ಭಾರತದ ಅಲೆಮಾರಿ ಸಮುದಾಯಗಳ ಜೀವನ ಕ್ರಮ  ಅನಾವರಣಗೊಳಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

ಭಾರತದ ಅಲೆಮಾರಿ ಸಮುದಾಯಗಳ ಜೀವನ ಕ್ರಮ ಅನಾವರಣಗೊಳಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ

December 11, 2018

ಮೈಸೂರು: ಭಾರತದ ಅಲೆಮಾರಿ ಸಮುದಾಯಗಳ ಜೀವನ ಕ್ರಮ ಮತ್ತು ವೈವಿಧ್ಯಮಯ ಬದುಕನ್ನು ಸಾರುವ ವಸ್ತು ಪ್ರದರ್ಶನಕ್ಕೆ ಮಾನವ ಶಾಸ್ತ್ರ ಸಂಸ್ಥೆ ಅಧ್ಯಕ್ಷ ಪ್ರೊ. ಪ್ರಮೋದೆ ಕುಮಾರ್ ಮಿಶ್ರಾ ಸೋಮವಾರ ಚಾಲನೆ ನೀಡಿದರು.

ಮೈಸೂರಿನ ಇರ್ವಿನ್ ರಸ್ತೆ ವೆಲ್ಲಿಂಗ್‍ಟನ್ ಹೌಸ್‍ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ದಕ್ಷಿಣ ಪ್ರಾದೇ ಶಿಕ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ `ಭಾರತದ ಅಲೆಮಾರಿಗಳು’ ಈ ವರ್ಷದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯ ಗಳ ಬುಡಕಟ್ಟು ಮತ್ತು ಅಲೆಮಾರಿ ಸಮು ದಾಯದ ಜೀವನ ಕ್ರಮ, ಸಾಂಸ್ಕøತಿಕ ಬದುಕು ಮತ್ತು ಕುಟುಂಬ ನಿರ್ವಹಣೆಗೆ ಅವರು ರೂಢಿಸಿಕೊಂಡಿದ್ದ ಆರ್ಥಿಕ ವ್ಯವಹಾರ ಗಳ ಕುರಿತಾದ ಛಾಯಾಚಿತ್ರ, ಗೃಹ ಬಳಕೆ ವಸ್ತುಗಳು, ಅಲೆಮಾರಿ ಸಮುದಾಯದ ಮಹಿಳೆಯರು ತೊಡುವ ಆಭರಣಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಮೇಘಾಲಯದಲ್ಲಿ `ಖಾಸಿ’ ಬುಡಕಟ್ಟು ಜನಾಂಗವು `ಮಾಫ್ಲಾಂಗ್’ ಅರಣ್ಯ ಪ್ರದೇಶ ವನ್ನು ರಕ್ಷಿಸಲು ಅಲ್ಲಿನ ಜನರು ಕೆಲವು ಧಾರ್ಮಿಕ ಕಟ್ಟುಪಾಡುಗಳ ಆಚರಣೆ ಮಾಡುತ್ತಿರುವ ವಿವರಣೆ ಹಾಗೂ ಗುಜ ರಾತಿನ ಬಂಜಾರ ಸಮುದಾಯ ಬಳಸುವ ನಕ್ಲೇಸ್ ಮಾದರಿ `ಹನ್ಸಾಲಿ’, ಬೆಳ್ಳಿಯ ಪದಾರ್ಥವಾದ `ಡಮರು’, `ಮೋತಿ ಗಗಾರ್ ಮಾಲಾ’,`ಕಡಲಾ’, ಆಂಧ್ರ ಪ್ರದೇಶದ ಲಂಬಾಣಿ ಸಮುದಾಯ ಬಳಸುವ `ಘಘ್ರಿ ಟಾಪೆಲ್’, ಗುಜ್ಜರ್ ಸಮುದಾಯದ ಜಾನಪದ ನೃತ್ಯದ ಚಿತ್ರ ಗಳನ್ನು ನೋಡಬಹುದಾಗಿದೆ.

ಗುಜರಾತಿನ ಕಛ್ ಮರುಭೂಮಿಯಲ್ಲಿ ಒಂಟೆಗಳ ಮೇಲೆ ಪ್ರಯಾಣ ಮಾಡುವ ವೇಳೆ ಬಳಸುವ ಹಿತ್ತಾಳೆಯಿಂದ ಕೂಡಿದ `ಕ್ಯಾಥೋ’ ಸಾಮಗ್ರಿ, ರಾಜಸ್ತಾನದಲ್ಲಿ ಒಂಟೆ ಗಳ ಅಲಂಕಾರಕ್ಕಾಗಿ ಬಳಸುವ `ಟ್ಯಾಂಗ್’ ತೊಡುಗೆ, ಒಂಟೆ ದೇಹವನ್ನು ಅಲಂಕರಿ ಸುವ `ಜಾವಾ’ ತೊಡುಗೆ ಸೇರಿದಂತೆ ಗಡ್ಡಿ ಅಲೆಮಾರಿಗಳು ಬಳಸುವ ಉಡುಪು ಹಾಗೂ ತುರಿ(ಸಂಗೀತ ವಾದ್ಯ), ಮೋನೊ ಪಾಸ್‍ಗಳು ಬಳಸುವ ಫಾಕ್(ಮಾಸ್ಕ್) ಅನ್ನು ನೋಡಬಹುದಾಗಿದೆ. ಹಿಮಾಲಯದ ಬೋಟಿಯಾಗಳು ಉಪಯೋಗಿಸುವ ಪಾಬೂ (ಶೂಗಳು) ಮತ್ತು ಪರ್ಯಾ (ಮಜ್ಜಿಗೆ ಕಡೆಯಲು ಬಳಸುವ ಮರದ ಸಾಧನ), ಗುಜರಾತ್‍ನ ಅಲೆಮಾರಿಗಳ ಗೃಹ ಬಳಕೆಯ ಲೋಟಿ, ಕಟೋರಿ, ಪಂಚ ಪಾತ್ರೆ ಸೇರಿದಂತೆ ಇತರೆ ವಸ್ತುಗಳನ್ನು ಪ್ರದರ್ಶನದಲ್ಲಿ ನೋಡಬಹುದು. ರಾಬರಿ ಸಮುದಾಯದ ವ್ಯಕ್ತಿ ಕುರಿಗಳನ್ನು ಮೇಯಿ ಸುತ್ತಿರುವ ಚಿತ್ರ. ಗಡ್ಡಿ ಸಮುದಾಯದ ಮಹಿಳೆಯರ ಸಾಂಪ್ರದಾಯಿಕ ನೃತ್ಯ, ಗುಜ್ಜಾರ್ ನಾಯಕ ನ್ಯಾಯ ಪಂಚಾಯಿತಿ ಮಾಡುತ್ತಿರುವ ದೃಶ್ಯ. ಲಂಬಾಡಿ ಮಹಿಳೆ ಯರ ಸ್ಥಳೀಯ ಮಾರುಕಟ್ಟೆಯಲ್ಲಿ ಹಣ್ಣು- ತರಕಾರಿ ಮಾರಾಟ ಮಾಡುತ್ತಿರುವ ಛಾಯಾ ಚಿತ್ರಗಳು ಪ್ರವಾಸಿಗರನ್ನು ಕೈಬಿಸಿ ಕರೆಯು ತ್ತಿವೆ. ಈ ವಸ್ತು ಪ್ರದರ್ಶನದಲ್ಲಿ ಉತ್ತರ ಭಾರತದ ಗ್ರಾಮೀಣ ಪ್ರದೇಶದ ಕುರಿ ಗಾಹಿ ಮತ್ತು ದನಗಾಹಿಗಳು, ಬೇಟೆಗಾ ರರು ಮತ್ತು ಸಂಗ್ರಹಕಾರರು, ಪೆರಿಪಾಟಿಕ್ಸ್ ಎಂಬ ಮೂರು ವಿಧದ ಅಲೆಮಾರಿ ಸಮು ದಾಯಗಳ ಬಗ್ಗೆ ಬೆಳಕು ಚೆಲ್ಲಿದೆ. ಇವ ರಲ್ಲಿ ಪ್ರಮುಖ ಅಲೆಮಾರಿಗಳೆಂದರೆ ಗುಜ ರಾತಿನ ರಾಬರಿ ಅಥವಾ ಬರವಾಡ್, ಜಮ್ಮು ಮತ್ತು ಕಾಶ್ಮೀರದ ಗುಜ್ಜಾರ್ ಅಥವಾ ಬಕ್ರವಾಲಾ ಹಿಮಾಚಲ ಪ್ರದೇಶದ ಗಡ್ಡಿ, ಲಡಾಕ್‍ನ ಚಾಂಗ್‍ಪಾಸ್ ಮತ್ತು ಬ್ರೋಕ್ ಪಾಸ್, ಅರುಣಾಚಲ ಪ್ರದೇಶದ ಮೋನ್ ಪಾಸ್‍ಗಳ ಬದುಕಿನ ಚಿತ್ರಣ ಈ ಪ್ರದರ್ಶ ನದಲ್ಲಿ ಕಾಣಬಹುದಾಗಿದೆ.

ಗುಜ್ಜಾರ್‍ಗಳು ತಮ್ಮ ಜಾನುವಾರು ಹಿಂಡುಗಳಿಗೆ ಆಹಾರ ಅರಸುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿ ಸುತ್ತಾರೆ. ಪಶುಪಾಲನೆಯಿಂದ ಸಿಗುವ ಹಾಲು ಮತ್ತು ಮಾಂಸವನ್ನು ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಚಾಂಗ್ ಪಾಸ್ ಸಮುದಾಯ ಪಶ್ಮಿನ್ ಎಂಬ ಉತ್ಕøಷ್ಟ ಉಣ್ಣೆ ಪೂರೈಸಿದರೆ, ಬಂಜಾರ್ ಸಮುದಾಯ ಮಾಂಸ ಪೂರೈಸುವ ಕೆಲಸ ಮಾಡುವ ದೃಶ್ಯಗಳನ್ನು ಕಾಣಬಹುದಾ ಗಿದೆ. ಜಾರ್ಖಂಡ್‍ನ ಖಿರೋರ್ ಅಲೆ ಮಾರಿಗಳು ಕಾಡು-ಮೇಡು ಪ್ರದೇಶಗಳಲ್ಲಿ ಪ್ರಾಣಿ-ಪಕ್ಷಿಗಳನ್ನು ಬೇಟೆಯಾಡುವುದಕ್ಕೆ ಉಪಯೋಗಿಸುವ ಸಾಮಗ್ರಿಗಳನ್ನು ಇಲ್ಲಿ ಕಾಣಬಹುದಾಗಿದೆ. ಉತ್ತರ ಭಾರತದ ಲಂಬಾಣಿ/ ಬಂಜಾರ, ರಾಜಸ್ಥಾನದ ಗುಡಾಲಿಯಾ ಲೋಹರ್ ಸಮುದಾಯಗಳು ಹಳ್ಳಿಗಳಲ್ಲಿನ ರೈತರಿಗೆ ವ್ಯವಸಾಯದ ಉಪಕರಣಗಳನ್ನು ತಯಾರಿಸಿಕೊಡುವ ಕುಲುವೆ ಮತ್ತು ರಿಪೇರಿ ಕೆಲಸ ನಿರ್ವಹಿಸುವ ಮಾಹಿತಿಗಳು ಸಹ ಲಭ್ಯವಿದೆ. ಸಂಗ್ರಹಾಲಯದ ನಿರ್ದೇಶಕ ಸರಿತ್‍ಕುಮಾರ್ ಚೌಧರಿ, ಜಂಟಿ ನಿರ್ದೇ ಶಕ ದಿಲೀಪ್‍ಸಿಂಗ್ ಉಪಸ್ಥಿತರಿದ್ದರು.

Translate »