ದಾವಣಗೆರೆ: ದಲಿತ ಸಮುದಾಯವನ್ನು ತುಳಿಯಲಾಗುತ್ತಿದೆ. ನಾನು ಮುಖ್ಯಮಂತ್ರಿ ಯಾಗುವುದನ್ನು 3 ಬಾರಿ ತಪ್ಪಿಸಲಾಗಿದೆ. ಬೇಡ ಎಂದರೂ ಹಾಗೋ ಹೀಗೋ ಉಪಮುಖ್ಯಮಂತ್ರಿ ಮಾಡಿದ್ದಾರೆ ಎಂದು ಡಾ.ಜಿ.ಪರಮೇ ಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ದಾವಣಗೆರೆಯ ಶಿವಯೋಗಿ ಆಶ್ರಮದಲ್ಲಿ ಛಲವಾದಿ ಮಹಾಸಭಾ ಹಮ್ಮಿ ಕೊಂಡಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರೇ ಆದ ಬಿ.ಬಸವ ಲಿಂಗಪ್ಪ ಮತ್ತು ಎ.ಹೆಚ್.ರಂಗನಾಥ್ ಅವರು ಮುಖ್ಯಮಂತ್ರಿ ಆಗಬೇಕಾಗಿತ್ತು. ಆದರೆ, ಅವರಿಗೆ ಆ ಅವಕಾಶ ತಪ್ಪಿತು. ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯ ಮಂತ್ರಿ ಆಗುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದರು. ಆದರೂ ಅವರು ಅವ ಕಾಶ ವಂಚಿತರಾಗಬೇಕಾಯಿತು ಎಂದರು.
ನಮಗೆ ಉನ್ನತ ಮಟ್ಟದ ಸ್ಥಾನಮಾನ ದೊರೆಯದಿರುವುದು ನಾವು ಕೆಳ ಜನಾಂಗ ದವರು ಎಂಬ ಮನೋಭಾವವೇ ಕಾರಣವಾಗಿದೆ. ನಮ್ಮನ್ನು ಸತತವಾಗಿ ತುಳಿಯಲಾಗುತ್ತಿದೆ.
ನಾನಾಗಲೀ, ಮಲ್ಲಿಕಾರ್ಜುನ ಖರ್ಗೆ ಅವರಾಗಲೀ ಈವರೆವಿಗೂ ವರ್ಗ ಸಂಘರ್ಷ ಮಾಡಿಲ್ಲ. ನಮ್ಮ ಸಮಾಜಕ್ಕೆ ಸತತವಾಗಿ ಅನ್ಯಾಯವಾಗುತ್ತಿರುವುದರಿಂದ ಅನಿವಾರ್ಯವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ. ದಲಿತರು ಸಂಘಟನೆ ಯಾಗದೇ, ಜಾಗೃತರಾಗದೇ ಇದ್ದರೆ ತುಳಿತಕ್ಕೊಳಗಾಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಆ ಕಾರಣದಿಂದಲೇ ನಾನು ಈ ಸಮಾವೇಶಕ್ಕೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಛಲವಾದಿ ಸಮಾವೇಶಗಳನ್ನು ಹಮ್ಮಿಕೊಂಡು ದಲಿತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇನೆ ಎಂದರು.