ಮೈಸೂರಿನ ಎಪಿಎಂಸಿಯಲ್ಲಿ ರೇಷ್ಮೆಗೂಡು ಮಾರಾಟ ಮಾರುಕಟ್ಟೆ ಆರಂಭ
ಮೈಸೂರು

ಮೈಸೂರಿನ ಎಪಿಎಂಸಿಯಲ್ಲಿ ರೇಷ್ಮೆಗೂಡು ಮಾರಾಟ ಮಾರುಕಟ್ಟೆ ಆರಂಭ

February 25, 2019

ಮೈಸೂರು: ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಎರಡು ಎಕರೆ ವಿಸ್ರ್ತೀಣದ ಜಾಗದಲ್ಲಿ ಪ್ರತ್ಯೇಕ ಸುಸಜ್ಜಿತ ಮಾರು ಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಮೈಸೂರಿನ ಬಂಡೀಪಾಳ್ಯದಲ್ಲಿರುವ ಎಪಿಎಂಸಿ ಆವರಣದಲ್ಲಿ ಭಾನುವಾರ ನೂತನವಾಗಿ ಆರಂಭಿಸಿ ರುವ ರೇಷ್ಮೆಗೂಡಿನ ಮಾರುಕಟ್ಟೆಯನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಮೈಸೂರು, ಚಾಮ ರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲೆಂಬ ಕಾರಣ ದಿಂದ ಮೈಸೂರಿನ ಎಪಿಎಂಸಿಯಲ್ಲಿ ಇದೇ ಮೊದಲ ಬಾರಿಗೆ ನೂತನವಾಗಿ ರೇಷ್ಮೆಗೂಡಿನ ಸರ್ಕಾರಿ ಮಾರುಕಟ್ಟೆಯನ್ನು ಸ್ಥಾಪಿಸಲಾಗಿದೆ. ಈ ಭಾಗದ ರೇಷ್ಮೆ ಬೆಳೆಗಾರರು ಹಲವು ವರ್ಷಗಳಿಂದ ಮೈಸೂ ರಿನಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪಿಸುವಂತೆ ಆಗ್ರಹಿ ಸುತ್ತಿದ್ದರು. ರೇಷ್ಮೆ ಇಲಾಖೆ ಸಚಿವನಾಗಿ ಕಾರ್ಯ ನಿರ್ವಹಿಸುತ್ತಿರುವ ನಾನು ಮೈಸೂರಿನ ರೇಷ್ಮೆ ಬೆಳೆಗಾರರಿಗೆ ನೆರವಾಗುವುದರೊಂದಿಗೆ ಕೊಡುಗೆ ನೀಡುವುದಕ್ಕಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರನ್ನು ಒಪ್ಪಿಸಿ ನೂತನವಾಗಿ ಮಾರು ಕಟ್ಟೆ ಸ್ಥಾಪಿಸಲಾಗಿದೆ ಎಂದರು.

ಈ 3 ಜಿಲ್ಲೆಯಲ್ಲಿ 18,333 ಹೆಕ್ಟೇರ್ ಪ್ರದೇಶದಲ್ಲಿ ಗುಣಮಟ್ಟದ ಹಿಪ್ಪುನೇರಳೆ ಬೆಳೆಯಲಾಗುತ್ತಿದ್ದು, 35,458 ರೇಷ್ಮೆ ಬೆಳೆಗಾರರು ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. 735 ರೀಲರ್ ಕುಟುಂಬ ಗಳು ರೀಲಿಂಗ್ ಚಟುವಟಿಕೆಯಲ್ಲಿ ತೊಡಗಿಕೊಂ ಡಿವೆ. ಎಪಿಎಂಸಿಯ ಬಾಡಿಗೆ ಕಟ್ಟಡದಲ್ಲಿ ತಾತ್ಕಾ ಲಿಕವಾಗಿ ಈ ಮಾರುಕಟ್ಟೆ ಕಾರ್ಯ ನಿರ್ವಹಣೆ ಮಾಡಲಿದ್ದು, ಮುಂದಿನ ದಿನಗಳಲ್ಲಿ 2 ಎಕರೆ ಜಾಗದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಭಾಗದ ರೈತರು ರೇಷ್ಮೆ ಗೂಡನ್ನು ಮಾರಾಟ ಮಾಡಲು ರಾಮನಗರ, ಚನ್ನಪಟ್ಟಣ, ಕೊಳ್ಳೇಗಾಲ, ತಿ.ನರಸೀಪುರ, ಮಳವಳ್ಳಿ ಮಾರುಕಟ್ಟೆಗೆ ತೆಗೆದು ಕೊಂಡು ಹೋಗುವುದು ತಪ್ಪುತ್ತದೆ. ಹೊಸ ಮಾರುಕಟ್ಟೆ ಸೌಲಭ್ಯದಿಂದ ಈ ಜಿಲ್ಲೆಯ ರೈತರಿಗೆ ಅನುಕೂಲ ವಾಗಲಿದೆ. ದ್ವಿತಳಿ ಗೂಡನ್ನು ಹೆಚ್ಚಾಗಿ ಬೆಳೆದು ರೇಷ್ಮೆ ಉದ್ಯಮದ ಅಭಿವೃದ್ಧಿಗೂ ಸಹಾಯಕವಾಗಲಿದೆ. ರೀಲರ್‍ಗಳು ರೇಷ್ಮೆ ಉದ್ಯಮದ ಕಡೆ ಆಕರ್ಷಿತ ರಾಗಲು ವೇದಿಕೆ ಸೃಷ್ಟಿಯಾಗಿದೆ ಎಂದರು.

ಮೈಸೂರಿಗೂ ರೇಷ್ಮೆಗೂ ಅವಿನಾಭಾವ ಸಂಬಂಧ ವಿದೆ. ಟಿಪ್ತು ಸುಲ್ತಾನ್ ಈ ಬೆಳೆಯನ್ನು ನಾಡಿಗೆ ಪರಿ ಚಯಿಸಿದರು. ಮೈಸೂರು ಮಹಾರಾಜರು ಇದಕ್ಕೆ ಉತ್ತೇಜನ ನೀಡಿದರು. ಇದರಿಂದಾಗಿ ಮೈಸೂರು ಗುಣಮಟ್ಟದ ರೇಷ್ಮೆಗೆ ಹೆಸರುವಾಸಿಯಾಗಿದೆ. ರಾಷ್ಟ್ರದಲ್ಲಿಯೇ ಹಿಪ್ಪು ನೇರಳೆ ರೇಷ್ಮೆ ಉತ್ಪಾದನೆ ಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ದೇಶದಲ್ಲಿ ಶೇ.42ರಷ್ಟು ಕೊಡುಗೆ ರಾಜ್ಯದ್ದಾಗಿದೆ. ಇದರಿಂದ ರಾಜ್ಯವನ್ನು ಅತ್ಯುತ್ತಮ ರೇಷ್ಮೆ ಉತ್ಪಾದಿಸುವ ರಾಜ್ಯ ಎಂದು ಗುರುತಿಸಿಕೊಂಡಿದೆ. ರಾಜ್ಯದಲ್ಲಿ 12 ಲಕ್ಷ ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರೇಷ್ಮೆ ಕೃಷಿಯನ್ನು ಅವಲಂಬಿಸಿದ್ದಾರೆ. ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ರಾಜ್ಯದ ವಿವಿಧೆಡೆ 55 ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಿವೆ. ರೇಷ್ಮೆ ಗೂಡಿನ ಮಾರಾಟ ವ್ಯವಸ್ಥೆ ಯಲ್ಲಿ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕ ಧಾರಣೆ ಒದಗಿಸುವ ನಿಟ್ಟಿನಲ್ಲಿ ರಾಮನಗರ ಮಾರುಕಟ್ಟೆ ಯಲ್ಲಿ ಇ-ಹರಾಜು ಪದ್ಧತಿಯನ್ನು ಪ್ರಾಯೋಗಿಕ ವಾಗಿ ಜಾರಿಗೊಳಿಸಲಾಗಿದೆ. ರೇಷ್ಮೆಗೂಡಿನ ದರ ಇಳಿಮುಖವಾಗಿದ್ದು, ಭತ್ತ, ರಾಗಿಗೆ ಬೆಂಬಲ ಬೆಲೆ ನೀಡಿದ ಮಾದರಿಯಲ್ಲಿ ರೇಷ್ಮೆಗೂಡಿಗೂ ಬೆಂಬಲ ಬೆಲೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.

ಮೈಸೂರಿನಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮ ಗಳ ನಿಗಮದ (ಕೆಎಸ್‍ಐಸಿ) ಕಾರ್ಖಾನೆಗೆ ರಾಮ ನಗರದಿಂದ ರೇಷ್ಮೆ ಗೂಡನ್ನು ಖರೀದಿ ಮಾಡಿ ತರಲಾಗುತ್ತಿದೆ. ಅದರ ಬದಲು ಈ ಮಾರುಕಟ್ಟೆಯಿಂದಲೇ ರೇಷ್ಮೆ ಗೂಡು ಖರೀದಿಗೆ ಪ್ರಯತ್ನ ಮಾಡಲಾಗುವುದು. ಇದರಿಂದ ಸಾರಿಗೆ ವೆಚ್ಚ ತಗ್ಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಈ ಭಾಗದ ರೈತರ ಮನೆ ಬಾಗಿಲಿಗೆ ಮಾರುಕಟ್ಟೆ ಬಂದಿದೆ. ಬರಗಾಲದಲ್ಲೂ ಕೂಡ ಹೈನುಗಾರಿಕೆಯಂತೆ ರೇಷ್ಮೆ ಕೃಷಿ ಮಾಡಬಹುದು. ಇದರ ಸದುಯೋಗಪಡಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯುವುದಕ್ಕೆ ಮುಂದಾಗಬೇಕು. ಈ ಹಿಂದೆ ರೇಷ್ಮೆಯನ್ನು ಹೆಚ್ಚು ಬೆಳೆಯುತ್ತಿದ್ದರು. ಈಗ ಕುಂಟಿತ ವಾಗಿದೆ. ಆಧುನಿಕ ಸೌಲಭ್ಯವನ್ನು ಬಳಕೆ ಮಾಡಿಕೊಂಡು ಕಡಿಮೆ ಭೂಮಿಯಲ್ಲೂ ಈ ಕೃಷಿ ಮಾಡಬಹುದಾಗಿದೆ. ರೈತರಿಗೆ ನೆರವಾಗುವ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಾರ್ಚ್ 1ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪೌರ ಸನ್ಮಾನ ಮಾಡುತ್ತಿರುವುದಾಗಿ ತಿಳಿಸಿದರು. ಇದೇ ವೇಳೆ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ, ರೇಷ್ಮೆ ಇಲಾಖೆ ನಿರ್ದೇಶಕ ಕೆ.ಎಸ್. ಮಂಜುನಾಥ್ ಮಾತನಾಡಿ, ದೇಶದಲ್ಲಿ 2017-18ನೇ ಸಾಲಿನಲ್ಲಿ 2.23 ಲಕ್ಷ ಹೆಕ್ಟೇರ್ ಹಿಪ್ಪುನೇರಳ ಪ್ರದೇಶದಲ್ಲಿ 22,066 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗಿದೆ. ರಾಜ್ಯದಲ್ಲಿ 2019ರ ಜನವರಿ ಅಂತ್ಯಕ್ಕೆ 1.06 ಲಕ್ಷ ಹೆಕ್ಟೇರ್ ಹಿಪ್ಪು ನೇರಳೆÀ ಪ್ರದೇಶದಲ್ಲಿ 69,146 ಮೆಟ್ರಿಕ್ ಟನ್ ಗೂಡು, 9,653 ಮೆ.ಟನ್ ರೇಷ್ಮೆ ಉತ್ಪಾದನೆಯಾಗಿದೆ ಎಂದು ಮಾಹಿತಿ ನೀಡಿ ದರು. ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಎಪಿಎಂಸಿ ಅಧ್ಯಕ್ಷ ಕೆ.ಪ್ರಭುಸ್ವಾಮಿ, ಉಪಾ ಧ್ಯಕ್ಷ ಚಿಕ್ಕಜವರಯ್ಯ, ರೇಷ್ಮೆ ಜಂಟಿ ನಿರ್ದೇಶಕ ನಟರಾಜು ಇನ್ನಿತರರು ಉಪಸ್ಥಿತರಿದ್ದರು.

Translate »