ಡಾ.ಪುಟ್ಟರಾಜ ಗವಾಯಿಗಳ  ಸ್ಮರಣೆಗಾಗಿ `ಭೈರವದಿಂದ ಭೈರವಿ’
ಮೈಸೂರು

ಡಾ.ಪುಟ್ಟರಾಜ ಗವಾಯಿಗಳ  ಸ್ಮರಣೆಗಾಗಿ `ಭೈರವದಿಂದ ಭೈರವಿ’

December 3, 2018

ಮೈಸೂರು: ಗಾನಯೋಗಿ ಡಾ.ಪುಟ್ಟ ರಾಜ ಗವಾಯಿ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಜೊತೆಗೆ ಲಕ್ಷಾಂತರ ಮಂದಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆದಿದ್ದಾರೆ ಎಂದು ಶಾಸಕ ಎಲ್.ನಾಗೇಂದ್ರ ಸ್ಮರಿಸಿದರು.

ಮೈಸೂರಿನ ಕುವೆಂಪುನಗರದ ವೀಣೆ ಶೇಷಣ್ಣ ಭವನ ದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾದ ವತಿಯಿಂದ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿ ಅವರ 8ನೇ ಪುಣ್ಯ ಸ್ಮರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ `ಭೈರವದಿಂದ ಭೈರವಿ’ ಶೀರ್ಷಿಕೆಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುಟ್ಟರಾಜ ಗವಾಯಿ ಅವರ ಸಾಧನೆ ಅಸಾಮಾನ್ಯವಾದುದು. ಅಂಧರಾಗಿದ್ದರೂ ಸಂಗೀತದಲ್ಲಿ ಉತ್ತುಂಗಕ್ಕೆ ಬೆಳೆದ ಅವರು ಅಪಾರ ಶಿಷ್ಯ ವರ್ಗಕ್ಕೂ ಸಂಗೀತದ ಜ್ಞಾನವನ್ನು ಧಾರೆ ಎರೆದಿ ದ್ದಾರೆ. ಅವರನ್ನು ದೇವರ ಸಮಾನರೆಂದೇ ಭಾವಿಸಿದ್ದೇನೆ. ಅವರ ಹುಟ್ಟೂರಿನ ಸುತ್ತಮುತ್ತ ಅವರು `ಅಜ್ಜ’ ಎಂದೇ ಪ್ರಖ್ಯಾತರು. ಇದು ಅವರು ಸಮಾಜದಲ್ಲಿ ಗಳಿಸಿರುವ ಪ್ರೀತಿ-ವಿಶ್ವಾಸದ ಸಂಕೇತವಾಗಿದೆ ಎಂದು ನುಡಿದರು.

ಮಂದಿರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಇನ್ನೂ ಸಾಧ್ಯವಾಗದೇ ಇರುವುದು ನಿಜಕ್ಕೂ ದುರ್ದೈವದ ಸಂಗತಿ. ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ಜನಾಗ್ರಹ ಸಭೆ ಆಯೋಜಿಸಿದ್ದು, ಮೈಸೂ ರಿನಿಂದ 4 ಸಾವಿರಕ್ಕೂ ಹೆಚ್ಚು ಮಂದಿ ತೆರಳಲು ಬಿಜೆಪಿ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಇದೀಗ ನಾನೂ ಸಹ ಸಭೆಗೆ ತೆರಳಬೇಕಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಧಾರವಾಡ ಮೂಲದ ತಬಲ ವಾದ್ಯದ ಬಾಲ ಪ್ರತಿಭೆ ಹೇಮಂತ್ ಜೋಷಿಗೆ `ಪುಟ್ಟಶ್ರೀ ಸಮ್ಮಾನ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ, ಪ್ರಹ್ಲಾದ ಜೆ.ಕಟ್ಟಿಮನಿ ಅವರ `ಶ್ರೀ ರೇಣುಕಾ ಕಾವ್ಯಮಂಜರಿ’ ಕೃತಿ ಯನ್ನು ಹಿರಿಯ ಸಂಗೀತ ವಿಮರ್ಶಕ ಪ್ರೊ.ವಿ. ಅರವಿಂದ ಹೆಬ್ಬಾರ ಬಿಡುಗಡೆ ಮಾಡಿದರು. ಚಿತ್ರ ಕಲಾವಿದ ವೈ.ಎಸ್. ಪುನೀತ್ ಅವರ ಕುಂಚದಲ್ಲಿ ಮೂಡಿಬಂದಿರುವ ಹತ್ತಾರು ಚಿತ್ರಕಲೆಗಳ ಪ್ರದರ್ಶನಕ್ಕೆ ತಿ.ನರಸೀಪುರ ಕ್ಷೇತ್ರ ಶಿಕ್ಷಣಾಧಿ ಕಾರಿ ಎಸ್.ಸ್ವಾಮಿ ಚಾಲನೆ ನೀಡಿದರು. ಕನ್ನಡಿಯಲ್ಲಿ ತನ್ನ ಸೌಂದರ್ಯ ನೋಡುತ್ತಾ ನಾಚುತ್ತಿರುವ ಚೆಲುವೆಯ ಚಿತ್ರಕಲೆ ಗಮನ ಸೆಳೆಯಿತು. ಇದಲ್ಲದೆ, ಪುಟ್ಟರಾಜ ಗವಾಯಿ ಅವರು ಸಂಗೀತ ಸಾದರಪಡಿಸುತ್ತಿರುವ ಭಂಗಿಯ ಚಿತ್ರಕಲೆ, ಪ್ರಾಕೃತಿಕ ರಮಣೀಯತೆಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಕಲಾ ಕೃತಿಗಳೊಂದಿಗೆ ಹಲವು ಚಿತ್ರಕಲೆಗಳು ಕಂಡು ಬಂದವು. ಪಾಲಿಕೆ ಸದಸ್ಯ ಮ.ವಿ.ರಾಮ್‍ಪ್ರಸಾದ್, ಬೆಂಗಳೂ ರಿನ ಪ್ರತಿಭಾ ಎಂಟರ್‍ಪ್ರೈಸಸ್‍ನ ಮಾಲೀಕ ಎಂ.ಕೃಷ್ಣ ಮೂರ್ತಿ, ಸಂಗೀತ ಸಭಾದ ಅಧ್ಯಕ್ಷ ಭೀಮಾಶಂಕರ್ ಬಿದನೂರ, ಉಪಾಧ್ಯಕ್ಷ ಡಾ.ಎ.ಎಲ್.ದೇಸಾಯಿ ಮತ್ತಿತರರು ಹಾಜರಿದ್ದರು.

Translate »