚಾರ ಪೊಲೀಸರಿಗೆ `ಮೈಗ್ರಾಪ’ ಪ್ರಶ್ನೆಗಳ ಸುರಿಮಳೆ

December 10, 2018

ಮೈಸೂರು: ಮೈಸೂರು ಮಹಾ ನಗರ ಪಾಲಿಕೆ ಅಧಿ ಕಾರಿಗಳು, ಸಂಚಾರ ಪೊಲೀಸರ ಜೊತೆ ಚರ್ಚಿಸದೆ, ನಗರದ ಪ್ರಮುಖ ರಸ್ತೆಗಳಿಗೆ ಡುಬ್ಬ ಹಾಗೂ ಡಿವೈಡರ್‍ಗಳನ್ನು ಅಳ ವಡಿಸುತ್ತಾರೆ. ಅಲ್ಲದೆ, ನಮ್ಮ ಇಲಾಖೆ ಯಿಂದ ಸಂಚಾರ ನಿರ್ವಹಣೆ ಬಗ್ಗೆ ಸಾರ್ವ ಜನಿಕರ ಅಭಿಪ್ರಾಯವನ್ನು ಕ್ರೋಢೀಕರಿಸಿ ಕಳುಹಿಸಿ ಕೊಡುವ ಪಟ್ಟಿಗೆ ಹಣಕಾಸಿನ ಕೊರತೆ ಎಂದು ಸಬೂಬು ಹೇಳುತ್ತಾರೆ ಎಂದು ವಿವಿ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಸಿ.ವಿ.ರವಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಯಾದವಗಿರಿ ಮೈಗ್ರಾಪ ಕಚೇರಿ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಸಾಮಾನ್ಯ…

1 1,239 1,240 1,241 1,242 1,243 1,611
Translate »