ಸಿಎಂ ಪರ ಡಿಸಿಎಂ ಕ್ಷಮೆಯಾಚನೆ
ಮೈಸೂರು

ಸಿಎಂ ಪರ ಡಿಸಿಎಂ ಕ್ಷಮೆಯಾಚನೆ

November 20, 2018

ಬೆಂಗಳೂರು:  ರೈತ ಮಹಿಳೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಯಾವ ಅರ್ಥದಲ್ಲಿ ಮಾತ ನಾಡಿದರೋ ಗೊತ್ತಿಲ್ಲ, ಅವರ ಹೇಳಿಕೆ ಯಾರಿಗಾದರೂ ನೋವುಂಟು ಮಾಡಿದ್ದರೆ, ಅವರ ಪರ ವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಾ|| ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಮ್ಮದು ರೈತ ಪರ ಸರ್ಕಾರ, ರೈತರು ಹಾಗೂ ಮಹಿಳೆಯರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ನಾವು ರೈತ ವಿರೋಧಿ ನೀತಿ ಅನುಸರಿ ಸುತ್ತಿಲ್ಲ. ಪ್ರತಿಭಟನೆ ನಡೆಸಲು ರೈತರಿಗೆ ಹಕ್ಕಿದೆ, ಸುವರ್ಣ ವಿಧಾನಸೌಧದ ಗೇಟ್ ಮುರಿಯುವ ಪ್ರಯತ್ನ ಸರಿಯಲ್ಲ, ರೈತ ರಿಗೆ ಕಬ್ಬಿನ ಬಾಕಿ ಕೊಡಿಸಲು ಸರ್ಕಾರ ಬದ್ಧವಾಗಿದೆ. ಮೈತ್ರಿ ಸರ್ಕಾರ ರೈತರ 49 ಸಾವಿರ ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಲಿದೆ, ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕ ಹಕ್ಕು ಬಿಜೆಪಿಗಿಲ್ಲ. ನಾಳೆಯ ಸಭೆಯಲ್ಲಿ ಕಬ್ಬು ಬೆಳೆಗಾರರ ಬಾಕಿ ಪಾವತಿ ಕುರಿತು ಮುಖ್ಯಮಂತ್ರಿ ರೈತರ ಸಭೆ ಕರೆದಿದ್ದು, ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆ ಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

Translate »