ಮೈಸೂರು

ಮಾನವ-ಆನೆ ಸಂಘರ್ಷ ತಡೆಗೆ ಶಾಶ್ವತ ಪರಿಹಾರಕ್ಕೆ ಅರಣ್ಯ ಅಧಿಕಾರಿಗಳಿಗೆ ಸಿಎಂ ಸೂಚನೆ
ಮೈಸೂರು

ಮಾನವ-ಆನೆ ಸಂಘರ್ಷ ತಡೆಗೆ ಶಾಶ್ವತ ಪರಿಹಾರಕ್ಕೆ ಅರಣ್ಯ ಅಧಿಕಾರಿಗಳಿಗೆ ಸಿಎಂ ಸೂಚನೆ

December 5, 2018

ಬೆಂಗಳೂರು: ರಾಜ್ಯದಲ್ಲಿ ಆನೆ ದಾಳಿಯಿಂದ ಜನ ಸಾಯ ದಂತೆ ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧ ಪಡಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆ ಯಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿಯಿಂದ ತೊಂದರೆಗೊಳಗಾದ ರೈತರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ಚರ್ಚಿಸಲು ಸಭೆಯನ್ನು ಏರ್ಪಡಿಸಲಾಗಿತ್ತು. ಆನೆಗಳ ಹಾವಳಿಯಿಂದ ಭತ್ತ, ಬಾಳೆ, ಅಡಿಕೆ, ಕಾಫಿ ಬೆಳೆಗಳಿಗೆ ಅಪಾರ ಹಾನಿಯುಂಟಾಗಿದ್ದು, ಮಾನವ-ಆನೆ ಸಂಘರ್ಷ ತಪ್ಪಿಸಲು ವೈಜ್ಞಾನಿಕ ವಾಗಿ ಪರಿಹಾರವನ್ನು…

ಸಂಘಟಿತರಾಗಿ ಸರ್ಕಾರಿ ಸವಲತ್ತು ಪಡೆದುಕೊಳ್ಳಿ ಸವಿತಾ ಸಮಾಜಕ್ಕೆ ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಕರೆ
ಮೈಸೂರು

ಸಂಘಟಿತರಾಗಿ ಸರ್ಕಾರಿ ಸವಲತ್ತು ಪಡೆದುಕೊಳ್ಳಿ ಸವಿತಾ ಸಮಾಜಕ್ಕೆ ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಕರೆ

December 5, 2018

ಮೈಸೂರು: ಸವಿತಾ ಸಮಾಜದ ಸದಸ್ಯರು ಎನ್‍ಜಿಒ ಸಂಸ್ಥೆ ಗಳನ್ನು ಸ್ಥಾಪಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ ಎಂದು ಮಾಜಿ ಲೋಕಸಭಾ ಸದಸ್ಯ ಸಿ.ಹೆಚ್. ವಿಜಯಶಂಕರ್ ಸಲಹೆ ನೀಡಿದರು. ನಗರದ ಜಗನ್ಮೋಹನ ಅರಮನೆಯಲ್ಲಿ ನಡೆದ ಸವಿತಾ ಕೇಶಾಲಂಕಾರಿಗಳ ಸಂಘದ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಸೌಲಭ್ಯ ಗಳು ಎನ್‍ಜಿಒ ಸಂಸ್ಥೆಗಳ ಮೂಲಕ ದೊರೆಯಲಿದ್ದು, ಸವಿತಾ ಸಮಾಜದವರು ಎನ್‍ಜಿಒ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಸರ್ಕಾರಿ ಸೌಲಭ್ಯಗಳನ್ನು ಪಡೆದು ಆರ್ಥಿಕ ಸ್ವಾವಲಂಬಿಗಳಾಗಿ…

ಲಯ ತಪ್ಪುತ್ತಿರುವ ಸಂಗೀತ ವಿವಿ ವಿದ್ಯಾರ್ಥಿಗಳ ಶಿಕ್ಷಣ ವಿಧಾನ ಯಾರಿಗೆ ಹೇಳಿದರೂ ಪಾಪ, ವಿದ್ಯಾರ್ಥಿಗಳ ಸಮಸ್ಯೆಗಿಲ್ಲ ಪರಿಹಾರ!
ಮೈಸೂರು

ಲಯ ತಪ್ಪುತ್ತಿರುವ ಸಂಗೀತ ವಿವಿ ವಿದ್ಯಾರ್ಥಿಗಳ ಶಿಕ್ಷಣ ವಿಧಾನ ಯಾರಿಗೆ ಹೇಳಿದರೂ ಪಾಪ, ವಿದ್ಯಾರ್ಥಿಗಳ ಸಮಸ್ಯೆಗಿಲ್ಲ ಪರಿಹಾರ!

December 5, 2018

ಮೈಸೂರು:  ಬೆಳಿಗ್ಗೆಯಿಂದ ಸಂಜೆವರೆಗೆ ಕಾದರೂ 1 ಕ್ಲಾಸ್ ನಡೆಯುವುದು ಡೌಟು. ಪರೀಕ್ಷಾ ದಿನಾಂಕ ನಿಗದಿಯಾದ ಮೇಲೂ ಸಿಲಬಸ್ ಚೇಂಜ್ ಮಾಡುತ್ತಿದ್ದಾರೆ. ವಿವಿ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ… ಇವು ಸಂಗೀತ ವಿವಿಯ ವಿದ್ಯಾರ್ಥಿಗಳ ಅಳಲು. ಈ ವೇಳೆ ವಿದ್ಯಾರ್ಥಿಯೋರ್ವ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾನಿಲಯದ ಹಳೇ ಕಟ್ಟಡದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದೆ ಎಂದು ವಿದ್ಯಾರ್ಥಿಗಳು ನಿರಂತರ ಪ್ರತಿಭಟಿಸಿದೆವು. ಈ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಉನ್ನತ…

ಮೈಸೂರು ಸಂಚಾರ ಪೊಲೀಸರ ಅವೈಜ್ಞಾನಿಕ ವಾಹನ ತಪಾಸಣೆ; ಆರೋಪ ಸಂಚಾರ ಸುರಕ್ಷತೆ ಬದಲು ವಾಹನ ಸವಾರರ ಜೀವಕ್ಕೆ ಸಂಚಕಾರ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಆರೋಪ
ಮೈಸೂರು

ಮೈಸೂರು ಸಂಚಾರ ಪೊಲೀಸರ ಅವೈಜ್ಞಾನಿಕ ವಾಹನ ತಪಾಸಣೆ; ಆರೋಪ ಸಂಚಾರ ಸುರಕ್ಷತೆ ಬದಲು ವಾಹನ ಸವಾರರ ಜೀವಕ್ಕೆ ಸಂಚಕಾರ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಆರೋಪ

December 5, 2018

ಮೈಸೂರು: ಮೈಸೂರು ನಗರದಲ್ಲಿ ಪೊಲೀಸರು ಅವೈಜ್ಞಾನಿಕ ವಾಗಿ ವಾಹನ ತಪಾಸಣೆ ನಡೆಸುತ್ತಿದ್ದು, ಸುಗಮ ರಸ್ತೆ ಸಂಚಾರ ಹಾಗೂ ಸಾರ್ವಜ ನಿಕರ ಸುರಕ್ಷತೆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೆಂದು ಮಾಜಿ ಮೇಯರ್ ಸಂದೇಶ್‍ಸ್ವಾಮಿ ಮನವಿ ಮಾಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮೈಸೂರು ನಗರದಲ್ಲಿ 18ನೇ ಶತಮಾನದ ಮಾದರಿಯಲ್ಲೇ ವಾಹನ ತಪಾಸಣೆ ನಡೆಸಲಾಗುತ್ತಿದೆ. ದೇಶದ ಯಾವುದೇ ನಗರದಲ್ಲಿ ಈ ರೀತಿ ರಸ್ತೆಯಲ್ಲಿ ನಿಂತು, ವಾಹನ ಸವಾರರನ್ನು ಅಟ್ಟಾಡಿಸಿ, ಹಿಡಿದು ದಂಡ ವಿಧಿಸುವ ವ್ಯವಸ್ಥೆಯಿಲ್ಲ. ಪರಿ ಣಾಮ ಸುಗಮ ಸಂಚಾರದ…

ಬಿಜೆಪಿಯಿಂದ ಆಮಿಷ: ಬೆಂಗಳೂರು ಪೊಲೀಸ್ ಕಮೀಷ್ನರ್‍ಗೆ ಕಾಂಗ್ರೆಸ್ ದೂರು
ಮೈಸೂರು

ಬಿಜೆಪಿಯಿಂದ ಆಮಿಷ: ಬೆಂಗಳೂರು ಪೊಲೀಸ್ ಕಮೀಷ್ನರ್‍ಗೆ ಕಾಂಗ್ರೆಸ್ ದೂರು

December 5, 2018

ಬೆಂಗಳೂರು, ಡಿ.4-ಆಪರೇಷನ್ ಕಮಲಕ್ಕೆ ಮತ್ತೆ ಮುಂದಾಗಿದ್ದಾರೆ ಎಂದು ಆರೋಪಿಸಿ ಗಣಿಧಣಿ ಜನಾರ್ಧನ ರೆಡ್ಡಿ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಹಾಗೂ ಶಾಸಕ ಶ್ರೀ ರಾಮುಲು ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ರಾಜ್ಯ ಕಾಂಗ್ರೆಸ್ ಮುಖಂಡರು ಬೆಂಗಳೂರು ನಗರ ಪೊಲೀಸ್ ಕಮೀಷ್ನರ್‍ಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಬಯಲಾಗಿರುವ ಆಡಿಯೋ ದಲ್ಲಿ ಆಪರೇಷನ್ ಕಮಲ ಸಂಬಂಧ ಶಾಸಕ ಶ್ರೀರಾಮುಲು ಆಪ್ತ ಸಹಾಯಕ ಮಂಜು ಎಂಬುವರು ದುಬೈ ಉದ್ಯಮಿ ಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿರುವುದನ್ನು ಗಂಭೀರವಾಗಿ…

ಮಹದೇಶ್ವರಸ್ವಾಮಿ ದೇಗುಲದ 48ನೇ ವಾರ್ಷಿಕೋತ್ಸವ
ಮೈಸೂರು

ಮಹದೇಶ್ವರಸ್ವಾಮಿ ದೇಗುಲದ 48ನೇ ವಾರ್ಷಿಕೋತ್ಸವ

December 5, 2018

ಕೆ.ಆರ್.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯ ಮಲೆ ಮಹದೇಶ್ವರಸ್ವಾಮಿ ದೇವಾಲಯದ 48ನೇ ವಾರ್ಷಿಕೋತ್ಸವದ ಅಂಗವಾಗಿ ಮಹ ದೇಶ್ವರಸ್ವಾಮಿ ಉತ್ಸವವು ವಿಜೃಂಭಣೆ ಯಿಂದ ಜರುಗಿತು. ಬೆಳಿಗ್ಗೆ 10 ಗಂಟೆಗೆ ಗಾವಡಗೆರೆ ಗುರು ಲಿಂಗ ಜಂಗಮ ಮಠದ ನಟರಾಜ ಶ್ರೀಗಳು, ಸಚಿವ ಸಾ.ರಾ.ಮಹೇಶ್, ಜಿಪಂ ಸದಸ್ಯ ಡಿ.ರವಿಶಂಕರ್, ಮಾಜಿ ಉಪಾ ಧ್ಯಕ್ಷ ಎ.ಎಸ್.ಚನ್ನಬಸಪ್ಪ ಸೇರಿದಂತೆ ಹಲವು ಮುಖಂಡರು ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಉತ್ಸವವು ಹಾಸನ-ಮೈಸೂರು ರಸ್ತೆ ಮಾರ್ಗ ಸಾಗಿ ಅಂಬೆಡ್ಕರ್ ಪ್ರತಿಮೆ, ಗರುಡಗಂಭ ವೃತ್ತ, ಬಜಾರ್ ರಸ್ತೆ ಮೂಲಕ ಪಟ್ಟಣದ…

ವಾಹನ ಡಿಕ್ಕಿ: ಅಪರಿಚಿತ ಸಾವು
ಮೈಸೂರು

ವಾಹನ ಡಿಕ್ಕಿ: ಅಪರಿಚಿತ ಸಾವು

December 5, 2018

ಮೈಸೂರು:  ವಾಹನವೊಂದು ಡಿಕ್ಕಿ ಹೊಡೆದು, ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ಮೈಸೂರು-ನಂಜನಗೂಡು ರಸ್ತೆಯಲ್ಲಿ ಕಳೆದ ಭಾನುವಾರ ರಾತ್ರಿ ನಡೆದಿದೆ. ಮಂಡಕಳ್ಳಿ ವಿಮಾನ ನಿಲ್ದಾಣದ ಹಳೇಗೇಟ್ ಬಳಿ, ನಡೆದು ಹೋಗುತ್ತಿದ್ದ ವ್ಯಕ್ತಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮುಖ ಹಾಗೂ ಎದೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು, ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ವಾಹನ ಪತ್ತೆಯಾಗಿಲ್ಲ. ಮೃತಪಟ್ಟಿರುವ ವ್ಯಕ್ತಿಗೆ ಸುಮಾರು 45 ವರ್ಷ ವಯಸ್ಸಾಗಿದ್ದು, ಅರ್ಧ ತೋಳಿನ ಬಿಳಿ ಬಣ್ಣದ ಟಿ ಶರ್ಟ್, ಸಿಮೆಂಟ್ ಬಣ್ಣದ…

ಲಕ್ಷ್ಮೀಪುರಂ ಠಾಣೆ ಪೊಲೀಸರು, ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಮೈಸೂರು

ಲಕ್ಷ್ಮೀಪುರಂ ಠಾಣೆ ಪೊಲೀಸರು, ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ

December 5, 2018

ಮೈಸೂರು: ಅಪ ರಾಧ ತಡೆ ಮಾಸಾಚರಣೆ-2018ರ ಅಂಗ ವಾಗಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಮತ್ತು ಲಕ್ಷ್ಮೀಪುರಂ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಅಪರಾಧ ತಡೆ ಬಗ್ಗೆ ಮಂಗಳವಾರ ಬಡಾವಣೆ ಜನರಲ್ಲಿ ಜಾಗೃತಿ ಮೂಡಿಸಿದರು. ನಾರಾಯಣ ಶಾಸ್ತ್ರಿ ರಸ್ತೆಯ ಮಹದೇಶ್ವರ ದೇವಸ್ಥಾನದ ಬಳಿ ಜಾಥಾಗೆ ಕೆ.ಆರ್. ವಿಭಾಗದ ಎಸಿಪಿ ಧರ್ಮಪ್ಪ ಚಾಲನೆ ನೀಡಿದರು. ಈ ವೇಳೆ ಲಕ್ಷ್ಮೀ ಪುರಂ ಠಾಣೆ ಇನ್ಸ್‍ಪೆಕ್ಟರ್ ಕೆ.ಸಿ.ರಘು, ಎಎಸ್‍ಐ ಗೌರಿಶಂಕರ್ ಹಾಗೂ ಸಿಬ್ಬಂದಿ ಗಳಾದ ಕುಮಾರ್ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು. ಜಾಥಾದಲ್ಲಿ…

ರಾಜಕಾರಣಿಗಳು ಜನಸೇವೆಗೆ ಮುಂದಾಗಬೇಕು
ಮೈಸೂರು

ರಾಜಕಾರಣಿಗಳು ಜನಸೇವೆಗೆ ಮುಂದಾಗಬೇಕು

December 5, 2018

ಬೆಟ್ಟದಪುರ: ರಾಜ ಕಾರಣವು ನಿಂತ ನೀರಾಗಿರದೇ ಹರಿಯುವ ನದಿಯಂತಿದ್ದು, ಅಧಿಕಾರದ ದೊರೆತಾಗ ರಾಜಕಾರಣಿಗಳು ಜನಸೇವೆಗೆ ಮುಂದಾಗಬೇಕು ಎಂದು ಶಾಸಕ ಕೆ.ಮಹದೇವ್ ಸಲಹೆ ನೀಡಿದರು. ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ಸ್ಪಂದನಾ ಸಭೆ ಉದ್ದೇ ಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ 2 ಕೈಗಾ ರಿಕೆಗಳ ಸ್ಥಾಪನೆಗೆ ಮುಖ್ಯಮಂತ್ರಿಗಳಿಂದ ಭರವಸೆ ದೊರೆತಿದ್ದು, ಶೀಘ್ರವಾಗಿಯೇ ಕೈಗಾರಿಕೆಗಳ ಸ್ಥಾಪನೆ ಯಾಗುವುದರಿಂದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಂತಸ ವ್ಯಕ್ತ ಪಡಿಸಿದರು. ಕುಡಿಯುವ ನೀರಿನ ಸಮಸ್ಯೆಯ ನಿವಾ ರಣೆಗೆ…

ಕೆಆರ್‍ನಗರ ತಾಪಂ ಇಓ ಅಮಾನತಿಗೆ ಆಗ್ರಹ
ಮೈಸೂರು

ಕೆಆರ್‍ನಗರ ತಾಪಂ ಇಓ ಅಮಾನತಿಗೆ ಆಗ್ರಹ

December 5, 2018

ಕೆ.ಆರ್.ನಗರ: ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಮೊಟುಕುಗೊಳಿಸಿ, ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ತಾಪಂ ಕಾರ್ಯನಿರ್ವಹಣಾಧಿಕಾರಿ ಯನ್ನು ಕೂಡಲೇ ಅಮಾನತುಗೊಳಿಸಲು ಸಂಬಂಧಪಟ್ಟವರಿಗೆ ಲಿಖಿತವಾಗಿ ದೂರು ನೀಡಲಾಗುವುದು ಎಂದು ತಾಪಂ ಅಧ್ಯಕ್ಷ ಹೆಚ್.ಟಿ.ಮಂಜುನಾಥ್ ತಿಳಿಸಿದರು. ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಮೋಹನ್ ಅವರು ತಾಪಂ ಅಧ್ಯಕ್ಷರು, ಸದಸ್ಯರ ಅಧಿಕಾರ ಮೊಟುಕುಗೊಳಿಸಿ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಅಧಿಕಾರ ದುರುಪಯೋಗ ಪಡಿಸಿಕೊಳ್ಳು ತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗುವುದು…

1 1,249 1,250 1,251 1,252 1,253 1,611
Translate »