ನಂಜನಗೂಡು: ವಿವಿಧ ಕಾರಣಗಳಿಂದ ವಿಕಲಚೇತನರಾಗಿರುವ ಮಕ್ಕಳಿಗೆ ಬದುಕಲು ಸಹಕರಿಸುವುದರೊಂದಿಗೆ ಅವರನ್ನು ಸಹಾನುಭೂತಿಯಿಂದ ಕಾಣ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಬಿ.ಪಿ.ದೇವಮಾನೆ ಸಲಹೆ ನೀಡಿದರು. ನಗರದ ಗುರುಭವನದಲ್ಲಿ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಮತ್ತು ವಿಶ್ವ ಹೆಚ್‍ಐವಿ-ಏಡ್ಸ್ ದಿನಾಚರಣೆಯ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗುರುಗಳಾದವರು ಮಕ್ಕಳಿಗೆ ಅಕ್ಷರದ ಜೊತೆಗೆ ವಿಶಾಲವಾದ ಜ್ಞಾನ, ಇಂದಿನ ಸಮಾಜ, ಕಾನೂನುಗಳ ಬಗ್ಗೆ ತಿಳಿಸಿದಾಗ ಮಾತ್ರ ಅವರ ಸ್ಥಾನಕ್ಕೆ ಅರ್ಥ ಬರುತ್ತದೆ ಎಂದ ಅವರು, ಕಾನೂನುಗಳನ್ನು ಪ್ರತಿ ಯೊಬ್ಬರು…
ವಿಕಲಚೇತನರ ಪ್ರೀತಿ, ವಿಶ್ವಾಸದಿಂದ ಕಾಣಿ
December 4, 2018ತಿ.ನರಸೀಪುರ: ಬಹುಮುಖ ಪ್ರತಿಭೆಯುಳ್ಳ ವಿಕಲಚೇತನ ಮಕ್ಕಳಿಗೆ ಅನುಕಂಪ ತೋರಿಸುವ ಬದಲು ಪ್ರೀತಿ, ವಿಶ್ವಾಸದಿಂದ ಕಾಣುವಂತೆ ಜಿಪಂ ಸದಸ್ಯ ಜಯಪಾಲ್ ಭರಣಿ ಹೇಳಿದರು. ವಿಶ್ವ ವಿಕಲಚೇತನ ದಿನಾಚರಣೆಯ ಅಂಗವಾಗಿ ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ, ಸಮಗ್ರ ಶಿಕ್ಷಣ ಅಭಿ ಯಾನ, ಪುರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಆಶ್ರಯ ದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಪರಿಸರ ನಿರ್ಮಾಣ ಹಾಗೂ ಸೌಲಭ್ಯದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ತಾವು ಮಾಡದ ತಪ್ಪಿಗೆ ಅಂಗವೈಕಲ್ಯಕ್ಕೊಳಗಾಗುತ್ತವೆ. ಹಾಗೆಂದ ಮಾತ್ರಕ್ಕೆ ಅವು…
ನೇಣು ಬಿಗಿದುಕೊಂಡು ಇಬ್ಬರು ಆತ್ಮಹತ್ಯೆ
December 4, 2018ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಹಾಗೂ ರೈಲ್ವೆ ಉದ್ಯೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮಂಚೇಗೌಡನಕೊಪ್ಪಲು ಹಾಗೂ ಮಂಜುನಾಥಪುರದಲ್ಲಿ ಭಾನುವಾರ ಸಂಭವಿಸಿದೆ. ಮಂಚೇಗೌಡನಕೊಪ್ಪಲು ನಿವಾಸಿ ನಿಶಾಂತ್ ಅವರ ಪತ್ನಿ ಶ್ರೀಮತಿ ಮಹಾಲಕ್ಷ್ಮಿ(32) ನೇಣಿಗೆ ಶರಣಾದವರು. 13 ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಾಲಕ್ಷ್ಮಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಹಳೇ ಮನೆ ನೆಲಸಮಗೊಳಿಸಿ ಹೊಸ ಮನೆ ಕಟ್ಟಿಸಿದ್ದ ದಂಪತಿ, ತಿಂಗಳ ಹಿಂದಷ್ಟೇ ಗೃಹಪ್ರವೇಶ ಮಾಡಿದ್ದರು ಎಂದು ತಿಳಿದು ಬಂದಿದೆ. ಕಳೆದ ಮಧ್ಯರಾತ್ರಿ ಹೊಸ ಮನೆಯ ಕೊಠಡಿ…
ಬೆಂಗಳೂರು, ಉಡುಪಿ, ಬಾಗಲಕೋಟೆಯಲ್ಲಿ ರಾಮಭಕ್ತರಿಂದ ರಣಕಹಳೆ
December 3, 2018ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಇಂದು ಬೆಂಗಳೂರು, ಬಾಗಲಕೋಟೆ ಮತ್ತು ಉಡುಪಿಯಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಿತ್ತು. ಬೆಂಗಳೂರಿನಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ರಾಮಭಕ್ತರು ಭಾಗವಹಿಸಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇಬೇಕು ಎಂದು ಆಗ್ರಹಿಸಿದರು. ಈ ಬೃಹತ್ ಸಭೆಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಂದ ಹಿಂದೂ ಪರ ಸಂಘಟನೆ ಗಳ ಕಾರ್ಯಕರ್ತರು…
ಗೊಮ್ಮಟಗಿರಿ ಶಾಂತಮೂರ್ತಿಗೆ ವೈಭವದ ಮಸ್ತಕಾಭಿಷೇಕ
December 3, 2018ಹುಣಸೂರು: ಜೈನ ಧರ್ಮದ ಆರಾಧ್ಯ ದೈವ ಹುಣಸೂರು ತಾಲೂಕು ಗೊಮ್ಮಟಗಿರಿಯ ಗೊಮ್ಮಟೇಶ್ವರ ನಿಗೆ ಇಂದು ವೈಭವದ 69ನೇ ಮಸ್ತಕಾಭಿಷೇಕ ಜರುಗಿತು. ವಿವಿಧ ಅಭಿಷೇಕಗಳಲ್ಲಿ ಕಂಗೊಳಿಸಿದ ಮೂರ್ತಿಯನ್ನು ಕಂಡು ಭಕ್ತರು ಪುಳಕಿತರಾದರು. ತಾಲೂಕಿನ ಬಿಳಿಕೆರೆ ಹೋಬಳಿಯ ಬೆಟ್ಟದೂರು ಬಳಿಯ ದಿಗಂಬರ ಜೈನ ಅತಿಶಯ ಕ್ಷೇತ್ರ ಶ್ರೀ ಗೊಮ್ಮಟಗಿರಿಯ ವಿರಾಟ್‍ಯೋಗಿ ಗೊಮ್ಮಟೇಶ್ವರನಿಗೆ 69ನೇ ಮಸ್ತಕಾಭಿಷೇಕದ ಪ್ರತಿ ಅಭಿಷೇಕದಲ್ಲೂ ತನ್ನ ನಗು ಮುಖದ ತನ್ಮಯತೆಯ ಭಾವ ಮೆರೆದಾಗ ಭಕ್ತರು ಬಾಹುಬಲಿ ಭಗವಾನಕೀ ಜೈ, ಗೊಮ್ಮಟೇಶ್ವರಕೀ ಜೈ ಎನ್ನುತ್ತಾ ಭಕ್ತಿಪರವಶರಾದರು. ಅಭಿಷೇಕಕ್ಕೂ ಮುನ್ನ…
ಇನ್ಫೋಸಿಸ್ ಫೌಂಡೇಷನ್‍ನಿಂದ ಮೇಲುಕೋಟೆ ಪಾರಂಪರಿಕ ತಾಣಗಳ ಸಂರಕ್ಷಣೆ
December 3, 2018ಮೇಲುಕೋಟೆ: ಸರ್ಕಾರದ ಸಹ ಕಾರದೊಂದಿಗೆ ಇನ್ಫೋಸಿಸ್ ಫೌಂಡೇಷನ್ ಮೇಲುಕೋಟೆಯ ಪಾರಂಪರಿಕ ತಾಣಗಳನ್ನು ಸಂರಕ್ಷಿಸಲು ಸಂಕಲ್ಪ ಮಾಡಿದೆ ಎಂದು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ತಿಳಿಸಿದರು. ಭಾನುವಾರ ಮೇಲುಕೋಟೆ ಕ್ಷೇತ್ರ ಅಭಿ ವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿ ದಂತೆ ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟದ ಸುಂದರ ಸಂಸ್ಕೃತಿ, ಪರಂಪರೆ ಹೊಂದಿದ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿ ಆಗಬೇಕು. ಅದಕ್ಕಾಗಿ ಇಲ್ಲಿನ ಪಂಚಕಲ್ಯಾಣಿ ಸೇರಿದಂತೆ ಪಾರಂಪರಿಕ ಶೈಲಿಯ ಎಲ್ಲಾ ಕೊಳಗಳು, ಮಂಟಪಗಳನ್ನು ಜೀರ್ಣೋದ್ಧಾರ ಗೊಳಿಸಿ…
ಭಾರತದಲ್ಲಿ 2022ಕ್ಕೆ ಮೊದಲ ಬಾರಿಗೆ ಜಿ-20 ಶೃಂಗಸಭೆ
December 3, 2018ಅರ್ಜೆಂಟೀನಾ: 2022ಕ್ಕೆ ಭಾರತ ಮೊದಲ ಬಾರಿಗೆ ಜಿ-20 ಶೃಂಗಸಭೆ ಆಯೋ ಜಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಭಾರತ 75ನೇ ವರ್ಷದ ಸ್ವಾತಂತ್ರ್ಯ ದಿನವನ್ನಾಚರಣೆ ಮಾಡಲಿದ್ದು, ಅದೇ ವರ್ಷ ಭಾರತ ಮೊದಲ ಬಾರಿಗೆ ಜಿ-20 ಶೃಂಗಸಭೆಯನ್ನು ಆಯೋಜಿ ಸಲಿದೆ ಎಂದು ಮೋದಿ ಹೇಳಿದ್ದಾರೆ. ಅರ್ಜೆಂಟೀನಾದ ರಾಜಧಾನಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಭಾಗ ವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ 2020ರ ವೇಳೆಗೆ 75ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸ ಲಿದೆ. ಈ…
ನಾಲೆ ಅಂಚಿಗೆ ಸ್ಕೂಟರ್ ಉರುಳಿದಾಗ… ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ನೀರುಪಾಲು
December 3, 2018ಮಂಡ್ಯ: ನಾಲೆ ಅಂಚಿಗೆ ಸ್ಕೂಟರ್ ಉರುಳಿ ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ನೀರು ಪಾಲಾದ ಘಟನೆ ತಾಲೂಕಿನ ಲೋಕ ಸರಗ್ರಾಮದ ಬಳಿ ಭಾನುವಾರ ನಡೆದಿದೆ. ಗ್ರಾಮದ ನಾಗಮ್ಮ (50), ಅಂಬಿಕಾ (33) ಹಾಗೂ ಮಾನ್ಯತಾ (5) ಮೃತಪಟ್ಟವರು. ಘಟನೆಯ ವಿವರ: ಅಂಬಿಕಾ ಅವರು ಕಳೆದ ಶುಕ್ರವಾರ (ನ.30) ನೂತನ ಗೃಹಪ್ರವೇಶ ನೆರವೇರಿಸಿದ್ದರು. ಇಂದು ತಾಯಿ ನಾಗಮ್ಮ ಹಾಗೂ ಮಗಳು ಮಾನ್ಯತಾಳೊಂದಿಗೆ ಗ್ರಾಮದ ದೇವಸ್ಥಾನಕ್ಕೆ ಸ್ಕೂಟರ್‍ನಲ್ಲಿ ತೆರಳಿ, ಪೂಜೆ ಸಲ್ಲಿಸಿ ವಾಪಸ್ ಬರುತ್ತಿದ್ದಾಗ ಲೋಕಸರ ಬಳಿ ಸ್ಕೂಟರ್…
ಚುನಾವಣಾ ಆಯೋಗದ ನೂತನ ಮುಖ್ಯ ಆಯುಕ್ತ ಸುನೀಲ್ ಅರೋರಾ ಅಧಿಕಾರ ಸ್ವೀಕಾರ
December 3, 2018ನವದೆಹಲಿ: ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಸುನೀಲ್ ಅರೋರಾ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಓ. ಪಿ.ರಾವತ್ ಅವರ ಅಧಿಕಾರ ಅವಧಿ ನಿನ್ನೆಗೆ ಮುಕ್ತಾಯ ಗೊಂಡಿದ್ದರಿಂದ ಅವರ ಸ್ಥಾನಕ್ಕೆ ಸುನೀಲ್ ಅರೋರಾ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದಾರೆ.ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದ ಆಶಯಕ್ಕೆ ತಕ್ಕಂತೆ ಎಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಆಯೋಗದಲ್ಲಿನ ಎಲ್ಲಾ ಸಿಬ್ಬಂದಿ ಗಳು ಕಾರ್ಯನಿರ್ವಹಿಸುವುದಾಗಿ ಅವರು ಹೇಳಿದರು. ಅರೋರಾ ಅವರಿಗೆ 2019ರ ಲೋಕಸಭಾ ಚುನಾವಣೆ ಪ್ರಮುಖ ಸವಾಲಾಗಿದೆ. ಇದಲ್ಲದೇ ಮುಂದಿನ ವರ್ಷವೇ…
ಡಾ.ಪುಟ್ಟರಾಜ ಗವಾಯಿಗಳ ಸ್ಮರಣೆಗಾಗಿ `ಭೈರವದಿಂದ ಭೈರವಿ’
December 3, 2018ಮೈಸೂರು: ಗಾನಯೋಗಿ ಡಾ.ಪುಟ್ಟ ರಾಜ ಗವಾಯಿ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಜೊತೆಗೆ ಲಕ್ಷಾಂತರ ಮಂದಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆದಿದ್ದಾರೆ ಎಂದು ಶಾಸಕ ಎಲ್.ನಾಗೇಂದ್ರ ಸ್ಮರಿಸಿದರು. ಮೈಸೂರಿನ ಕುವೆಂಪುನಗರದ ವೀಣೆ ಶೇಷಣ್ಣ ಭವನ ದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾದ ವತಿಯಿಂದ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿ ಅವರ 8ನೇ ಪುಣ್ಯ ಸ್ಮರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ `ಭೈರವದಿಂದ ಭೈರವಿ’ ಶೀರ್ಷಿಕೆಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪುಟ್ಟರಾಜ ಗವಾಯಿ ಅವರ…