ಅರಣ್ಯ ಇಲಾಖೆಯಿಂದ ಮೈಸೂರಿನ ಎರಡು ಉದ್ಯಾನಗಳ ಅಭಿವೃದ್ಧಿ
ಮೈಸೂರು

ಅರಣ್ಯ ಇಲಾಖೆಯಿಂದ ಮೈಸೂರಿನ ಎರಡು ಉದ್ಯಾನಗಳ ಅಭಿವೃದ್ಧಿ

December 10, 2018

ಮೈಸೂರು: ಮೈಸೂರಿನ ರಾಮಕೃಷ್ಣನಗರದ ಲಿಂಗಾಂ ಬುಧಿ ನಗರ ಉದ್ಯಾನವನ ಹಾಗೂ ಜಯನಗರ ಮಳಲವಾಡಿ ಕೆರೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿದ್ದು, ಈ ಎರಡೂ ಉದ್ಯಾನವನಗಳನ್ನು ಭಾನುವಾರ ಸಾರ್ವ ಜನಿಕರಿಗೆ ಸಮರ್ಪಿಸಲಾಯಿತು.

ಕೇಂದ್ರ ಸರ್ಕಾರದ 139 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದ 35 ಲಕ್ಷ ಸೇರಿ ದಂತೆ ಒಟ್ಟು 174 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಲಿಂಗಾಂಬುದಿ ನಗರ ಉದ್ಯಾನವನವನ್ನು ಸಂಸದ ಪ್ರತಾಪಸಿಂಹ ಉದ್ಘಾಟಿಸಿದರೆ, ರಾಜ್ಯ ಸರ್ಕಾರದ 61 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಉದ್ಘಾಟಿಸಿದರು.

ಲಿಂಗಾಂಬುಧಿ ನಗರ ಉದ್ಯಾನವನ ದಲ್ಲಿ ಅರಣ್ಯ ಇಲಾಖೆ ವಶದಲ್ಲಿರುವ 87.64 ಹೆಕ್ಟೇರ್ ಪ್ರದೇಶದಲ್ಲಿ ವಾಯು ವಿಹಾರಿ ಗಳಿಗೆ ರಸ್ತೆ, ವಿಶ್ರಾಂತಿ ಆಸನ, ಸಸ್ಯ ಸಂಗ್ರಹಾಲಯ, ವ್ಯಾಯಾಮ ಸಲಕರಣೆ, ಧ್ಯಾನಕ್ಕಾಗಿ ಪರಗೋಲ, ಪಕ್ಷಿ ವೀಕ್ಷಣೆ, ಸೂಚನಾ ಫಲಕ, ಮಕ್ಕಳ ಅಟಿಕೆ ಮೈದಾನ, ಕುಡಿಯುವ ನೀರಿನ ಘಟಕ, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಭಿವೃದ್ಧಿ ಪಡಿಸಲಾಗಿದೆ. ಹಣ್ಣು ಬಿಡುವ 4200 ಗಿಡಗಳನ್ನು ನೆಡಲಾಗಿದ್ದು, ಬೃಹದಾಕಾರ ವಾಗಿ ಬೆಳೆಯುವ ರುದ್ರಾಕ್ಷಿ, ಎಬೋನಿ, ದೇವದಾರು ಮತ್ತು ತೀರಾ ಅಪರೂಪದ ಜಾತಿಯ ಗಿಡಗಳನ್ನು ಒಳಗೊಂಡಂತೆ ಸಸ್ಯ ಸಂಗ್ರಹಾಲಯ ನಿರ್ಮಿಸಲಾಗಿದೆ.

ಜಯನಗರದ ಮಳಲವಾಡಿಕೆರೆ 33 ಎಕರೆ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವಾಗಿ ಅಭಿವೃದ್ಧಿಪಡಿಸ ಲಾಗಿದ್ದು, ವಾಯು ವಿಹಾರಿಗಳಿಗೆ ರಸ್ತೆ, ಮಕ್ಕಳ ಆಟಿಕೆ ಮೈದಾನ, ಪರಗೋಲ, ಶೌಚಾಲಯ, ಮುಂಭಾಗದ ದ್ವಾರದಲ್ಲಿ ಬೆಂಚ್‍ಗಳು, ಸಂದೇಶ ಸೂಚನಾ ಫಲಕ ಗಳನ್ನು ಒಳಗೊಂಡಿದೆ. ಆಲ ಅತ್ತಿ, ನೇರಳೆ ಹಣ್ಣು ಬಿಡುಗೆ ಸಸ್ಯಗಳನ್ನು ಒಳಗೊಂಡ 1800 ಗಿಡಗಳನ್ನು ನೆಡಲಾಗಿದೆ ಎಂದು ಈ ಸಂದರ್ಭದಲ್ಲಿ ಮೈಸೂರು ವೃತ್ತ ಉಪ ಅರಣ್ಯು ಸಂರಕ್ಷಣಾಧಿಕಾರಿ ಡಾ. ಕೆ.ಟಿ.ಹನುಮಂತಪ್ಪ ತಿಳಿಸಿದರು.

ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಸದಸ್ಯರಾದ ಎಂ.ಎಸ್.ಶೋಭಾ, ಶರತ್‍ಕುಮಾರ್, ಮೈಸೂರು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೈಸೂರು ವೃತ್ತ ಪ್ರಭಾರ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ವೆಂಕಟೇಶನ್, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಆರ್‍ಎಫ್‍ಓಗಳಾದ ಜಿ.ಗೋವಿಂದರಾಜು, ಮಧು, ಎಸ್.ಗಿರೀಶ್, ಲೋಕೇಶ್, ಮೋಹಿತ್ ಪಾಷಾ, ಡಿಆರ್ ಎಫ್‍ಓಗಳಾದ ಎ.ಎಸ್.ಮಂಜು, ಟಿ.ಇ. ವಿಜಯಕುಮಾರ್, ಸಿ.ಎಸ್.ವಿನುತಾ, ಮಾದೇಗೌಡ, ಮಂಜುನಾಥ್, ನವೀನ್ ಇನ್ನಿತರರು ಉಪಸ್ಥಿತರಿದ್ದರು.
ನಗರ ಹಸಿರೀಕರಣಕ್ಕೆ ಶ್ರಮಿಸುತ್ತಿರುವ ವರಿಗೆ ಸನ್ಮಾನ: ಮೈಸೂರು ನಗರವನ್ನು ಹಸಿರೀಕರಣಗೊಳಿಸಲು ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಗಳು ಸೇರಿದಂತೆ 20 ಮಂದಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಸನ್ಮಾನಿಸಿದರು.

ಫಾರೆಸ್ಟರ್ ಟಿ.ಇ.ವಿಜಯಕುಮಾರ್, ಅರಣ್ಯ ರಕ್ಷಕರಾದ ಕಾಳಸ್ವಾಮಿ, ಎಂ.ಎಸ್. ಗಿರಿಗೌಡ, ಕುಮಾರ್, ಶಿವಣ್ಣ, ಲಿಂಗ ರಾಜು, ಅಂಕಯ್ಯ, ಪಿ.ಬಸವೇಗೌಡ, ಎನ್.ರಾಜು, ಅರಣ್ಯ ವೀಕ್ಷಕರಾದ ಬಿ.ಎನ್. ದರ್ಶನ್, ಪುಟ್ಟರಾಜು, ಬೀರಪ್ಪ, ಕೃಷ್ಣ, ಇಲಾಖಾ ಚಾಲಕರಾದ ಆರ್.ಮಂಜುನಾಥ್, ಡಿ.ಎನ್. ನವೀನ್‍ಕುಮಾರ್, ನಾಗೇಶ್, ಅರಣ್ಯ ಗುತ್ತಿಗೆದಾರರಾದ ಸುರೇಶ್, ದಿನೇಶ್, ಎಂ.ಡಿ.ಆನಂದ್, ಅಂಬರೀಶ್ ಅವರನ್ನು ಗೌರವಿಸಲಾಯಿತು. ಸನ್ಮಾನಿಸಿ ಬಳಿಕ ಮಾತ ನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು, ಮೈಸೂರಿನ ಹಸಿರೀಕರಣ ಉಳಿಯಲು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯ ಪರಿಶ್ರಮದಿಂದ ಮಾತ್ರ ಸಾಧ್ಯ, ಇಂದು ಸನ್ಮಾನಿತರಾದವರಿಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ಅದನ್ನು ಸಮರ್ಪಕ ವಾಗಿ ನಿಭಾಯಿಸಿ, ಮರ ಗಿಡಗಳನ್ನು ಇನ್ನೂ ಹೆಚ್ಚು ಬೆಳೆಸಿ, ಮೈಸೂರಿನ ಹಸಿರೀಕರಣ ಗೊಳಿಸುವಲ್ಲಿ ಇನ್ನಷ್ಟು ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು. ಅಲ್ಲದೆ, ಪ್ರತಿಯೊಂದು ಮರ, ಗಿಡಗಳಿಗೆ ಮಳೆ ನೀರು ನಿಲ್ಲುವಂತೆ ಶಾಶ್ವತ ಪಾತಿ ಇರುವಂತೆ ನೋಡಿಕೊಳ್ಳುವಂತೆ ತಾಕೀತು ಮಾಡಿದರು.

Translate »