ನವದೆಹಲಿ: ಕೊಡಗು ಸೇರಿ ದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅತಿ ವೃಷ್ಟಿಯಿಂದ ಉಂಟಾದ ಹಾನಿಗೆ ಕೇಂದ್ರ 546.21 ಕೋಟಿ ಹೆಚ್ಚುವರಿ ನೆರವನ್ನು ಪ್ರಕಟಿಸಿದೆ. ಕೇಂದ್ರ ಗೃಹ ಸಚಿವ ರಾಜ ನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಉನ್ನತ ಮಟ್ಟದ ಸಮಿತಿ ಈ ನೆರವನ್ನು ಪ್ರಕಟಿಸಿದ್ದು, ಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಇತರರು ಪಾಲ್ಗೊಂಡಿದ್ದರು. ದೇಶದಲ್ಲೇ ಅತ್ಯಂತ ಹೆಚ್ಚು ಕಾಫಿ ಬೆಳೆಯುವ ಪ್ರದೇಶವಾದ ಕೊಡಗು, ದಕ್ಷಿಣ ಕನ್ನಡ,…
ಬಾರ್, ರೆಸ್ಟೋರೆಂಟ್, ಕ್ಲಬ್‍ಗಳಲ್ಲಿ ಸಿಗರೇಟ್, ತಂಬಾಕು ಸೇವನೆ ನಿಷಿದ್ಧ
November 20, 2018ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಮತ್ತು ತಂಬಾಕು ಸೇವನೆ ಸಂಪೂರ್ಣವಾಗಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆಜ್ಞೆ ಉಲ್ಲಂಘಿಸಿದಲ್ಲಿ ದಂಡ ತೆರಬೇಕಾಗುತ್ತದೆ. ಕರ್ನಾಟಕ ಧೂಮಪಾನ ನಿಷೇಧ ಹಾಗೂ ಧೂಮಪಾನಿಗಳಲ್ಲದವರ ಆರೋಗ್ಯ ರಕ್ಷಣೆ ಕಾ0iÉ್ದು ಪ್ರಕಾರ ಹೋಟೆಲ್, ಬಾರ್, ರೆಸ್ಟೋರೆಂಟ್, ಕ್ಲಬ್‍ಗಳಲ್ಲಿ, ದರ್ಶಿನಿ, ಪಬ್, ಕ್ಲಬ್‍ಗಳಲ್ಲಿ ಧೂಮಪಾನ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಗರಾಭಿವೃದ್ಧಿ, ವಸತಿ ಸಚಿವ ಯು.ಟಿ.ಖಾದರ್, ಆದೇಶ ಇಂದಿನಿಂದಲೇ ಕಾರ್ಯರೂಪಕ್ಕೆ ಬರಲಿದೆ ಎಂದರು. ಆದೇಶ ಪಾಲಿಸದ ಹೋಟೆಲ್, ಬಾರ್,…
ಗ್ರಾಮೀಣ ಕರ್ನಾಟಕ ಬಹಿರ್ದೆಸೆ ಮುಕ್ತ: ಸರ್ಕಾರ ಘೋಷಣೆ
November 20, 2018ಬೆಂಗಳೂರು: ಗ್ರಾಮೀಣ ಕರ್ನಾ ಟಕವನ್ನು ಬಯಲು ಬಹಿರ್ದೆಸೆ ಮುಕ್ತವ ನ್ನಾಗಿ ಸರ್ಕಾರ ಇಂದು ಘೋಷಣೆ ಮಾಡಿತು. ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಕಾಸಸೌಧ ಹಾಗೂ ವಿಧಾನಸೌಧ ನಡುವೆ ಇರುವ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಈ ಘೋಷಣೆ ಮಾಡಿದರು. ಆರೋಗ್ಯಕರ ಕರ್ನಾಟಕ ನಿರ್ಮಾಣದ ಕಡೆ ಹೆಜ್ಜೆ ಇಟ್ಟಿದ್ದು, ಗ್ರಾಮೀಣ ಭಾಗದಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳಿಸಲಾಗಿದೆ ಎಂದು ಘೋಷಣೆ ಮಾಡಿ, ನಂತರ…
ಸಿಎಂ ಪರ ಡಿಸಿಎಂ ಕ್ಷಮೆಯಾಚನೆ
November 20, 2018ಬೆಂಗಳೂರು: ರೈತ ಮಹಿಳೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಯಾವ ಅರ್ಥದಲ್ಲಿ ಮಾತ ನಾಡಿದರೋ ಗೊತ್ತಿಲ್ಲ, ಅವರ ಹೇಳಿಕೆ ಯಾರಿಗಾದರೂ ನೋವುಂಟು ಮಾಡಿದ್ದರೆ, ಅವರ ಪರ ವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಾ|| ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಮ್ಮದು ರೈತ ಪರ ಸರ್ಕಾರ, ರೈತರು ಹಾಗೂ ಮಹಿಳೆಯರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ನಾವು ರೈತ ವಿರೋಧಿ ನೀತಿ ಅನುಸರಿ ಸುತ್ತಿಲ್ಲ. ಪ್ರತಿಭಟನೆ ನಡೆಸಲು ರೈತರಿಗೆ ಹಕ್ಕಿದೆ, ಸುವರ್ಣ ವಿಧಾನಸೌಧದ ಗೇಟ್ ಮುರಿಯುವ ಪ್ರಯತ್ನ ಸರಿಯಲ್ಲ,…
ಕರ್ನಾಟಕದ ಮಾವುತರು, ಕಾವಾಡಿಗರು ವಿಶೇಷ ಕೌಶಲ್ಯ ಹೊಂದಿದ್ದಾರೆ
November 20, 2018ಮೈಸೂರು: ಆನೆ ಪಳಗಿಸುವ ಕಲೆಯನ್ನು ವಂಶ ಪಾರಂ ಪರ್ಯವಾಗಿ ಕರಗತ ಮಾಡಿಕೊಂಡಿರುವ ಮಾವುತರು ಹಾಗೂ ಕಾವಾಡಿಗಳ ಪಾತ್ರ ಮಹತ್ತರದ್ದಾಗಿದ್ದು, ದೇಶದಲ್ಲಿಯೇ ಕರ್ನಾ ಟಕದ ಮಾವುತ ಮತ್ತು ಕಾವಾಡಿಗಳು ವಿಶೇಷ ಕೌಶಲ್ಯ ಹೊಂದುವ ಮೂಲಕ ಮೊದಲಿ ಗರಾಗಿ ನಿಂತಿದ್ದಾರೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯ ದರ್ಶಿ ಮನೋಜ್ ಕುಮಾರ್ ಶ್ಲಾಘಿಸಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಮೃಗಾ ಲಯದ ಸಭಾಂಗಣದಲ್ಲಿ ಕರ್ನಾಟಕ ಮೃಗಾ ಲಯ ಪ್ರಾಧಿಕಾರಿ ಹಾಗೂ ಕೇಂದ್ರ ಮೃಗಾ ಲಯ ಪ್ರಾಧಿಕಾರಿ ಸಹಯೋಗದಲ್ಲಿ ಸೋಮ ವಾರ ಮಾವುತರು…
ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಯೋಜನೆಗೆ ಹೋಟೆಲ್ ಮಾಲೀಕರ ಸಂಘ ಸ್ವಾಗತ
November 20, 2018ಮೈಸೂರು: ಕೆಆರ್‌ಎಸ್ ಉದ್ಯಾನ ವನವನ್ನು ಅಮೆರಿಕದ ಪ್ರವಾಸಿ ತಾಣವಾದ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸುವ 1200 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯನ್ನು ಹೋಟೆಲ್ ಮಾಲೀಕರ ಸಂಘ ಸ್ವಾಗತಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಈ ಯೋಜನೆ ಅನುಷ್ಠಾನದಿಂದ ಮೈಸೂರು ಹಾಗೂ ಸುತ್ತಮುತ್ತಲ ಜನತೆಗೆ ಸಾಕಷ್ಟು ಅನುಕೂಲ ಆಗಲಿದೆ. ಉದ್ಯೋಗ ಸೃಷ್ಟಿಯಾಗುವ ಜೊತೆಗೆ ರೈತರ ಭೂಮಿಗೆ ಉತ್ತಮ ಬೆಲೆ ದೊರೆಯಲಿದೆ. ಇದರಿಂದ ಮೈಸೂರು ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ…
ದಿನೇಶ್ ಕೋಚಿಂಗ್ ಸೆಂಟರ್‍ನಿಂದ ಪ್ರತಿಭಾ ಪುರಸ್ಕಾರ
November 20, 2018ಮೈಸೂರು: ಮಕ್ಕಳು ಮತ್ತು ಯುವಕರು ಬರೀ ಅಕ್ಷರಸ್ಥರಾದರೆ ಸಾಲದು, ಬದಲಾಗಿ ಶಿಕ್ಷಣವಂತ ರಾಗಬೇಕು. ಯಾವ ವಿದ್ಯಾರ್ಥಿಯು ತನ್ನ ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಕಲಿಯುವುದಿಲ್ಲವೋ, ಅವ ನಿಂದ ಭವಿಷ್ಯದಲ್ಲಿ ಆರೋಗ್ಯಕರ ಸಮಾಜಕ್ಕೆ ಏನನ್ನೂ ನಿರೀಕ್ಷಿಸುವುದು ಕಷ್ಟ. ಪೆÇೀಷಕರು ಮಕ್ಕಳಿಗೆ ಈ ವಯ ಸ್ಸಿನಲ್ಲೇ ಅದನ್ನು ಕಲಿಸಬೇಕು ಎಂದು ತುಮಕೂರಿನ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ಡಾ. ವೀರೇಶಾನಂದ ಸರಸ್ವತೀ ಸ್ವಾಮಿಗಳು ಅಭಿಪ್ರಾಯಪಟ್ಟರು. ದೇಶಪ್ರೇಮದ ಬಗ್ಗೆ ಸ್ವಾಮೀಜಿಯವರು ಮಾತ ನಾಡುತ್ತಾ, ಸ್ವಾಮಿ ವಿವೇಕಾನಂದರು, ಆದಿ ಶಂಕ ರಾಚಾರ್ಯರು ಹುಟ್ಟಿದ ಈ…
ಸಾವಿರಾರು ಶೌಚಾಲಯ ನಿರ್ಮಾಣಕ್ಕೆ ಕಾರಣರಾದ ಸಾಧಕರಿಗೆ ಸ್ವಚ್ಛ ಭಾರತ್ ಮಿಷನ್‍ನಿಂದ ಸನ್ಮಾನ
November 20, 2018ಮೈಸೂರು: ಗ್ರಾಮಾಂ ತರ ಪ್ರದೇಶದಲ್ಲಿ ಜನರ ಮನವೊಲಿಸಿ ಮೈಸೂರು ಜಿಲ್ಲೆಯಲ್ಲಿ ಸಾವಿರಾರು ಶೌಚಾ ಲಯಗಳು ನಿರ್ಮಾಣಗೊಳ್ಳಲು ಕಾರಣ ರಾದ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 15ಕ್ಕೂ ಹೆಚ್ಚು ಸಾಧಕರನ್ನು ಸೋಮವಾರ ಮೈಸೂರು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಗೌರವಿಸಲಾಯಿತು. ಹೆಚ್.ಡಿ.ಕೋಟೆ ತಾಲೂಕಿನ ಬೆಲುವೇ ಗೌಡ (245 ಶೌಚಾಲಯ), ಗ್ರಾಪಂ ಸದಸ್ಯ ಶಿವಕುಮಾರ್ (192), ಬನ್ನಿಕುಪ್ಪೆ ಚೆಲುವ ರಾಜ್ (280), ಕೆ.ಆರ್.ನಗರದ ಸಂಗೀತಾ (300), ಹುಣಸೂರಿನ ಮಾದೇಶ್ (200), ಮಹೇಶ್ (250), ಮೈಸೂರು ತಾಲೂಕಿನ ರವಿಕುಮಾರ್…
ಕೆ.ಜಿ.ಕೊಪ್ಪಲಿನಲ್ಲಿ ಸಾರ್ವಜನಿಕ ಸುಲಭ ಶೌಚಾಲಯ ಉದ್ಘಾಟನೆ
November 20, 2018ಮೈಸೂರು: ವಿಶ್ವ ಶೌಚಾಲಯ ದಿನಾಚರಣೆ ಸಂದರ್ಭದಲ್ಲಿ ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿ 42ನೇ ವಾರ್ಡ್‍ನಲ್ಲಿ ನಗರಪಾಲಿಕೆಯ ಎಸ್‍ಎಫ್‍ಸಿ ಅನುದಾನದಡಿ ತಲಾ 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಎರಡು ಸಾರ್ವಜನಿಕ ಶೌಚಾಲಯಗಳಿಗೆ ಚಾಮ ರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಸೋಮವಾರ ಉದ್ಘಾಟನೆ ನೆರವೇರಿಸಿದರು. ಚಾಮರಾಜಪುರಂ ರೈಲ್ವೆ ನಿಲ್ದಾಣ ಸಮೀಪದ ಟೆನ್ನಿಸ್ ಕೋರ್ಟ್ ಹಾಗೂ ಅಪೋಲೋ ಆಸ್ಪತ್ರೆ ಸಮೀಪದ ಸಿಗ್ನಲ್ ವೃತ್ತದ ಬಳಿ ಸಾರ್ವಜನಿಕ ಸುಲಭ ಶೌಚಾ ಲಯ ನಿರ್ಮಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗಾಗಿ ವಿಶೇಷವಾಗಿ ನಿರ್ಮಿ ಸಲಾಗಿರುವ ಶೌಚಾಲಯದಲ್ಲಿ ಭಾರ…
ಮೀಸಲಾತಿ ವರ್ಗದವರಿಗೆ ಜನರಲ್ ಮೆರಿಟ್‍ನಲ್ಲಿ ಅವಕಾಶ ನಿರಾಕರಣೆ ಆದೇಶ ಹಿಂಪಡೆಯಲು ಬಿಎಸ್‍ಪಿ ಒತ್ತಾಯ
November 20, 2018ಮೈಸೂರು: ಕೆಪಿಎಸ್‍ಸಿ 2015ರ ನೇಮಕಾತಿಗೆ ಸಂಬಂಧಿಸಿದಂತೆ ನೇರ ಮೀಸಲಾತಿಗೆ ಅರ್ಹರಾದವರು ಜನರಲ್ ಮೆರಿಟ್‍ನಲ್ಲಿ ಪ್ರವೇಶ ಪಡೆಯುವಂತಿಲ್ಲ ಎಂಬ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಬಹುಜನ ಸಮಾಜ ಪಾರ್ಟಿ (ಬಿಎಸ್‍ಪಿ) ಒತ್ತಾಯಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಪ್ರಭುಸ್ವಾಮಿ, ಸರ್ಕಾರ ಈ ಆದೇಶದ ಮೂಲಕ ಎಸ್‍ಸಿ-ಎಸ್‍ಟಿ ಹಾಗೂ ಓಬಿಸಿ ಸಮುದಾಯದ ಪ್ರತಿಭಾವಂತರಿಗೆ ಅನ್ಯಾಯ ಮಾಡಲು ಹೊರಟಿದೆ. ಈ ಆದೇಶ ಸಂವಿಧಾನ ವಿರೋಧಿ ಎಂದು ಖಂಡಿಸಿದರು. ಎಸ್‍ಸಿ-ಎಸ್‍ಟಿ, ಓಬಿಸಿ ಹಾಗೂ ಧಾರ್ಮಿಕ…