ಆಯುರ್ವೇದ ಕಾಲೇಜು ಅಂಗಳದಲ್ಲಿ `ಹಳೆ’ ವಿದ್ಯಾರ್ಥಿಗಳ ಸಂಭ್ರಮ
ಮೈಸೂರು

ಆಯುರ್ವೇದ ಕಾಲೇಜು ಅಂಗಳದಲ್ಲಿ `ಹಳೆ’ ವಿದ್ಯಾರ್ಥಿಗಳ ಸಂಭ್ರಮ

December 10, 2018

ಮೈಸೂರು: ಆ ದಿನ ಗಳು ಅಲ್ಲಿದ್ದ ಪ್ರತಿಯೊಬ್ಬರ ಮನದಾಳ ದಲ್ಲಿ ಅನಾವರಣಗೊಳ್ಳುತ್ತಿದ್ದವು. ಅಂದಿನ ಕಾಲೇಜು ದಿನಗಳ ಸಂತಸದ ಕ್ಷಣಗಳು ನೆರೆದವರಲ್ಲಿ ತೆರೆದುಕೊಳ್ಳುತ್ತಿದ್ದವು. ಪರಸ್ಪರ ಕುಶಲೋಪರಿ ವಿಚಾರಿಸುತ್ತ ಸಂಭ್ರಮಿಸುತ್ತಿದ್ದರು.
ಒಂದು ಕಾಲು ಶತಮಾನಕ್ಕೂ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿರುವ ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭಾನುವಾರ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಮ್ಮಿ ಕೊಂಡಿದ್ದ ‘ಹಳೇ ವಿದ್ಯಾರ್ಥಿಗಳ ಮಿಲನ ಕೂಟ’ದಲ್ಲಿ ಸಡಗರ ಮನೆ ಮಾಡಿತ್ತು.

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಸಂಸ್ಥೆಯ ನಾಲ್ವಡಿ ಕೃಷ್ಣರಾಜ ಒಡೆ ಯರ್ ಸಭಾಂಗಣದಲ್ಲಿ ನಡೆದ ಮಿಲನ ಕೂಟದಲ್ಲಿ 300ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿ ಗಳು ತಮ್ಮ ಕಾಲೇಜು ದಿನಗಳ ಸಹಪಾಠಿ ಗಳನ್ನು ಕಂಡು ಪುಳಕಗೊಂಡರಲ್ಲದೆ, ಪರ ಸ್ಪರ ಕುಶಲೋಪರಿ ವಿಚಾರಿಸಿ ಸಂಭ್ರಮಿ ಸಿದರು. ಕಾಲೇಜಿನ ಆ ದಿನಗಳ ನೆನಪಿಗೆ ಜಾರಿದ ಹಳೇ ವಿದ್ಯಾರ್ಥಿಗಳು, ಅಂದಿನ ತಮ್ಮ ದಿನಚರಿ, ತುಂಟಾಟಗಳು ಹಾಗೂ ಪಾಠ ಪ್ರವಚನಗಳ ಬಗೆಗಿನ ಚರ್ಚೆಯಲ್ಲಿ ಮುಳುಗಿದ್ದರು. ಅಲ್ಲದೆ, ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಿರುವ ಬದಲಾವಣೆ ಗಳನ್ನು ಕುತೂಹಲದಿಂದ ತಿಳಿದು ಕೊಳ್ಳುತ್ತ ಇಂದಿನ ಕಾಲೇಜು ಭೇಟಿಯನ್ನು ಸಡಗರದಿಂದ ಕಳೆದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂ ಗಣದಲ್ಲಿ ನಡೆದ ಮಿಲನಕೂಟದ ಉದ್ಘಾ ಟನಾ ಸಮಾರಂಭವನ್ನು ಉದ್ಘಾಟಿಸಿದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಜೆ.ಜಿ.ವಿಶ್ವನಾಥಯ್ಯ ಮಾತನಾಡಿ, ನಮ್ಮ ಈ ಸಂಸ್ಥೆ ಆಯುರ್ವೇದ ವೈದ್ಯ ಪದ್ಧತಿ ಯಲ್ಲಿ ತನ್ನದೇ ಛಾಪು ಮೂಡಿಸಿದೆ. ದೇಶದ ಉತ್ತಮ ಆಯುರ್ವೇದ ಶಿಕ್ಷಣ ಮತ್ತು ವೈದ್ಯ ಸಂಸ್ಥೆಗಳ ಸಾಲಿನಲ್ಲಿ ನಮ್ಮ ಸಂಸ್ಥೆಯೂ ಸ್ಥಾನ ಪಡೆದಿದೆ. ಇದರ ಕೀರ್ತಿಯನ್ನು ಮತ್ತಷ್ಟು ವೃದ್ಧಿಸಲು ಹಳೇ ವಿದ್ಯಾರ್ಥಿಗಳ ಸಂಘ ಸದಾ ಬೆಂಬಲವಾಗಿ ನಿಲ್ಲಬೇಕು ಎಂದರು.

ಬಳಿಕ ಹಳೇ ವಿದ್ಯಾರ್ಥಿಗಳಾದ ಡಾ. ಅರುಣಾ ಮಂಗಳಗಿ, ಡಾ.ಮನೋನ್ಮಣಿ, ಡಾ.ಶಾಂತರಾಮ್, ಡಾ.ಸುಧಾಂಶು ಹಾಗೂ ಡಾ.ಪದ್ಮಗುಪ್ತ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಜೊತೆಗೆ ಹಳೇ ವಿದ್ಯಾರ್ಥಿಗಳು ತಮ್ಮ ಸಾಂಸ್ಕøತಿಕ ಪ್ರತಿಭೆಯನ್ನು ಅನಾವರಣಗೊಳಿಸಿ ತಮ್ಮ ಕಲಾ ಕೌಶಲ ಮೆರೆದರು.

ಇದೇ ವೇಳೆ ಸಂಘದ ನೂತನ ಪದಾ ಧಿಕಾರಿಗಳ ಆಯ್ಕೆಗೆ ಚುನಾವಣೆ ಘೋಷಣೆ ಮಾಡಿ ಉಮೇದುವಾರಿಕೆ ಸ್ವೀಕರಿಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾಲೇಜಿನ ಪ್ರಾಂಶು ಪಾಲ ಡಾ.ಗಜಾನನ ಹೆಗ್ಡೆ, ಆಯುಷ್ ಇಲಾಖೆ ಜಂಟಿ ನಿರ್ದೇಶಕ ಹಾಗೂ ಹಳೇ ವಿದ್ಯಾರ್ಥಿಯೂ ಆದ ಡಾ.ಶ್ರೀಧರ್, ಸಂಘದ ಸಂಘಟನಾ ಸಂಚಾಲಕ ಡಾ.ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.

ಹಳೇ ವಿದ್ಯಾರ್ಥಿ ಸಂಘಕ್ಕೆ ಡಾ.ಅನಿಲ್‍ಕುಮಾರ್ ಅಧ್ಯಕ್ಷ
ಮೈಸೂರು: ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ಭಾನು ವಾರ ಹಮ್ಮಿಕೊಂಡಿದ್ದ ಮಿಲನಕೂಟದಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.
ಎಲ್ಲಾ ಸ್ಥಾನಗಳಿಗೂ ಒಬ್ಬೊಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಲಾಯಿತು. ಅಧ್ಯಕ್ಷ ರಾಗಿ ಡಾ.ಅನಿಲ್‍ಕುಮಾರ್, ಉಪಾಧ್ಯಕ್ಷರಾಗಿ ಡಾ.ವೇದಾವತಿ ಹಾಗೂ ಡಾ.ರಾಜು ನ್ಯಾಮಗೌಡ, ಕಾರ್ಯದರ್ಶಿಗಳಾಗಿ ಡಾ.ಶ್ರೀವತ್ಸ ಹಾಗೂ ಡಾ.ರಾಜೇಂದ್ರ ಮಾರ್ಕುಂಬಿ, ಜಂಟಿ ಕಾರ್ಯದರ್ಶಿಗಳಾಗಿ ಡಾ.ಸುನಿತಾ ರಾಣಿ, ಡಾ.ದಿನೇಶ್ ಶೆಟ್ಟಿ ಹಾಗೂ ಡಾ. ಹರಿಕೃಷ್ಣ, ಖಜಾಂಚಿಯಾಗಿ ಡಾ.ಕೆ.ಎನ್.ಕೃಷ್ಣಮೂರ್ತಿ, ಸಾಂಸ್ಕøತಿಕ ಕಾರ್ಯ ದರ್ಶಿಯಾಗಿ ಡಾ.ಗಣೇಶ್‍ರಾವ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ರಾಮರಾವ್, ಡಾ. ಎಸ್.ಎಲ್.ನಾರಾಯಣ, ಡಾ. ಸುಬ್ರಹ್ಮಣ್ಯ ರಾವ್, ಡಾ.ಎಂ.ಡಿ.ಸಂಜಯ್ ಕುಮಾರ್, ಡಾ.ಕೆ.ಪಾಂಡುರಂಗ, ಡಾ.ಸುಧಾಂಶು, ಸಲಹಾ ಸಮಿತಿ ಸದಸ್ಯರಾಗಿ ಡಾ.ಜೆ.ಜಿ.ವಿಶ್ವನಾಥಯ್ಯ, ಡಾ.ಅಪ್ರಮೇಯ ರಾಮನ್, ಡಾ.ಎ.ಎಸ್.ಚಂದ್ರ ಶೇಖರ್ ಅವರು ಅವಿರೋಧವಾಗಿ ಆಯ್ಕೆಗೊಂಡರು.

Translate »