ಕರ್ನಾಟಕದ ಮಾವುತರು, ಕಾವಾಡಿಗರು ವಿಶೇಷ ಕೌಶಲ್ಯ ಹೊಂದಿದ್ದಾರೆ
ಮೈಸೂರು

ಕರ್ನಾಟಕದ ಮಾವುತರು, ಕಾವಾಡಿಗರು ವಿಶೇಷ ಕೌಶಲ್ಯ ಹೊಂದಿದ್ದಾರೆ

November 20, 2018

ಮೈಸೂರು: ಆನೆ ಪಳಗಿಸುವ ಕಲೆಯನ್ನು ವಂಶ ಪಾರಂ ಪರ್ಯವಾಗಿ ಕರಗತ ಮಾಡಿಕೊಂಡಿರುವ ಮಾವುತರು ಹಾಗೂ ಕಾವಾಡಿಗಳ ಪಾತ್ರ ಮಹತ್ತರದ್ದಾಗಿದ್ದು, ದೇಶದಲ್ಲಿಯೇ ಕರ್ನಾ ಟಕದ ಮಾವುತ ಮತ್ತು ಕಾವಾಡಿಗಳು ವಿಶೇಷ ಕೌಶಲ್ಯ ಹೊಂದುವ ಮೂಲಕ ಮೊದಲಿ ಗರಾಗಿ ನಿಂತಿದ್ದಾರೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯ ದರ್ಶಿ ಮನೋಜ್ ಕುಮಾರ್ ಶ್ಲಾಘಿಸಿದ್ದಾರೆ.

ಮೈಸೂರಿನ ಚಾಮರಾಜೇಂದ್ರ ಮೃಗಾ ಲಯದ ಸಭಾಂಗಣದಲ್ಲಿ ಕರ್ನಾಟಕ ಮೃಗಾ ಲಯ ಪ್ರಾಧಿಕಾರಿ ಹಾಗೂ ಕೇಂದ್ರ ಮೃಗಾ ಲಯ ಪ್ರಾಧಿಕಾರಿ ಸಹಯೋಗದಲ್ಲಿ ಸೋಮ ವಾರ ಮಾವುತರು ಹಾಗೂ ಕಾವಾಡಿಗಳಿ ಗಾಗಿ ಆರಂಭವಾದ 5 ದಿನಗಳ ಸಾಮಥ್ರ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಕಾನೆ ಗಳ ಮಾವುತರು ಹಾಗೂ ಕಾವಾಡಿಗಳ ಪಾತ್ರ ಬಹುಮುಖ್ಯವಾಗಿದೆ. ಕಾಡಾನೆ, ಹುಲಿ ಸೇರಿದಂತೆ ವನ್ಯಜೀವಿಗಳು ಗ್ರಾಮಗಳಿಗೆ ನುಗ್ಗಿದಾಗ ಅವುಗಳನ್ನು ಕಾಡಿಗೆ ಕಳುಹಿ ಸುವುದಕ್ಕೆ ಅಥವಾ ಸೆರೆ ಹಿಡಿಯುವುದಕ್ಕೆ ಸಾಕಾನೆಗಳನ್ನು ಬಳಸಲಾಗುತ್ತದೆ. ಮಾವುತ ರಿಗೆ ಧೈರ್ಯ ಇದ್ದರೆ ಮಾತ್ರ ಹುಲಿ ಮತ್ತು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಯಲ್ಲಿ ಪಾಲ್ಗೊಳ್ಳುತ್ತಾರೆ. ಕರ್ನಾಟಕದ ಮಾವುತರು ಆನೆ ಪಳಗಿಸುವುದು, ಆನೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನ ಹೊಂದಿ ದ್ದಾರೆ. ಇದರಿಂದಾಗಿ ಕರ್ನಾಟಕದ ಅನೇಕ ಮಾವುತರು ಉತ್ತರ ಪ್ರದೇಶ, ಅಸ್ಸಾಂ, ಛತ್ತೀಸ್‍ಗಡ ಸೇರಿದಂತೆ ವಿವಿಧ ರಾಜ್ಯ ಗಳಿಗೆ ಹೋಗಿ ಆನೆ ಹಿಡಿಯುವ ಹಾಗೂ ಮಾವುತರಿಗೆ ತರಬೇತಿ ನೀಡಿ ಬಂದಿ ದ್ದಾರೆ. ಅಲ್ಲದೆ ತರಬೇತಿ ಪಡೆಯಲು ಇಂಡೋನೇಷಿಯಾಗೆ ಹೋಗಿ ಅಲ್ಲಿನ ಮಾವುತರಿಗೂ ನಮ್ಮ ರಾಜ್ಯದ ಮಾವು ತರೇ ತರಬೇತಿ ನೀಡಿ ಬಂದಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಮಾವುತರು ಮತ್ತು ಕಾವಾಡಿಗಳಿಗೆ ಆನೆ ಗಳ ಪಳಗಿಸುವ, ನಿಯಂತ್ರಿಸುವ, ಪಾಲನೆ ಹಾಗೂ ಪೋಷಣೆ ಮಾಡುವ ಕಲೆ ರಕ್ತ ಗತವಾಗಿ ಹಾಗೂ ವಂಶ ಪಾರಂಪರ್ಯ ವಾಗಿ ಬಂದಿದೆ. ಈ ಕಲೆ ಪಠ್ಯ ಪುಸ್ತಕದಿಂದ ಅಥವಾ ಶಾಲಾ-ಕಾಲೇಜುಗಳಿಂದ ಕಲಿ ಸಲು ಸಾಧ್ಯವಿಲ್ಲ. ಇದನ್ನು ಮನಗಂಡು ಮಾವುತರ ಕಲೆ ನಶಿಸಿ ಹೋಗಬಾರ ದೆಂಬ ಕಾರಣಕ್ಕಾಗಿ ತರಬೇತಿ ನೀಡುವುದ ರೊಂದಿಗೆ ಮತ್ತಷ್ಟು ಕೌಶಲ್ಯ ವೃದ್ಧಿಸುವು ದಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಇದೇ ವೇಳೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್‍ರಾಮ್ ಮಾತನಾಡಿ, ದೇಶದಲ್ಲಿಯೇ ಕರ್ನಾಟಕ ಹೆಚ್ಚಿನ ಅರಣ್ಯ ಸಂಪತ್ತು ಹೊಂದಿದೆ. ಅಲ್ಲದೆ ವನ್ಯಜೀವಿಗಳ ಸಂರಕ್ಷಣೆಗೆ ಪೂರಕವಾದ ವಾತಾವರಣ ರಾಜ್ಯದಲ್ಲಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತದೆ. ದೇಶದಲ್ಲೇ ಹೆಚ್ಚಿನ ಪ್ರಮಾಣ ದಲ್ಲಿ ಆನೆ ಮತ್ತು ಹುಲಿಗಳು ಇವೆ. 6034 ಆನೆಗಳು, 452 ಹುಲಿಗಳು ಹಾಗೂ 2500 ಚಿರತೆಗಳಿವೆ ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತ ನಾಡಿ, ಪ್ರಾಣಿಗಳ ಅನುಕೂಲಕ್ಕಾಗಿ ಹಂಪಿ ಮತ್ತು ಗದಗದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದಲ್ಲಿ 42 ಆನೆಗಳು, ಅರಣ್ಯ ಇಲಾಖೆಯಲ್ಲಿ 140 ಸಾಕಾನೆ ಗಳಿವೆ. ರಾಜ್ಯದ 9 ಮೃಗಾಲಯಗಳ ಪೈಕಿ ಮೈಸೂರು ಮೃಗಾಲಯಕ್ಕೆ ಮಾತ್ರ ಆನೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸ ಲಾಗಿದೆ. ಐದು ಸಾವಿರ ಕೆಜಿ ತೂಕ ಇರುವ ಆನೆಯನ್ನು 50 ಕೆಜಿ ತೂಕ ಇರುವ ಮಾವುತ ಪಳಗಿಸುತ್ತಾನೆ. ಇದರ ಅರ್ಥ ಆನೆ ಮತ್ತು ಮಾವುತನ ನಡುವೆ ಅವಿ ನಾಭಾವ ನಂಟಿರುತ್ತದೆ. ಆನೆಗಳನ್ನು ಪಳಗಿಸಲು ಮಾವುತರಿಗೆ ಕೆಲವೊಂದು ಕೌಶಲ್ಯ ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಾಂಡಿ ಚೇರಿ, ಗುಜರಾತ್, ಕೇರಳ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಮೃಗಾಲ ಯಗಳಲ್ಲಿರುವ ಆನೆಗಳ 25ಕ್ಕೂ ಹೆಚ್ಚು ಮಾವುತರು ಕಾರ್ಯಾಗಾರದಲ್ಲಿ ಪಾಲ್ಗೊಂ ಡಿದ್ದಾರೆ. ಇಂದು ಆರಂಭವಾಗಿರುವ ಕಾರ್ಯಾಗಾರ ನ.23ರವರೆಗೂ ನಡೆಯ ಲಿದೆ. ಈ ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ಪರಿಣತರು, ಪಶುವೈದ್ಯರು, ಆನೆಗಳ ತಜ್ಞರು ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಚಾಮರಾಜೇಂದ್ರ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇ ಶಕ ಅಜಿತ್ ಕುಲ್ಕರ್ಣಿ, ಡಿಸಿಎಫ್ ಸಿದ್ದ ರಾಮಪ್ಪ ಚಳ್ಕಾಪುರೆ, ಚೆನ್ನೈ ವಲಯದ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಎನ್.ಎಸ್.ಮನೋಹರನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »